ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವಂತಹ ನಾಗರೀಕರಿಗೆ ಉಚಿತವಾಗಿ 20 ಸೇವೆಗಳನ್ನು ರಾಜ್ಯ ಸರ್ಕಾರವು ಒದಗಿಸುತ್ತಿದೆ. ರಾಜ್ಯದ ಗ್ರಾಮೀಣ ಭಾಗದಲ್ಲಿ ವಾಸಿಸುವಂತಹ ಗ್ರಾಮೀಣ ಜನರಿಗೆ ರಾಜ್ಯ ಸರ್ಕಾರದ ವತಿಯಿಂದ ಒಂದು ಸಿಹಿ ಸುದ್ದಿಯನ್ನು ತಿಳಿಸಲಾಗುತ್ತಿದೆ. ಅದೇನೆಂದರೆ ಗ್ರಾಮೀಣ ಭಾಗದ ಜನತೆಗೆ 2024ರ ನಂತರ ಗ್ರಾಮ ಪಂಚಾಯಿತಿಯೊಂದಿಗೆ ಎಲ್ಲಾ ಸೇವೆ ಸೌಲಭ್ಯವನ್ನು ಸಿಗುವಂತೆ ಸರ್ಕಾರವು ವ್ಯವಸ್ಥೆ ಮಾಡಲಾಗುತ್ತಿದೆ. ಹಾಗಾದರೆ ಈ ವ್ಯವಸ್ಥೆಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ.

ಗ್ರಾಮ ಪಂಚಾಯಿತಿಯಿಂದ 20 ಉಚಿತ ಸೇವೆಗಳು :
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಒಂದು ಸುತ್ತೋಲೆ ಹೊರ ಬಿದ್ದಿದ್ದು ಇದರ ಮುಖಾಂತರ ಕಂದಾಯ ಇಲಾಖೆಯು ಕೈಗೊಂಡಿರುವಂತಹ ಮಹತ್ವದ ನಿರ್ಧಾರದ ಬಗ್ಗೆ ನೋಡಬಹುದಾಗಿದೆ. ಗ್ರಾಮೀಣ ಭಾಗದ ಜನರು ಇನ್ನು ಮುಂದೆ ಇದುವರೆಗೂ ಗ್ರಾಮವನ್ ಕರ್ನಾಟಕ ಬಂದ್ ಹಾಗೂ ಕಾಮನ್ ಸರ್ವಿಸ್ ಸೆಂಟರ್ ಕೇಂದ್ರಗಳು ಮತ್ತು ಅಟಲ್ ಜಿನಸ್ನೇಹಿ ಕೇಂದ್ರಗಳಲ್ಲಿ ಪಡೆಯುತ್ತಿದ್ದಂತಹ ಎಲ್ಲಾ ಸೌಲಭ್ಯಗಳನ್ನು ಇದೀಗ ಗ್ರಾಮ ಪಂಚಾಯಿತಿನ ಬಾಪೂಜಿ ಸೇವ ಕೇಂದ್ರಗಳಲ್ಲಿಯೇ ಪಡೆಯುವಂತೆ ರಾಜ್ಯ ಸರ್ಕಾರವು ಅವಕಾಶ ಕಲ್ಪಿಸಿದೆ. ಉಚಿತವಾಗಿ ಕೆಲಸವೇಗಳನ್ನು ಗ್ರಾಮ ಪಂಚಾಯಿತಿಯಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಪಡೆಯಬಹುದು ಆದರೆ ಸಿ ಎಸ್ ಸಿ ಕೇಂದ್ರಗಳಲ್ಲಿ ಇದಕ್ಕೆ ಸೇವಾ ಶುಲ್ಕವನ್ನು ಪಾವತಿಸಬೇಕಾಗಿತ್ತು. ಬಡ ಜನರಿಗೆ ಹೊರೆಯಾಗಿತ್ತು ಮತ್ತು ಅಟಲ್ ಜನ ಸ್ನೇಹಿತ್ರೆಗಳು ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿದ್ದರಿಂದ ರೈತರು ಅಲ್ಲಿಯವರೆಗೂ ತನ್ನ ಕೆಲಸ ಕಾರ್ಯವನ್ನು ಬಿಟ್ಟು ಹಣ ವ್ಯರ್ಥ ಮಾಡಿಕೊಂಡು ಸಣ್ಣ ಸಣ್ಣ ಕಾರಣಗಳಿಗೂ ಅಲಿಯಬೇಕಾಗಿತ್ತು. ಎಲ್ಲ ಸಮಸ್ಯೆಗೆ ಕಡಿವಾಣ ಹಾಕುವ ಸರ್ಕಾರದ ಇಂತಹದೊಂದು ಮಹತ್ವದ ನಿರ್ಧಾರವನ್ನು ಕಂದಾಯ ಇಲಾಖೆ ತೆಗೆದುಕೊಂಡಿದೆ. ಮತ್ತೆ ಈ ನಿರ್ಧಾರವೂ ಒಂದು ಸ್ವಾಗತ ಅರ್ಹವಾಗಿದೆ ಎಂದು ಹೇಳಬಹುದು ಹಾಗಾಗಿ ಇದರಿಂದ ಕೋಟ್ಯಾಂತರ ಗ್ರಾಮೀಣ ಜನತೆಗೆ ಇದು ಹೆಚ್ಚು ಅನುಕೂಲವಾಗುತ್ತದೆ ಎಂದು ಹೇಳಬಹುದು.
ಇದನ್ನು ಓದಿ : Breaking News: ಸರ್ಕಾರದ 30 ಇಲಾಖೆಯಿಂದ 3000 ಉದ್ಯೋಗಗಳಿಗೆ ನೇಮಕಾತಿ
ಬಾಪೂಜಿ ಸೇವಾ ಕೇಂದ್ರಗಳಲ್ಲಿ ಉಚಿತ ಸೇವೆಗಳು :
ಪಂಚತಂತ್ರ 2.0 ತಂತ್ರಾಂಶದ ಮೂಲಕ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಸಿಗುತ್ತಿದ್ದ ನಾಡಕಛೇರಿ ಸೇವೆಗಳನ್ನು ಗ್ರಾಮ ಪಂಚಾಯಿತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಒದಗಿಸುವ ಬಗ್ಗೆ ಸುತ್ತೋಲೆಯನ್ನು ತಿಳಿಸಲಾಗಿದೆ. ಈ ಸುತ್ತೋಲೆಯಲ್ಲಿರುವ ಕೆಲವು ಸೇವೆಗಳು ಸಂಪೂರ್ಣ ಉಚಿತವಾಗಿದ್ದು ಇನ್ನೂ ಕೆಲವು ಸೇವೆಗಳಿಗೆ ಅತಿ ಕಡಿಮೆ ಸುಖವನ್ನು ರೈತರು ಪಾವತಿಸಬೇಕಾಗುತ್ತದೆ. ಸಹ ರೈತನಿಗೆ ಈ ಒಂದು ಸೇವೆ ಆತನ ಸಮಯ ಹಾಗೂ ಹಣದ ಉಳಿತಾಯ ಮಾಡಲು ಸಹಾಯಕವಾಗಿದೆ. ಆದರೆ ಗ್ರಾಮ ಪಂಚಾಯಿತಿಗಳಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಏನೆಲ್ಲ ಸೇವೆಗಳನ್ನು ಪಡೆಯಬಹುದು ಎಂಬುದನ್ನು ಈ ಕೆಳಗಿನಂತೆ ನೋಡಬಹುದು.
- ಆದಾಯ ಪ್ರಮಾಣ ಪತ್ರ
- ಗೇಣಿರಹಿತ ಜೀವಂತ ಬೇಸಾಯ ಕುಟುಂಬ ಸದಸ್ಯರ ದೃಢೀಕರಣ
- ವಾಸ ಸ್ಥಳ ದೃಡೀಕರಣ ಪತ್ರ
- ಮೀನು ಇಲ್ಲದಿರುವುದಕ್ಕೆ ನಿರುದ್ಯೋಗಿ ಕೃಷಿ ಕಾರ್ಮಿಕ ಭೂ ಹಿಡುವಳಿ ಪ್ರಮಾಣ ಪತ್ರ
- ಅನುಕಂಪ ಆಧಾರದ ನೇಮಕಕ್ಕೆ ದೃಢೀಕರಣ
- ವಸತಿ ಉದ್ಯೋಗದ ಉದ್ದೇಶಕ್ಕೆ ಆದಾಯ ದೃಢೀಕರಣ
- ವಂಶವೃಕ್ಷ
- ಬೆಳೆ ಪ್ರಮಾಣ ಪತ್ರ
- ವಿಧವ ವೇತನಕ್ಕೆ ಅರ್ಜಿ
- ಅಂಗವಿಕಲ ವೇತನಕ್ಕೆ ಅರ್ಜಿ
- ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ
- ವೃದ್ಧಾಪ್ಯ ವೇತನಕ್ಕೆ ಅರ್ಜಿ
- ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆ
- ಮೈತ್ರಿ ಮನಸ್ವಿನಿ ಯೋಜನೆಗೆ ಪ್ರಮಾಣ ಪತ್ರಗಳು ಮತ್ತು ಅರ್ಜಿ ಸಲ್ಲಿಕೆ
- ನೀರಿನ ಸಂಪರ್ಕಕ್ಕೆ ಅರ್ಜಿ
- ಕಟ್ಟಡ ನಿರ್ಮಾಣ ಪರವಾನಗಿ
- ವಸತಿ ಯೋಜನೆಗೆ ಅರ್ಜಿ
- ಉಚಿತ ನಿವೇಶನ ಪಡೆಯಲು ಅರ್ಜಿ
- ಎಸ್ಕಾಂಗೆ ನಿರಾಕ್ಷೇಪಣೆ ಪತ್ರ
- ಭೂ ಪರಿವರ್ತನೆ ಕೋರಿಕೆ ಅರ್ಜಿ
- ಬಸ್ ರೈಲು ವಿಮಾನ ಬುಕಿಂಗ್
- ಪಡಿತರ ಕಾರ್ಡ್ ಅರ್ಜಿ
- ಆಧಾರ್ ಕಾರ್ಡ್ ತಿದ್ದುಪಡಿ
- ವಿದ್ಯುತ್ ಬಿಲ್ ಪಾವತಿ
- ವಾಹನ ವಿಮೆ
ಹೀಗೆ ಗ್ರಾಮ ಪಂಚಾಯಿತಿಯ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಕರ್ನಾಟಕ ಸರ್ಕಾರವು ಅನೇಕ ಸೌಲಭ್ಯಗಳನ್ನು ಒದಗಿಸಿದ್ದು ಇದರಿಂದ ಸುಲಭವಾಗಿ ರೈತರು ಹೆಚ್ಚು ಅಲೆಯುವ ಪರಿಸ್ಥಿತಿ ಇಲ್ಲದೆ ಕಡಿಮೆ ಸಮಯದಲ್ಲಿ ಹೆಚ್ಚಿನ ಸೇವೆಗಳನ್ನು ಪಡೆಯಬಹುದಾಗಿದೆ. ಹೀಗೆ ನಿಮ್ಮ ಗ್ರಾಮೀಣ ಪ್ರದೇಶದ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಇನ್ನು ಮುಂದೆ ಗ್ರಾಮ ಪಂಚಾಯಿತಿಗಳಲ್ಲಿಯೇ ಎಲ್ಲ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂಬುದರ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.