ನಮಸ್ಕಾರ ಸ್ನೇಹಿತರೆ, ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ರಾಜ್ಯ ಸರ್ಕಾರವು ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಹೊಸ ಆದೇಶವನ್ನು ಹೊರಡಿಸಿರುವುದರ ಬಗ್ಗೆ. ದೀಪಾವಳಿ ಹಬ್ಬಕ್ಕೆ ಸರ್ಕಾರವು ಮಹಿಳೆಯರಿಗೆ ಒಂದು ಗುಡ್ ನ್ಯೂಸ್ ಅನ್ನು ನೀಡಿದೆ ಎಂದು ಹೇಳಬಹುದು. ಅದೇನೆಂದರೆ ಆಧಾರ್ ಕಾರ್ಡನ್ನು ಮೊಬೈಲ್ ನಲ್ಲಿಯೇ ತೋರಿಸುವುದರ ಮೂಲಕ ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣವನ್ನು ಮಾಡಬಹುದಾಗಿದೆ. ಆದರೆ ಹೇಗೆ ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ಅನ್ನು ತೋರಿಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

ಮೊಬೈಲ್ ನಲ್ಲಿಯ ಆಧಾರ್ ಕಾರ್ಡ್ ತೋರಿಸಬಹುದು :
ಶಕ್ತಿ ಯೋಜನೆಯ ಅಡಿ ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ಮಹಿಳಾ ಪ್ರಯಾಣಿಕರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಹಾಗೂ ಮುಂದುವರೆದಂತೆ ಸದರಿಯ ಉಚಿತ ಪ್ರಯಾಣಕ್ಕೆ ತಿದ್ದುಪಡಿ ಆದೇಶದಲ್ಲಿ ಮಹಿಳಾ ಪ್ರಯಾಣಿಕರು ಮೂಲ ನಕಲು ಅಥವಾ ಡಿಜಿ ಲಾಕರ್ ಹಾರ್ಡ್ ಮತ್ತು ಮಾದರಿಯಲ್ಲಿ ಆಧಾರ್ ಕಾರ್ಡ್ ಅನ್ನು ತೋರಿಸಿ ಹಾಜರುಪಡಿಸಿದ್ದಲ್ಲಿ ಮಾತ್ರವೇ ಪ್ರಯಾಣಕ್ಕೆ ಅವಕಾಶವನ್ನು ಕಲ್ಪಿಸಲು ತಿಳಿಸಲಾಗಿದೆ.
ಸರ್ಕಾರದ ಆದೇಶ :
ಮೊಬೈಲ್ ನಲ್ಲಿ ಅಧಿಕೃತ ಗುರುತಿನ ಚೀಟಿ ತೋರಿಸಿದರು ಸಹ ಮಹಿಳಾ ಪ್ರಯಾಣಿಕರು ಮೊಬೈಲ್ ನಲ್ಲಿನ ಗುರುತಿನ ಚೀಟಿಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಕೆಲವು ನಿರ್ವಾಹಕರು ಮಹಿಳಾ ಪ್ರಯಾಣಿಕರಿಗೆ ಅನಾವಶ್ಯಕವಾಗಿ ತೊಂದರೆಯನ್ನು ಉಂಟು ಮಾಡುತ್ತಿರುವುದರ ಬಗ್ಗೆ ಸರ್ಕಾರಕ್ಕೆ ಪದೇ ಪದೇ ದೂರುಗಳು ಕೇಳಿ ಬರುತ್ತಿದ್ದವು. ಈ ಕಾರಣದಿಂದಾಗಿ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್ ನಲ್ಲಿ ಉಲ್ಲೇಖಿತ ಆದೇಶಗಳಲ್ಲಿ ತಿಳಿಸಿರುವಂತೆ ಮಹಿಳಾ ಪ್ರಯಾಣಿಕರು ತೋರಿಸುವ ಯಾವುದಾದರೂ ಒಂದು ಅಧಿಕೃತ ಗುರುತಿನ ಚೀಟಿಯನ್ನು ಪರಿಗಣಿಸಿ ಶೂನ್ಯ ಮುತ್ತದ ಮಹಿಳಾ ಟಿಕೆಟ್ ವಿಧಾರಿಸಲು ಎಲ್ಲಾ ನಿರ್ವಾಹಕರಿಗೆ ಮತ್ತೊಮ್ಮೆ ತಿಳುವಳಿಕೆ ನೀಡಲು ಹಾಗೂ ಉಚಿತ ಪ್ರಯಾಣಕ್ಕೇ ಮಹಿಳೆಯರಿಗೆ ಅಡಚಣೆಯಾಗದಂತೆ ಹಾಗೂ ದೂರುಗಳಿಗೆ ಆಸ್ಪದ ನೀಡದಂತೆ ಸರ್ಕಾರವು ಕ್ರಮವಹಿಸುವಂತೆ ಆದೇಶವನ್ನು ನೀಡಿದೆ.
ಇದನ್ನು ಓದಿ : ಆಧಾರ್ ಕಾರ್ಡ್ ಫೋಟೋ ಅಪ್ಡೇಟ್ ಮಾಡುವುದು ತುಂಬಾ ಸರಳ; ಇಲ್ಲಿದೆ ಸಂಪೂರ್ಣ ಮಾಹಿತಿ
ಯಾವುದಾದರೂ ಅಧಿಕೃತ ಗುರುತಿನ ಚೀಟಿಯನ್ನು ತೋರಿಸಬಹುದು :
ಯಾವುದಾದರೂ ಅಧಿಕೃತ ಗುರುತಿನ ಚೀಟಿಯನ್ನು ತೋರಿಸಲು ಸಂಚಾರ ವ್ಯವಸ್ಥಾಪಕರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೇಂದ್ರ ಕಚೇರಿ ಬೆಂಗಳೂರು ಇದಕ್ಕೆ ಆದೇಶವನ್ನು ಹೊರಡಿಸಿದ್ದಾರೆ. ಇದರ ಸಂಬಂಧವಾಗಿ ಮಹಿಳಾ ಪ್ರಯಾಣಿಕರು ಮೊಬೈಲ್ ನಲ್ಲಿ ಉಲ್ಲೇಖಿತ ಆದೇಶಗಳಲ್ಲಿ ತಿಳಿಸಿರುವಂತೆ ಯಾವುದಾದರೂ ಒಂದು ಅಧಿಕೃತ ಗುರುತಿನ ಚೀಟಿಯನ್ನು ತೋರಿಸಿದರೆ ಅದನ್ನು ಪರಿಗಣಿಸಿ ಶೂನ್ಯಮತ್ತದ ಮಹಿಳಾ ಟಿಕೆಟ್ ಅನ್ನು ವಿತರಿಸಲು ಎಲ್ಲಾ ನಿರ್ವಾಹಕರಿಗೆ ಮತ್ತೊಮ್ಮೆ ಮಾಹಿತಿಯನ್ನು ನೀಡಿದೆ.
ಹೀಗೆ ಮಹಿಳಾ ಪ್ರಯಾಣಿಕರು ಮೊಬೈಲ್ ನಲ್ಲಿಯೇ ಯಾವುದಾದರೂ ತಮ್ಮ ಗುರುತಿನ ಚೀಟಿಯನ್ನು ತೋರಿಸುವ ಮೂಲಕ ಪ್ರಯಾಣಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದ್ದು ಈ ಮೂಲಕ ಉಚಿತ ಬಸ್ ಪ್ರಯಾಣವನ್ನು ಮಾಡಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮ ಮಹಿಳಾ ಸ್ನೇಹಿತರಿಗೆ ಶೇರ್ ಮಾಡುವ ಮೂಲಕ ಅವರಿಗೆ ಮೊಬೈಲ್ ನಲ್ಲಿಯೇ ಇನ್ನು ಮುಂದೆ ಅಧಿಕೃತ ಗುರುತಿನ ಚೀಟಿಯನ್ನು ತೋರಿಸುವುದರ ಮೂಲಕ ಪ್ರಯಾಣಿಸಬಹುದು ಎಂದು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಆಧಾರ್ ಕಾರ್ಡ್ ಫೋಟೋ ಅಪ್ಡೇಟ್ ಮಾಡುವುದು ತುಂಬಾ ಸರಳ; ಇಲ್ಲಿದೆ ಸಂಪೂರ್ಣ ಮಾಹಿತಿ