ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ಎನ್‌ಪಿಸಿಐ ಆದೇಶ ಹೊರಡಿಸಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಯುಪಿಐ ಮೂಲಕ ಪೇಮೆಂಟ್ ಮಾಡುವವರಿಗಾಗಿ ಎಂಪಿಸಿಐ ಮಹತ್ವದ ಆದೇಶವನ್ನು ಹೊರಡಿಸಿದೆ. ಯುಪಿಐ ಐಡಿ ಇನ್ನೇನು ಕೆಲವೇ ದಿನಗಳಲ್ಲಿ ನೀವೇನಾದರೂ ಈ ಕೆಲಸ ಮಾಡುವುದನ್ನು ಮಿಸ್ ಮಾಡಿದರೆ ಕ್ಲೋಸ್ ಆಗುವಂತಹ ಸಾಧ್ಯತೆ ಇದೆ. ಇದರಿಂದಾಗಿ ಯುಪಿಐ ಬಳಸಿ ನಿಮ್ಮ ಯಾವುದೇ ರೀತಿಯ ಪೇಮೆಂಟ್ ಅನ್ನು ಮಾಡಲು ಸಾಧ್ಯವಾಗುವುದಿಲ್ಲ ಹಾಗಾದರೆ ಎಪಿಸಿಐ ನ ಆದೇಶವನ್ನು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತಿದೆ.
ಯುಪಿಐ ಪೇಮೆಂಟ್ :
ಯಾರು ಕೂಡ ಬ್ಯಾಂಕಿಗೆ ಹೋಗಿ ಸರತಿ ಸಾಲಿನಲ್ಲಿ ನಿಂತು ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ಮಾಡುವುದಿಲ್ಲ. ಯಾವುದೇ ಒಂದು ಸಣ್ಣ ಪೇಮೆಂಟ್ ಮಾಡಬೇಕೆಂದರೂ ಸಹ ಇದೀಗ ಮೊದಲಿನ ಹಾಗೆ ಬ್ಯಾಂಕಿಗೆ ಹೋಗುವಂತಹ ಅಗತ್ಯವಿಲ್ಲ. ಏಕೆಂದರೆ ಬೇರೆ ಬೇರೆ ರೀತಿಯ ಯುಪಿಐ ಪೇಮೆಂಟ್ ಮಾಡಲು ಅಪ್ಲಿಕೇಶನ್ಗಳನ್ನು ನಾವು ನೋಡಬಹುದಾಗಿದ್ದು ಅದರ ಮೂಲಕವೇ ಕ್ಷಣಮಾತ್ರದಲ್ಲಿಯೇ ನಾವು ಯಾವುದೇ ರೀತಿಯ ಪೇಮೆಂಟ್ ಅನ್ನು ಮಾಡಬಹುದಾಗಿದೆ.
ಯುಪಿಐ ಐ ಡಿ ನಿಷ್ಕ್ರಿಯಗೊಳ್ಳಲಿದೆ :
ಯುಪಿಐ ಪೇಮೆಂಟ್ ಮಾಡಲು ಸಾಮಾನ್ಯವಾಗಿ ಫೋನ್ ಪೇ ಅಥವಾ ಗೂಗಲ್ ಪೇ ಅಂತ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳನ್ನು ನಾವು ಬಳಸುತ್ತೇವೆ. ಆದರೆ ಇದೀಗ ಈ ಅಪ್ಲಿಕೇಶನ್ ಗಳು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಯಾವುದೇ ರೀತಿಯ ವಹಿವಾಟನ್ನು ನಡೆಸದೇ ಇದ್ದರೆ ಅಂತಹ ಯುಪಿಐ ಐಡಿಗಳನ್ನು ನಿಷ್ಕ್ರಿಯಗೊಳಿಸಲು ಮುಂದಾಗಿದೆ. ಎಲ್ಲ ಬ್ಯಾಂಕುಗಳಿಗೂ ಹಾಗೂ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳಿಗೂ ಎನ್‌ಪಿಸಿಐ ಸೂಚನೆ ನೀಡಿದ್ದು ಯಾವುದೇ ರೀತಿಯ ವಹಿವಾಟನ್ನು ಈ ವರ್ಷದ ಅಂತ್ಯದ ವೇಳೆಗೆ ನಡೆಸದೆ ಇರುವಂತಹ ಯುಪಿಐ ಐಡಿಯನ್ನು ಮುಚ್ಚಲು ಆದೇಶವನ್ನು ಹೊರಡಿಸಿದೆ.
ಹೊಸ ವರ್ಷದಿಂದ ಆದೇಶ ಜಾರಿಯಾಗಬಹುದು :
ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಎನ್‌ಪಿಸಿಐ ಮಾರ್ಗಸೂಚಿಯ ಪ್ರಕಾರ ಪೇಮೆಂಟ್ ಅಪ್ಲಿಕೇಶನ್ ಅಥವಾ ಪಿ ಎಸ್ ಪಿ ಬ್ಯಾಂಕುಗಳ ಜೊತೆಗೆ ಜೋಡಿ ಮಾಡಿಕೊಂಡಿರುತ್ತವೆ. ಬ್ಯಾಂಕ್ ಪರಿಶೀಲನೆ ಇದನ್ನು ಮಾಡುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ. ಕ್ರೆಡಿಟ್ ಅಥವಾ ಡೆಬಿಟ್ ಮಾಡದೇ ಇರುವ ಯುಪಿಐ ಅಡ್ರೆಸ್ ಅನ್ನು ಕಂಡುಹಿಡಿಯುವ ಮೂಲಕ ಅಂತಹ ಯುಪಿಐ ಐಡಿಯನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ. ಯುಪಿಐ ಐಡಿ ಮೂಲಕ ಯಾವುದೇ ರೀತಿಯ ವಹಿವಾಟು ನಡೆಸಲು ಸಾಧ್ಯವಿಲ್ಲ ಎಂದು ಹೊಸ ವರ್ಷದಿಂದ ಎನ್‌ಪಿಸಿಐ ತಿಳಿಸಿದೆ.
ಡಿಸೆಂಬರ್ 31ರವರೆಗೆ ಕಾಲಾವಕಾಶ :
ಯುಪಿಐ ಐಡಿ ಬಳಸಿ ಒಂದು ವರ್ಷಗಳಿಂದ ಯಾರು ಹಣಕಾಸಿನ ವಹಿವಾಟು ಮಾಡಿಲ್ಲವೋ ಅಂತವರ ಐಡಿಯನ್ನು ನಿಷ್ಕ್ರಿಯಗೊಳಿಸಲು ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳಿಗೆ ಅಥವಾ ಬ್ಯಾಂಕುಗಳಿಗೆ ಡಿಸೆಂಬರ್ 31ರವರೆಗೆ ಕಾಲಾವಕಾಶವನ್ನು ಎಂಬಿಸಿಐ ನೀಡಿದೆ. ಅಷ್ಟರಲ್ಲಿ ಯುಪಿಐ ಐಡಿ ಬಳಕೆಯಾಗದೇ ಇರುವಂತಹದನ್ನು ಗುರುತಿಸಿ ಅದನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ. ನೀವು ಯಾವ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿರುತ್ತೀರಿಯೋ ಆ ಬ್ಯಾಂಕ್ ನ ಮೂಲಕ ಇಮೇಲ್ ಅಥವಾ ಸಂದೇಶದ ಜೊತೆಗೆ ನಿಮ್ಮ ಐಡಿಯನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ ಎಂಬ ಸಂದೇಶ ನಿಮಗೆ ತಿಳಿದು ಬರುತ್ತದೆ.
ಹೀಗೆ ಯುಪಿಐ ಐಡಿ ಅನ್ನು ಈ ರೀತಿ ಬಳಕೆ ಅದೇ ಇದ್ದರೆ ಅವುಗಳನ್ನು ನಿಷ್ಕ್ರಿಯಗೊಳಿಸುವುದರಿಂದ ಣವು ತಪ್ಪಾಗಿ ಬೇರೆಯವರ ಖಾತೆಗೆ ಹೋಗುವುದನ್ನು ತಪ್ಪಿಸಬಹುದಾಗಿದೆ ಎಂಬುದು ಎನ್‌ಪಿಸಿಐ ನ ಉದ್ದೇಶವಾಗಿದೆ. ಏಕೆಂದರೆ ಇಂತಹ ಪ್ರಕರಣಗಳು ಇಲ್ಲಿಯವರೆಗೆ ಸಾಕಷ್ಟು ಬೆಳಕಿಗೆ ಬಂದಿದ್ದು ಹಲವಾರು ಜನರು ಹಣವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿಯು ಸಹ ಎದುರಾಗಿದೆ ಹಾಗಾಗಿ ಇಂತಹ ಮಾರ್ಗಸೂಚಿಯನ್ನು ತಕ್ಷಣವೇ ಎಂಪಿಸಿಐ ಹೊರಡಿಸುವ ಮೂಲಕ ಬಳಕೆಯಾಗದೇ ಇರುವಂತಹ ಯುಪಿಐ ಐಡಿಯನ್ನು ನಿಷ್ಕ್ರಿಯಗೊಳಿಸಲು ಹೊರಟಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮ ಯುಪಿಐ ಸ್ನೇಹಿತರಿಗೆ ಶೇರ್ ಮಾಡುವ ಮೂಲಕ ಅವರು ಇದುವರೆಗೂ ಒಂದು ಪೇಮೆಂಟ್ ಅನ್ನು ಮಾಡದೆ ಇದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.