ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ನಿನ್ನೆ ನಡೆದಂತಹ ವಿಶ್ವಕಪ್ ರಣರೋಚಕ ಪಂದ್ಯದಲ್ಲಿ ಟೀಂ ಇಂಡಿಯಾದ ವಿರುದ್ದ ಆಸ್ಟೇಲಿಯಾ ಕ್ರಿಕೆಟ್ ತಂಡ ಗೆದ್ದು ಈ ಬಾರಿಯ ವರ್ಲ್ಡ್ ಕಪ್ ಅನ್ನು ಗೆದ್ದು ತನ್ನ ಮುಡಿಗೇರಿಸಿಕೊಂಡಿತು. ಈ ಬಾರಿ ಟೀಂ ಇಂಡಿಯಾ ಸೋಲಲು ಕಾರಣಗಳೇನು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಕೊನೆಯವರೆಗೂ ಓದಿ.
ನಿನ್ನೆ ನಡೆದಂತಹ ICC ವರ್ಲ್ಡ್ ಕಪ್ 2023 ಫೈನಲ್‌ನ ಹಣಾಹಣಿಯಲ್ಲಿ ಟೀಂ ಇಂಡಿಯಾ ವಿರುದ್ದ ಆಸ್ಟ್ರೇಲಿಯಾ ಜಯ ಸಾಧಿಸಿದೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಇಡೀ ಭಾರತೀಯರು ಕೂಡ ಬೇಸರದಲ್ಲಿದ್ದಾರೆ.
ನಿನ್ನೆ ಅಹಮದಾಬಾದ್ ನಲ್ಲಿ ನಡೆದಂತಹ ಇಂಡಿಯಾ v/s ಆಸ್ಟ್ರೇಲಿಯಾ ತಂಡಗಳ ರಣರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಮಾಡಿದ್ದು, ಇಂಡಿಯಾ ಗೆಲ್ಲುತ್ತದೆ ಎಂಬ ಉತ್ಸುಕತೆಯಿಂದ ಕೋಟ್ಯಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರೆ ಆದರೆ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದಂತೆ ಆಗಿದೆ.
ICC World cup 2023 ರ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾವು ಆಸ್ಟ್ರೇಲಿಯಾ ತಂಡಕ್ಕೆ ಕೇವಲ 241 ರನ್ ಗಳ ಗುರಿಯನ್ನು ನೀಡಿದ್ದು. ಟೀಮ್ ಇಂಡಿಯಾ ವಿರುದ್ದ ಆಸ್ಟ್ರೇಲಿಯಾ 6 ವಿಕೆಟ್ ಗಳನ್ನು ಪಡೆದು ಟೀಮ್ ಇಂಡಿಯಾವನ್ನು ಸೋಲಿಸಿದೆ. ಈ ಬಾರಿ 2023ರ ICC World Cup ಆಸ್ಟ್ರೇಲಿಯಾವು ತನ್ನ ಮುಡಿಗೇರಿಸಿಕೊಂಡಿದೆ. ಸದ್ಯ ಈಗ ಟೀಮ್ ಇಂಡಿಯಾದ ಬಗ್ಗೆ ಬ್ಯಾಟ್ ಮ್ಯಾನ್ ಆದಂತಹ ಸುನೀಲ್ ಗಾವಸ್ಕರ್ ಹೇಳಿಕೆಯೊಂದನ್ನು ನೀಡಿದ್ದಾರೆ. ಸದ್ಯ ಈ ಆಟಗಾರನ ಹೇಳಿಕೆಯು ಬಾರಿ ವೈರಲ್ ಆಗುತ್ತಿದೆ.
ಇದನ್ನು ಸಹ ಓದಿ: ಎಲ್ಲಾ ಹಳೆ ಆಧಾರ್ ಕಾರ್ಡ್ ಬಂದ್..! ಎಲ್ಲರಿಗೂ ಹೊಸ ಆಧಾರ್ ಕಾರ್ಡ್ ವಿತರಿಸುತ್ತಿರುವ ಸರ್ಕಾರ; ಕೂಡಲೇ ನಿಮ್ಮ ಹೆಸರನ್ನು ನೋಂದಾಯಿಸಿ
ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಡಿಮೆ ಸ್ಕೊರಿಂಗ್ ನಲ್ಲಿ ಆಸ್ಟೇಲಿಯಾದ ನಿಯಮಿತವಲ್ಲದಂತಹ ಬೌಲರ್ ಗಳ ಮೇಲೆ ದಾಳಿ ಮಾಡಲು ರೋಹಿತ್ ಹಾಗೂ ತಂಡ ಸಂಪೂರ್ಣ ವಿಫಲವಾಗಿದೆ. ರೋಹಿತ್ ಶರ್ಮಾ ಈ ರೀತಿಯ ತಪ್ಪಾದ ಶಾಟ್ ಆಡಿ ಔಟಾದದ್ದು ಮಹತ್ವದ ತಿರುವನ್ನು ಕೊಟ್ಟಿತ್ತು.
ರೋಹಿತ್ ಶರ್ಮಾ ಚೆನ್ನಾಗಿ ಆಡುತ್ತಿದ್ದರು. ಈ ಓವರ್ ನಲ್ಲಿ 1 ಸಿಕ್ಸರ್ ಹಾಗೂ ಬೌಂಡರಿಸಹಿತ 10 ರನ್ ಗಳು ಆಗಲೇ ಬಂದಿದ್ದು. ಬಹುಶಃ ಮುಂದಿನ ಎಸೆತದಲ್ಲಿ ಹಾಗೇ ಬ್ಯಾಟ್ ಮಾಡಬಾರದಿತ್ತು. ಅವರು ಅದನ್ನು ಕನೆಕ್ಟ್ ಮಾಡಿ ಆಡಿದ್ದರೆ ಇಡೀ ಭಾರತವು ಎದ್ದುನಿಂತು ಚಪ್ಪಾಳೆ ತಟ್ಟುತ್ತಿದ್ದೆವು. ಭಾರತ ತಂಡದ ಸ್ಕೋರ್ 260 ರನ್ ಗಳಿಗಿಂತ ಹೆಚ್ಚಿರಬೇಕಿತ್ತು ಆದರೆ ಕೇವಲ 241 ರನ್ ಗಳಿಗೆ ಉಳಿದಿದ್ದು ಬೇಸರದ ಸಂಗತಿಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇತರೆ ವಿಷಯಗಳು:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ವತಿಯಿಂದ ಉದ್ಯೋಗಾವಕಾಶ
ಅಡುಗೆ ಗ್ಯಾಸ್ ಸಿಲಿಂಡರ್ ದರದಲ್ಲಿ ಇಳಿಕೆ; ಇಂದಿನ ಎಷ್ಟು ಬೆಲೆ ಗೊತ್ತಾ..?