ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಮನೆಯಲ್ಲಿ ನಾಯಿ ಸಾಕುವ ಮುನ್ನ ನಾಯಿಗೆ ಚುಚ್ಚುಮದ್ದು ಹಾಕಿಸದೇ ಯಾರಿಗಾದರೂ ಕಚ್ಚಿ ಸಮಸ್ಯೆಯುಂಟಾದರೆ ನಾಯಿಯನ್ನು ಸಾಕಿದ ಮಾಲೀಕನ ಮೇಲೆ ಭಾರಿ ದಂಡ ಬೀಳುತ್ತದೆ. ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಕೊನೆಯವರೆಗೂ ಓದಿ.

ಸಾಕು ಪ್ರಾಣಿಗಳಲ್ಲಿ ಎಲ್ಲರೂ ಇಷ್ಟಪಡುವಂತಹ ಪ್ರಾಣಿ ನಾಯಿ. ಇಂದು ನಗರ ಭಾಗಗಳಲ್ಲಿ ಅಥವಾ ಗ್ರಾಮೀಣ ಪ್ರದೇಶದಲ್ಲಿ ನಾಯಿ ಸಾಕುವವರ ಸಂಖ್ಯೆ ಹೆಚ್ಚಾಗಿದೆ. ಬೇರೆ ಬೇರೆ ಬ್ರೀಡ್ ನ ನಾಯಿಗಳನ್ನು ಮನೆಯಲ್ಲಿ ಸಾಕಲಾಗುತ್ತಿದೆ. ಅದೇ ರೀತಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳಿಂದ ಕಚ್ಚಿಸಿಕೊಂಡ ಪ್ರಕರಣಗಳು ಹೆಚ್ಚಾಗಿಯೇ ಇವೆ.
ದೇಶದಲ್ಲಿ ಹೆಚ್ಚುತ್ತಿದೆ ಬೀದಿನಾಯಿಗಳ ಕಡಿತ ಅಂತೆಯೇ ಬೀದಿ ನಾಯಿಗಳನ್ನು ಕರೆದುಕೊಂಡು ಹೋಗಿ ಚುಚ್ಚುಮದ್ದು ಹಾಕಿಸುವವರ ಬಗ್ಗೆ ಸರ್ಕಾರವು ವಿಶೇಷ ಗಮನ ಹರಿಸಿದೆ. ಈ ಬಗ್ಗೆ ಸರ್ಕಾರವು ಪಶು ಇಲಾಖೆಗೆ ಕೆಲಸ ಮಾಡಲು ಆದೇಶ ನೀಡಿದೆ.
ಅದೇ ರೀತಿಯಾಗಿ ಮನೆಯಲ್ಲಿ ಸಾಕಿರವಂತಹ ನಾಯಿಯ ಬಗ್ಗೆ ಕೂಡ ಹೆಚ್ಚಿನ ಕಾಳಜಿಯನ್ನು ವಹಿಸುವುದು ಮುಖ್ಯವಾಗಿದೆ. ಮನೆಯಲ್ಲಿ ಸಾಕಿದ ಮಾತ್ರಕ್ಕೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಚುಚ್ಚುಮದ್ದು ಹಾಕದೇ ಇದ್ದು ಆ ನಾಯಿ ಯಾರಿಗಾದರೂ ಕಚ್ಚಿದ್ದರೆ, ಆ ನಾಯಿಯ ಮಾಲೀಕರ ವಿರುದ್ದ ಭಾರೀ ಪ್ರಮಾಣದ ದಂಡ ತೆರಬೇಕಾಗುತ್ತದೆ.
ಇದನ್ನು ಸಹ ಓದಿ: ನವೆಂಬರ್ 30ರೊಳಗೆ 8 ಕೋಟಿಗೂ ಹೆಚ್ಚು ರೈತರ ಖಾತೆಗೆ ಕಿಸಾನ್ 15ನೇ ಕಂತು! ಫಲಾನುಭವಿಗಳ ಪಟ್ಟಿ ಬಿಡುಗಡೆ
ದೇಶದಲ್ಲಿ ಪ್ರತಿದಿನ 5 ವರೆ ಸಾವಿರ ಪ್ರಕರಣಗಳು ನಾಯಿ ಕಡಿತದ್ದಾಗಿವೆ. ಇವುಗಳಲ್ಲಿ ಅದೆಷ್ಟೋ ಪ್ರಕರಣಗಳು ರೇಬಿಸ್ ರೋಗಕ್ಕೂ ಒಳಗಾಗಿದ್ದೂ ಕೂಡ ಇದೆ.
ಈ ಹಿನ್ನೆಲೆಯಲ್ಲಿ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್‌ನಲ್ಲಿ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಯಾವುದೇ ಸಾಕು ನಾಯಿಯ ಕಡಿತಕ್ಕೆ ಒಳಗಾದರೆ ಆತನಿಗೆ ನಾಯಿಯ ಮಾಲೀಕ 10 ಸಾವಿರ ದಂಡ ಪರಿಹಾರವನ್ನುನೀಡಬೇಕು.
ನಾಯಿ ಕಡಿತದಿಂದ ಮನುಷ್ಯನ ದೇಹದ ಮೇಲೆ ಹಲ್ಲಿನ ಗುರುತು ಕಂಡು ಬಂದರೆ ಪ್ರತಿ ಗುರುತಿಗೂ 10 ಸಾವಿರ ನೀಡಬೇಕು. ಎಂದು ಹೈಕೋರ್ಟ್ ಆದೇಶಿಸಿದೆ. ಅಷ್ಠೆ ಅಲ್ಲದೇ 0.2 ಸೆಂ.ಮೀ ಮಾಂಸ ಹರಿದು ಗಾಯಗಳಾಗಿದ್ದರೆ ಅವರಿಗೆ 20 ಸಾವಿರ ವನ್ನು ದಂಡವಾಗಿ ಕೊಡಬೇಕು ಎಂದು ಹೈಕೋರ್ಟ್ ತೀರ್ಮಾನ ಮಾಡಿದೆ.
ನಾಯಿ ಕಚ್ಚಿದ ಪ್ರಕರಣದಲ್ಲಿ ಯಾರೇ ಅಗಿದ್ದರೂ ಕೂಡ ಸರಿಯಾದ ದಾಖಲೆಗಳ ಜೊತೆಗೆ ಪ್ರಕರಣ ದಾಖಲಿಸಿದರೆ ಅಂತಹ ಕೇಸ್ ಅನ್ನು ಮೊದಲು ಪರಿಗಣಿಸಿ ನಂತಹ ಪರಿಹಾರವನ್ನು ನೀಡಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಅಷ್ಟೇ ಅಲ್ಲದೇ ಇಂತಹ ಪ್ರಕರಣಗಳು ಕೇವಲ 4 ತಿಂಗಳೋಳಗಾಗಿ ಮುಕ್ತಾಯವಾಗಬೇಕು ಎಂದು ತಿಳಿಸಲಾಗಿದೆ. ಒಟ್ಟಿನಲ್ಲಿ ನಾಯಿ ಕಡಿತಕ್ಕೆ ಒಳಗಾದವರಿಗೆ ಪರಿಹಾರ ಸಿಕ್ಕಿದೆ. ನಾಯಿ ಸಾಕುವವರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಹೈಕೋರ್ಟ್ ಆದೇಶದನ್ವಯ ಬಾರಿ ಮೊತ್ತದ ದಂಡ ತೆರಬೇಕಾಗುತ್ತದೆ.
ಇತರೆ ವಿಷಯಗಳು:
ಪಿಜಿ, ಹಾಸ್ಟೆಲ್ಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು! ಹೊಸ ಗೈಡ್ ಲೈನ್ಸ್ ಬಿಡುಗಡೆ!!
ಇಂದು ಸರ್ಕಾರದಿಂದ ಬೆಳೆ ವಿಮೆ ವಿತರಣೆ! ಈ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ರೈತರಿಗೆ ಹಣ ಜಮಾ