ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ರಿಲಯನ್ಸ್ ಜಿಯೋ ಕಂಪನಿಯು ಮಾರುಕಟ್ಟೆಗೆ ತಂದಿರುವ ಹೊಸ ಲ್ಯಾಪ್ಟಾಪ್ ನ ಬಗ್ಗೆ ತಿಳಿಸಲಾಗುತ್ತಿದೆ. ಇದೀಗ ಮಾರುಕಟ್ಟೆಗೆ ಹೊಸ ಲ್ಯಾಪ್ಟಾಪ್ ಒಂದನ್ನು ರಿಲಿಯನ್ಸ್ ಜಿಯೋ ಕಂಪನಿಯು ಬಿಡುಗಡೆ ಮಾಡಲು ರೆಡಿಯಾಗಿದೆ. ವಿಚಾರ ನಿಮಗೆ ಸಂತಸ ತರಬಹುದು ಏಕೆಂದರೆ ಕಡಿಮೆ ಬೆಲೆಗೆ ಮೊಬೈಲ್ ಫೋನ್ ಗಳನ್ನು ಕಂಡುಕೊಳ್ಳುತ್ತೀರಿ ಆದರೆ ಲ್ಯಾಪ್ಟಾಪ್ಗಳನ್ನು ಕಡಿಮೆ ಬೆಲೆಗೆ ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ ಆ ವಿಚಾರಕ್ಕೆ ಬಂದರೆ ಸ್ವಲ್ಪ ಯೋಚನೆಯನ್ನು ಮಾಡಬೇಕಾಗುತ್ತದೆ. ಏಕೆಂದರೆ ಲ್ಯಾಪ್ಟಾಪ್ಗಳ ಬೆಲೆ ದುಬಾರಿಯಾಗಿದ್ದು ಕಡಿಮೆ ಬೆಲೆಗೆ ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ ಆದರೆ ಇದೀಗ ಸಾಧ್ಯವಾಗಿದ್ದು ಈ ಹೊಸ ಲ್ಯಾಪ್ಟಾಪ್ ಅನ್ನು ಜಿಯೋ ರಿಲಿಯನ್ಸ್ ಕಂಪನಿಯು ರಿಲೀಸ್ ಮಾಡಿದೆ. ಹಾಗಾದರೆ ಆ ಲ್ಯಾಪ್ಟಾಪ್ ನ ವಿಶೇಷತೆಗಳು ಏನು ಯಾವ ಬೆಲೆಗೆ ಈ ಲ್ಯಾಪ್ಟಾಪ್ ಸಿಗಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
ಜಿಯೋದ ಹೊಸ ಕ್ಲೌಡ್ ಲ್ಯಾಪ್ಟಾಪ್ :
ಕ್ಲೌಡ್ ಲ್ಯಾಪ್ಟಾಪ್ ಅನ್ನು ರಿಲಿಯನ್ಸ್ ಜಿಯೋ ಕಂಪನಿಯು ಬಿಡುಗಡೆ ಮಾಡಿದ್ದು ಆದಷ್ಟು ಬೇಗ ಕಂಪನಿಯು ಈ ಲ್ಯಾಪ್ಟಾಪ್ಗಳನ್ನು ಮಾರುಕಟ್ಟೆಗೆ ತರಲು ನಿರ್ಧರಿಸಿದೆ. ಈ ವರ್ಷದ ಜುಲೈನಲ್ಲಿ 1699 ರೂಪಾಯಿಗಳ ಬೆಲೆಯ ಲ್ಯಾಪ್ಟಾಪ್ ಅನ್ನು ಜಿಯೋ ಕಂಪನಿಯು ಬಿಡುಗಡೆ ಮಾಡಿದೆ. ಆದರೆ ಇದೀಗ ಕೇವಲ 15 ಸಾವಿರ ರೂಪಾಯಿ ಬೆಲೆಯಲ್ಲಿ ಈ ಒಂದು ಲ್ಯಾಪ್ಟಾಪ್ ಅನ್ನು ಬಿಡುಗಡೆ ಮಾಡಲು ಜಿಯೋ ಕಂಪನಿಯು ಮುಂದಾಗಿದ್ದು ಆ ಲ್ಯಾಪ್ಟಾಪ್ ಎಂದರೆ ಲ್ಯಾಪ್ಟಾಪ್ ಆಗಿದೆ. ಕಂಪನಿಯು ತಿಳಿಸಿರುವಂತಹ ಈ ವಿಷಯ ಕೇಳಿ ನಿಮಗೆ ಖುಷಿಯ ಜೊತೆಗೆ ಅಚ್ಚರಿಯೂ ಸಹ ಆಗಬಹುದು ಏಕೆಂದರೆ ನಾವು ಯಾವುದೇ ರೀತಿಯ ಸೆಕೆಂಡ್ ಹ್ಯಾಂಡ್ ಲ್ಯಾಪ್ಟಾಪ್ ಅನ್ನು ಈ ಬೆಲೆಗೆ ಖರೀದಿಸಲು ಸಾಧ್ಯ ವಾಗುವುದಿಲ್ಲ ಆದರೆ ಇದೀಗ ಕೇವಲ 15 ಸಾವಿರ ರೂಪಾಯಿಗಳಿಗೆ ಆ ಒಂದು ಕೊರತೆಯನ್ನು ನೀಗಿಸುವ ಮೂಲಕ ಕಡಿಮೆ ಬೆಲೆಯಲ್ಲಿ ಲ್ಯಾಪ್ಟಾಪ್ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.
ಇದನ್ನು ಓದಿ : ಕೇವಲ 450 ರೂಪಾಯಿಗೆ ಎಲ್ಪಿಜಿ ಸಿಲಿಂಡರ್ ಮತ್ತು ರೈತರಿಗೆ 12 ಸಾವಿರ ರೂಪಾಯಿ ಮಹತ್ವದ ನಿರ್ಧಾರ
ಕ್ಲೌಡ್ ಲ್ಯಾಪ್ಟಾಪ್ ನ ವಿಶೇಷತೆಗಳು :
ಜಿಯೋ ರಿಲಯನ್ಸ್ ಕಂಪನಿಯ ಈ ಒಂದು ಕ್ಲೌಡ್ ಲ್ಯಾಪ್ಟಾಪ್ ಅನ್ನು ತಯಾರಿ ಮಾಡುವುದಕ್ಕಾಗಿ ಹಲವಾರು ಕಂಪನಿಗಳು ಕೈಜೋಡಿಸಲು ಮುಂದಾಗಿದ್ದು ಅವುಗಳಲ್ಲಿ ಮುಖ್ಯವಾಗಿ ಹಾರ್ಡ್ವೇರ್ಗೆ ಹೆಸರುವಾಸಿಯಾದಂತಹ ಕಂಪನಿಯಾದ ಹೆಚ್ ಪಿ ಎಸ್ ಆರ್ ಲೆನೊವೊ ಈ ಕಂಪನಿಗಳು ರಿಲಯನ್ಸ್ ಕಂಪನಿಗೆ ಸಹಕಾರ ನೀಡುತ್ತಿದೆ.
ಕೇವಲ ಅದರಲ್ಲಿರುವ ಹಾರ್ಡ್ವೇರ್ ಭಾಗಗಳಾದ ಮೆಮೊರಿ ಪ್ರೋಸೆಸಿಂಗ್ ಪವರ್ ಶಿಪ್ ಸೆಟ್ ಬ್ಯಾಟರಿ ಮೇಲೆ ಅಷ್ಟೇ ಈ ಲ್ಯಾಪ್ಟಾಪ್ ನ ಬೆಲೆಯನ್ನು ಜಿಯೋ ರಿಲಯನ್ಸ್ ಕಂಪನಿ ನಿಗದಿಪಡಿಸಿದೆ. ಕಡಿಮೆ ಸಾಮರ್ಥ್ಯವನ್ನು ಹೊಂದಿರುವ ಈ ಲ್ಯಾಪ್ಟಾಪ್ ನ ಸ್ಟಾರ್ಟಿಂಗ್ ಬೆಲೆ 15,000 ಆಗಿದ್ದು ನೀವೇನಾದರೂ ಹೆಚ್ಚು ಸಾಮರ್ಥ್ಯದ ಹಾರ್ಡ್ವೇರ್ ಲ್ಯಾಪ್ಟಾಪ್ ಅನ್ನು ಪಡೆದುಕೊಳ್ಳಬೇಕಾದರೆ ಅದರ ಬೆಲೆಯೂ ಹೆಚ್ಚಿರುತ್ತದೆ. ಈಗ ಈ ಲ್ಯಾಪ್ಟಾಪ್ ನ ಸಂಪೂರ್ಣ ಪ್ರಕ್ರಿಯೆಯನ್ನು ಕ್ಲೌಡ್ನಲ್ಲೇ ನಡೆಸಲು ಜಿಯೋ ರಿಲಯನ್ಸ್ ಕಂಪನಿಯು ನಿರ್ಧರಿಸಿದೆ. ಇದರಲ್ಲಿರುವ ಮತ್ತೊಂದು ಮುಖ್ಯವಾದ ವಿಚಾರ ಏನೆಂದರೆ, ಯಾವಾಗಲೂ ಈ ಲ್ಯಾಪ್ಟಾಪ್ ಗೆ ಇಂಟರ್ನೆಟ್ ಕನೆಕ್ಷನ್ ಅನ್ನು ಹೊಂದಿರಬೇಕು ಅಂದರೆ ಈ ಕ್ಲೌಡ್ ಆಧಾರಿತ ಕಂಪ್ಯೂಟರ್ ಅನ್ನು ಬಳಸಬೇಕಾದರೆ ಇಂಟರ್ನೆಟ್ ಕನೆಕ್ಷನ್ ಮುಖ್ಯವಾಗಿದೆ. ಇಂಟರ್ನೆಟ್ ಇಲ್ಲದಿದ್ದರೆ ಇದರಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.
ಈ ಕ್ಲೌಡ್ ಲ್ಯಾಪ್ಟಾಪ್ ಅನ್ನು ಯಾರೆಲ್ಲಾ ಬಳಸಬಹುದು :
ಈ ಒಂದು ವಿಶೇಷ ಕ್ಲೌಡ್ ಲ್ಯಾಪ್ಟಾಪ್ ಅನ್ನು ಮುಖ್ಯವಾಗಿ ಶಿಕ್ಷಣ ಸಂಸ್ಥೆಗಳು ಮತ್ತು ಇಂಟರ್ನೆಟ್ ಕಂಪನಿಗಳಲ್ಲಿ ಈ ಲ್ಯಾಪ್ಟಾಪ್ ಅನ್ನು ಬಳಸಬಹುದಾಗಿದ್ದು ಅದರ ಜೊತೆಗೆ ಈ ಜಿಯೋ ಕ್ಲೋಡ್ ಲ್ಯಾಪ್ಟಾಪ್ ಅನ್ನು ಬಳಸಲು ಒಳ್ಳೆಯ ಇಂಟರ್ನೆಟನ್ನು ಸಹ ಹೊಂದಿರಬೇಕಾಗುತ್ತದೆ. ಜಿಯೋ ಕಂಪನಿಯು ಆಪಲ್ ನ ಹೈಕ್ಲೌಡ್ ಅಥವಾ ಗೂಗಲ್ ವನ್ ಚಂದದಾರಿಕೆ ಅಂತಹ ಮಾಸಿಕ ಕ್ಲೋಡ್ ಚಂದದಾರಿಕೆಯೊಂದಿಗೆ ಲ್ಯಾಪ್ಟಾಪ್ ಅನ್ನು ಜೋಡಿಸಲು ಯೋಜಿಸಿದೆ ಎಂದು ವರದಿಯನ್ನು ಹೇಳಿದೆ. ಕ್ಲೌಡ್ ಸದಸ್ಯತ್ವ ದ ಬೆಲೆಯನ್ನು ನಂತರದ ದಿನದಲ್ಲಿ ಅಂತಿಮಗೊಳಿಸಲಾಗುತ್ತದೆ ಎಂದು ಹೇಳಿದ್ದು ಹೆಚ್ಚಿನ ಶ್ರೇಣಿಯ ಯೋಜನೆಗಳಲ್ಲಿ ಕ್ಲೌಡ್ ಚಂದದಾರಿಕೆಯೂ ಲಭ್ಯವಿರುವ ವಿಶೇಷತೆಗಳೊಂದಿಗೆ ಜಿಯೋ ಸೇವೆಗಳ ಹೋಸ್ಟ್ ಅನ್ನು ಸಹ ಸಂಯೋಜಿಸುತ್ತದೆ ಎಂದು ಹೇಳಬಹುದಾಗಿದೆ.
ಹೀಗೆ ಜಿಯೋ ಕಂಪನಿಯು ಕಡಿಮೆ ಬೆಲೆಯಲ್ಲಿ ಲ್ಯಾಪ್ಟಾಪ್ ಅನ್ನು ನೀಡಲು ನಿರ್ಧರಿಸಿದ್ದು ಇದನ್ನು ಶಿಕ್ಷಣ ಸಂಸ್ಥೆಗಳು ಪಡೆದುಕೊಳ್ಳಬಹುದಾಗಿದೆ ಹಾಗಾಗಿ ನೀವೇನಾದರೂ ಲ್ಯಾಪ್ಟಾಪ್ ಅನ್ನು ಖರೀದಿಸಲು ಯೋಚಿಸುತ್ತಿದ್ದರೆ ಇನ್ನೇನು ಕೆಲವೇ ದಿನಗಳಲ್ಲಿ ಜಿಯೋ ಕಂಪನಿಯೂ ಈ ಹೊಸ ಲ್ಯಾಪ್ಟಾಪ್ ಅನ್ನು ಜಾರಿಗೆ ತರಲು ಯೋಚಿಸುತ್ತಿದೆ ಎಂಬುದರ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಇದರಿಂದ ಅವರು ಸಹ ಜಿಯೋ ಕಂಪನಿಯಿಂದ ಕಡಿಮೆ ಬೆಲೆಯಲ್ಲಿ ಲ್ಯಾಪ್ಟಾಪ್ ಅನ್ನು ಖರೀದಿ ಮಾಡಲು ಸಹಾಯವಾಗುತ್ತದೆ ಧನ್ಯವಾದಗಳು.
ಇತರೆ ವಿಷಯಗಳು :
ಭಾರತದಲ್ಲಿ ಹೆಚ್ಚು ಬಳಕೆಯಾದ ಪಾಸ್ವರ್ಡ್ ಇಲ್ಲಿದೆ : ನಿಮ್ಮ ಪಾಸ್ವರ್ಡ್ ಈ ರೀತಿ ಇದ್ದರೆ ಬದಲಾವಣೆ ಮಾಡಿ
ರೇಷನ್ ಕಾರ್ಡ್ ನಲ್ಲಿ ಈ ಸಮಸ್ಯೆ ಇದ್ದರೆ, ಗೃಹಲಕ್ಷ್ಮಿ ಹಣ ಬರುವುದಿಲ್ಲ! ಆಹಾರ ಇಲಾಖೆ ಸ್ಪಷ್ಟನೆ