rtgh

Information

ಇವರಿಗೆ ಮಾತ್ರ ಬಿಪಿಎಲ್ ಕಾರ್ಡ್ ವಿತರಣೆ!‌ ಸರ್ಕಾರದ ಖಡಕ್‌ ನಿರ್ಧಾರ!

Join WhatsApp Group Join Telegram Group
Ration card application verification

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇವತ್ತಿನ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ರಾಜ್ಯ ಸರ್ಕಾರ ಜಾರಿಗೆ ತಂದಿರುವಂತಹ ನಾಲ್ಕು ಗ್ಯಾರಂಟೀ ಯೋಜನೆಗಳ ಲಾಭವನ್ನು ಪಡೆಯಲು APL ಅಥವಾ BPL ಕಾರ್ಡ್‌ ಮುಖ್ಯವಾದ ದಾಖಲೆಯಾಗಿದೆ. ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವಾಗಲಿ ನಿಮ್ಮ ಖಾತೆಗೆ ಬರಬೇಕು ಎಂದರೆ ಬಿಪಿಎಲ್‌ ಕಾರ್ಡ್‌ ಹೊಂದಿರುವುದು ತುಂಬಾ ಮುಖ್ಯವಾಗಿದೆ. ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.

Ration card application verification

ಅನ್ನಭಾಗ್ಯ ಯೋಜನೆಯ ಹಣವಾಗಲಿ ಅಥವಾ ಗೃಹಲಕ್ಷ್ಮಿಯ ಹಣವಾಗಲಿ ನಿಮ್ಮ ಖಾತೆಗೆ ಬರಬೇಕು ಎಂದರೆ ಬಿಪಿಎಲ್‌ ರೇಷನ್‌ ಕಾರ್ಡ್‌ ಬಹಳ ಮುಖ್ಯ ದಾಖಲೆಯಾಗಿದೆ. ಸರ್ಕಾರದ ಯಾವುದೇ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಆಧಾರ್‌ ಕಾರ್ಡ್‌ ನಂತೆ ಈಗ ಪಡಿತರ ಕಾರ್ಡ್‌ ತುಂಬಾ ಮುಖ್ಯವಾದ ದಾಖಲೆಯಾಗಿದೆ. ಇದರಿಂದಾಗಿ ಯಾರೆಲ್ಲಾ ಹೊಸ ರೇಷನ್‌ ಕಾರ್ಡ್‌ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದವರಿಗೆ ಸರ್ಕಾರದ ಕಡೆಯಿಂದ ಮಹತ್ವದ ಆದೇಶವನ್ನು ಹೊರಡಿಸಲಾಗಿದೆ.

ವಿಧಾನಸಭಾ ಚುನಾವಣೆಗೂ ಮುನ್ನವೇ ಸರ್ಕಾರ ಅರ್ಜಿ ಸಲ್ಲಿಕೆಯಾಗಿರುವಂತಹ ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿಗಳು ಸುಮಾರು ಮೂರುಲಕ್ಷದಷ್ಟಾಗಿದೆ. ಆದರೆ ಎಲೆಕ್ಷನ್‌ ಹತ್ತಿರವಾಗುತ್ತಿದ್ದಂತೆಯೇ ಅರ್ಜಿಯನ್ನು ತೆಗೆದುಕೊಳ್ಳುವುದನೇ ನಿಲ್ಲಿಸಿತು. ಅಷ್ಟೆ ಅಲ್ಲದೇ ಈಗಾಲಗೇ ಸಲ್ಲಿಕೆ ಆಗಿರುವ ಅರ್ಜಿಗಳನ್ನು ಪರಿಗಣಿಸದೆ ಅದರ ವಿಲೇವಾರಿ ಮಾಡಲಿಲ್ಲ. ಗ್ಯಾರಂಟೀ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಕಷ್ಟು ಕುಟುಂಬಗಳು ಹಿಂದಾಗಿವೆ. ತಮ್ಮ ಅರ್ಜಿಗಳನ್ನು ಪರಿಗಣಿಸಿ ಹೊಸ ರೇಷನ್‌ ಕಾರ್ಡ್‌ ಗಳನ್ನು ಆದಷ್ಟು ಬೇಗ ವಿತರಿಸುವಂತೆ ಸರ್ಕಾರಕ್ಕೆ ಅರ್ಜಿದಾರರು ಮನವಿ ಮಾಡಿಕೊಂಡಿದ್ದಾರೆ.

ಇದನ್ನು ಸಹ ಓದಿ: 15 ನೇ ಕಂತಿನ ಹಣ ರೈತರ ಖಾತೆಗೆ ಜಮಾ! ಈ ಲಿಂಕ್‌ ಮೂಲಕ ಸ್ಟೇಟಸ್‌ ಚೆಕ್‌ ಮಾಡಿ

ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಈಗಾಗಲೇ ಸಲ್ಲಿಕೆಯಾಗಿರುವಂತಹ ಅರ್ಜಿಗಳನ್ನು ಪರೀಶೀಲನೆ ನಡೆಸಿ ಸದ್ಯದಲ್ಲಿಯೇ ಸರಿಯಾದ ಅರ್ಜಿಗಳನ್ನು ಪರಿಗಣಿಸಿ ಅಂತಹವರಿಗೆ ಪಡಿತರ ವಿತರಿಸುವುದಾಗಿ ತಿಳಿಸಿದೆ. ಆಹಾರ ಇಲಾಖೆ ನೀಡಿರುವಂತಹ ಮಾಹಿತಿಯ ಪ್ರಕಾರ ಸದ್ಯದಲ್ಲಿಯೇ ಸುಮಾರು ಏಳು ಸಾವಿರ ಹೊಸ ರೇಷನ್‌ ಕಾರ್ಡ್‌ ಗಳನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದೆ.. ಆಹಾರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಕುಟುಂಬದ ಪರಿಸ್ಥಿತಿ ಪರಿಶೀಲನೆ ಮಾಡಿ ನಂತರವಷ್ಟೇ ಹೊಸ ಪಡಿತರ ವಿತರಣೆ ಮಾಡಲಿದ್ದಾರೆ ಎನ್ನುವ ಮಾಹಿತಿ ಕೂಡ ಲಭ್ಯವಾಗಲಿದೆ.

ಬಹುತೇಕರು ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದವರಿಗೆ ಯಾವುದೇ ರೀತಿಯ ಹೆಚ್ಚಿನ ಕಟ್ಟುನಿಟ್ಟಿನ ಕ್ರಮಗಳನ್ನು ಅಥವಾ ನಿಯಮಗಳು ಹೇರಿಕೆ ಇಲ್ಲದೇ ತಕ್ಷಣವೇ ಅವರಿಗೆ ಸುಲಭವಾಗಿ ಪಡಿತರ ಚೀಟಿ ವಿತರಣೆ ಮಾಡಲಾಗಿತ್ತು. ಆದರೆ ಈಗ ಗ್ಯಾರಂಟೀ ಯೋಜನೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಹೊಡೆತವೇ ಬಿದ್ದಿದೆ. ಹೊಸ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ. ಈಗಾಲಗೇ ಸಲ್ಲಿಕೆಯಾಗಿರುವಂತಹ ಅರ್ಜಿಗಳನ್ನು ಬಹಳಷ್ಟು ಸೂಕ್ಷವಾಗಿ ಪರಿಶೀಲನೆ ಮಾಡಿ ಅರ್ಹರಿಗೆ ಮಾತ್ರ ಪಡಿತರ ಚೀಟಿ ವಿತರಿಸಲು ಸರ್ಕಾರವು ನಿರ್ಧಾರ ಮಾಡಿದೆ.

ಈಗಾಗಲೇ 3ಲಕ್ಷದಷ್ಟು ಅರ್ಜಿಗಳು ಬಾಕಿ ಇದ್ದು ಅವುಗಳ ಪರಿಶೀಲನೆ ಮಾಡಿ ಸರ್ಕಾರದಿಂದ ಹೊಸ ರೇಷನ್‌ ಕಾರ್ಡ್‌ ವಿತರಣೆ ಮಾಡುವವರೆಗೂ ಮತ್ತೆ ಹೊಸ ಅರ್ಜಿ ತೆಗೆದುಕೊಳ್ಳಬಾರದು ಎಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ, ಸದ್ಯಕ್ಕಂತೂ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಈಗಾಗಲೇ ಅರ್ಜಿ ಹಾಕಿರುವಂತಹ ಕುಟುಂಬಗಳು ಪಡಿತರ ಚೀಟಿಯನ್ನು ಪಡೆದುಕೊಳ್ಳಲಿದ್ದಾರೆ.

ಇತರೆ ವಿಷಯಗಳು:

ಈ ಬಾರಿ IPL ತಂಡದಿಂದ ಹೊರಬಿದ್ದ ಸ್ಟಾರ್ ಆಟಗಾರರು ಇವರೇ.! ಇಲ್ಲಿದೆ ಲಿಸ್ಟ್!

RTO ಇಲಾಖೆ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಹ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು!

Treading

Load More...