ನಮಸ್ಕಾರ ಸ್ನೇಹಿತರೆ, ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಬಿಗ್ ಅಪ್ಡೇಟ್ ನಿಮಗೆ ತಿಳಿಸಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಪ್ರತಿ ತಿಂಗಳ ಕಂತಿನ ಹಣವು ವಿಳಂಬವಾಗುತ್ತಿರುವುದರಿಂದ ರಾಜ್ಯ ಸರ್ಕಾರವು ಇದೀಗ ಆ ಹಣವನ್ನು ಪ್ರತಿ ತಿಂಗಳು ನಿಗದಿತ ದಿನಾಂಕದೊಳಗೆ ವರ್ಗಾಯಿಸಲು ಯೋಜನೆ ನಡೆಸುತ್ತಿದೆ ಎಂಬುದರ ಬಗ್ಗೆ ತಿಳಿಸಲಾಗುತ್ತಿದೆ. ಹಾಗಾದರೆ ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ವರ್ಗಾವಣೆಯಾಗುತ್ತದೆ ಹಾಗೂ ಯಾವ ದಿನಾಂಕದಂದು ವರ್ಗಾವಣೆ ಮಾಡಲು ಸಮಯ ನಿಗದಿ ಮಾಡಿದ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗದಿರಲು ಕಾರಣ :
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳು ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ವರ್ಗಾಯಿಸುತ್ತದೆ ಆದರೂ ಇನ್ನು ಕೆಲವು ಫಲಾನುಭವಿಗಳಿಗೆ ಹಣ ಜಮಗಿರುವುದಿಲ್ಲ. ಗೃಹಲಕ್ಷ್ಮಿ ಯೋಜನೆಯ ಹಣ ಮನೆ ಯಜಮಾನಿಯರಿಗೆ ಜಮಾ ಆಗದಿರಲು ಮುಖ್ಯ ಕಾರಣ ಏನೆಂದರೆ ಈಕೆ ವೈ ಸಿ ಮಾಡಿಸದೆ ಇರುವುದು ಮತ್ತು ಇನ್ನು ಕೆಲವು ತಾಂತ್ರಿಕ ತೊಂದರೆಗಳಿಂದಲೂ ಸಹ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆಯು ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅದರಂತೆ ಇದೀಗ ಇಲಾಖೆಯು ಈ ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಲಾಗಿದೆ.
ಪ್ರತಿ ತಿಂಗಳು ಹಣ ವರ್ಗಾವಣೆಗೆ ದಿನಾಂಕ ನಿಗದಿ :
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರದಿಂದ ಹಣ ಬರಲು ಖಾತೆಗೆ ಈ ಹಿಂದೆ 25 ದಿನ ಬೇಕಾಗುತ್ತಿತ್ತು. ಆದರೆ ಇದೀಗ ಈ ಸಮಯವನ್ನು ಬಹಳ ಸರಲೀಕರಣ ಮಾಡಲಾಗಿದೆ. ಪ್ರೆಷರಿಗೆ ಸರ್ಕಾರ ಕಳುಹಿಸಿ ಅಲ್ಲಿಂದ ನಮ್ಮ ಇಲಾಖೆಯ ಪ್ರಧಾನ ಕಚೇರಿಯಿಂದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ಹೋಗುವಂತೆ ಮಾಡಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ. ಅದರಂತೆ ಇದೀಗ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳು 15 20ರ ದಿನಾಂಕಗಳ ನಡುವೆ ವರ್ಗಾವಣೆ ಮಾಡಲಾಗುತ್ತದೆ ಎಂಬ ಮಾಹಿತಿ ತಿಳಿದು ಬರುತ್ತಿದೆ.
ದಳಕಂತಿನ ಹಣವನ್ನು 20 ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ಸ್ವೀಕರಿಸಿಲ್ಲ ಇದಕ್ಕೆ ಮುಖ್ಯ ಕಾರಣವೇನೆಂದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದವರ ಖಾತೆಗೆ ಹಣವನ್ನು ವರ್ಗಾಯಿಸುವ ಸಮಯದಲ್ಲಿ ಹಲವಾರು ಸಮಸ್ಯೆಗಳು ಈ ಎಲ್ಲ ಸಮಸ್ಯೆಗಳನ್ನು ಇಲಾಖೆಯು ಆದಷ್ಟು ಬೇಗ ಸರಿಪಡಿಸಿ ಹಣವನ್ನು ನಿಗದಿತ ದಿನಾಂಕದೊಳಗೆ ವರ್ಗಾಯಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೆ ಈ ಕೆ ವೈ ಸಿಯ ಸಮಸ್ಯೆಗಳನ್ನು ಸಹ ಪರಿಹರಿಸುತ್ತಾ ಬಂದಿದ್ದೇವೆ ಎಂದು ಸರ್ಕಾರವು ತಿಳಿಸಿದ್ದು ಇನ್ನುಳಿದ ಸಮಸ್ಯೆಗಳನ್ನು ಕೂಡ ಆದಷ್ಟು ಬೇಗ ಪರಿಹರಿಸಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದರು.
ಹೀಗೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಹಿಳೆಯರಿಗೆ ಒಂದು ಬಿಗ್ ಅಪ್ ಡೇಟ್ ಅನ್ನು ನೀಡಿರುವ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಆಗಿಲ್ಲ ಎಂದು ಮಹಿಳೆಯರು ಬ್ಯಾಂಕುಗಳ ಮುಂದೆ ಸಾಲು ಸಾಲಾಗಿ ನಿಂತುಕೊಳ್ಳುವ ಸಮಸ್ಯೆಯನ್ನು ಸಹ ಇದು ಬಗೆಹರಿಸುತ್ತದೆ ಎಂದು ಹೇಳಬಹುದಾಗಿದೆ. ಒಟ್ಟಾರೆಯಾಗಿ ರಾಜ್ಯ ಸರ್ಕಾರವು ಮಹಿಳೆಯರನ್ನು ಸಬಲೀಕರಣ ಗೊಳಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಿದ್ದು ಸಾಕಷ್ಟು ಮಹಿಳೆಯರಿಗೆ ಈ ಯೋಜನೆ ಉಪಯೋಗವಾಗಿದೆ ಎಂದು ಹೇಳಬಹುದಾಗಿದೆ. ಹೀಗೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತಹ ಈ ಅಪ್ಡೇಟನ್ನು ಈ ಕೂಡಲೇ ನಿಮ್ಮೆಲ್ಲ ಮಹಿಳಾ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.