rtgh

Money

ಈ ಜಿಲ್ಲೆಗಳ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 3 ತಿಂಗಳ ಹಣ ಒಟ್ಟಿಗೆ 6000 ರೂ ಜಮಾ!

Join WhatsApp Group Join Telegram Group
Gruhalkshmi Yojana together 3 months money

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್ ಬಗ್ಗೆ. ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು ಸಹ ಇದುವರೆಗೂ ಹಣ ಬಾರದೆ ಇದ್ದರೆ ಅಂತಹ ಮಹಿಳೆಯರಿಗೆ ಒಟ್ಟಿಗೆ ಮೂರು ತಿಂಗಳ ಹಣವನ್ನು ಅಂದರೆ ಆರು ಸಾವಿರ ರೂಪಾಯಿಗಳನ್ನು ಒಟ್ಟಿಗೆ ನೀಡಲಾಗುತ್ತಿದೆ ಎಂದು ತಿಳಿಸಲಾಗುತ್ತಿದೆ. ಹಾಗಾದರೆ ಯಾವಾಗ ಈ ಹಣ ಬರಲಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುತ್ತದೆ.

Gruhalkshmi Yojana together 3 months money
Gruhalkshmi Yojana together 3 months money

ಒಟ್ಟಿಗೆ ಮೂರು ತಿಂಗಳ ಹಣ :

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು ಸಹ ಇದುವರೆಗೂ ಎರಡು ತಿಂಗಳ ಹಣ ಬರದೇ ಇದ್ದರೆ ಅವರಿಗೆ ಇದೀಗ ಮೂರು ತಿಂಗಳ ಹಣವನ್ನು ಒಟ್ಟಿಗೆ ಸಂದಾಯವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ಸಮಸ್ಯೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು ಆಗಸ್ಟ್ 15ರ ಬಗ್ಗೆ ನಂದಣಿ ಮಾಡಿಕೊಂಡಿದ್ದ ಎಲ್ಲಾ ಮಹಿಳೆಯರಿಗೆ ಈವರೆಗೂ ಸಹ ಹಣ ಸಂದಾಯವಾಗದಿದ್ದರೆ ಅಂತಹ ಮಹಿಳೆಯರಿಗೆ ಒಟ್ಟಿಗೆ ಮೂರು ತಿಂಗಳ ಹಣವನ್ನು ಅಂದರೆ 6,000ಗಳನ್ನು ಮೂರು ತಿಂಗಳಲ್ಲಿ ನೀಡಲಾಗುತ್ತದೆ.

ವರೆಗೂ ಹಣ ಬಾರದಿದ್ದರೆ ಪೂರ್ಣ ಬಾಕಿ ಹಣ ಹಾಕಲಾಗುವುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟಪಡಿಸಿದರು. ದೀಪಾವಳಿ ಹಬ್ಬದ ವೇಳೆಗೆ ಅಥವಾ ಮುಂದಿನ 15 ದಿನದೊಳಗೆ ಎಲ್ಲಾ ಫಲಾನುಭವಿಗಳಿಗೆ ಹಣ ಕಳುಹಿಸುವಂತೆ ಕ್ರಮ ವಹಿಸಲಾಗುತ್ತದೆ ಹಾಗೂ ಅಧಿಕಾರಿಗಳಿಗೆ ಈ ಸಂಬಂಧವಾಗಿ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು. ಮುಂದಿನ 10 ದಿನದಲ್ಲಿ ಗೃಹಲಕ್ಷ್ಮಿ ಯೋಜನೆಯ ಗೊಂದಲಗಳನ್ನು ಬಗೆಹರಿಸಲಾಗುತ್ತದೆ ಎಂದು ಹೇಳಿದರು.

ದೀಪಾವಳಿ ವೇಳೆಗೆ ಶೇಖಡ ನೂರರಷ್ಟು ಗುರಿ ಮುಟ್ಟುತ್ತೇವೆ :

7.9 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಹಣ ಪಾವತಿ ಬಾಕಿ ಇದೆ ತಾಂತ್ರಿಕ ಸಮಸ್ಯೆ ಸರಿಪಡಿಸಿ ಆಯಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಬಾಕಿ ತಿಂಗಳ ಮೊತ್ತ ಸೇರಿಸಿ ಇನ್ನೂ 15 ದಿನದೊಳಗಾಗಿ ಸಹಾಯಧನ ಪಾವತಿ ಮಾಡಲಾಗುತ್ತದೆ. ಮಹಾಲಕ್ಷ್ಮಿ ಯೋಜನೆ ಇದುವರೆಗೂ ಶೇಕಡ 95 ರಷ್ಟು ಯಶಸ್ವಿಯಾಗಿದ್ದು ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಪ್ರತಿದಿನ ಮೂರು ಜಿಲ್ಲೆಗಳ ಸಿಡಿಪಿಓ ಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದರು.

ಇದನ್ನು ಓದಿ : ಊಟ ಅಥವಾ ನೀರನ್ನು ಯಾವ ಸಾಕು ಪ್ರಾಣಿ ಸೇವಿಸುವುದಿಲ್ಲ?

ಶೇಕಡ 95 ರಷ್ಟು ಮಹಿಳೆಯರಿಗೆ ಹಣ ತಲುಪಿದೆ :

ಗೃಹಲಕ್ಷ್ಮಿ ಯೋಜನೆಗೆ ಇದುವರೆಗೆ 1166500 ಮಹಿಳೆಯರು ನೋಂದಣಿ ಮಾಡಿಸಿದ್ದು ಈ ಮಹಿಳೆಯರ ಪೈಕಿ ಆಗಸ್ಟ್ ನಲ್ಲಿ ಗೃಹಲಕ್ಷ್ಮಿಯರ ಖಾತೆಗೆ 2119 ಕೋಟಿ ಹಣ ಹಾಕಲಾಗಿದೆ. ಮೂಲಕ ಶೇಕಡ 97 ರಷ್ಟು ಡಿವಿಟಿ ಮುಖಾಂತರ ಹಣ ವರ್ಗಾವಣೆ ಮಾಡಲಾಗಿದೆ. ಆಗಸ್ಟ್ ನಲ್ಲಿ 5 ಲಕ್ಷ ಕುಟುಂಬಗಳಿಗೆ ತಾಂತ್ರಿಕ ದೋಷದಿಂದ ಹಣ ವರ್ಗಾವಣೆಯಾಗಿರುವುದಿಲ್ಲ ಸೆಪ್ಟೆಂಬರ್ ನಲ್ಲಿ ಶೇಕಡ 82ರಷ್ಟು ಕುಟುಂಬಗಳಿಗೆ ಹಣ ವರ್ಗಾವಣೆಯಾಗಿದ್ದು 12 ಲಕ್ಷ ಕುಟುಂಬಗಳಿಗೆ ತಾಂತ್ರಿಕ ದೋಷಗಳಿಂದ ಅಥವಾ ಕೆ ವೈ ಸಿ ಸಮಸ್ಯೆಯಿಂದಾಗಿ ಹಣ ಬ್ಯಾಂಕ್ ಖಾತೆಯಲ್ಲಿಯೇ ಉಳಿದಿದೆ. ಅಕ್ಟೋಬರ್ ನಲ್ಲಿ 2400 ಕೋಟಿ ಹಣ ಬಿಡುಗಡೆಯಾಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದರು.

ಒಟ್ಟಾರೆಯಾಗಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಮೂರು ತಿಂಗಳ ಹಣ ಬಾಕಿ ಇದ್ದರೆ ಅಂತಹ ಮಹಿಳೆಯರಿಗೆ ಒಟ್ಟಿಗೆ ಮೂರು ತಿಂಗಳ ಹಣವನ್ನು ಸೇರಿಸಿ 6,000ಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದು ಮಹಿಳೆಯರಲ್ಲಿ ಸ್ವಲ್ಪಮಟ್ಟಿಗೆ ಸಂತೋಷವನ್ನುಂಟು ಮಾಡಿದೆ ಎಂದು ಹೇಳಲಾಗಿದೆ. ಹಾಗಾಗಿ ಈ ಮಾಹಿತಿಯನ್ನು ಇನ್ನು ಸಹ ಗೃಹ ಲಕ್ಷ್ಮಿ ಯೋಜನೆ ಸಂಬಂಧಿಸಿದಂತೆ ಹಣ ಬಿಡುಗಡೆಯಾಗಿಲ್ಲದ ಮಹಿಳೆಯರಿಗೆ ಶೇರ್ ಮಾಡಿ ಧನ್ಯವಾದಗಳು

ಇತರೆ ವಿಷಯಗಳು :

ಗೃಹಲಕ್ಷ್ಮಿ ಯೋಜನೆಯ ಹಣ ಈ ಅಧಿಕೃತ ದಿನಾಂಕಕ್ಕೆ ಎಲ್ಲರ ಖಾತೆಗೆ ಪಿಕ್ಸ್

ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ರೇಷನ್‌ ಅಕ್ಕಿ! ಯಾರಿಗೆಲ್ಲಾ ಸಿಗಲಿದೆ ಈ ಯೋಜನೆಯ ಲಾಭ?

Treading

Load More...