ನಮಸ್ಕಾರ ಸ್ನೇಹಿತರೆ, ಸಾಕಷ್ಟು ಯೋಜನೆಗಳನ್ನು ಮಹಿಳೆಯರಿಗಾಗಿಯೇ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಜಾರಿಗೆ ತರುತ್ತಿದ್ದು ಇದೀಗ ಜಮೀನನ್ನು ಖರೀದಿ ಮಾಡಲು ಮತ್ತೊಂದು ಹೊಸ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ರಾಜ್ಯ ಸರ್ಕಾರವು ಈ ಯೋಜನೆಯ ಅಡಿಯಲ್ಲಿ ಎಷ್ಟು ಜನ ಸಹಾಯವನ್ನು ಮಾಡುತ್ತಿದೆ ಹಾಗೂ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಅಗತ್ಯವಿರುವ ದಾಖಲೆಗಳು ಯಾವುವು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.
ಕೃಷಿ ಭೂಮಿ ಖರೀದಿಸಲು ಯೋಜನೆ :
ರಾಜ್ಯ ಸರ್ಕಾರವು 50% ಸಬ್ಸಿಡಿಯಲ್ಲಿ ಭೂಮಿ ಖರೀದಿ ಮಾಡಲು ಸಬ್ಸಿಡಿ ಯೋಜನೆಯನ್ನು ಜಾರಿಗೆ ತಂದಿದ್ದು ಇದು ರಾಜ್ಯದಲ್ಲಿರುವ ರೈತರಿಗೆ ಸಂತಸದ ಸುದ್ದಿ ಎಂದು ಹೇಳಬಹುದು. ಈ ಯೋಜನೆಯ ಅಡಿಯಲ್ಲಿ ಸಬ್ಸಿಡಿಯ ದರದಲ್ಲಿ ಭೂಮಿಯನ್ನು ಖರೀದಿ ಮಾಡುವುದರಿಂದ ಭೂಮಿ ಇರದ ರೈತರು ಭೂಮಿಯನ್ನು ತಮ್ಮದಾಗಿಸಿಕೊಳ್ಳಲು ಬಹಳ ಉಪಯುಕ್ತಕಾರಿಯಾಗಿದೆ ಎಂದು ಹೇಳಬಹುದಾಗಿದೆ. ರಾಜ್ಯ ಸರ್ಕಾರದ ಈ ಯೋಜನೆ ಯಾವುದೆಂದರೆ, ಕರ್ನಾಟಕ ಭೂ ಒಡೆತನ ಯೋಜನೆ.
ಕರ್ನಾಟಕ ಭೂ ಒಡೆತನ ಯೋಜನೆ :
ಕರ್ನಾಟಕ ಭೂ ಒಡೆತನ ಯೋಜನೆಯ ಅಡಿಯಲ್ಲಿ ಸ್ವಂತ ಭೂಮಿಯನ್ನು ಹೊಂದಿರದ ರೈತರು ಸುಲಭವಾಗಿ ಸ್ವಂತ ಭೂಮಿಯನ್ನು ಹೊಂದಲು ಬಹಳ ಉಪಯುಕ್ತಕರವಾಗಿದೆ. ಈ ಯೋಜನೆಯು ಅವರ ಆರ್ಥಿಕ ಪರಿಸ್ಥಿತಿ ಮತ್ತು ಅವರ ಜೀವನಕ್ಕೆ ಒಂದು ದಾರಿದೀಪವಾಗಬಹುದು ಎಂದು ಹೇಳಿದರು ತಪ್ಪಾಗಲಾರದು. ಭೂಮಿಯನ್ನು ಖರೀದಿ ಮಾಡುವುದರಿಂದ ಉತ್ತಮ ಬೆಳೆ ಬೆಳೆಯಲು ಸಹ ಈ ಯೋಜನೆ ಸಹಾಯಕವಾಗಿದೆ. ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಭೂ ಒಡೆತನ ಯೋಜನೆಯ ಅಡಿಯಲ್ಲಿ 25 ಲಕ್ಷ ಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರುತ್ತಿದ್ದು ಹಾಗೂ ಇನ್ನುಳಿದ ಜಿಲ್ಲೆಗಳಿಗೆ 20 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತಿದೆ. ಶೇಕಡ 50ರಷ್ಟು ಸಹಾಯಧನವನ್ನು ಸಾಲವಾಗಿ ಈ ಯೋಜನೆಯ ಅಡಿಯಲ್ಲಿ ನೀಡಲಾಗುತ್ತಿದೆ.
ಯೋಜನೆಗೆ ಅಗತ್ಯವಿರುವ ದಾಖಲೆಗಳು :
ಕರ್ನಾಟಕ ಭೂ ಒಡೆತನ ಯೋಜನೆಯ ಅಡಿಯಲ್ಲಿ ಭೂಮಿಯನ್ನು ಖರೀದಿಸಲು ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ, ಭಾವಚಿತ್ರ, ಜಾತಿ ಪ್ರಮಾಣ ಪತ್ರ ,ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಭೂರಹಿತ ಮಹಿಳಾ ಕೃಷಿ ಕಾರ್ಮಿಕ ಪ್ರಮಾಣ ಪತ್ರ . ಎಸ್ ಸಿ ಎಸ್ ಟಿ ಸಮುದಾಯದ ಎಲ್ಲಾ ಜಾತಿ ಮತ್ತು ಉಪಜಾತಿಯ ಮಹಿಳಾ ಭೂರಹಿತ ರೈತ ಮಹಿಳೆಯರು ಈ ಯೋಜನೆಗೆ ಸಂಬಂಧಿಸಿ ದಂತೆ ಅರ್ಜಿಯನ್ನು ಸಲ್ಲಿಸಿ ಭೂಮಿಯನ್ನು ಖರೀದಿ ಮಾಡಬಹುದಾಗಿದೆ. ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕನಿಷ್ಠ 21 ಹಾಗೂ ಗರಿಷ್ಠ 50 ವರ್ಷವನ್ನು ಹೊಂದಿರಬೇಕಾಗುತ್ತದೆ.
ಅರ್ಜಿ ಸಲ್ಲಿಸುವ ನಿಗಮಗಳು :
ಕರ್ನಾಟಕ ಭೂ ಒಡೆತನ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಈ ಕೆಳಗೆ ನೀಡಲಾದ ಎಲ್ಲಾ ನಿಗಮಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ. ಈ ನಿಗಮಗಳಲ್ಲಿ ಕರ್ನಾಟಕ ಭೂ ಒಡೆತನ ಯೋಜನೆಗೆ ಅರ್ಜಿ ಸಲ್ಲಿಸಿ ಭೂಮಿಯನ್ನು ಖರೀದಿಸಲು ಸಹಾಯಧನವನ್ನು ಕರ್ನಾಟಕ ಸರ್ಕಾರದಿಂದ ಪಡೆಯಬಹುದಾಗಿದೆ.
ಇದನ್ನು ಓದಿ : ಸರ್ಕಾರದಿಂದ ದೀಪಾವಳಿ ಕೊಡುಗೆ: LPG ಸಿಲಿಂಡರ್ ಬಳಸುವವರು ಇಲ್ಲಿ ನೋಡಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ :
ಈ ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ನೀವೇನಾದರೂ ಪಡೆಯಲು ಇಚ್ಚಿಸಿದ್ದರೆ ಕಲ್ಯಾಣ ಮಿತ್ರ 24*7 ಸಹಾಯವಾಣಿಗೆ ಸಂಪರ್ಕಿಸಬಹುದಾಗಿದೆ. 9482300400 ಈ ನಂಬರ್ಗೆ ಕರೆ ಮಾಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ನವೆಂಬರ್ 29ರ ಒಳಗಾಗಿ ಸೇವಾ ಸಿಂಧು ಪೋರ್ಟಲ್ ನ ಮೂಲಕವೂ ಸಹ ಅರ್ಜಿಯನ್ನು ಸಲ್ಲಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ.
ಕರ್ನಾಟಕ ಸರ್ಕಾರವು ಭೂಮಿಯನ್ನು ಹೊಂದಿರದ ರೈತರು ಭೂಮಿಯನ್ನು ಹೊಂದಲು ಅದರಲ್ಲಿಯೂ ಮಹಿಳೆಯರು ಭೂಮಿಯನ್ನು ಹೊಂದಲು ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ಸಬ್ಸಿಡಿ ದರದಲ್ಲಿ ಭೂಮಿಯನ್ನು ಖರೀದಿಸಲು ಸಹಾಯಧನವನ್ನು ಪಡೆದು ಭೂಮಿಯ ಒಡೆತನವನ್ನು ಪಡೆದುಕೊಳ್ಳಲು ಈ ಯೋಜನೆ ಸಹಕಾರಿಯಾಗಿದೆ ಎಂದು ಹೇಳಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಯಾರೆಲ್ಲ ಭೂಮಿ ಹೊಂದಿಲ್ಲವೋ ಅವರಿಗೆ ಶೇರ್ ಮಾಡಿ ಇದರಿಂದ ಅವರು ಸ್ವಂತ ಭೂಮಿಯನ್ನು ಹೊಂದಲು ಸ್ವಲ್ಪ ಮಟ್ಟಿಗಾದರೂ ಸಹಾಯ ಮಾಡಿದಂತಾಗುತ್ತದೆ ಧನ್ಯವಾದಗಳು.
ಇತರೆ ವಿಷಯಗಳು :
ಗೃಹಲಕ್ಷ್ಮಿ ಯೋಜನೆಯ ಹಣ ಈ ಅಧಿಕೃತ ದಿನಾಂಕಕ್ಕೆ ಎಲ್ಲರ ಖಾತೆಗೆ ಪಿಕ್ಸ್
ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ರೇಷನ್ ಅಕ್ಕಿ! ಯಾರಿಗೆಲ್ಲಾ ಸಿಗಲಿದೆ ಈ ಯೋಜನೆಯ ಲಾಭ?