ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ಉಜ್ವಲ ಯೋಜನೆಯ ಸಬ್ಸಿಡಿ ಹೆಚ್ಚಳದ ಬಗ್ಗೆ. ಇದು ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್ ಎಂದು ಹೇಳಬಹುದಾಗಿದೆ. ಹಾಗಾದರೆ ಉಜ್ವಲ ಯೋಜನೆಯಡಿಯಲ್ಲಿ ಸಿಲಿಂಡರ್ ಬೆಲೆಯಲ್ಲಿ ಎಷ್ಟು ಸಬ್ಸಿಡಿ ಅನ್ನು ಹೆಚ್ಚಳ ಮಾಡುವ ಸಂಭವವಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ.
ಉಜ್ವಲ ಯೋಜನೆಯಿಂದ ಗುಡ್ ನ್ಯೂಸ್ :
ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ಶುಭ ಸುದ್ದಿ ತಿಳಿಸಲಾಗುತ್ತಿದೆ. ಈ ಬಾರಿ ಉಜ್ವಲ ಯೋಜನೆಯ ಗ್ರಾಹಕರಿಗೆ ಎಲ್ಪಿಜಿ ಸಿಲಿಂಡರ್ಗಳ ಮೇಲೆ ಹೆಚ್ಚಿನ ಸಬ್ಸಿಡಿ ಸಿಗಲಿದೆ ಎಂದು ಕೆಲವೊಂದು ಮಾಧ್ಯಮಗಳು ತಿಳಿಸುತ್ತಿವೆ. ದೀಪಾವಳಿ ಹಬ್ಬದ ಸಮಯದಲ್ಲಿ ಹಾಗೂ 2024 ಸಾಲಿನ ಚುನಾವಣೆಯ ಮುಂಚೆ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪರಿಹಾರ ನೀಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸುತ್ತೇವೆ. 9.6 ಕೋಟಿ ಕುಟುಂಬಗಳಿಗೆ ಈ ಕ್ರಮದಿಂದ ಅನುಕೂಲವಾಗಲಿದೆ ಎಂದು ಹೇಳಬಹುದು. ಪೆಟ್ರೋಲಿಯಂ ಉತ್ಪನ್ನಗಳ ದರದಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಳವನ್ನು ಕಂಡಿದ್ದು ಹೀಗಿರುವಾಗ ಈ ಸಬ್ಸಿಡಿ ಮೂಲಕ ಎಲ್ಪಿಜಿ ಸಿಲಿಂಡರ್ ದರದಲ್ಲಿ ಇಳಿಕೆಯ ಪ್ರಯತ್ನವನ್ನು ಮಾಡಿರುವ ಕೇಂದ್ರ ಸರ್ಕಾರವು ಜನಸಾಮಾನ್ಯರಲ್ಲಿ ನೆಮ್ಮದಿಯನ್ನು ತಂದಿದೆ ಎಂದು ಹೇಳಬಹುದಾಗಿದೆ.
ಸಬ್ಸಿಡಿ ಮೊತ್ತ :
ಕೇಂದ್ರ ಸರ್ಕಾರವು ಸಬ್ಸಿಡಿ ಮೊತ್ತವನ್ನು 200 ರೂಪಾಯಿಯಿಂದ 300 ರೂಪಾಯಿಗೆ ಹೆಚ್ಚಿಸಿದೆ ಎಂದು ಕೇಂದ್ರ ಸಚಿವೆ ಅಕ್ಟೋಬರ್ 4ರಂದು ನಡೆದ ಸಚಿವ ಸಂಪುಟದಲ್ಲಿ ಘೋಷಣೆ ಮಾಡಿದರು. ಉಜ್ವಲ ಫಲಾನುಭವಿಗಳು ಒಂದು ವರ್ಷದಲ್ಲಿ ಪ್ರಸ್ತುತ 12 ಸಿಲಿಂಡರ್ಗಳ ಮೇಲೆ 300 ರೂಪಾಯಿ ಅಷ್ಟು ಸಹಾಯಧನ ಪಡೆಯುತ್ತಿದ್ದಾರೆ. ಸುಮಾರು 600 ರೂಪಾಯಿಗೆ ಉಜ್ವಲ ಯೋಜನೆಯ ಫಲಾನುಭವಿಗಳು ಸಿಲಿಂಡರನ್ನು ಪಡೆಯುತ್ತಿದ್ದರೆ ಸಾಮಾನ್ಯ ಜನರು ಅದೇ ಸಿಲಿಂಡರ್ ಗೆ ಸುಮಾರು 900 ರೂಪಾಯಿಗಳಷ್ಟು ನೀಡುತ್ತಿದ್ದಾರೆ.
ಇದನ್ನು ಓದಿ : ದೀಪಾವಳಿ ಹಬ್ಬಕ್ಕೆ ಭರ್ಜರಿ ಆಫರ್! ಎಲೆಕ್ಟ್ರಿಕಲ್ ಸ್ಕೂಟರ್ ಒಂದು ತಗೊಂಡ್ರೆ ಮತ್ತೊಂದು ಫ್ರೀ
ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಸಿದ ಬೆನ್ನಲ್ಲೇ ಇದೀಗ ರಾಷ್ಟ್ರದಲ್ಲಿ ಸಿಲಿಂಡರ್ ಬಳಕೆಯು ಸಹ ಹೆಚ್ಚಾಗುತ್ತಿದೆ. ಬೆಲೆಯಲ್ಲಿ ಇಳಿಕೆ ಕಂಡ ನಂತರ ಸೆಪ್ಟೆಂಬರ್ ನಲ್ಲಿ ಪ್ರತಿದಿನ ರೀಫಿಲ್ ಆಗುವ ಎಲ್ಪಿಜಿ ಸಿಲಿಂಡರ್ಗಳ ಸಂಖ್ಯೆಯು ಸುಮಾರು 11 ಲಕ್ಷ ದಾಟಿದೆ. ಇನ್ನು ಮುಂದೆ ಇದರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.
ಒಟ್ಟರಿಯಾಗಿ ಐದು ರಾಜ್ಯಗಳ ಚುನಾವಣೆಯ ಸಮಯದಲ್ಲಿ ಎಲ್ಪಿಜಿ ಸಿಲಿಂಡರ್ ನ ಬೆಲೆಯಲ್ಲಿ ಹೆಚ್ಚಳವು ಸಮಸ್ಯೆಯನ್ನು ಉಂಟುಮಾಡುತ್ತದೆ ಎಂದು ತಿಳಿದ ಸರ್ಕಾರ ಹೆಚ್ಚಳ ಮಾಡುವ ಕಾರ್ಯವನ್ನು ಕೈಗೊಳ್ಳುವ ಮೂಲಕ ಇನ್ನು ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆ ಕಂಡು ಬರುತ್ತದೆ ಎಂದು ಕೆಲವೊಂದು ಮೂಲಗಳು ಹೇಳುತ್ತಿವೆ. ಹೀಗೆ ಎಲ್ ಪಿ ಜಿ ಸಿಲಿಂಡರ್ ನ ಮೇಲೆ ಸಬ್ಸಿಡಿ ದರವು ಹೆಚ್ಚಳ ಆಗಿರುವುದರ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ATM ನಿಂದ ಹಣ ಪಡೆಯುವವರು ಹಾಗೂ ಪಡೆಯದೇ ಇರುವವರು ನೋಡಿ
ಈ ಜಿಲ್ಲೆಗಳ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 3 ತಿಂಗಳ ಹಣ ಒಟ್ಟಿಗೆ 6000 ರೂ ಜಮಾ!