ನಮಸ್ಕಾರ ಸ್ನೇಹಿತರೇ ಆಧಾರ್ ಕಾರ್ಡ್ ಫೋಟೋವನ್ನು ನವೀಕರಿಸುವ ಪ್ರಕ್ರಿಯೆಯ ಬಗ್ಗೆ ತಿಳಿಸಲಾಗುತ್ತಿದೆ. ಆನ್ಲೈನಲ್ಲಿ ನಿಮ್ಮ ಆಧಾರ್ ಕಾರ್ಡ್ ಫೋಟೋವನ್ನು ನವೀಕರಿಸುವ ಪ್ರಕ್ರಿಯೆಯು ಲಭ್ಯವಿಲ್ಲ ಆದರೂ ಸಹ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನಿರಂತರವಾಗಿ ತನ್ನ ಸೇವೆಗಳನ್ನು ಸುಧಾರಿಸುತ್ತಿದೆ ಮತ್ತು ಆನ್ಲೈನ್ ಫೋಟೋ ನವೀಕರಣವನ್ನು ಭವಿಷ್ಯದಲ್ಲಿ ಪರಿಚಯಿಸುವ ಸಾಧ್ಯತೆ ಇದೆ. ಅತ್ಯಂತ ನವೀಕೃತ ಮಾಹಿತಿ ಮತ್ತು ಕಾರ್ಯವಿಧಾನಗಳನ್ನು ಪರಿಶೀಲಿಸಲು ನೀವು ಅಧಿಕೃತ ಯುಐಡಿಎಐ ವೆಬ್ಸೈಟ್ಗೆ ಭೇಟಿ ನೀಡಬಹುದು ಅಥವಾ ನಿಮ್ಮ ಹತ್ತಿರದ ಆಧಾರ ನೋಂದಣಿ ಅಥವಾ ನವೀಕರಣ ಕೇಂದ್ರವನ್ನು ಸಂಪರ್ಕಿಸಿ ಆಧಾರ್ ಕಾರ್ಡ್ ನಲ್ಲಿ ಫೋಟೋ ಸೇರಿದಂತೆ ಇತರ ಮಾಹಿತಿಯನ್ನು ನವೀಕರಿಸಲು ಸಾಮಾನ್ಯ ಪ್ರಕ್ರಿಯೆಯನ್ನು ಇದರಲ್ಲಿ ನಿಮಗೆ ತಿಳಿಸಲಾಗುತ್ತಿದೆ.
ಭಾರತದ ನಾಗರಿಕರಿಗೆ ಮುಖ್ಯವಾದ ಗುರುತಿನ ಪುರಾವೆ :
ಆಧಾರ್ ಕಾರ್ಡ್ ಕೂಡ ಭಾರತದ ನಾಗರಿಕರಿಗೆ ಪ್ರಮುಖವಾದ ಗುರುತಿನ ಪುರಾವೆ ದಾಖಲೆಗಳಲ್ಲಿ ಒಂದಾಗಿದೆ. ವೈಯಕ್ತಿಕ ಗುರುತಿನ ಸಂಖ್ಯೆಯನ್ನು ಈ ಆಧಾರ್ ಕಾರ್ಡ್ ಮೂಲಕ 12 ಅಂಕಿಯಲ್ಲಿ ನೀಡಲಾಗಿದ್ದು ಭಾರತ ಸರ್ಕಾರದ ಪರವಾಗಿ ಈ ವಿಶಿಷ್ಟ ಗುರುತಿನ ಪ್ರಾಧಿಕಾರವು ನೀಡಿರುತ್ತದೆ. ಯಾವುದೇ ವಹಿವಾಟು ನಡೆಸಲು ನಾವು ಯಾವುದೇ ಸರ್ಕಾರದ ಯೋಜನೆಗಳ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಆಧಾರ್ ಕಾರ್ಡ್ ಬಹುಮುಖ್ಯವಾದ ದಾಖಲೆಯಾಗಿದೆ. ಆಧಾರ್ ಕಾರ್ಡ್ ದಾರರ ಸ್ವಲ್ಪ ಮಟ್ಟಿಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರುತ್ತದೆ ಅಲ್ಲದೆ ಇದು ಬಯೋಮೆಟ್ರಿಕ್ ಡೇಟಾವನ್ನು ಒಳಗೊಂಡಿರುತ್ತದೆ ಆದ್ದರಿಂದಾಗಿ ಆಧಾರ್ ಕಾರ್ಡ್ ಮೂಲಕ ಸರ್ಕಾರಿ ಪ್ರಯೋಜನಗಳನ್ನು ಪಡೆಯಲು ಹಾಗೂ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಫಾರ್ಮುಲನ್ನು ಭರ್ತಿ ಮಾಡಲು ಹಾಗೂ ಇತರ ಅಧಿಕೃತ ಕೆಲಸಗಳಿಗೆ ಈ ಆಧಾರ್ ಕಾರ್ಡ್ ಅಗತ್ಯವಾಗಿ ಬೇಕಾಗಿರುತ್ತದೆ. ಜೀವನದಿದ್ದಕ್ಕೂ ಆಧಾರ್ ನಲ್ಲಿರುವ ಎಲ್ಲ ವಿಶಿಷ್ಟ ಗುರುತಿನ ಸಂಖ್ಯೆಗಳು ಒಂದೇ ಆಗಿರುತ್ತದೆ ಆದರೂ ಸಹ ಹಾಗಾಗಿ ನೀವು ಕೆಲವೊಂದು ಮಾಹಿತಿಗಳನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ.
ಇದನ್ನು ಓದಿ : ಸರ್ಕಾರದಿಂದ ಮಹತ್ವದ ಸೂಚನೆ; ರೇಷನ್ ಕಾರ್ಡ್ ಗೆ ಹೊಸ ನಿಯಮ, ಈ 4 ಸಂದರ್ಭಗಳಲ್ಲಿ ಮಾತ್ರ
ಆಧಾರ್ ಕಾರ್ಡ್ ನಲ್ಲಿ ಮಾಹಿತಿಯನ್ನು ಅಪ್ಡೇಟ್ ಮಾಡುವ ವಿಧಾನ :
ಕೆಲವೊಂದು ಮಾಹಿತಿಗಳನ್ನು ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಆಗಾಗಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಕೆಲವೊಮ್ಮೆ ತಮ್ಮ ಫೋನ್ ಸಂಖ್ಯೆ ವಿಳಾಸ ಮತ್ತು ಫೋಟೋವನ್ನು ಸಹ ಜನರು ಸಮಯಕ್ಕೆ ತಕ್ಕಂತೆ ಅಪ್ಡೇಟ್ ಮಾಡಿಕೊಳ್ಳುತ್ತಿರುತ್ತಾರೆ. ನಿಮ್ಮ ಫೋಟೋವನ್ನು ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡಲು ಬಯಸಿದರೆ ಹಾಗೂ ಆಧಾರ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವ ಕೇಂದ್ರಕ್ಕೆ ಭೇಟಿ ನೀಡುವುದರ ಮೂಲಕ ಅಪ್ಡೇಟ್ ಮಾಡಿಸಬಹುದಾಗಿದೆ. ಆನ್ಲೈನಲ್ಲಿಯೂ ಸಹ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಕೆಲವೊಂದು ಬದಲಾವಣೆಗಳನ್ನು ಮಾಡಬಹುದು ಆದರೆ ನೀವು ನಿಮ್ಮ ಹತ್ತಿರದ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ. ಆಧಾರ್ ಕಾರ್ಡ್ ಫೋಟೋವನ್ನು ಆನ್ಲೈನಲ್ಲಿ ಹೀಗೆ ಬದಲಾಯಿಸಬಹುದಾಗಿದೆ.
ಮೊದಲನೆಯದಾಗಿ ನೀವು ಅಧಿಕೃತ ಯುಐಡಿಎ ಐ ವೆಬ್ಸೈಟ್ಗೆ ಭೇಟಿ ನೀಡಬೇಕು. https://uidai.gov.in ಸೆಕೆ ಭೇಟಿ ನೀಡಿದ ನಂತರ ಆಧಾರ್ ದಾಖಲಾತಿ ಫಾರ್ಮ್ ಎಂಬ ವಿಭಾಗವನ್ನು ನೀವು ಡೌನ್ಲೋಡ್ ಮಾಡಿ ಅದರಲ್ಲಿ ಎಲ್ಲಾ ವಿವರಗಳನ್ನು ನೀವು ಭರ್ತಿ ಮಾಡಬೇಕು. ಫಾರ್ಮನ್ನು ಭರ್ತಿ ಮಾಡಿದ ನಂತರ ನಿಮ್ಮ ಹತ್ತಿರದ ಆಧಾರ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಸಲ್ಲಿಸಬೇಕಾಗುತ್ತದೆ. ಬಯೋಮೆಟ್ರಿಕ್ ಪರಿಶೀಲನೆಯ ಮೂಲಕ ಪ್ರಸ್ತುತ ಇರುವ ಆಧಾರ್ ಕಾರ್ಯನಿರ್ವಾಹಕರು ಎಲ್ಲ ವಿವರಗಳನ್ನು ಖಚಿತಪಡಿಸುತ್ತಾರೆ. ಹೊಸ ಚಿತ್ರವನ್ನು ಆಧಾರ್ ಕಾರ್ಡ್ ನಲ್ಲಿ ನೀವು ಅಪ್ಡೇಟ್ ಮಾಡಿಸಬೇಕಾದರೆ ನೂರು ರೂಪಾಯಿ ಶುಲ್ಕವನ್ನು ಈ ಸೇವೆಗಾಗಿ ಪ್ರಾಧಿಕಾರ ನಿಮಗೆ ಜಿಎಸ್‌ಟಿಯೊಂದಿಗೆ ವಿಧಿಸುತ್ತದೆ. ನಿಮಗೆ ಸ್ವೀಕೃತಿ ಸ್ಲಿಪ್ ಮತ್ತು ನವೀಕರಣ ವಿನಂತಿ ಸಂಖ್ಯಾತವ ಯು ಆರ್ ಎಂ ಅನ್ನು ನಿಮಗೆ ಆಧಾರ್ ಕಾರ್ಯನಿರ್ವಾಹಕರು ನೀಡುತ್ತಾರೆ.
ಇಲ್ಲಿಗೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಪ್ರಕ್ರಿಯೆ ಪೂರ್ಣವಾಗಲಿದ್ದು ಯು ಐ ಡಿ ಎ ಐ ಅಧಿಕೃತ ವೆಬ್ಸೈಟ್ನಲ್ಲಿ ನೀವು ಯು ಆರ್ ಎಂ ಸಂಖ್ಯೆಯನ್ನು ಬಳಸಿಕೊಳ್ಳುವುದರ ಮೂಲಕ ಇತ್ತೀಚಿನ ಆಧಾರ್ ಕಾರ್ಡ್ ಸ್ಥಿತಿಯನ್ನು ತಿಳಿಯಬಹುದಾಗಿದೆ. ಆಧಾರ್ ಕಾರ್ಡ್ ಅಪ್ಡೇಟ್ ಪ್ರಕ್ರಿಯೆಯು ಸಾಮಾನ್ಯವಾಗಿ 90 ದಿನಗಳವರೆಗೆ ತೆಗೆದುಕೊಳ್ಳಬಹುದು ಈ ಪ್ರಕ್ರಿಯೆಯು ಪೂರ್ಣಗೊಂಡ ನಂತರ ನೀವು ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಥವಾ ಅಧಿಕೃತ ವೆಬ್ಸೈಟ್ ನಿಂದ ಈ ಆಧಾರ್ನ ನಕಲನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಆಧಾರ್ ಕಾರ್ಡ್ ಪ್ರಿಂಟ್ ಅನ್ನು ಆಪ್ಡೆಟ್ ಆದ ನಂತರ ನೀವು ಪಡೆಯಬಹುದಾಗಿದೆ.
ಹೀಗೆ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಅನ್ನು ಕೇಂದ್ರ ಸರ್ಕಾರವು ತಿಳಿಸಿದ್ದು ಸುಲಭವಾಗಿ ಆಧಾರ್ ಕಾರ್ಡ್ ಎಲ್ಲಾ ಮಾಹಿತಿಯನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ರಿಂದ ಸಾಕಷ್ಟು ಪ್ರಯೋಜನವಲ್ಲ ಹಾಗೂ ಸರ್ಕಾರದಿಂದ ಲಭ್ಯವಿರುವ ಎಲ್ಲ ಯೋಜನೆಗಳ ಪ್ರಯೋಜನವನ್ನು ಆಧಾರ್ ಕಾರ್ಡ್ ಮೂಲಕ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರು ಅಥವಾ ಬಂಧು ಮಿತ್ರರಲ್ಲಿ ಯಾರಾದರೂ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಲು ಯೋಚಿಸುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಬರಪೀಡಿತ ತಾಲೂಕುಗಳ ಪಟ್ಟಿಗೆ ಹೊಸ ತಾಲೂಕುಗಳು ಸೇರ್ಪಡೆ; ನಿಮ್ಮ ಊರಿನ ಹೆಸರಿದೆಯಾ ಚೆಕ್ ಮಾಡಿ