ನಮಸ್ಕಾರ ಸ್ನೇಹಿತರೆ, ಲೋಕಸಭೆ ಚುನಾವಣೆಯು ಮುಂದಿನ ವರ್ಷವೇ ಅಂದರೆ 2024ರಲ್ಲಿಯೇ ನಡೆಯಲಿದೆ. ಸರ್ಕಾರವು ಈ ಚುನಾವಣೆಗೂ ಮುಂದವೇ ಹಲವರು ಕೊಡುಗೆಗಳನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ ಈಗಾಗಲೇ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಸರ್ಕಾರ ರಕ್ಷಾಬಂಧನ ಸಂದರ್ಭದಲ್ಲಿ 200 ರೂಪಾಯಿಗಳ ವರೆಗೆ ಎಲ್ಪಿಜಿ ಸಿಲಿಂಡರ್ಗಳ ದರವನ್ನು ಹೇಳಿಕೆ ಮಾಡಿದೆ ಈಗ ರೈತರಿಗೆ ಸಿಹಿ ಸುದ್ದಿಯನ್ನು ನೀಡುವ ನಿರೀಕ್ಷೆ ಇದೆ ಎಂದು ಹೇಳಬಹುದಾಗಿದೆ. ಹಾಗಾದರೆ ರೈತರಿಗೆ ಯಾವ ರೀತಿಯ ಪ್ರಯೋಜನವನ್ನು ಕೇಂದ್ರ ಸರ್ಕಾರ ಮಾಡಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೋಡುವುದಾದರೆ,

6,000 ದಿಂದ 8,000ಗಳವರೆಗೆ ಏರಿಕೆ ಮಾಡಬಹುದು :
ರೈತರಿಗೆ ಕೇಂದ್ರ ಸರ್ಕಾರವು 2024ರ ಲೋಕಸಭೆ ಚುನಾವಣೆಗು ಮುನ್ನವೇ ಸಹಾಯಧನವನ್ನು ಹೆಚ್ಚಳ ಮಾಡುವ ಚಿಂತನೆಯನ್ನು ನಡೆಸಿದೆ ಎಂಬ ಮಾಹಿತಿ ತಿಳಿದು ಬರುತ್ತದೆ. ರೈತರ ಮತ ಬ್ಯಾಂಕನ್ನು ಬಲಪಡಿಸುವ ಉದ್ದೇಶದಿಂದ ಮುಂಬರುವ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ಸರ್ಕಾರವು ವಾರ್ಷಿಕವಾಗಿ ನೀಡುತ್ತಿರುವ 6,000 ಯನ್ನು ಸಣ್ಣ ರೈತರಿಗೆ ಏರಿಕೆ ಮಾಡಬಹುದು ಎಂಬ ಮಾಹಿತಿ ತಿಳಿದು.
ಲೋಕಸಭೆಗೂ ಮುನ್ನ ರೈತರಿಗೆ ಗಿಫ್ಟ್ :
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ವಾರ್ಷಿಕ ಬೆಂಬಲವನ್ನು ರೈತರಿಗೆ 6,000ಗಳ ವರೆಗೆ ನೀಡಲಾಗುತ್ತಿದ್ದು ಈ ಹಣವನ್ನು 8000 ಗೆ ಹೆಚ್ಚಳ ಮಾಡುವ ಬಗ್ಗೆ ಬ್ಲೂಮ್ ಬರ್ಗ್ ವರದಿಯ ಪ್ರಕಾರ ಕೇಂದ್ರ ಸರ್ಕಾರವು ಚಿಂತನೆ ನಡೆಸುತ್ತಿದೆ ಎಂದು ತಿಳಿಸಲಾಗಿದೆ. ಈ ಬಗ್ಗೆ ಇಬ್ಬರು ಅಧಿಕಾರಿಗಳು ಮಾಹಿತಿ ಎಂಬ ವರದಿಯನ್ನು ಉಲ್ಲೇಖಿಸಿದೆ.
ಎ ಬಿ ಪಿ ಲೈವ್ :
ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯ ಹಣವನ್ನು ಹೆಚ್ಚಿಸುವುದರ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಹಣಕಾಸು ಸಚಿವಾಲಯವು ನೀಡಿಲ್ಲ ಎಬಿಪಿ ಲೈವ್ ತಿಳಿಸಿದೆ. ನಾಲ್ಕು ಕಂತುಗಳಲ್ಲಿ ಕೇಂದ್ರ ಸರ್ಕಾರವು ಹಣವನ್ನು ನೀಡಲು ನಿರ್ಧಾರ ಮಾಡಿದರೆ ಎಂಟು ಸಾವಿರ ರೂಪಾಯಿಗೆ ಏರಿಕೆ ಮಾಡಿ ಹಣವನ್ನು ನೀಡಿದರೆ ಹೆಚ್ಚುವರಿ ಯಾಗಿ 20000 ಕೋಟಿಗಳ ಹಂಚಿಕೆ 2023 24ರ ಆರ್ಥಿಕ ವರ್ಷಕ್ಕೆ ಅಸ್ತಿತ್ವದಲ್ಲಿರುವ ಅರವತ್ತು ಸಾವಿರ ಕೋಟಿ ರೂಪಾಯಿಗಳ ಬಜೆಟ್ಗೆ ಅಗತ್ಯವಿರುತ್ತದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರವು 2024ರ ಫೆಬ್ರವರಿ ಒಂದರಂದು ಲೋಕಸಭೆ ಚುನಾವಣೆಯ ಮೊದಲು ಮಧ್ಯಂತರ ಬಜೆಟ್ ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂಬುದನ್ನು ಹೇಳಲಾಗುತ್ತಿದೆ ಅಂದರೆ ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ಯ ಯೋಜನೆಯ ಮೊತ್ತವನ್ನು ಹೆಚ್ಚಳ ಮಾಡುವುದರ ಬಗ್ಗೆ 2024ರ ಮಧ್ಯಂತರ ಬಜೆಟ್ ನಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದೆ. ಮಧ್ಯಂತರ ಬಜೆಟ್ ಗಾಗಿ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳೊಂದಿಗೆ ಈಗಾಗಲೇ ಹಣಕಾಸು ಸಚಿವೆಯಾದ ನಿರ್ಮಲ ಸೀತಾರಾಮನ್ ಅವರು ಚರ್ಚೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯು ತಿಳಿದು ಬರುತ್ತದೆ.
ಇದನ್ನು ಓದಿ : ತಿಮ್ಮಪ್ಪನ ಸನ್ನಿಧಿಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ: ತಿಂಗಳ ಸಂಬಳ ಕೇಳಿದ್ರೆ ಶಾಕ್ ಆಗ್ತೀರ
ಪ್ರಧಾನ ಮಂತ್ರಿ ಕಿಸಾನ್ ಹಣ ಬಂದಿಲ್ಲದಿದ್ದರೆ ಈ ಸಂಖ್ಯೆಗೆ ಕರೆ ಮಾಡಿ :
ಕಳೆದ ಒಂದು ವರ್ಷದಿಂದ ಹಲವಾರು ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಮತ್ತು ಲಭ್ಯವಾಗುತ್ತಿಲ್ಲ ಎಂಬ ಆರೋಪವು ಕೇಳಿ ಬರುತ್ತಿದ್ದು ಈಕೆವೈಸಿ ಮಾಡಿಸಿದರು ಸಹ ರೈತರಿಗೆ ಹಣ ಲಭ್ಯವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ ಹಾಗಾಗಿ ಪ್ರಧಾನಮಂತ್ರಿ ಕಿಸಾನ್ ಸಹಾಯವಾಣಿ ಸಂಖ್ಯೆಗೆ ದೂರು ದಾಖಲಿಸುಲು 011-24300606 ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಟೋಲ್ ಫ್ರೀ ಸಂಖ್ಯೆಯಾದ 18001155266 ಈ ಸಂಖ್ಯೆಗೂ ಕೂಡ ಕರೆ ಮಾಡಿ ದೂರು ದಾಖಲಿಸಬಹುದು. ಇದರ ಜೊತೆಗೆ ಇಮೇಲ್ ಐಡಿ ಯಾದ [email protected] ಈ ಇಮೇಲ್ ಐಡಿಗೂ ಸಹ ಸಂದೇಶವನ್ನು ಕಳುಹಿಸಿ ಈ ಯೋಜನೆಗೆ ಸಂಬಂಧಿಸಿ ದಂತೆ ದೂರನ್ನು ದಾಖಲಿಸಬಹುದಾಗಿದೆ.
ಹೀಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಸಂಬಂಧಿಸಿ ದಂತೆ ಹಲವಾರು ಚರ್ಚೆಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ರೈತರಿಗೆ ಈ ಯೋಜನೆಯ ಮೂಲಕ ಹಣ ಹೆಚ್ಚಾಗುತ್ತದೆ ಎಂಬುದನ್ನು ನೋಡಬಹುದಾಗಿದೆ. ನಿಮ್ಮೆಲ್ಲ ರೈತ ಸ್ನೇಹಿತರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಕೋಟ್ಯಂತರ ಎಸ್ಬಿಐ ಗ್ರಾಹಕರಿಗೆ ಶಾಕಿಂಗ್ ಸುದ್ದಿ: ಈ ದಿನಾಂಕದೊಳಗೆ ಈ ಕೆಲಸ ಕಡ್ಡಾಯ.!
ಲಕ್ಷಾಂತರ ಸರ್ಕಾರಿ ನೌಕರರಿಗೆ ಬಂತು ಸಿಹಿ ಸುದ್ದಿ!! ನೌಕರರ ಮೂಲ ವೇತನದಲ್ಲಿ ಭಾರಿ ಏರಿಕೆ