ನಮಸ್ಕಾರ ಸ್ನೇಹಿತರೆ, ಕಾರ್ಮಿಕ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಕಾರ್ಮಿಕರ ಕಲ್ಯಾಣ ಮಂಡಳಿಗೆ ಸಲ್ಲಿಸಿದ ಅರ್ಜಿಗಳಲ್ಲಿ ವಿದ್ಯಾರ್ಥಿ ವೇತನವನ್ನು 7 ಲಕ್ಷ ವಿದ್ಯಾರ್ಥಿಗಳಿಗೆ ನೀಡಲು ಚಾಲನೆಯನ್ನು ದೊರಕಿದೆ. ಹಾಗಾದ್ರೆ ಕಾರ್ಮಿಕ ಕಲ್ಯಾಣ ಮಂಡಳಿಯ ಈ ವಿದ್ಯಾರ್ಥಿ ವೇತನದ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾದರೆ ಈ ವರದಿಯನ್ನು ಸಂಪೂರ್ಣವಾಗಿ ನೋಡಿ.

ವಿದ್ಯಾರ್ಥಿ ವೇತನ ನೀಡಲು ಚಾಲನೆ :
ವಿಧಾನಸೌಧದಲ್ಲಿ ನವೆಂಬರ್ 9ರಂದು ಏರ್ಪಡಿಸುವ ಸಮಾರಂಭದಲ್ಲಿ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ ಎಂದು ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್ ಅವರು ಮಾಹಿತಿ ನೀಡಿದ್ದಾರೆ. 6500 ಕೋಟಿ ಸಂಗ್ರಹವು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಇರುತ್ತದೆ ಒಂದು ಪಾಯಿಂಟ್ 82 ಕೋಟಿ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿ ಆಗಿರುತ್ತಾರೆ ಆದರೆ ಪ್ರತಿ ವರ್ಷ ಅಂದಾಜು ಸಾವಿರ ಕೋಟಿಯಷ್ಟು ಕಾರ್ಮಿಕ ಕಲ್ಯಾಣ ಮಂಡಳಿಗೆ ಸೆಸ್ ಸಂಗ್ರಹವಾಗುತ್ತಿದ್ದು ಇದರಲ್ಲಿ ಸರ್ಕಾರದ ವಲಯದಿಂದ 800 ಕೋಟಿಯಷ್ಟು ಸಂಗ್ರಹವಾದರೆ 200 ಕೋಟಿ ಅಷ್ಟು ಮಾತ್ರ ಸರ್ಕಾರಿ ವಲಯದಿಂದ ಸಂಗ್ರಹವಾಗುತ್ತಿದೆ. ಹಾಗೆಯೇ ಮದುವೆ ಮನೆ ನಿರ್ಮಾಣಕ್ಕೆ ವಿದ್ಯಾರ್ಥಿ ವೇತನ ಸಹಾಯಧನ ನೀಡಲು 3000 ಕೋಟಿಯಷ್ಟು ಕನಿಷ್ಠ ಹಣ ಬೇಕಾಗುತ್ತದೆ ಎಂದು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಮಾಹಿತಿ ನೀಡಿದ್ದಾರೆ.
ಕಾರ್ಮಿಕ ಕಲ್ಯಾಣ ಮಂಡಳಿಗೆ ಹೊಸ ಕಾನೂನು ಜಾರಿ :
ರಾಜ್ಯ ಸರ್ಕಾರವು ಹೊಸ ಕಾನೂನನ್ನು ಕಾರ್ಮಿಕ ಕಲ್ಯಾಣ ಮಂಡಳಿಯನ್ನು ಉಳಿಸಿ ಮತ್ತು ಬೆಳೆಸುವ ಮೂಲಕ ಇದರ ಸಾಮರ್ಥ್ಯವನ್ನು ಇನ್ನೂ ಹೆಚ್ಚಿಸಲು ಜಾರಿಗೊಳಿಸಲು ನಿರ್ಧರಿಸಿದೆ. ಇದಕ್ಕಾಗಿ ರಾಜ್ಯ ಸರ್ಕಾರವು ಹೊಸ ಟೆಕ್ನಾಲಜಿಯ ಆಪ್ ಅನ್ನು ಬಿಡುಗಡೆ ಮಾಡಲಾಗುತ್ತಿದ್ದು ಈ ಹೊಸ ಟೆಕ್ನಾಲಜಿ ಆಪ್ ನಿಂದ ಎಲ್ಲಾ ಮಾಹಿತಿಯು ಸಂಗ್ರಹವಾಗಲಿದ್ದು ಇದರಿಂದ ಸಸ್ ಸಂಗ್ರಹ ಮತ್ತು ನಿರ್ವಹಣೆ ಸುಲಭವಾಗಲಿದೆ ಎಂದು ತಿಳಿದುಬರುತ್ತದೆ. ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಮಿಕ ಮಕ್ಕಳ ವಿದ್ಯಾರ್ಥಿ ವೇತನವು ಆದಷ್ಟು ಬೇಗ ದೊರೆಯಲಿದ್ದು ಅದಕ್ಕೆ ಬೇಕಾದಂತಹ ಎಲ್ಲಾ ಮುಖ್ಯ ದಾಖಲೆಗಳನ್ನು ಸಲ್ಲಿಸುವುದರ ಮೂಲಕ ಅರ್ಜಿಗೆ ನೀಡುವುದು ಉತ್ತಮವಾಗಿದೆ. ಇದರಿಂದ ಮಕ್ಕಳು ಉತ್ತಮ ರೀತಿಯ ಉಪಯೋಗವನ್ನು ಪಡೆಯಬಹುದಾಗಿದೆ.
ಇದನ್ನು ಓದಿ : ಶಕ್ತಿ ಯೋಜನೆಯ ಬಿಗ್ ಅಪ್ಡೇಟ್: ಮಹಿಳೆಯರಿಗೆ ಹೊಸ ಸೌಲಭ್ಯ
ಹೀಗೆ ರಾಜ್ಯ ಸರ್ಕಾರವು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಹಣವನ್ನು ಸಂಗ್ರಹಿಸುವ ಮೂಲಕ ಅದರಿಂದ ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗುವಂತೆ ಅವರ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡುವಂತೆ ಹಣವನ್ನು ಬಿಡುಗಡೆ ಮಾಡುತ್ತಿದ್ದು ಇದೀಗ ಕಾರ್ಮಿಕ ಮಂಡಳಿಯ ಮಕ್ಕಳ ವಿದ್ಯಾರ್ಥಿ ವೇತನಕ್ಕೆ 7 ಲಕ್ಷ ವಿದ್ಯಾರ್ಥಿಗಳಿಗೆ ವೇತನ ನೀಡಲು ಚಾಲನೆಯನ್ನು ನೀಡಲಾಗುತ್ತಿದೆ. ಹೀಗೆ ಕಾರ್ಮಿಕರ ಮಕ್ಕಳು ಸಾಕಷ್ಟು ಪ್ರಯೋಜನವನ್ನು ಈ ವಿದ್ಯಾರ್ಥಿ ವೇತನದಿಂದ ಪಡೆಯಲಿದ್ದಾರೆ. ಹಾಗಾಗಿ ನಿಮ್ಮ ಪರಿಚಯವಿರುವಂತಹ ಕಾರ್ಮಿಕರಿಗೆ ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ ದೊರೆಯಲಿದೆ ಎಂಬುದರ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡಿ ಅವರ ಮಕ್ಕಳು ಸಹ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸದೆ ಇದ್ದರೆ ಈ ಕೂಡಲೇ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವಂತೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಕರ್ನಾಟಕದಲ್ಲಿ ಪಡಿತರ ಚೀಟಿಗೆ ಡಿಮಾಂಡ್.!! ಇನ್ನೂ ಇವರ ರೇಷನ್ ಕಾರ್ಡ್ ಗೆ ಸಿಕ್ಕಿಲ್ಲ ಮುಕ್ತಿ
ನಾರಿಯರ ಶಕ್ತಿಗೆ ಮತ್ತೆ ವಿಘ್ನ.!! ಉಚಿತ ಪ್ರಯಾಣಕ್ಕೆ ಇನ್ಮುಂದೆ ಈ ಕಾರ್ಡ್ ಕಡ್ಡಾಯ; ಇಲ್ಲಿಂದ ಅಪ್ಲೇ ಮಾಡಿ