ನಮಸ್ಕಾರ ಸ್ನೇಹಿತರೇ ನವೆಂಬರ್ 19ರಂದು ಭಾರತ ಮತ್ತು ಆಸ್ಟ್ರೇಲಿಯಾ ತಂಡದ ನಡುವೆ ಅಹಮದಾಬಾದ್ ನಲ್ಲಿ ನಡೆದ ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿದೆ. ಅದರಂತೆ ಟೀಮ್ ಇಂಡಿಯಾ ಗೆಲ್ಲುತ್ತದೆ ಎಂಬ ಭರವಸೆಯು ಕೋಟ್ಯಾಂತರ ಅಭಿಮಾನಿಗಳಲ್ಲಿ ಇತ್ತು. ಆದರೆ ಈ ಕೋಟ್ಯಾಂತರ ಅಭಿಮಾನಿಗಳ ಕಾತುರತೆಗೆ ನಿನ್ನೆ ನಡೆದಂತಹ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಜಯಸಾಧಿಸಿದ್ದು ಅಭಿಮಾನಿಗಳ ಭರವಸೆಗೆ ಬ್ರೇಕ್ ಬಿದ್ದಂತಾಗಿದೆ. ಹಾಗಾದರೆ ವಿಶ್ವಕಪ್ ಅನ್ನು ಗೆದ್ದಂತಹ ಆಸ್ಟ್ರೇಲಿಯಾಗಿ ಹಣ ಎಷ್ಟು ದೊರೆತಿದೆ ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.
ಬೇಸರದಲ್ಲಿರುವ ಭಾರತೀಯರು :
ಟೀಮ್ ಇಂಡಿಯಾದ ಗೆಲುವಿನ ನಿರೀಕ್ಷೆಯಲ್ಲಿದ್ದ ಇಡೀ ಭಾರತೀಯರು ಸದ್ಯದೀಗ ಟೀಮ್ ಇಂಡಿಯಾದ ಸೋಲಿನ ಬೇಸರದಲ್ಲಿದ್ದಾರೆ. ಟೀಮ್ ಇಂಡಿಯಾ ಆಸ್ಟ್ರೇಲಿಯಾ ತಂಡಕ್ಕೆ ವಿಶ್ವಕಪ್ 2023ರ ಫೈನಲ್ ನಲ್ಲಿ ಕೇವಲ 241 ರನ್ ಗಳ ಗುರಿಯನ್ನು ನೀಡಿದ್ದು ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಆಳ್ವಿಕೆಗಳನ್ನು ಪಡೆಯುವುದರ ಮೂಲಕ ಟೀಮ್ ಇಂಡಿಯಾವನ್ನು ಸೋಲಿಸಿದೆ. ಇದರ ಮೂಲಕ ಆಸ್ಟ್ರೇಲಿಯಾ ಐಸಿಸಿ ವರ್ಲ್ಡ್ ಕಪ್ 2023ರ ಕಪ್ ಅನ್ನು ತನ್ನ ಮುಡುಗೇರಿಸಿಕೊಂಡರೆ ಟೀಮ್ ಇಂಡಿಯಾ ರನ್ನರ್ ಅಪ್ ಅನ್ನು ಪಡೆದುಕೊಂಡಿದೆ. ಇದೀಗ ವಿಶ್ವಕಪ್ ಗೆದ್ದಂತಹ ಆಸ್ಟ್ರೇಲಿಯಾಗಿ ನಗದು ಬಹುಮಾನವಾಗಿ ಎಷ್ಟು ಹಣ ಸಿಕ್ಕಿದೆ ಎಂಬುದನ್ನು ನೋಡಬಹುದಾಗಿದೆ.
ಆಸ್ಟ್ರೇಲಿಯಾ ತಂಡಕ್ಕೆ ವಿಶ್ವಕಪ್ ನಿಂದ ಬಂದ ಬಹುಮಾನವೆಷ್ಟು ?
ಈ ಬಾರಿ ವಿಶ್ವಕಪ್ 2023ರ ಪಂದ್ಯಕ್ಕೆ ಒಟ್ಟಾರೆ ಸುಮಾರು 83 ಕೋಟಿ ಬಹುಮಾದನ ಮೊತ್ತವನ್ನು ಭಾರತೀಯ ಮೀಸಲಿಡಲಾಗಿದೆ. ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಏಕದಿನ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ತಂಡವು ಜಯಗಳಿಸಿದ್ದು ಆಸ್ಟ್ರೇಲಿಯಾ ತಂಡಕ್ಕೆ ಸುಮಾರು 33 ಕೋಟಿ ಗಳನ್ನು ಭಾರತೀಯ ಗಳಲ್ಲಿ ನಗದು ಬಹುಮಾನವನ್ನು ನೀಡಲಾಗಿದ್ದು ಆಸ್ಟ್ರೇಲಿಯಾ ಕೇವಲ ಕಪ್ ನ ಜೊತೆಗೆ ಭರ್ಜರಿ ಬಹುಮಾನವನ್ನು ಕಳೆದುಕೊಂಡಿದೆ.
ಇದನ್ನು ಓದಿ : ಮೋದಿ ಸರ್ಕಾರದ ಈ ಯೋಜನೆಯಡಿ ಖಾತೆಗೆ 3 ಸಾವಿರ..! ರೈತರಿಗಾಗಿ ಬಂತು ಅದ್ಭುತ ಯೋಜನೆ
ಭಾರತಕ್ಕೆ ಬಂದ ಬಹುಮಾನವೆಷ್ಟು ?
2023ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ರನ್ನರ್ ಸ್ಥಾನವನ್ನು ಪಡೆದುಕೊಂಡಿದ್ದು ವಿಶ್ವಕಪ್ ನಲ್ಲಿ ರನ್ನರ್ ಅಪ್ ಗೆ ಸುಮಾರು 16 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಅದರಂತೆ ಸೆಮಿ ಫೈನಲ್ ನಲ್ಲಿ ನಿರ್ಗಮಿಸಿರುವ ಅಂತಹ ನ್ಯೂಜಿಲ್ಯಾಂಡ್ ಹಾಗೂ ಸೌತ್ ಆಫ್ರಿಕಾ ತಂಡಗಳಿಗೆ ತಲಾ ಆರು ಕೋಟಿ ರೂಪಾಯಿಗಳನ್ನು ವಿಶ್ವಕಪ್ ನಲ್ಲಿ ನೀಡಲಾಗಿದೆ.
ಅದರಂತೆ ವಿಶ್ವಕಪ್ 2023ರ ಗುಂಪು ಹಂತದಲ್ಲಿ ಆರು ತಂಡಗಳನ್ನು ಹೊರಹಾಕಲ್ಪಟ್ಟಿದ್ದು ಆ ಆರು ತಂಡಗಳಲ್ಲಿ ತಲಾ ಒಂದೊಂದು ತಂಡಗಳಿಗೆ 80 ಲಕ್ಷ ಮೊತ್ತವನ್ನು ನೀಡಲಾಗಿದೆ. ಅಲ್ಲದೆ ಗುಂಪು ಹಂತದಲ್ಲಿ ಪ್ರತಿ ಪಂದ್ಯದ ವಿಜೇತ ತಂಡಗಳಿಗೆ ಬೋನಸ್ಸಾಗಿ ಹೆಚ್ಚುವರಿ 33 ಲಕ್ಷ ರೂಪಾಯಿಗಳ ಮೊತ್ತವನ್ನು ನೀಡಲಾಗಿದೆ.
ಹೀಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ಪಂದ್ಯವು ನಡೆದಿದ್ದು ಇದರಿಂದ ಆಸ್ಟ್ರೇಲಿಯಾ ಕಪ್ ಜೊತೆಗೆ ಹಣವನ್ನು ಸಹ ಪಡೆದುಕೊಂಡಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಯಾರಾದರೂ ಕ್ರಿಕೆಟ್ ಪ್ರೇಮಿಗಳಿದ್ದರೆ ಅವರಿಗೆ ಶೇರ್ ಮಾಡುವ ಮೂಲಕ ಒಂದು ವಿಶ್ವಕಪ್ ನಲ್ಲಿ ಒಂದು ತಂಡವು ಎಷ್ಟು ಹಣವನ್ನು ಗಳಿಸಬಹುದು ಎಂಬುದರ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಮೋದಿ ಸರ್ಕಾರದ ಈ ಯೋಜನೆಯಡಿ ಖಾತೆಗೆ 3 ಸಾವಿರ..! ರೈತರಿಗಾಗಿ ಬಂತು ಅದ್ಭುತ ಯೋಜನೆ
ಮರುಭೂ ಸರ್ವೆ ಆದೇಶ ಹೊರಡಿಸಿಲಾಗಿದೆ : ಜಮೀನು ಆಸ್ತಿ ಹೊಂದಿರುವವರು ತಕ್ಷಣ ನೋಡಿ