ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಕಾರ್ಮಿಕ ಮಕ್ಕಳಿಗಾಗಿ ಸರ್ಕಾರದಿಂದ ವಿದ್ಯಾರ್ಥಿ ವೇತನ ಬಗ್ಗೆ. ಸರ್ಕಾರದಿಂದ ಅಂದರೆ ಕಾರ್ಮಿಕರ ಕಲ್ಯಾಣ ಮಂಡಳಿಗೆ ಸಲ್ಲಿಸಿದ ಅರ್ಜಿಗಳಲ್ಲಿ ಇದೀಗ ಸರ್ಕಾರವು 7 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಚಾಲನೆ ನೀಡಿದೆ. ಹಾಗಾದರೆ ಈ ವಿದ್ಯಾರ್ಥಿ ವೇತನವನ್ನು ಯಾವಾಗ ಜಾರಿಗೊಳಿಸಲಾಗುತ್ತದೆ ಹಾಗೂ ಈ ವಿದ್ಯಾರ್ಥಿ ವೇತನದ ಮೊತ್ತ ಎಷ್ಟು? ಈ ವಿದ್ಯಾರ್ಥಿ ವೇತನಕ್ಕೆ ಏನೆಲ್ಲ ಅರ್ಜಿಗಳನ್ನು ಸಲ್ಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ನೋಡಬಹುದು.
ವಿದ್ಯಾರ್ಥಿ ವೇತನ ಕಾರ್ಮಿಕರ ಮಕ್ಕಳಿಗೆ ನೀಡಲು ಚಾಲನೆ :
ವಿಧಾನಸೌಧದಲ್ಲಿ ನವೆಂಬರ್ 9 ರಂದು ಏರ್ಪಡಿಸುವ ಸಮಾರಂಭದಲ್ಲಿ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ ಎಂಬ ಮಾಹಿತಿಯನ್ನು ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್ ಅವರು ಮಾಹಿತಿ ನೀಡಿದ್ದಾರೆ. 6500 ಕೋಟಿ ಸಂಗ್ರಹ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಇದ್ದು ಈ ಮಂಡಳಿಯಲ್ಲಿ ಇದೀಗ 1.82 ಕೋಟಿ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಸಾವಿರ ಕೋಟಿಯಷ್ಟು ಪ್ರತಿ ವರ್ಷ ಸಿಸ್ ಸಂಗ್ರಹವಾಗುತ್ತಿದ್ದು ಇದರಲ್ಲಿ ಸರ್ಕಾರದ ವಲಯದಿಂದ 800 ಕೋಟಿಯಷ್ಟು ಸಂಗ್ರಹವಾದರೆ 200 ಕೋಟಿ ಮಾತ್ರ ಖಾಸಗಿ ವಲಯದಿಂದ ಸೆಸ್ ಸಂಗ್ರಹವಾಗುತ್ತಿದೆ. ಕನಿಷ್ಠ 300 ಕೋಟಿಯಾದರೂ ವಿದ್ಯಾರ್ಥಿವೇತನ, ಮದುವೆ ಮನೆ ನಿರ್ಮಾಣಕ್ಕಾಗಿ ಸಹಾಯಧನ ನೀಡಬೇಕಾಗುತ್ತದೆ ಎಂದು ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್ ಅವರು ತಿಳಿಸಿದ್ದಾರೆ.
ಹೊಸ ಕಾನೂನು ಜಾರಿ :
ಕಾರ್ಮಿಕ ಕಲ್ಯಾಣ ಮಂಡಳಿ ಉಳಿಸುವ ಸಲುವಾಗಿ ಸರ್ಕಾರವು ಇದೀಗ ಹೊಸ ಕಾನೂನನ್ನು ಜಾರಿ ಮಾಡಲು ನಿರ್ಧರಿಸಿದೆ. ಹೊಸ ಕಾನೂನು ಜಾರಿಗೊಳಿಸಲು ಅಂದರೆ ಕಾರ್ಮಿಕ ಕಲ್ಯಾಣ ಮಂಡಳಿಯನ್ನು ಉಳಿಸಿ ಬೆಳೆಸುವ ಮೂಲಕ ಇದರ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಸರ್ಕಾರವು ಹೊಸ ಕಾನೂನನ್ನು ಜಾರಿಗೊಳಿಸಲು ಉದ್ದೇಶ ಹೂಡಿಕೊಂಡಿದೆ. ಈ ಹೊಸ ಕಾನೂನನ್ನು ಸಲುವಾಗಿ ಹೊಸ ಟೆಕ್ನಾಲಜಿ ಆಪ್ ಬಿಡುಗಡೆ ಮಾಡಲಾಗುತ್ತಿದೆ. ಎಲ್ಲ ಮಾಹಿತಿಯು ಈ ಹೊಸ ಟೆಕ್ನಾಲಜಿಯಿಂದ ಸಂಗ್ರಹವಾಗಲಿರುವುದರಿಂದ ಕಾರ್ಮಿಕ ಕಲ್ಯಾಣ ಮಂಡಳಿಗೆ ಸೆಸ್ ಸಂಗ್ರಹ ಮತ್ತು ನಿರ್ವಹಣೆ ಸುಲಭವಾಗಲಿದೆ ಎಂದು ತಿಳಿದು ಬರುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನವು ಕಾರ್ಮಿಕ ಕಲ್ಯಾಣ ಮಂಡಳಿಯಿಂದ ದೊರೆಯಲಿದ್ದು ಅದಕ್ಕೆ ಬೇಕಾದಂತಹ ಮುಖ್ಯ ದಾಖಲೆಗಳನ್ನು ಕಾರ್ಮಿಕರ ಮಕ್ಕಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀಡುವುದು ಉತ್ತಮವಾಗಿದ್ದು ಇದರಿಂದ ಮಕ್ಕಳು ಉತ್ತಮ ರೀತಿಯಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಆದಷ್ಟು ಬೇಗ ಉಪಯೋಗ ಪಡೆಯಲಿದ್ದಾರೆ ಎಂದು ಹೇಳಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಕಾರ್ಮಿಕ ಮಂಡಳಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರೆ ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗಲಿದೆ ಎಂಬುದರ ಸಿಹಿಸಿದ್ದಿಯನ್ನು ಶೇರ್ ಮಾಡಿ ಜೊತೆಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಬಂದು ಮಿತ್ರರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ತ್ವರಿತ ಸಾಲಕ್ಕಾಗಿ ಈ ಆ್ಯಪ್ ಇನ್ಸ್ಟಾಲ್ ಮಾಡಿ, ಕುಳಿತಲ್ಲಿಯೇ 10 ಸಾವಿರದಿಂದ 9 ಲಕ್ಷಗಳವರೆಗೆ ಸಾಲ ಪಡೆಯಿರಿ