ನಮಸ್ಕಾರ ಸ್ನೇಹಿತರೆ ಈ ವರ್ಷ ಮಳೆ ಇಲ್ಲದೆ ಬೆಳೆ ಹಾನಿಯಾಗಿದ್ದು ಪ್ರತಿ ಎಕರೆಗೆ 25,000ಗಳನ್ನು ರಾಜ್ಯ ಸರ್ಕಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ ಅವರು ಕರ್ನಾಟಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಬೀದರ್ ಜಿಲ್ಲಾ ಘಟಕದಿಂದ ಆಗ್ರಹ :
ಕರ್ನಾಟಕ ರಾಜ್ಯ ರೈತ ಸಂಘ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿಯವರು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪ್ರತೀ ಏಕರಿಗೆ 25,000ಗಳನ್ನು ಮಳೆ ಇಲ್ಲದೆ ಬೆಳೆ ಹಾನಿಯಾಗಿರುವ ಕಾರಣ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಸಂಬಂಧವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ ಖಂಡ್ರೆಯವರಿಗೆ ಮಲ್ಲಿಕಾರ್ಜುನ ಸ್ವಾಮಿಯವರು ಪತ್ರ ಬರೆದು ಒತ್ತಾಯಿಸಿದ್ದಾರೆ. ಶೇಕಡಾ 70ರಷ್ಟು ಬೆಳೆಯು ಈ ವರ್ಷ ಬರಕ್ಕೆ ಜಿಲ್ಲೆಯಲ್ಲಿ ಹಾಳಾಗಿದೆ. ರೈತರಿಗೆ ಓಬಿರಾಯನ ಕಾಲದ ಪರಿಹಾರ ಕೊಟ್ಟರೆ ಪ್ರಯೋಜನವಾಗುವುದಿಲ್ಲ ಹಾಗಾಗಿ ಪ್ರತೀ ಎಕರೆಗೆ ಕನಿಷ್ಠ 25000ಗಳನ್ನು ರೈತನಿಗೆ ನೀಡಬೇಕು.
ರೈತರು ಬೆಳೆ ಹಾನಿಯಿಂದಾಗಿ ತೀವ್ರ ನಷ್ಟಕ್ಕೆ ಒಳಗಾಗಿದ್ದಾರೆ ಅವರ ಸಂಪೂರ್ಣ ಸಾಲವನ್ನು ಸಹ ಮನ್ನಾ ಮಾಡಬೇಕು. ರೈತರಿಗೆ ಜಿಲ್ಲೆಯಲ್ಲಿ ಗೋದಾವರಿಯ ಸಂಪೂರ್ಣ ನೀರಿನ ಸದ್ಬಳಕೆಯಾದರೆ ಅನುಕೂಲವಾಗುತ್ತದೆ ಹಾಗಾಗಿ 21 ಟಿಎಂಸಿ ನೀರನ್ನು ರೈತರು ಬಳಸಿಕೊಳ್ಳಬಹುದು ಇದಕ್ಕಾಗಿ ಸರ್ಕಾರವು 11,000 ಕೋಟಿಯನ್ನು ಅನುದಾನ ಮೀಸಲಿಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷರು ಕರ್ನಾಟಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಬಿಎಸ್ಎಸ್ ಆಧುನಿಕರಣ ಗೊಳಿಸುವುದು :
ಸರ್ಕಾರವು ರೈತರು ಮತ್ತು ಕಾರ್ಮಿಕರ ಹಿತವನ್ನು ರಕ್ಷಿಸಬೇಕು. ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡಬೇಕು. ಸಕ್ಕರೆ ಇಳುವರಿಯಲ್ಲಿ ಕಾರ್ಖಾನೆಯಲ್ಲಿ ಮೋಸ ಮಾಡಲಾಗುತ್ತಿದೆ ಅಲ್ಲದೆ ಕಬ್ಬಿಗೆ ಬೆಲೆಯನ್ನು ನಿಗದಿ ಮಾಡಿಲ್ಲ ಪ್ರತಿ ಟನ್ ಕಬ್ಬಿಗೆ ಕಳೆದ ವರ್ಷ ನೀಡಲಾಗುತ್ತಿದ್ದ ಹಣಕ್ಕಿಂತ 300 ರೂಪಾಯಿಗಳನ್ನು ಹೆಚ್ಚಿಸಬೇಕು.
ರೈತ ಮುಖಂಡರಾದ ನಾಗಶೆಟ್ಟಪ್ಪ ಲಂಜವಾಡೆ ಶಾಂತಮ್ಮಕ್ಕ ಹಾಜನಾಳ ಅನ್ನಪೂರ್ಣ ಬಿರಾದರ ವಿಠಲ ರಾವ ಮೈತ್ರಿ ವಿಠಲ ರೆಡ್ಡಿ ಸಂತೋಷ ಗದಗೆ ಕುಂಡೇರಾವ ಕುಲಕರಣಿ ಹೀಗೆ ಮೊದಲಾದವರು ಒಳಗಾಗಿದ್ದಾರೆ ಅಂಥವರ ಸಂಪೂರ್ಣ ಸಾಲವನ್ನು ಮಾಡಬೇಕು ಹಾಗೂ ರೈತರಿಗೆ ಗೋದಾವರಿ ನೀರಿನ ಸಂಪೂರ್ಣ ಸದ್ಬಳಕೆ ಆಗುವಂತೆ ಮಾಡಬೇಕು. ಎಲ್ಲರಿಗೂ ತಿಳಿದಿರುವ ಹಾಗೆ ಒಂದು ಲಕ್ಷ ರೂಪಾಯಿಗಳ ವರೆಗೆ 2018ರಲ್ಲಿ ರೈತರಿಗೆ ಬೆಳೆ ಸಾಲ ಮನ್ನಾ ಘೋಷಣೆ ಮಾಡಲಾಗಿತ್ತು ಆದರೆ ತಾಂತ್ರಿಕ ಸಮಸ್ಯೆಯಿಂದ ಸಾಲಮನ್ನಾ ಭಾಗ್ಯವು ಕೆಲವು ರೈತರಿಗೆ ಸಿಕ್ಕಿರಲಿಲ್ಲ ನಂತರ ಕೆಲವು ರೈತರ ದಾಖಲೆಗಳನ್ನು ಸರಿಪಡಿಸಿದ್ದರಿಂದ ಅಂಥವರ ರೈತರ ಸಾಲ ಮನ್ನಾವಾಯಿತು. ಆದರೆ ಇನ್ನೂ ಕೆಲವು ರೈತರಿಗೆ ಸಾಲ ಮನ್ನಾ ಆಗಿರುವುದಿಲ್ಲ. ಅದರಂತೆ ಯಾವ ಯಾವ ರೈತರ ಸಾಲ ಮನ್ನಾ ಆಗಿದೆ ಎಂಬುದರ ಪಟ್ಟಿಯನ್ನು ಇದರಲ್ಲಿ ನೋಡುವುದಾದರೆ,
ಇದನ್ನು ಓದಿ : ಉಜ್ವಲ ಯೋಜನೆಯಿಂದ ಗುಡ್ ನ್ಯೂಸ್ : ಸಬ್ಸಿಡಿ ಹಣ ಹೆಚ್ಚಳ ಮಾಡಿದ ಸರ್ಕಾರ! ಎಷ್ಟು ಗೊತ್ತಾ?
ರೈತರ ಸಾಲ ಮನ್ನಾ ಪಟ್ಟಿ ನೋಡುವ ವಿಧಾನ:
2018 ರಲ್ಲಿ ಮಾಡಲಾದ ಸಾಲ ಮನ್ನಾವನ್ನು ಯಾರೆಲ್ಲ ರೈತರು ಪ್ರಯೋಜನವನ್ನು ಪಡೆದಿದ್ದಾರೆ ಎಂಬುದರ ರೈತರ ಸಾಲ ಮನ್ನಾ ಪಟ್ಟಿಯನ್ನು ಈ ಕೆಳಕಂಡಂತೆ ನೋಡಬಹುದಾಗಿದೆ .
- ವಾಣಿಜ್ಯ ಬ್ಯಾಂಕ್ ಸಾಲ ಪಡೆದ ರೈತರ ಸಾಲ ಪಟ್ಟಿಯನ್ನು ಇದರಲ್ಲಿ ತಿಳಿಸಲಾಗಿದ್ದು ಅದರಲ್ಲಿ ನಿಮ್ಮ ಹೆಸರಿದ್ದರೆ ಚೆಕ್ ಮಾಡಬಹುದಾಗಿದೆ. ರೈತರ ಸಾಲ ಮನ್ನಾ ಪಟ್ಟಿಯನ್ನು ನೋಡಿಕೊಳ್ಳಬೇಕಾದರೆ ಈ ಕೆಳಗಿನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://mahitikanaja.karnataka.gov.in/Revenue/LoanWaiverReportBANKNew?ServiceId=2059&Type=TABLE&DepartmentId=2066
- ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಲ್ಲಿ ಸಾಲವನ್ನು ಪಡೆದಿದ್ದರೆ ಅದರಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಚೆಕ್ ಮಾಡಿಕೊಳ್ಳಿ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಲ್ಲಿ ಸಾಲದ ಪಟ್ಟಿಯನ್ನು ಚೆಕ್ ಮಾಡಿಕೊಳ್ಳಬೇಕಾದರೆ https://mahitikanaja.karnataka.gov.in/Revenue/LoanWaiverReportPACSNew?ServiceId=2060&Type=TABLE&DepartmentId=2066 ಈ ವೆಬ್ ಸೈಟಿಗೆ ಭೇಟಿ ನೀಡಿ ಅದರಲ್ಲಿ ರೈತ ಎಂದು ಸೆಲೆಕ್ಟ್ ಮಾಡಿ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಸಲ್ಲಿಸುವ ಎಂಬುದರ ಮೇಲೆ ಕ್ಲಿಕ್ ಮಾಡಬಹುದಾಗಿದೆ.
ಪರಿಹಾರಕ್ಕಾಗಿ ಮನವಿ :
1.87 ಲಕ್ಷ ಹಿಟ್ಟೆರ್ ಕೃಷಿ ಭೂಮಿ ಹಾಗೂ 66000 ಹೆಕ್ಟರ್ ತೋಟಗಾರಿಕೆ ಭೂಮಿ ಮಳೆ ಕೊರತೆಯಿಂದಾಗಿ ಹಾನಿಗೀಡಾಗಿದೆ ಹಾಗಾಗಿ ಕೃಷಿ ಉತ್ಪನ್ನ ಹಾನಿಗೆ 197 ಕೋಟಿ ರೂಪಾಯಿ ಮತ್ತು 61 ಕೋಟಿ ರೂಪಾಯಿಗಳನ್ನು ತೋಟಗಾರಿಕೆ ಬೆಳೆ ಹಾನಿ ಪರಿಹಾರಕ್ಕಾಗಿ ವಿತರಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಮಾರುಕಟ್ಟೆಯಲ್ಲಿ ತೋಟಗಾರಿಕೆ ಬೆಳೆ ಹಾನಿಯಿಂದ ತೋಟಗಾರಿಕೆ ಬೆಳೆಗಳ ಆವಕ ತೀವ್ರ ಕುಸಿದಿದೆ ಎಂದು ಹೇಳಲಾಗುತ್ತಿದೆ ಮೆಣಸಿನಕಾಯಿ ಬೇಡಿಕೆಗೆ ತಕ್ಕಂತೆ ಈರುಳ್ಳಿ ಹಾಗೂ ಟೊಮೇಟೊ ಪೂರೈಕೆ ಇಲ್ಲದ ಕಾರಣ ಕೆಜಿ ಲೆಕ್ಕದಲ್ಲಿ ಬೆಲೆಗಳು ಬೆಳೆಗಳಿಗೆ ಅಧಿಕಗೊಂಡಿದೆ. ಒಟ್ಟಾರೆಯಾಗಿ ಹೇಳುವುದಾದರೆ ಹಾನಿಗೊಂಡ ಬೆಳೆಗೆ ಪರಿಹಾರವನ್ನು ಸರ್ಕಾರವು ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಬೀದರ್ ಜಿಲ್ಲಾ ಘಟಕದ ಅಗ್ರಹವಾಗಿದೆ.
ಹೀಗೆ ಕರ್ನಾಟಕ ರಾಜ್ಯ ರೈತ ಸಂಘ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿಯವರು ಸರ್ಕಾರಕ್ಕೆ ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ಪ್ರತಿ ಎಕರೆಗೆ 25,000ಗಳನ್ನು ನೀಡಬೇಕೆಂದು ಆಗ್ರಹಿಸಿದ್ದು ಇದನ್ನು ಸರ್ಕಾರವು ಎಷ್ಟರಮಟ್ಟಿಗೆ ಗಣನೆಗೆ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಉಜ್ವಲ ಯೋಜನೆಯಿಂದ ಗುಡ್ ನ್ಯೂಸ್ : ಸಬ್ಸಿಡಿ ಹಣ ಹೆಚ್ಚಳ ಮಾಡಿದ ಸರ್ಕಾರ! ಎಷ್ಟು ಗೊತ್ತಾ?
ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಬಿಡುಗಡೆ; ಸ್ಟೇಟಸ್ ಚೆಕ್ ಮಾಡುವ ವಿಧಾನ ಇಲ್ಲಿದೆ