ನಮಸ್ಕಾರ ಸ್ನೇಹಿತರೇ , ರಾಜ್ಯದ್ಯಂತ ರೈತರು ಮಳೆಯ ಸಂಕಷ್ಟದಿಂದ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅದರಲ್ಲಿಯೂ ಹೆಚ್ಚಾಗಿ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ನಷ್ಟ ಉಂಟಾಗಿರುವುದನ್ನು ನಾವು ನೋಡಬಹುದು. ರೈತರ ಬ್ಯಾಂಕ್ ಖಾತೆಗಳಿಗೆ ಮಧ್ಯಂತರ ಬೆಳೆವಿಮೆ ಪಾವತಿಯ ಮೂಲಕ ಆರ್ಥಿಕ ಪರಿಹಾರವನ್ನು ನೇರವಾಗಿ ಒದಗಿಸಲು ಸಂಬಂಧಿತ ಇಲಾಖೆಯ ಅರ್ಜಿಗಳನ್ನು ಪ್ರಾರಂಭಿಸಿದೆ. ಶೇಕಡ 25 ರಷ್ಟು ಮಧ್ಯಂತರ ಪರಿಹಾರವನ್ನು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ರೈತರಿಗೆ ಬೆಳೆವಿಮೆಯಿಂದ ನೀಡಲಾಗುವುದು ಎಂದು ಶಾಸಕರಾದ ಶ್ರೀನಿವಾಸ್ ಮಾನೆಯವರು ತಿಳಿಸಿದ್ದಾರೆ. ಹಾಗಾದರೆ ಇವತ್ತಿನ ಲೇಖನದಲ್ಲಿ ಬೆಳೆ ವಿಮೆ ಪರಿಹಾರ ಎಷ್ಟು ಹಾಗೂ ಇದರ ಸ್ಥಿತಿಯನ್ನು ಹೇಗೆ ತಿಳಿದುಕೊಳ್ಳಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.
ಬೆಳೆ ವಿಮೆ ಪರಿಹಾರ :
ರೈತರು ಬೆಳೆ ವಿಮೆ ಪ್ರೀಮಿಯಂ ಪಾವತಿಸಿದ್ದು ತಮ್ಮ ಅರ್ಜಿಗಳನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಯಾವುದೇ ರೀತಿಯ ಈಗ ನೀವು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವಂತಹ ಅಗತ್ಯವಿಲ್ಲ ನಿಮ್ಮ ಮೊಬೈಲ್ ನಲ್ಲಿಯೇ ಆನ್ಲೈನ್ ಮೂಲಕ ನಿಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಲು ಸರಳ ಮಾರ್ಗವನ್ನು ಕಂಡುಹಿಡಿಯಲಾಗಿದೆ. ತರು ಸಂರಕ್ಷಣಾ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ತಮ್ಮ ಬೆಳೆಗಳನ್ನು ವಿಮೆ ಮಾಡಿದ ರೈತರು ಅರ್ಜಿಗಳ ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಕ್ಷಣವೇ ಪಡೆದುಕೊಳ್ಳಬಹುದಾಗಿದೆ. ಬೆಳೆ ವಿಮೆ ಪರಿಹಾರಕ್ಕಾಗಿ ಅರ್ಜಿಯನ್ನು ಸಲ್ಲಿಸಲಾಗಿದೆಯೇ ಹಾಗೂ ಅದರ ಸ್ಥಿತಿ ಮತ್ತು ಹಣ ಜಮಾ ಆಗಿರುವ ಪರಿಹಾರದ ಮೊತ್ತದ ಬಗ್ಗೆ ವೆಬ್ಸೈಟ್ ವಿವರಗಳನ್ನು ನಿಮಗೆ ಸುಲಭವಾಗಿ ಒದಗಿಸುತ್ತದೆ. ಹಾಗಾದರೆ ಈ ಕೆಳಗಿನ ಹಂತಗಳ ಮೂಲಕ ನಿಮ್ಮ ಬೆಳೆ ವಿಮೆ ಅರ್ಜಿಯ ಸ್ಥಿತಿಯನ್ನು ಹಂತ ಹಂತವಾಗಿ ಪರಿಶೀಲಿಸಬಹುದಾಗಿದೆ.
ಬೆಳೆ ವಿಮೆ ಅರ್ಜಿ ಪರಿಶೀಲಿಸುವ ವಿಧಾನ :
ಬೆಳೆ ವಿಮೆ ಹಣ ಜಮಾ ಆಗಿರುವ ಸ್ಥಿತಿಯನ್ನು ಪರಿಶೀಲಿಸಲು ಹಾಗೂ ಠೇವಣಿ ಮಾಡಿದಂತಹ ಮೊತ್ತವನ್ನು ಕಂಡುಹಿಡಿಯಲು ರೈತರು ವಿವರವಾದ ಮಾರ್ಗದರ್ಶಿ ಗಾಗಿ ರಾಜ್ಯದಾಧಿಕೃತ ಸಂರಕ್ಷಣಾ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ. ಅದರಲ್ಲಿ ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಬೇಕು.
ಮೊದಲ ಹಂತದಲ್ಲಿ ರೈತರು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ಅಪ್ಲಿಕೇಶನ್ ಅನ್ನು ಹುಡುಕಲು ನಿಮ್ಮ ಐಡಿ ಹಾಗೂ ಮೊಬೈಲ್ ನಂಬರ್ ಅಥವಾ ಆಧಾರ್ ಕಾರ್ಡ್ ಅನ್ನು ಬಳಸಿದ ನಂತರ ಅದರಲ್ಲಿ ಅಗತ್ಯವಿರುವ ವಿವರಗಳನ್ನು ಹಾಗೂ ಕ್ಯಾಪ್ಚ ಕೋಡನ್ನು ನಮೂದಿಸಿ ಹುಡುಕು ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
ಎರಡನೇ ಹಂತದಲ್ಲಿ ನೀವು ಆರಂಭಿಕ ಹಂತವನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಬೆಳೆ ವಿಮಾ ಅರ್ಜಿಯ ಸ್ಥಿತಿಯನ್ನು ವೆಬ್ಸೈಟ್ನಲ್ಲಿ ಪ್ರದರ್ಶಿಸಲಾಗುತ್ತದೆ ಅದು ಅನುಮೋದಿಸಲ್ಪಟ್ಟಿದೆಯೇ ಮತ್ತು ಪರಿಹಾರ ಮತ ಸೇರಿದಂತೆ ನಿಮಗೆ ವಿವರಣೆ ನೀಡುತ್ತದೆ.
ಇದನ್ನು ಓದಿ : ಸಾಮಾನ್ಯ ವರ್ಗದವರಿಗೆ 12 ಲಕ್ಷ ಸಾಲ ಸೌಲಭ್ಯ; ಕೂಡಲೇ ಈ ಕೆಲಸ ಮಾಡಿ
ಹಂತದಲ್ಲಿ ಹೆಚ್ಚಿನ ವಿವರಗಳನ್ನು ಪಡೆಯಬೇಕಾದರೆ ನಿಮ್ಮ ಪ್ರಸಕ್ತ ಐಡಿ ಪಕ್ಕದಲ್ಲಿರುವ ಆಯ್ಕೆ ಮಾಡಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಅಪ್ಲಿಕೇಶನ್ ಬಗ್ಗೆ ಹೆಚ್ಚುವರಿ ಮಾಹಿತಿಯನ್ನು ನೋಡಲು ವಿವರಗಳನ್ನು ವೀಕ್ಷಿಸಿ ಎಂಬುದರ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಅದಾದ ನಂತರ ಬೆಳೆ ವಿಮೆ ಸಮಸ್ಯೆಗಳಿಗೆ ಯಾರನ್ನು ಸಂಪರ್ಕಿಸಬೇಕು ಹಾಗೂ ಯಾವುದೇ ಪ್ರಶ್ನೆಗಳು ಬೆಳೆ ವಿಮೆ ಬಗ್ಗೆ ನಿಮಗೆ ಇದ್ದರೆ ಅದಕ್ಕೆ ಸಂಬಂಧಿಸಿದಂತೆ ಒದಗಿಸಿದಂತಹ ಸಹಾಯವಾಣಿ ಸಂಖ್ಯೆಯಾದ 1800 200 5142 ಈ ನಂಬರ್ಗೆ ಸಂಪರ್ಕಿಸಬಹುದಾಗಿದೆ. ಹಾಗೂ ನಿಮ್ಮ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು ಅಥವಾ ಬೆಂಗಳೂರಿನ ಯುನಿವರ್ಸಲ್ ಸೋಂಪೋ ಜನರಲ್ ಇನ್ಸುಲೇಶನ್ ಕಂಪನಿಯ ಪ್ರತಿನಿಧಿಗಳನ್ನು ನೀವು ಸಂಪರ್ಕಿಸಿ ಬೆಳೆ ವಿಮೆ ಪರಿಹಾರ ಯೋಜನೆಗೆ ಸಂಬಂಧಿಸಿ ದಂತೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಪರಿಶೀಲಿಸಿದ ನಂತರ ಪುಟದ ಕೆಳಗಿರುವ ಯು ಟಿ ಆರ್ ವಿವರಗಳು ನಿಮ್ಮ ಖಾತೆಗೆ ಬೆಳೆ ಪರಿಹಾರ ಹಣವು ಎಷ್ಟು ಜಮಾ ಮಾಡಲಾಗಿದೆ ಎಂಬುದನ್ನು ತಿಳಿಸುತ್ತದೆ ಹಾಗೂ ಠೇವಣಿಯ ದಿನಾಂಕ ಸೇರಿದಂತೆ ಬ್ಯಾಂಕು ವಹಿವಾಟಿನ ವಿವರಗಳನ್ನು ಸಹ ನಿಮಗೆ ಒದಗಿಸಲಾಗುತ್ತದೆ.
ಹೀಗೆ ಬೆಳೆ ವಿಮೆ ಪರಿಹಾರ ಹಣವನ್ನು ಸರ್ಕಾರವು ಬಿಡುಗಡೆ ಮಾಡಲು ನಿರ್ಧರಿಸಿದ್ದು ಈ ಅರ್ಜಿಯ ಸ್ಥಿತಿಯನ್ನು ಪರಿಶೀಲನೆ ಮಾಡಿಕೊಳ್ಳುವುದರ ಮೂಲಕ ಹಣವನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಬೆಳೆ ವಿಮೆಗೆ ಅರ್ಜಿಯನ್ನು ಸಲ್ಲಿಸಿದ್ದರೆ ಅವರು ಸಹ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಸುಲಭವಾಗಿ ಮೊಬೈಲ್ ನಲ್ಲಿಯೇ ಹೇಗೆ ಬೆಳೆ ವಿಮೆ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಬಹುದು ಎಂಬುದನ್ನು ಅವರು ಸಹ ತಿಳಿದುಕೊಂಡು ಅವರು ತಮ್ಮ ಅರ್ಜಿ ಯ ಸ್ಥಿತಿಯನ್ನು ಪರಿಶೀಲಿಸಲು ಈ ಮಾಹಿತಿಯು ಉಪಯುಕ್ತಕರವಾಗಿದೆ ಎಂದು ಹೇಳಬಹುದಾಗಿದೆ. ಧನ್ಯವಾದಗಳು.
ಇತರೆ ವಿಷಯಗಳು :
ವೈಯಕ್ತಿಕ ಸಾಲಕ್ಕಿಂತ ಅಗ್ಗದ ಸಾಲ ಬೇಕಾ? ಕಡಿಮೆ ಬಡ್ಡಿದರದಲ್ಲಿ PPF ಸಾಲ ಸಿಗಲಿದೆ
ಕೇಂದ್ರ ಸರ್ಕಾರದಿಂದ ಕೇವಲ 3% ಬಡ್ಡಿಯೊಂದಿಗೆ ರೂ 50 ಲಕ್ಷದವರೆಗೆ ಗೃಹ ಸಾಲ