ನಮಸ್ಕಾರ ಸ್ನೇಹಿತರೆ, ಕರ್ನಾಟಕ ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ ಇದೆ ಇದೀಗ ಮತ್ತೊಂದು ಹೊಸ ಯೋಜನೆಯನ್ನು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಜಾರಿಗೊಳಿಸಲು ನಿರ್ಧರಿಸಿದೆ. ಹಾಗಾದ್ರೆ ಕರ್ನಾಟಕ ಸರ್ಕಾರವು ಯಾವ ಯೋಜನೆಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.

ಫ್ರೀ ಶಿಪ್ ಕಾರ್ಡ್ :
ರಾಜ್ಯದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರವು ಫ್ರೀಶಿಪ್ ಕಾರ್ಡ್ ಎಂಬ ಒಂದು ವಿಶೇಷವಾದ ಸೌಲಭ್ಯವನ್ನು ನೀಡಲು ನಿರ್ಧರಿಸಿದೆ. ಸ್ಕಾಲರ್ಶಿಪ್ ಎಟಿಎಂ ಕಾರ್ಡ್ ಎಂದು ಸಹ ಇದನ್ನು ಸರಳ ಭಾಷೆಯಲ್ಲಿ ಕರೆಯಬಹುದಾಗಿದ್ದು ಈ ಕಾರ್ಡ್ ಮೂಲಕ ವಿದ್ಯಾರ್ಥಿಯು ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಎಲ್ಲ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪದವಿಪೂರ್ವ ಮತ್ತು ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಉಚ್ಚಿತ ಪ್ರವೇಶದ ಅನುಕೂಲತೆಯನ್ನು ಮಾಡಿಕೊಟ್ಟು ಆರ್ಥಿಕ ನೆರವು ನೀಡಲು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನದ ಯೋಜನೆಯನ್ನು ಸಮಾಜ ಕಲ್ಯಾಣ ಇಲಾಖೆಯ ರೂಪಿಸಿದ್ದು ಇದೇ ಸಮಯದಲ್ಲಿ ಇದೀಗ ರಾಜ್ಯ ಸರ್ಕಾರವು ಮೆಟ್ರಿಕ್ ನಂತರದ ಕೋರ್ಸ್ಗಳ ವ್ಯಾಸಂಗ ಮಾಡುತ್ತಿರುವ ಹಾಗೂ ಇದಕ್ಕೆ ರೂಪಿಸಿರುವ ಮಾನದಂಡಗಳಿಗೆ ಒಳಪಡುವ ಎಲ್ಲಾ ಅರ್ಜಿದಾರರಿಗೆ ಅಥವಾ ವಿದ್ಯಾರ್ಥಿಗಳಿಗೆ ಈ ಹೊಸ ಯೋಜನೆಯ ಅಡಿಯಲ್ಲಿ ಫ್ರೀಶಿಪ್ ಕಾರ್ಡ್ ನೀಡಲು ಮುಂದಾಗಿದೆ. ಇದರಿಂದ ಸುಲಭವಾಗಿ ರಾಜ್ಯ ಸರ್ಕಾರದಿಂದ ಶಿಕ್ಷಣ ಸಂಸ್ಥೆಗಳಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ.
ಫ್ರೀಶಿಪ್ ಕಾರ್ಡ್ ಕುರಿತು ಮಾಹಿತಿ :
ಮೆಟ್ರಿಕ್ ನಂತರದ ಕೋರ್ಸ್ ಗಳಿಗೆ ಫ್ರೀಶಿಪ್ ಕಾರ್ಡ್ ನ ಮೂಲಕ ಉಚಿತವಾಗಿ ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ಒಳಗಿರುವಂತಹ ಪರಿಶಿಷ್ಟ ಜಾತಿಯ ಎಲ್ಲಾ ಕುಟುಂಬಗಳ ವಿದ್ಯಾರ್ಥಿಗಳು ಪ್ರವೇಶವನ್ನು ಪಡೆಯಬಹುದು. ಆಯಾ ಕೋರ್ಸ್ ಗಳಿಗೆ ನಿಗದಿಪಡಿಸಿರುವ ದರಗಳಲ್ಲಿ ಶುಲ್ಕವನ್ನು ಇಲಾಖೆಯಿಂದ ಸರ್ಕಾರವು ವಿದ್ಯಾರ್ಥಿಗಳಿಗೆ ಮರುಪಾವತಿ ಮಾಡುತ್ತದೆ. ಪರಿಶಿಷ್ಟ ಜಾತಿ ವಿದ್ಯಾರ್ಥಿಯಿಂದ ಯಾವುದೇ ಶಿಕ್ಷಣ ಸಂಸ್ಥೆ ಶ್ರೀ ಶಿಪ್ ಕಾರ್ಡ್ ಹೊಂದಿರುವಂತಹ ವಿದ್ಯಾರ್ಥಿಗೆ ಮರುಪಾವತಿ ಮಾಡಲಾಗುವ ಶುಲ್ಕಗಳನ್ನು ಹೊರತುಪಡಿಸಿ ಇತರೆ ಕಡ್ಡಾಯ ಶುಲ್ಕಗಳನ್ನು ಆರಂಭದಲ್ಲಿ ಪಾವತಿ ಮಾಡುವಂತೆ ಶಿಕ್ಷಣ ಸಂಸ್ಥೆಗಳು ಒತ್ತಾಯ ಮಾಡಬಾರದು ಎಂಬ ನಿಯಮವನ್ನು ಸಹ ಮಾಡಲಾಗಿದೆ.
ಇದನ್ನು ಓದಿ : ಊಟ ಅಥವಾ ನೀರನ್ನು ಯಾವ ಸಾಕು ಪ್ರಾಣಿ ಸೇವಿಸುವುದಿಲ್ಲ?
ಫ್ರೀಶಿಪ್ ಕಾರ್ಡ್ ಪಡೆಯಲು ಇರಬೇಕಾದ ದಾಖಲೆಗಳು :
ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗಾಗಿ ಶಿಫ್ಟ್ ಕಾರ್ಡ್ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಕೆಲವೊಂದು ದಾಖಲೆಗಳನ್ನು ವಿದ್ಯಾರ್ಥಿಗಳು ಹೊಂದಿರಬೇಕು ಅವುಗಳೆಂದರೆ ,ವಿದ್ಯಾರ್ಥಿಯ ಆಧಾರ್ ನಂಬರ್ ,ಮೊಬೈಲ್ ನಂಬರ್ ,ವಿದ್ಯಾರ್ಥಿಯ ಆದಾಯ ಮತ್ತು ಜಾತಿ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆ, ವಿದ್ಯಾರ್ಥಿಯ ಎಸ್ ಎಸ್ ಎಲ್ ಸಿ ನೋಂದಣಿ ಸಂಖ್ಯೆ ಹಾಗೂ ವಿದ್ಯಾರ್ಥಿಯ ಯುನಿವರ್ಸಿಟಿ ಅಥವಾ ಮಂಡಳಿಯ ನೋಂದಣಿ ಸಂಖ್ಯೆಯನ್ನು ಹೊಂದಿರಬೇಕಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :
ಫೀಷಿಕಾರ್ಡನ್ನು ಪಡೆಯಬೇಕಾದರೆ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ನಂತರದ ವಿದ್ಯಾರ್ಥಿ ವೇತನ ಕಾರ್ಯಕ್ರಮ ಎಂಬ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ ಅದರಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. https://ssp.postmatric. karnataka.gov.in ಸಲ್ಲಿಸಬಹುದು. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕಾದರೆ ಹಾಗೂ ಏನಾದರೂ ಯಾವುದೇ ಗೊಂದಲಗಳು ನಿಮಗೆ ಕಾಡುತ್ತಿದ್ದಾರೆ ಅವುಗಳನ್ನು ಪರಿಹರಿಸಿಕೊಳ್ಳಲು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕಾಗುತ್ತದೆ. 9482300400 ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಹೀಗೆ ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುವ ಉದ್ದೇಶದಿಂದ ಈ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆ ಮೂಲಕ ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಹಲವಾರು ಪ್ರಯೋಜನಗಳನ್ನು ಪಡೆದು ಉನ್ನತ ಶಿಕ್ಷಣವನ್ನು ಪಡೆಯಲು ಸಹಕಾರಿಯಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಯಾರಾದರೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಾಗಿದ್ದಾರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ರೇಷನ್ ಅಕ್ಕಿ! ಯಾರಿಗೆಲ್ಲಾ ಸಿಗಲಿದೆ ಈ ಯೋಜನೆಯ ಲಾಭ
ಗೃಹಲಕ್ಷ್ಮಿ ಯೋಜನೆಯ ಹಣ ಈ ಅಧಿಕೃತ ದಿನಾಂಕಕ್ಕೆ ಎಲ್ಲರ ಖಾತೆಗೆ ಪಿಕ್ಸ್