ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಗೃಹಲಕ್ಷ್ಮಿ ಯೋಜನೆಯು ಕಾರ್ಯಗತಗೊಂಡು 4 ತಿಂಗಳುಗಳ ಕಳದರೂ ಕೂಡ ಇನ್ನು 30% ಮಹಿಳೆಯರ ಖಾತೆಗೆ ಹಣ ಜಮಾವಾಗಿಲ್ಲ. ಹಾಗಾದ್ರೆ ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.

ಗೃಹಲಕ್ಷ್ಮಿ ಯೋಜನೆಯು ಅನುಷ್ಠಾನಗೊಂಡು 4 ತಿಂಗಳು ಕಳೆಯುತ್ತಾ ಬಂದರು ಕೂಡ ಈ ಯೋಜನೆಯ ಕಂತಿನ ಹಣವು ಎಲ್ಲಾ ಮಹಿಳೆಯರಿಗೂ ಸಿಕ್ಕಿಲ್ಲ. ಈಗಾಗಲೇ ಗೃಹಲಕ್ಷಿ ಯೋಜನೆಯ ಅಡಿಯಲ್ಲಿ 70% ಅರ್ಹತೆಯನ್ನು ಹೊಂದಿದ ಮಹಿಳೆಯರಿಗೆ 3 ಕಂತುಗಳ 2 ಸಾವಿರ ರೂಗಳನ್ನು ಡಿಬಿಟಿ ಮೂಲಕ ಅವರ ಖಾತೆಗೆ ಹಣವನ್ನು ಜಮಾಗೊಳಿಸಲಾಗಿದೆ. ಇನ್ನುಳಿದಂತಹ 30% ಮಹಿಳೆಯರಿಗೆ ಗೃಹಲಕ್ಷ್ಮಿ ಖಾತೆಯ ಒಂದು ರೂಪಾಯಿ ಕೂಡ ಸಿಕ್ಕಿಲ್ಲ.
ಅಷ್ಟಕ್ಕೂ ಈ ಯೋಜನೆಯಲ್ಲಿ ಹಣ ಜಮ ಆಗುವುದು ತಡವಾಗುತ್ತಿರುವುದು ಏಕೆ? ಎಂಬ ಪ್ರಶ್ನೆ ಹಲವಾರು ಮಹಿಳೆಯರಲ್ಲಿ ಮೂಡಿದೆ. ಆದರೂ ಆ ಪ್ರಶ್ನೆಗೆ ಈ ವರೆಗೂ ಅವರಿಗೆ ಉತ್ತರ ಸಿಕ್ಕಿಲ್ಲ. ಮಹಿಳೆಯರೂ ಇನ್ನು ಕೂಡ ತಮ್ಮ ಖಾತೆಗೆ ಹಣ ಜಮಾ ಆಗಿದೆಯಾ ಇಲ್ಲವಾ ಎಂದು ಚೆಕ್ ಮಾಡಿಕೊಳ್ಳುತ್ತಲೇ ಇದ್ದಾರೆ.
ಇದನ್ನು ಸಹ ಓದಿ: ಮದ್ಯದಂಗಡಿ ಬಂದ್!! ಮದ್ಯವ್ಯಸನಿಗಳಿಗೆ ಬಿಗ್ ಶಾಕ್! ಇಂದು ಸಂಜೆ 6 ಗಂಟೆಯಿಂದ ಈ ನಗರದಲ್ಲಿ ಮದ್ಯದಂಗಡಿಗಳಿಗೆ ಬೀಗ
ಇನ್ನು ಕಾಂಗ್ರೆಸ್ ಸರ್ಕಾರ ಘೋಷಣೆ ಹೊರಡಿಸಿದಂತೆ ರಾಜ್ಯಾದ್ಯಂತ ಕೋಟ್ಯಾಂತರ ಮಹಿಳೆಯರಿಗೆ ಗೃಹಲಕ್ಷ್ಮಿ ಮಹಿಳೆಯರಿಗೆ 2000 ರೂಗಳು ಜಮಾ ಆಗಿದೆ ಆದರೆ ಸುಮಾರು 1.9 ಕೋಟಿ ಮಹಿಳೆಯರ ಖಾತೆಗೆ ಮಾತ್ರ ಹಣ ಜಮಾವಾಗಿಲ್ಲ. ಇನ್ನು 5 ರಿಂದ 6 ಲಕ್ಷ ಅರ್ಹ ಮಹಿಳೆಯರ ಖಾತೆಗೆ ಹಣ ಜಮಾ ಮಾಡುವುದು ಬಾಕಿ ಇದೆ. ಸದ್ಯ ರಾಜ್ಯ ಸರ್ಕಾರವು ಗೃಹಲಕ್ಷ್ಮಿಯರಿಗೆ ಹಣ ಪಡೆಲು ಹೊಸ ವಿಧಾನವನ್ನು ಕಂಡು ಹಿಡಿದಿದೆ. ಈ ಮೂಲಕ ಎಲ್ಲಾ ಅರ್ಹ ಮಹಿಳೆಯರ ಖಾತೆಗೆ ಹಣ ಜಮಾವಾಗುವುದಾಗಿ ಸರ್ಕಾರ ಭರವಸೆ ನೀಡಿದೆ.
ಗೃಹ ಲಕ್ಷ್ಮಿ ಹಣವು ಖಾತೆಗೆ ಜಮಾ ಆಗದಿರುವುದಕ್ಕೆ ತಾಂತ್ರಿಕ ದೋಷವೇ ಕಾರಣ ಎಂದು ಮಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿಯನ್ನು ನೀಡಿದ್ದಾರೆ. ತಾಂತ್ರಿಕ ದೋಷಗಳನ್ನು ಆದಷ್ಟು ಬೇಗ ಸರಿಪಡಿಸಿ ಶೀಘ್ರದಲ್ಲೇ ಎಲ್ಲ ಸಮಸ್ಯೆಗಳಿಗೂ ಕೂಡ ಪರಿಹಾರ ನೀಡುವುದಾಗಿ ಜನರಿಗೆ ಆಶ್ವಾಸನೆ ನೀಡಿದ್ದಾರೆ. ತಿಂಗಳೊಳಗೆ ಯೋಜನೆಯ ಹಣ ಪೂರ್ಣ ಫಲಾನುಭವಿಗಳ ಖಾತೆಗೆ ಲಭ್ಯವಾಗುವಂತೆ ಮಾಡುವುದಾಗಿ ತಿಳಿಸಿದರು.
ಗೃಹ ಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಆಗದೆ ಇದ್ದಂತಹ ಫಲಾನುಭವಿಗಳು ತಮ್ಮ ದಾಖಲೆಗಳಲ್ಲಿನ ಸಮಸ್ಯೆಯನ್ನು ಮೊದಲು ಆದಷ್ಟು ಬೇಗ ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ 15 ಲಕ್ಷಕ್ಕೂ ಅಧಿಕ ಮಹಿಳೆಯರೂ ಗೃಹಲಕ್ಷ್ಮಿ ಅರ್ಜಿಯನ್ನು ಸಲ್ಲಿಕೆ ಮಾಡುವಾಗ ಈ ತಪ್ಪುಗಳನ್ನು ಮಾಡಿದ್ದರೆ ಹಣ ಬರುವುದಿಲ್ಲ. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದಿದ್ದರೂ ಕೂಡ ಗೃಹಲಕ್ಷ್ಮಿ ಹಣ ಖಾತೆಗೆ ಬರುವುದಿಲ್ಲ.
ಈ ಕಾರಣಕ್ಕೆ ಹಲವಾರು ಗೃಹಲಕ್ಷ್ಮಿಯರ ಖಾತೆಗೆಹಣ ಜಮಾವಾಗದಿರಬಹುದು. ಸಾಕಷ್ಟು ಜನರು ಆಧಾರ್ ಲಿಂಕ್ ಮಾಡಿದ್ದರೂ ಕೂಡ ಇನ್ನು ಹಲವಾರು ಮಾಹಿತಿಯನ್ನು ಸರಿಪಡಿಸಿಕೊಳ್ಳದಿದ್ದರೆ ಖಾತೆಗೆ ಹಣ ಬರುವುದಿಲ್ಲ. ನೀವು ನಿಮ್ಮ ಮೂಲ ದಾಖಲೆಗಳನ್ನು ಸರಿಯಾಗಿದ್ದರೆ ಹಣ ಜಮಾವಾಗುತ್ತದೆ ಎಂದು ಸಚಿವರು ಮಾಹಿತಿಯನ್ನು ನೀಡಿದ್ದಾರೆ.
ಇತರೆ ವಿಷಯಗಳು:
ಯಾವುದೇ ಶುಲ್ಕವಿಲ್ಲದೆ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ
ಗೃಹ ನಿರ್ಮಾಣಕ್ಕೆ ಕೇಂದ್ರದಿಂದ ಅರ್ಜಿ ಆಹ್ವಾನಿಸಲಾಗಿದೆ : ನೀವು ಸಹ ಅರ್ಜಿ ಸಲ್ಲಿಸಿ