ನಮಸ್ಕಾರ ಸ್ನೇಹಿತರೇ, ನಾಳೆಯಿಂದ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಳೆ ಶುರುವಾಗಲಿದೆ ನವೆಂಬರ್ 15 ರಿಂದ 5 ದಿನಗಳ ಕಾಲ ರಾಜ್ಯದ ದಕ್ಷಿಣ ಒಳನಾಡಿನ ಹಲವು ಕಡೆ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಮುಂಗಾರು ಮಳೆಯು ನವಂಬರ್ ತಿಂಗಳಿನಲ್ಲಿ ಶುರುವಾಗಿದ್ದು ಹಲವು ಜಿಲ್ಲೆಗಳಿಗೆ ಈಗಾಗಲೇ ಉತ್ತಮ ಮಳೆಯಾಗಿದೆ. ಯಾವ ಜಿಲ್ಲೆಗಳಲ್ಲಿ ಎಷ್ಟು ಮಳೆ ಆಗಲಿದೆ ಹಾಗೂ ಎಷ್ಟು ದಿನಗಳ ಕಾಲ ಮಳೆ ಸುರಿಯಲಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ನೀವು ನೋಡಬಹುದು.
ಹವಾಮಾನ ಇಲಾಖೆಯಿಂದ ಸೂಚನೆ :
ಮಳೆಯು ದೀಪಾವಳಿ ಹಬ್ಬದ ಸಮಯದಲ್ಲಿ ಬ್ರೇಕ್ ಕೊಟ್ಟಿದ್ದು ಇದೀಗ ಮತ್ತೆ ಕೆಲವು ಜಿಲ್ಲೆಗಳಲ್ಲಿ ನಾಳೆಯಿಂದ ಮಳೆ ಶುರುವಾಗಲಿದೆ. ಕೋಲಾರ ಬೆಂಗಳೂರು ಗ್ರಾಮಾಂತರ ಚಾಮರಾಜನಗರ ಬೆಂಗಳೂರು ನಗರ ಕೊಡಗು ಹಾಸನ ಮಂಡ್ಯ ಮೈಸೂರ್ ರಾಮನಗರ ತುಮಕೂರು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆಯ ಕಲಿತೆ ಎಂದು ಹವಾಮಾನ ಇಲಾಖೆಯು ಆ ಭಾಗದ ಜನರಿಗೆ ಮುನ್ಸೂಚನೆಯನ್ನು ನೀಡಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬಹುತೇಕ ಮಳೆ :
ಹವಾಮಾನ ಇಲಾಖೆಯು ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಹಲವು ಜಿಲ್ಲೆಗಳಲ್ಲಿ ಅರಬ್ಬಿ ಸಮುದ್ರದಲ್ಲಿ ಬೀಸುತ್ತಿರುವ ಸುಳಿಗಾಳಿಯಿಂದ ಮಳೆಯಾಗಲಿದೆ. ಸುಮಾರು 40 ಕಿಲೋಮೀಟರ್ ವೇಗದಲ್ಲಿ ಮಳೆಯಾಗುವ ಜಿಲ್ಲೆಗಳಲ್ಲಿ ಗಾಳಿ ಬೀಸುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪಶ್ಚಿಮ ಹಾಗೂ ಈಶಾನ್ಯ ದಿಕ್ಕಿನತ್ತ ಬಂಗಾಳಕೊಲ್ಲಿಯಲ್ಲಿನ ಮಳೆಯ ಮಾರುತಗಳು ಸಂಚರಿಸುವುದರಿಂದ ಬಂಗಾಳದ ದಕ್ಷಿಣಕ್ಕೆ ಹೊಂದಿಕೊಂಡ ಭಾಗಗಳಲ್ಲೂ ಸಹ ಮಳೆಯಾಗುವ ಸಾಧ್ಯತೆ ಇದೆ.
ಸಾಧಾರಣ ಮಳೆಯಾಗುವ ಸಾಧ್ಯತೆ :
ಕೆಲವೊಂದು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಒಂದೆರಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಬಹುದು ಎಂದು ಹೇಳಿದ್ದು ಈಗಾಗಲೇ ತಮಿಳುನಾಡು ಕೇರಳ ಹಾಗೂ ಲಕ್ಷ ದ್ವೀಪ ಭಾಗಗಳಲ್ಲಿ ಮಳೆಯಾಗಲಿದ್ದು ಹವಾಮಾನ ಇಲಾಖೆಯ 3-4 ದಿನ ಈ ಮಳೆಯು ಮುಂದುವರೆಯಲಿದೆ ಎಂಬುದರ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ. ಎರಡು ಮೂರು ದಿನಗಳಿಂದ ಬೆಳಗಿನ ಜಾವ ಬೆಂಗಳೂರು ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ಮೋಡಕ ವಿಧ ವಾತಾವರಣ ಕಂಡು ಬಂದಿದ್ದು ನಾಳೆ ಅಂದರೆ ನವೆಂಬರ್ 15 ರಿಂದ ಸತತ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ.
ಹೀಗೆ ಹವಾಮಾನ ಇಲಾಖೆಯ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂಬುದರ ಬಗ್ಗೆ ರಾಜ್ಯದ ಜನತೆಗೆ ಮುನ್ಸೂಚನೆಯನ್ನು ನೀಡಿದ್ದು ರೈತರಿಗೆ ಹಾಗೂ ಪ್ರಯಾಣವನ್ನು ಬೆಳೆಸುವವರಿಗೆ ಈ ಮಳೆಯ ಮುನ್ಸೂಚನೆಯೂ ಸಹಕಾರಿಯಾಗಲಿದೆ ಎಂದು ಹೇಳಬಹುದು. ಹಾಗಾಗಿ ಮಳೆಯಾಗುವ ಮುನ್ಸೂಚನೆಯ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಕರ್ನಾಟಕದ ವಿದ್ಯಾರ್ಥಿಗಳಿಗೆ 20 ಸಾವಿರ ಸ್ಕಾಲರ್ಶಿಪ್ ಇಂದೇ ಅಪ್ಲೈ ಮಾಡಿ ಎಲ್ಲಾ ವಿದ್ಯಾರ್ಥಿಗಳಿಗೂ ಸಿಗುತ್ತೆ