ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ರಾಜ್ಯ ಸರ್ಕಾರವು ಲೇಬರ್ ಕಾರ್ಡ್ ವಿದ್ಯಾರ್ಥಿವೇತನವನ್ನು ಬಿಡುಗಡೆ ಮಾಡಿದೆ. ಪ್ರತಿ ವರ್ಷವೂ ಕೂಡ ಕರ್ನಾಟಕ ರಾಜ್ಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಮಂಡಳಿಯಲ್ಲಿ ನೋಂದಾಯಿತವಾಗಿರುವಂತಹ ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರು ಹಾಗೂ ಕಾರ್ಮಿಕರು ಕುಟುಂಬಕ್ಕೆ ಅನೇಕ ಸವಲತ್ತುಗಳನ್ನು ಸರ್ಕಾರದಿಂದ ನೀಡಲಾಗುತ್ತಿದೆ. ಇದರಲ್ಲಿ ಮುಖ್ಯವಾಗಿ ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿದ್ಯಾರ್ಥಿ ಕಿಟ್ ಮತ್ತು ಸ್ಕಾಲರ್ಶಿಪ್ ನಂತಹ ಕೆಲವೊಂದು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅದರಂತೆ ಇದೀಗ ರಾಜ್ಯ ಸರ್ಕಾರವು ಲೇಬರ್ ಕಾರ್ಡ್ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡಿದ್ದು ಅದರ ಸ್ಟೇಟಸ್ ಅನ್ನು ಹೇಗೆ ಚೆಕ್ ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ.
ಲೇಬರ್ ಕಾರ್ಡ್ ವಿದ್ಯಾರ್ಥಿವೇತನ :
ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರ ಮಕ್ಕಳಿಗೆ 2023 24ನೇ ಶೈಕ್ಷಣಿಕ ಸಾಲಿನಲ್ಲೂ ಕಲಿಕಾ ಭಾಗ್ಯ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಕಟ್ಟಡ ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ತಡೆಯುವುದು ಮತ್ತು ಅವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಕಾರ್ಮಿಕ ಮುಖ್ಯ ಉದ್ದೇಶವಾಗಿದೆ ಹಾಗಾಗಿ ಈ ಮಂಡಳಿಯು ಲೇಬರ್ ಕಾರ್ಡ್ ಹೊಂದಿರುವಂತಹ ಕಾರ್ಮಿಕರ ನರ್ಸರಿಯಿಂದ ಸ್ನಾತಕೋತ್ತರ ಪದವಿವರೆಗಿನ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಅರ್ಜಿ ಸಲ್ಲಿಸಿದವರ ಅರ್ಜಿ ಈ ವರ್ಷ ವಿಲೇವಾರಿಯಾಗಿದ್ದು ಇದೀಗ ಅರ್ಹ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ.
ಅರ್ಜಿ ಸ್ಥಿತಿ ಚೆಕ್ ಮಾಡುವ ವಿಧಾನ :
ಲೇಬರ್ ಕಾರ್ಡ್ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿರುವ ಅಂತಹ ಮಕ್ಕಳು ರ ಅರ್ಜಿ ಸ್ಥಿತಿಯನ್ನು ಚೆಕ್ ಮಾಡಲು ಮೊದಲು ಎಸ್‌ಎಸ್‌ಪಿ ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಿದ್ದಾರೆ ಅರ್ಜಿ ಸ್ಟೇಟಸ್ ಏನಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಮೊದಲು ಸೇವಾ ಸಿಂಧು ವೆಬ್ಸೈಟ್ಗೆ ಲಾಗಿನ್ ಆದ ನಂತರ ಅರ್ಜಿ ಸ್ಟೇಟಸ್ ಅನ್ನು ಚೆಕ್ ಮಾಡಬಹುದು ಅಥವಾ ಲಾಗಿನ್ ಆಗದೆಯೂ ಸಹ ಸೇವಾ ಸಿಂಧು ವೆಬ್ಸೈಟ್ ಅನ್ನು ಓಪನ್ ಮಾಡಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿರುವ ಚೆಕ್ ಮಾಡಬಹುದಾಗಿದೆ.
ಸ್ಥಿತಿಯನ್ನು ಚೆಕ್ ಮಾಡಲು ಮೊದಲು ಸೇವಾ ಸಿಂಧು ಪೋರ್ಟಲ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://sevasindhuservices.Karnataka.gov.in ಈ ವೆಬ್ ಸೈಟ್ ಗೆ ಭೇಟಿ ನೀಡಿ ಅದರಲ್ಲಿ ಚೆಕ್ ಯುವರ್ ಅಪ್ಲಿಕೇಶನ್ ಸ್ಟೇಟಸ್ ಫಾರ್ ಆಧಾರ್ ಡಿಪಾರ್ಟ್ಮೆಂಟ್ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಅದರಲ್ಲಿ ನೀವು ಅಪ್ಲಿಕೇಶನ್ ರೆಫರೆನ್ಸ್ ನಂಬರ್ ಮತ್ತು ಅಪ್ಲಿಕೇಶನ್ ಹಾಕಿರುವ ದಿನಾಂಕವನ್ನು ಕೆಳಗೆ ನೀಡಲಾಗಿರುವ ವರ್ಡ್ ವೆರಿಫಿಕೇಶನ್ ಕೂಡ ಎಂಟರ್ ಮಾಡಬೇಕಾಗುತ್ತದೆ. ಅದಾದ ನಂತರ ನಿಮಗೆ ಸ್ಕ್ರೀನ್ ಮೇಲೆ ಅಪ್ಲಿಕೇಶನ್ ರೆಫರೆನ್ಸ್ ನಂಬರ್, ನೇಮ್ ಆಫ್ ದ ಸರ್ವಿಸ್, ಅಪ್ಲೈಡ್ ಬೈ ಅಪ್ಲಿಕೇಶನ್ ಡ್ಯೂ ಡೇಟ್, ಕನಸಿಗುತ್ತದೆ ಅದನ್ನು ನೀವು ಸ್ಕ್ರೋಲ್ ಮಾಡಿದರೆ ನಿಮಗೆ ಅಪ್ಲಿಕೇಶನ್ ಸಬ್ಮಿಟೆಡ್ ಎಂದು ತೋರಿಸಿದರೆ ನೀವು ಅರ್ಜಿ ಸಲ್ಲಿಸಿದ್ದೀರಾ ಎಂದು ಅರ್ಥ. ನಿಮಗೆ ಸ್ಟೇಟಸ್ ಕಂಪ್ಲೀಟ್ ಎಂದು ಇದ್ದರೆ ಅರ್ಜಿ ಸಲ್ಲಿಕೆಯಾಗಿದೆ ಎಂದು ಅರ್ಥ ಅದಾದ ನಂತರ ನೀವು ಟಾಸ್ಕ್ ನೇಮ್ ಪುಷ್ ಟಾಟಾ ಟು ಸೇವಾ ಸಿಂಧು ಡಾಟಾಬೇಸ್ ಇಂದು ಇರುತ್ತದೆ ಅದರ ಸ್ಟೇಟಸ್ ಕೂಡ ಡೆಲಿವರ್ಡ್ ಎಂದು ಇದ್ದರೆ ನಿಮ್ಮ ವಿವರವನ್ನು ಸೇವಾ ಸಿಂಧು ಡೇಟಾಗೆ ಕಳುಹಿಸಲಾಗಿದೆ ಎಂದು ಅರ್ಥ.
ಹೀಗೆ ಈ ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ನಂತರ ನೀವು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ್ದೀರಾ ಎಂದರ್ಥ.
ಹೀಗೆ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸವನ್ನು ಉತ್ತಮಗೊಳಿಸುವ ಹಾಗೂ ಉನ್ನತ ವಿದ್ಯಾಭ್ಯಾಸವನ್ನು ಮಾಡುವ ಕನಸನ್ನು ಹೊಂದಿರುವ ಮಕ್ಕಳಿಗೆ ಈ ವಿದ್ಯಾರ್ಥಿ ವೇತನವು ಹೆಚ್ಚು ಸಹಾಯಕವಾಗುತ್ತದೆ ಎಂದು ಹೇಳಬಹುದಾಗಿದೆ. ಹೀಗೆ ನಿಮ್ಮ ಸ್ನೇಹಿತರು ಯಾರಾದರೂ ಲೇಬರ್ ಕಾರ್ಡ್ ನಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ ಅವರಿಗೆ ಹಣ ಬಿಡುಗಡೆ ಆಗಿರುವುದರ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರು ಸಹ ಅರ್ಜಿ ಸಲ್ಲಿಸಿರುವುದರ ಸ್ಟೇಟಸ್ ಚೆಕ್ ಮಾಡಿಕೊಳ್ಳಿ ಧನ್ಯವಾದಗಳು.
ಇತರೆ ವಿಷಯಗಳು :
ATM ನಿಂದ ಹಣ ಪಡೆಯುವವರು ಹಾಗೂ ಪಡೆಯದೇ ಇರುವವರು ನೋಡಿ
ಈ ಜಿಲ್ಲೆಗಳ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 3 ತಿಂಗಳ ಹಣ ಒಟ್ಟಿಗೆ 6000 ರೂ ಜಮಾ!