ನಮಸ್ಕಾರ ಸ್ನೇಹಿತರೆ, ಮುಂಗಾರುಮಳೆ ಕರ್ನಾಟಕದಲ್ಲಿ ಕೈಕೊಟ್ಟ ಪರಿಣಾಮ ರಾಜ್ಯದಲ್ಲಿ ಬರ ಪರಿಸ್ಥಿತಿ ಆವರಿಸಿದೆ. ವಿವಿಧ ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಬರದಿಂದಾಗಿ ಬೆಳಗಿನಷ್ಟವಾದ ರೈತರಿಗೆ ಪರಿಹಾರವನ್ನು ಸರ್ಕಾರ ನೀಡಿದ್ದು ಈ ಪರಿಹಾರವನ್ನು ಪಡೆಯಲು ರೈತರು ಹರಸಾಹಸ ಪಡುತ್ತಿದ್ದಾರೆ. ಹೀಗಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಮಹತ್ವದ ಹೆಜ್ಜೆಯನ್ನು ರಾಜ್ಯ ಸರ್ಕಾರ ಇಟ್ಟಿದ್ದು ಕೆಲವೊಂದು ಮಾಹಿತಿಯನ್ನು ರೈತರಿಗೆ ನೀಡಿದೆ. ಹಾಗಾದರೆ ರಾಜ್ಯ ಸರ್ಕಾರದ ಆ ಮಹತ್ವದ ಹೆಜ್ಜೆ ಯಾವುದು ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

ರೈತರಿಗಾಗಿ ಮಹತ್ವದ ನಿರ್ಧಾರ :
ಎಲ್ಲ ಇಲಾಖೆಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ರೈತರಿಗಾಗಿ ಜಾರಿಯಲ್ಲಿರುವ ಯೋಜನೆಗಳ ಸೌಲಭ್ಯವನ್ನು ಪಡೆಯಬೇಕಾದರೆ ಎಲ್ಲ ರೈತರು ಕಡ್ಡಾಯವಾಗಿ ಎಫ್ ಐ ಡಿ ಹೊಂದಿರಲೇಬೇಕು. ಹಾಗಾಗಿ ಈ ಎಫ್ ಐ ಡಿ ಯನ್ನು ಕೃಷಿ ಇಲಾಖೆಯಿಂದ ಮಾಡಿಸಿಕೊಳ್ಳಬೇಕಾಗುತ್ತದೆ. ಬರ ಪರಿಹಾರ ಬೆಳೆವಿಮೆ ವಿವಿಧ ಯೋಜನೆಯ ಅಡಿಯಲ್ಲಿ ಬರುವ ಯಂತ್ರೋಪಕರಣಗಳ ಸಹಾಯಧನ ಹೀಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನೇಕ ಯೋಜನೆಗಳ ಸೌಲಭ್ಯವನ್ನು ರೈತರು ಪಡೆಯಬೇಕಾದರೆ ಈ ನಂಬರ್ ಅತಿ ಅವಶ್ಯಕವಾಗಿದೆ. ರೈತರು ಬರ ಪರಿಹಾರದ ಹಣವನ್ನು ಪಡೆದುಕೊಳ್ಳಬೇಕಾದರೆ fid ಸಂಖ್ಯೆಯನ್ನು ಹೊಂದಿರಬೇಕಾಗಿರುತ್ತದೆ. ಈ ಸಂಖ್ಯೆ ಇಲ್ಲದಿದ್ದರೆ ನಿಮ್ಮ ಖಾತೆಗೆ ಸರ್ಕಾರ ಹಣ ನೀಡುವುದಿಲ್ಲ. ಈ ವ್ಯವಸ್ಥೆ ಮಾಡಿರುವ ಮುಖ್ಯ ಕಾರಣ ಏನೆಂದರೆ ಯಾವುದೇ ಮಧ್ಯವರ್ತಿಗಳಿಗೆ ಇದರಲ್ಲಿ ಅವಕಾಶ ನೀಡಬಾರದು ಎನ್ನುವ ಉದ್ದೇಶದಿಂದ. ಹಾಗಾಗಿ ಇದುವರೆಗೂ ಎಫ್ ಐಡಿ ಮಾಡಿಸದೆ ಇದ್ದರೆ ಈ ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವ ಕೇಂದ್ರಕ್ಕೆ ರೈತರು ಭೇಟಿ ನೀಡಿn ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡುವುದರ ಮೂಲಕ ಅಗತ್ಯ ದಾಖಲೆಗಳನ್ನು ನೀಡಿಸುವುದು ಉತ್ತಮವಾಗಿದೆ.
15 ದಿನಗಳ ಕಾಲಾವಕಾಶ :
ಈ ಬಾರಿ ಕರ್ನಾಟಕದ ಇತಿಹಾಸದಲ್ಲಿ ಅತಿ ಭೀಕರ ಬರಗಾಲಕ್ಕೆ ರಾಜ್ಯ ತುತ್ತಾಗಿರುವುದನ್ನು ನೋಡಬಹುದು.ಹೀಗಾಗಿ ರಾಜ್ಯ ಸರ್ಕಾರವು 236 ತಾಲ್ಲೂಕುಗಳಲ್ಲಿ 223 ತಾಲೂಕುಗಳನ್ನು ಸಂಪೂರ್ಣ ಬರ ಪೀಡಿತ ಎಂದು ಘೋಷಿಸಿದೆ. ಇನ್ನು ಬಾಕಿ ಉಳಿದಿರುವ 13 ತಾಲೂಕುಗಳು ಮಾತ್ರ ಬರ ಪೀಡಿತ ಪಟ್ಟಿಯಿಂದ ಹೊರಗಿವೆ. ರಾಜ್ಯ ಸರ್ಕಾರವು ಸಹ ಈಗಾಗಲೇ ಈ 324 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು ಇದು ಈಗ ಬರ ಪರಿಹಾರವನ್ನು ರೈತರು ಪಡೆಯಬೇಕೆಂದರೆ ರಾಜ್ಯದ ಫ್ರೂಟ್ಸ್ ಪೋರ್ಟಲ್ ನಲ್ಲಿ ಕೆಲವು ಮಾಹಿತಿಯನ್ನು 15 ದಿನಗಳ ಒಳಗಾಗಿ ಭರ್ತಿ ಮಾಡಬೇಕಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಫ್ರೂಟ್ ಐಡಿಯಲ್ಲಿ ದಾಖಲಾಗಿರುವ ಜಮೀನಿನ ಮಾಹಿತಿ ಆಧಾರದ ಮೇಲೆ ಬರ ಪರಿಹಾರದ ಹಣವನ್ನು ಪಾವತಿ ಮಾಡಲಾಗುತ್ತದೆ ಎಂದು ಹೇಳಿದರು.
ಬರ ಪರಿಹಾರಕ್ಕೆ ಚಾಲನೆ :
ಮುಂದಿನ 15 ದಿನಗಳ ಒಳಗೆ ರೈತರು ತಮ್ಮ ಜಮೀನಿನ ನಿಖರ ಮಾಹಿತಿಯನ್ನು ಫ್ರೂಟ್ಸ್ ದತ್ತಾಂಶದಲ್ಲಿ ಭರ್ತಿ ಮಾಡಬೇಕು. ಇದರಿಂದ ಅಕ್ರಮಗಳು ತಪ್ಪುತ್ತದೆ ಹಾಗೂ ಪರಿಹಾರದ ಹಣವು ನೈಜ ಫಲಾನುಭವಿಗಳಿಗೆ ಬಿಡುಗಡೆಯಾಗುತ್ತದೆ ಎಂದು ಭೇಟಿ ನೀಡಿದರು. ಇನ್ನು ಒಂದು ತಿಂಗಳ ಒಳಗಾಗಿ ರೈತರಿದ್ದನ್ನೆಲ್ಲ ಸರಿಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದಾರೆ ಹೀಗಾಗಿ ರಾಜ್ಯದಿಂದ ಪರಿಹಾರ ನೀಡುವ ಕಾರ್ಯಕ್ಕೆ ಕೆಲವೇ ದಿನಗಳಲ್ಲಿ ಚಾಲನೆ ಸಿಗುತ್ತದೆ ಆದರೆ ಬರ ಪರಿಹಾರ ರೈತರಿಗೆ ಸಿಗಬೇಕು ಎಂದಿದ್ದಾರೆ ಮೊದಲು ಅಗತ್ಯ ದಾಖಲೆಗಳನ್ನು ಫ್ರೂಟ್ಸ್ ದತ್ತಾಂಶದಲ್ಲಿ ಸಲ್ಲಿಸಬೇಕು ಎಂದು ಹೇಳಲಾಗಿದೆ.
ಕೃಷಿ ಇಲಾಖೆಗೆ ಆದೇಶ :
ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳು ಮತ್ತು ಕೃಷಿಗೆ ಪೂರಕವಾದ ಇಲಾಖೆಗಳ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ರೈತರ ಫ್ರೂಟ್ ಸೈಡ್ ಸೃಷ್ಟಿಸಲು ಅಧೀನ ಕಚೇರಿಗಳಲ್ಲಿ ಕ್ರಮವನ್ನು ಕೈಗೊಳ್ಳಲಾಗಿದೆ. ದೇಶದಲ್ಲಿರುವ ಎಲ್ಲ ರೈತರು ಇದರ ಸದುಪಯೋಗ ಪಡೆಯಬೇಕೆಂದು ಕರೆ ನೀಡಲಾಗಿದ್ದು ಬರಬೇಡಿ ತಾಲೂಕುಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು ಬರ ಪ್ರದೇಶದಲ್ಲಿ ಬೆಳೆ ನಷ್ಟವಾಗಿರುವಂತಹ ರೈತರಿಗಾಗಿ ಪರಿಹಾರದ ಧನವನ್ನು ಪಡೆಯಲು ಈ ಎಫ್ ಐ ಡಿ ಗುರುತಿನ ಸಂಖ್ಯೆ ಅನುಕೂಲವಾಗುವಂತೆ ತಾವು ಹೊಂದಿರುವ ಎಲ್ಲ ಜಮೀನುಗಳ ವಿವರವನ್ನು ರೈತರು ಸೇರಿಸಬೇಕು. ಸರ್ಕಾರದ ಪರಿಹಾರ ಸೌಲಭ್ಯ ಎಫ್ ಐ ಡಿ ಯಲ್ಲಿ ದಾಖಲಿಸಿದ ಜಮೀನಿನ ವಿಸ್ತೀರ್ಣಗಳಿಗೆ ದೊರೆಯುವುದರಿಂದ ತಾವು ಹೊಂದಿರುವ ಎಲ್ಲ ಜಮೀನಿನ ಸರ್ವೆ ನಂಬರ್ ವಿಸ್ತೀರ್ಣಗಳನ್ನು ರೈತರು ಕೂಡಲೇ ಫ್ರೂಟ್ ದತ್ತಾಂಶದಲ್ಲಿ ದಾಖಲಿಸಿಕೊಳ್ಳಬೇಕೆಂದು ಮನವಿ ಮಾಡಲಾಗಿದೆ. ರೈತರ ಫ್ರೂಟ್ಸ್ ಐಡಿಯಲ್ಲಿ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ರೈತರ ಜಮೀನು ಆಧಾರ್ ನಂಬರ್ ಬ್ಯಾಂಕ್ ಅಕೌಂಟ್ ಸೇರಿದಂತೆ ಎಲ್ಲಾ ವಿವರಗಳನ್ನು ನೋಡಬಹುದಾಗಿದೆ.
ಡಿಬಿಟಿ ಮೂಲಕ ಹಣ ವರ್ಗಾವಣೆ :
ಬರ ಪರಿಹಾರದ ಹಣವು ಸರ್ಕಾರದಿಂದ ಬಿಡುಗಡೆಯಾದರೆ ರೈತರ ಖಾತೆಗೆ ಡಿಪಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತದೆ. ಹಾಗಾಗಿ ರೈತರು ಈ ಕೂಡಲೇ ಎಫ್ ಐಡಿಯನ್ನು ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ಈ ಎಫ್ ಐ ಡಿ ಇಂದ ಬರ ಪರಿಹಾರದ ಹಣ ಮಾತ್ರವಲ್ಲದೆ ರೈತರು ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡಲು ಹಾಗೂ ಸರ್ಕಾರದ ಯಾವುದೇ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಬ್ಯಾಂಕ್ ಸಾಲ ಪಡೆಯಲು ಈ ಎಫ್ ಐ ಡಿ ಅಗತ್ಯವಾಗಿದೆ.
ಹೀಗೆ ಸರ್ಕಾರವು ರೈತರಿಗೆ fid ಸಂಖ್ಯೆಯನ್ನು ಮಾಡಿಸಿಕೊಳ್ಳಲು ತಿಳಿಸಿದ್ದು ಈ ಕೂಡಲೇ ರೈತರು ಈ ಸಂಖ್ಯೆಯನ್ನು ಮಾಡಿಸಿಕೊಳ್ಳುವುದರ ಮೂಲಕ ಸರ್ಕಾರದಿಂದ ಜಾರಿಯಾಗುವ ಯೋಜನೆಗಳ ಸಂಪೂರ್ಣ ಪ್ರಯೋಜನ ಸುಲಭವಾಗಿ ರೈತರು ಪಡೆಯಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮೆಲ್ಲ ರೈತ ಸ್ನೇಹಿತರಿಗೆ ಶೇರ್ ಮಾಡುವ ಮೂಲಕ ಆ ರೈತರು ಎಫ್ ಐ ಡಿ ಸಂಖ್ಯೆಯನ್ನು ಮಾಡಿಸಿದ ಇದ್ದರೆ ಈ ಕೂಡಲೇ ಮಾಡಿಸಲು ಅವಕಾಶ ಮಾಡಿಕೊಡಿ ಧನ್ಯವಾದಗಳು.
ಇತರೆ ವಿಷಯಗಳು :
ಆಧಾರ್ ಕಾರ್ಡ್ ಫೋಟೋ ಅಪ್ಡೇಟ್ ಮಾಡುವುದು ತುಂಬಾ ಸರಳ; ಇಲ್ಲಿದೆ ಸಂಪೂರ್ಣ ಮಾಹಿತಿ
ಸರ್ಕಾರದಿಂದ ಮಹತ್ವದ ಸೂಚನೆ; ರೇಷನ್ ಕಾರ್ಡ್ ಗೆ ಹೊಸ ನಿಯಮ, ಈ 4 ಸಂದರ್ಭಗಳಲ್ಲಿ ಮಾತ್ರ