rtgh

news

ಬ್ಯಾಂಕು ಬಂದ್ : ಡಿಸೆಂಬರ್ 4 ರಿಂದ 11ರ ತನಕ ಕಾರಣ ಏನು .?

Join WhatsApp Group Join Telegram Group
Indian Bank Strike December 4th to 11th

ನಮಸ್ಕಾರ ಸ್ನೇಹಿತರೆ, ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳು ದೇಶದಲ್ಲಿ ಸಾಕಷ್ಟು ಗ್ರಾಹಕರಿಗೆ ಸೇವೆಯನ್ನು ನೀಡುತ್ತಿದ್ದು ಬ್ಯಾಂಕ್ನ ಸೌಲಭ್ಯವನ್ನು ಗ್ರಾಹಕರು ಪಡೆಯುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಆರ್ ಬಿ ಐ ಬ್ಯಾಂಕುಗಳಿಗೆ ಇನ್ನು ಇತ್ತೀಚಿಗಂತೂ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ಪರಿಚಯಿಸಿದ್ದ ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.

Indian Bank Strike December 4th to 11th
Indian Bank Strike December 4th to 11th

ಬ್ಯಾಂಕ್ ನೌಕರರ ಮುಷ್ಕರ :

ಬ್ಯಾಂಕ್ ನೌಕರರ ಮುಷ್ಕರದ ಬಗ್ಗೆ ಸದ್ಯ ದೇಶದಲ್ಲಿ ಹಲವಾರು ಸುದ್ದಿಗಳು ವೈರಲಾಗುತ್ತಿದೆ. ಬ್ಯಾಂಕ್ ನೌಕರರು ಮುಷ್ಕರ ಮಾಡಲು ಮುಂದಿನ ತಿಂಗಳು ಸಂಪೂರ್ಣ ತಯಾರಿ ಮಾಡಿಕೊಂಡಿದ್ದಾರೆ ಗ್ರಾಹಕರು ಡಿಸೆಂಬರ್ ನಲ್ಲಿ ಹೆಚ್ಚಿನ ದಿನಗಳು ಬ್ಯಾಂಕ್ ಸೇವೆಯಿಂದ ವಂಚಿತರಾಗಬೇಕಾಗುತ್ತದೆ. ಬ್ಯಾಂಕ್ ನೌಕರರ ಮುಷ್ಕರದಿಂದಾಗಿ ಬ್ಯಾಂಕನ್ನು ಯಾವ ಯಾವ ದಿನ ಬಂದ್ ಮಾಡಲಾಗುತ್ತಿದೆ ಎನ್ನುವುದರ ಬಗ್ಗೆ ನೋಡುವುದಾದರೆ,

ದೇಶದಾದ್ಯಂತ ಬ್ಯಾಂಕುಗಳು ಬಂದ್ :

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತಿ ದೊಡ್ಡ ಉದ್ಯೋಗಿ ಸಂಘವಾದ ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯಿ ಅಸೋಸಿಯೇಷನ್ ಅಂದರೆ ಇದೀಗ ಈ ಸಂಸ್ಥೆಯು ದೇಶದಾದ್ಯಂತ ಮುಷ್ಕರ ಹೂಡಲು ಮುಂದಾಗಿದೆ. ಬ್ಯಾಂಕುಗಳಲ್ಲಿ ಕೆಲಸದ ಒತ್ತಡ ಹೆಚ್ಚಿದ್ದು ಸಿಬ್ಬಂದಿಗಳು ಇಲ್ಲದ ಕಾರಣ ಕೆಲಸವು ಹೆಚ್ಚುಹೊರೆಯಾಗುತ್ತಿದೆ. ಈ ಕಾರಣದಿಂದಾಗಿ ಬ್ಯಾಂಕುಗಳಿಗೆ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಬೇಕೆಂಬ ಉದ್ದೇಶದಿಂದ ಬ್ಯಾಂಕ್ ನೌಕರರು ಮುಷ್ಕರ ನಡೆಸಲು ಮುಂದಾಗಿದ್ದಾರೆ. ಕಾಯಂ ಉದ್ಯೋಗಗಳ ಹೊರಗುತ್ತಿಗೆ ತಡೆಯುವುದನ್ನು ಬ್ಯಾಂಕಿಂಗ್ ವಲಯದಲ್ಲಿ ಇದು ಒಳಗೊಂಡಿದ್ದು ಇದರ ಜೊತೆಗೆ ಎಲ್ಲಾ ಬ್ಯಾಂಕುಗಳಲ್ಲಿ ಪ್ರಶಸ್ತಿ ಸಿಬ್ಬಂದಿಯ ಸಮರ್ಪಕ ನೇಮಕಾತಿಯನ್ನು ಖಚಿತಪಡಿಸುವುದಾಗಿದೆ.

ಕೆಲವು ಬ್ಯಾಂಕುಗಳು ಉದ್ಯೋಗಗಳನ್ನು ಹೊರಗುತ್ತಿಗೆ ನೀಡುವುದರಿಂದ ಗ್ರಾಹಕರ ಖಾಸಗಿತನ ಮತ್ತು ಅವರ ಹಣವನ್ನು ಅಪಾಯಕ್ಕೆ ಸಿಲುಕಿಸುವುದರ ಜೊತೆಗೆ ತಳಮಟ್ಟದಲ್ಲಿ ನೇಮಕಾತಿಯನ್ನು ಕಡಿಮೆ ಮಾಡುತ್ತಿದೆ ಎಂಬುದರ ಬಗ್ಗೆ ಎಐಬಿಇಎ ಪ್ರಧಾನ ಕಾರ್ಯದರ್ಶಿಯಾದ ವೆಂಕಟಚಲಂ ಅವರು ಹೇಳಿದ್ದಾರೆ. ಕೈಗಾರಿಕಾ ವಿವಾದಗಳ ಕಾಯ್ದೆಯನ್ನು ಕೆಲವು ಬ್ಯಾಂಕುಗಳು ಉಲ್ಲಂಘಿಸುತ್ತಿವೆ ಎಂಬ ಆರೋಪವು ಸಹ ಮಾಡಿದ್ದಾರೆ ಹೀಗಾಗಿ ಬ್ಯಾಂಕ್ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ.

ಇದನ್ನು ಓದಿ : ಪಾನ್ ಕಾರ್ಡ್ ಅನ್ನು ಮೊಬೈಲ್ ನಿಂದಲೇ HD ಡೌನ್ಲೋಡ್ ಮಾಡಬಹುದು. ಕೆಲವೇ ನಿಮಿಷದಲ್ಲಿ

ಡಿಸೆಂಬರ್ 4 ರಿಂದ 11 ರವರೆಗೆ ಬಂದ್ :

  • ದೇಶದಾದ್ಯಂತ ಎಲ್ಲಾ ಬ್ಯಾಂಕುಗಳು ಬಂದ್ ಗೆ ಕರೆ ನೀಡಿದ್ದು ಡಿಸೆಂಬರ್ 4 ರಿಂದ 11 ರವರೆಗೆ ಎಲ್ಲಾ ಬ್ಯಾಂಕುಗಳು ಬಂದ್ ಆಗಲಿವೆ.
  • ಡಿಸೆಂಬರ್ 4ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗಳು ಮುಷ್ಕರವನ್ನು ಮಾಡುತ್ತವೆ.
  • ಡಿಸೆಂಬರ್ 5ರಂದು ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮತ್ತು ಬ್ಯಾಂಕ್ ಆಫ್ ಬರೋಡದಲ್ಲಿ ಮುಷ್ಕರ ಹೂಡಲಾಗುತ್ತಿದೆ.
  • ಕೆನರಾ ಬ್ಯಾಂಕ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಡಿಸೆಂಬರ್ 6ರಂದು ಮುಷ್ಕರ ಆಗಲಿದೆ.
  • ಇಂಡಿಯನ್ ಬ್ಯಾಂಕ್ ಮತ್ತು ಯುಕೋ ಬ್ಯಾಂಕ್ ಗಳಲ್ಲಿ ಡಿಸೆಂಬರ್ 7ರಂದು ಮುಷ್ಕರ ಆಗಲಿದೆ.
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಡಿಸೆಂಬರ್ 8 ಮುಷ್ಕರ ನಡೆಯಲಿದೆ.
  • ಡಿಸೆಂಬರ್ 11ರಂದು ಖಾಸಗಿ ಬ್ಯಾಂಕುಗಳು ಸಹ ಮುಷ್ಕರದಲ್ಲಿ ಪಾಲ್ಗೊಳ್ಳಲಿದೆ ಎಂಬ ಮಾಹಿತಿಯು ತಿಳಿದು ಬರುತ್ತಿದೆ.

ಹೀಗೆ ಸಾಕಷ್ಟು ಕಾರಣದಿಂದಾಗಿ ಬ್ಯಾಂಕುಗಳು ಬಂದ್ ಆಗಲಿದ್ದು ಬ್ಯಾಂಕುಗಳ ಸಿಬ್ಬಂದಿಗಳು ಈ ಮುಷ್ಕರಕ್ಕೆ ಮುಂದಾಗಿವೆ. ಹಾಗಾಗಿ ನಿಮ್ಮ ಕೆಲಸ ಏನಾದರೂ ಬ್ಯಾಂಕಿನಲ್ಲಿ ಇದ್ದರೆ ಡಿಸೆಂಬರ್ 4ರ ಒಳಗಾಗಿಯೇ ತಕ್ಷಣ ಮುಗಿಸಿಕೊಳ್ಳಿ ಇಲ್ಲದಿದ್ದರೆ ಡಿಸೆಂಬರ್ 4ರಿಂದ 11ರ ವರೆಗೆ ಬ್ಯಾಂಕುಗಳ ಎಲ್ಲಾ ಕೆಲಸಗಳು ಮುಗಿಯಲಿವೆ.

ಇತರೆ ವಿಷಯಗಳು ;

ಇಂದು ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯ : ನಿಮ್ಮ ಪ್ರಕಾರ ಯಾರು ಗೆಲ್ಲುತಾರೆ?

ಸಾಲ ಕಟ್ಟಲು ಕಷ್ಟ ಪಡುತ್ತಿರುಗೆ ಸಿಹಿಸುದ್ದಿ; RBI ಹೊಸ ನಿಯಮ ತಿಳಿದುಕೊಳ್ಳಿ

Treading

Load More...