rtgh

news

ಕೃಷಿಭಾಗ್ಯ ಯೋಜನೆ ಮತ್ತೆ ಪ್ರಾರಂಭ : ಅನೇಕ ಅನುಕೂಲಗಳು ರೈತರಿಗೆ

Join WhatsApp Group Join Telegram Group
Krishibhagya Yojana has started again

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ರಾಜ್ಯ ಸರ್ಕಾರವು ಕೃಷಿ ಭಾಗ್ಯ ಯೋಜನೆಯನ್ನು ಮತ್ತೆ ಪುನರಾರಂಭಿಸುವ ಕಾರ್ಯವನ್ನು ಮಾಡುತ್ತಿರುವುದರ ಬಗ್ಗೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್ ಕೆ ಪಾಟೀಲ್ ರವರು ಕೃಷಿಭಾಗ್ಯ ಯೋಜನೆಯನ್ನು ಮತ್ತೆ ಪ್ರಾರಂಭಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದು ಇದು ಕೃಷಿ ಕ್ಷೇತ್ರಕ್ಕೆ ಒಳ್ಳೆಯ ಸುದ್ದಿ ಆಗಿದೆ ಎಂದು ಹೇಳುವುದರ ಮೂಲಕ ಕೃಷಿ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಭರವಸೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.

Krishibhagya Yojana has started again
Krishibhagya Yojana has started again

ಕೃಷಿಭಾಗ್ಯ ಯೋಜನೆ ಪ್ರಾರಂಭ :

ಸರ್ಕಾರವು ಮತ್ತೆ ಕೃಷಿ ಭಾಗ್ಯವನ್ನು ಪ್ರಾರಂಭಿಸಿದ್ದು ಈ ಯೋಜನೆಯು ಎಲ್ಲೆಲ್ಲಿ ಆರಂಭವಾಗುತ್ತಿದೆ ಎಂಬುದನ್ನು ನೋಡುವುದಾದರೆ, 24 ಜಿಲ್ಲೆಗಳ 106 ತಾಲೂಕುಗಳಲ್ಲಿ 2023 24 ರಲ್ಲಿ ಕೃಷಿ ಭಾಗ್ಯ ಯೋಜನೆಯ ಪ್ರಾರಂಭವಾಗಲಿದ್ದು ಮಳೆಯಧಾರಿತ ಕೃಷಿಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರುವಂತಹ ಗುರಿಯನ್ನು ಈ ಯೋಜನೆ ಹೊಂದಿದೆ. ಕೃಷಿ ಭಾಗ್ಯ ಯೋಜನೆಯ ಮುಖ್ಯ ಉದ್ದೇಶ ಕೃಷಿ ಆದಾಯವನ್ನು ಹೆಚ್ಚಿಸುವುದಾಗಿದೆ. ರೈತರಿಗೆ ಮಳೆ ನೀರು ಬಳಕೆಯನ್ನು ಹೆಚ್ಚಿಸಲು ಮತ್ತು ಮಳೆ ಕೊರತೆ ಇದ್ದಾಗ ರಕ್ಷಣೆಯನ್ನು ನೀಡಲು ಈ ಯೋಜನೆಯು ಸಹಾಯವಾಗುತ್ತದೆ.

ಯೋಜನೆಯ ಮೊತ್ತ :

ಪ್ರಸಕ್ತ ಸಾಲಿಗೆ ಇನ್ನೂರು ಕೋಟಿಗಳ ಬಜೆಟ್ ಅನ್ನು ಕೃಷಿಭಾಗ್ಯ ಯೋಜನೆಗೆ ನಿಗದಿಪಡಿಸಲಾಗಿದ್ದು ಈಗಾಗಲೇ 100 ಕೋಟಿಗಳನ್ನು ಪೂರಕ ಅಂದಾಜುಗಳಲ್ಲಿ ಒದಗಿಸಲಾಗಿದೆ. ಮಳೆಯ ಶತ ಜಿಲ್ಲೆಗಳನ್ನು ವಿಶೇಷವಾಗಿ ಮೊದಲು ಈ ಯೋಜನೆಯು ಸಹಾಯ ನೀಡುತ್ತದೆ.

ಯೋಜನೆಯ ಪ್ರಯೋಜನಗಳು :

ಕೃಷಿಭಾಗ್ಯ ಯೋಜನೆಯ ಅಡಿಯಲ್ಲಿ ಹಲವಾರು ಸಬ್ಸಿಡಿಗಳನ್ನು ರೈತರಿಗೆ ನೀಡಲಾಗುತ್ತದೆ. ಖುಷಿ ಕೊಳ್ಳಗಳ ಸುತ್ತಲೂ ನೆರಳು ಪರದೆ ಘಟಕಗಳನ್ನು ಸ್ಥಾಪಿಸುವುದು ಪಂಪ್ಸೆಟ್ಗಳು ನೀರಾವರಿ ಘಟಕಗಳು ಮತ್ತು ಪಾಲಿಥಿನ್ ಕವರ್ ಗಳನ್ನು ಅಲ್ಲದೆ ಇನ್ನು ಕೆಲವೊಂದು ಯೋಜನೆಗಳನ್ನು ನೀಡಲಾಗುತ್ತಿದೆ. ತನ್ನ ಉದ್ದೇಶದ ಸಬ್ಸಿಡಿಗಳು ಮತ್ತು ಉತ್ತಮ ಯೋಜನೆದ ಘಟಕಗಳೊಂದಿಗೆ ಕೃಷಿಭಾಗ್ಯ ಯೋಜನೆಯು ಮಳೆಯ ಶ್ರೀತ ಪ್ರದೇಶಗಳ ಗಮನಾರ್ಹ ಬದಲಾವಣೆಗಳನ್ನು ಕೃಷಿ ಪದ್ಧತಿಗಳಲ್ಲಿ ತರಲು ಸಜ್ಜಾಗಿದೆ.

ಈ ಯೋಜನೆಯಲ್ಲಿ ಲಭ್ಯವಿರುವ ಸಬ್ಸಿಡಿಗಳು ಹಾಗೂ ಯೋಜನೆಯ ಪ್ರಮುಖ ಅಂಶಗಳು :

ಕೃಷಿ ಹೊಂಡಗಳ ನಿರ್ಮಾಣ :

ರೈತರಿಗೆ 100% ಸಬ್ಸಿಡಿಗೆ ಕೃಷಿಹೊಂಡಗಳನ್ನು ನಿರ್ಮಿಸಲು ಈ ಯೋಜನೆಯ ಮೂಲಕ ತಿಳಿಸಲಾಗಿದೆ. ನೀರಿನ ಸಂರಕ್ಷಣೆ ಮತ್ತು ರಕ್ಷಣಾತ್ಮಕ ನೀರಾವರಿಯನ್ನು ಒದಗಿಸಲು ಈ ಉಪಕ್ರಮವು ನಿರ್ಣಾಯಕವಾಗಿದೆ. 80ಪರ್ಸೆಂಟ್ ಇಂದ 90 ಪರ್ಸೆಂಟ್ ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಹಾಯಧನವನ್ನು ಈ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ.

ಇದನ್ನು ಓದಿ : ಇಂತಹ ಗ್ರಾಹಕರಿಗೆ ಗ್ಯಾಸ್ ಸಬ್ಸಿಡಿ ಇನ್ನು ಮುಂದೆ ಹಣ ಬರುವುದಿಲ್ಲ : ಬೇಕು ಆದರೆ ಈ ಕೆಲಸ ಮಾಡಿ

ಪಾಲಿಥಿನ್ ರ್ಯಾಪರ್ :

ಈ ಯೋಜನೆಯ ಅಡಿಯಲ್ಲಿ ಪಾಲಿಥಿನ್ ರ್ಯಾಪರ್ಗಳನ್ನು 50,000ಗಳವರೆಗೆ ಖರೀದಿಸಲು ಸಬ್ಸಿಡಿಯನ್ನು ನೀಡಲಾಗುತ್ತಿದ್ದು ಇದರಲ್ಲಿ ನೀರು ಸೋರುವುದನ್ನು ತಡೆಗಟ್ಟಲು ಮತ್ತು ಪರಿಣಾಮಕಾರಿ ನೀರಿನ ಸಂಗ್ರಹವನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆಯನ್ನು ನೀಡಲಾಗುತ್ತಿದೆ.

ನೀರಾವರಿ ವ್ಯವಸ್ಥೆಗಳು :

ಈ ಯೋಜನೆಯ ಅಡಿಯಲ್ಲಿ ಸ್ಪ್ಲಿಂಕರ್ ಅಥವಾ ಹನಿ ನೀರಾವರಿ ಅಂತ ಲಘು ನೀರಾವರಿ ವ್ಯವಸ್ಥೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲಾಗುತ್ತಿದ್ದು ಈ ವ್ಯವಸ್ಥೆಗಳು ಬೆಳವಣಿಗೆ ನೀರನ್ನು ತಿರುಗಿಸಲು ನಿರ್ಣಾಯಕವಾದ ಎಲ್ಲಾ ವರ್ಗದ ರೈತರಿಗೆ 90 ಪರ್ಸೆಂಟ್ ಸಬ್ಸಿಡಿ ಯೊಂದಿಗೆ ಬರುತ್ತವೆ.

ಹೀಗೆ ಕೇಂದ್ರ ಸರ್ಕಾರವು ಕೃಷಿ ಭಾಗ್ಯ ಯೋಜನೆಯನ್ನು ಮತ್ತೆ ಪುನರಾರಂಭಿಸುವ ಮೂಲಕ ರೈತರಿಗೆ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದ್ದು ರೈತರು ಈ ಯೋಜನೆಗಳ ಪ್ರಯೋಜನವನ್ನು ಸಂಪೂರ್ಣವಾಗಿ ಪಡೆಯಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ರೈತರಾಗಿದ್ದರೆ ಅವರಿಗೆ ರಾಜ್ಯ ಸರ್ಕಾರವು ಕೃಷಿ ಭಾಗ್ಯ ಯೋಜನೆಯನ್ನು ಮತ್ತೆ ಪುನರಾರಂಭಿಸುತ್ತಿದೆ ಎಂಬುದರ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

20 ರೂಪಾಯಿನಿಂದ 2 ಲಕ್ಷ ಪಡೆಯಿರಿ: ಮೋದಿ ಸರ್ಕಾರದಿಂದ ಜನರಿಗೆ ಭರ್ಜರಿ ಕೊಡುಗೆ

ವ್ಯಾಪಾರಿಗಳಿಗೆ ಗೂಗಲ್ ಪೆ ಸಾಲ ನೀಡುತ್ತೆ , ಯಾವುದೇ ದಾಖಲೆ ಬೇಡ

Treading

Load More...