ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಮರುಭೂ ಸರ್ವೇ ಆದೇಶವನ್ನು ಹೊರಡಿಸಿರುವುದರ ಬಗ್ಗೆ. ರೈತನಿಗೆ ಈಗಾಗಲೇ ಸಾಕಷ್ಟು ಸಮಸ್ಯೆಗಳಿದ್ದು ಇದರ ಜೊತೆಗೆ ಜಮೀನಿನ ವಾಜ್ಯ ಕೂಡ ಸಹ ಒಂದಾಗಿದೆ. ರಾಜ್ಯದಾದ್ಯಷ್ಟೋ ರೈತರು ಸರ್ವೇ ನಂಬರ್ ಗಳ ವ್ಯತ್ಯಾಸವಾಗಿರುವುದರಿಂದಲೇ ತಮ್ಮ ಎಷ್ಟೇ ಕೆಲಸ ಕಾರ್ಯಗಳಿದ್ದರೂ ಸಹ ಅದನ್ನು ಬಿಟ್ಟು ಕಚೇರಿಗಳಿಗೆ ತಿರುಗುವಂತಹ ಪರಿಸ್ಥಿತಿ ಬಂದಿದೆ. ಹಾಗಾದರೆ ಇದೇನು ಸಮಸ್ಯೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡಬಹುದು.
ಮರುಭೂ ಸರ್ವೆಗೆ ಆದೇಶ :
ರೈತನು ತಮ್ಮ ಕೆಲಸಗಳನ್ನು ಬಿಟ್ಟು ಸರ್ವೆ ನಂಬರ್ ಗಳ ವ್ಯತ್ಯಾಸವಿರುವುದರಿಂದ ಕಚೇರಿಗಳಿಗೆ ತಿರುವಂಥ ಆಗಿರುವುದನ್ನು ಖಂಡಿತಾ ರಾಜ್ಯ ಸರ್ಕಾರವು ಇದೀಗ ಶಾಶ್ವತ ಪರಿಹಾರವನ್ನು ಕಲ್ಪಿಸಲು ಹೊಸ ಆದೇಶವನ್ನು ಹೊರಡಿಸಿದೆ. ಮರು ಸರ್ವೆ ಪರಿಹಾರವೆಂದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಭಾವಿಸಿದ್ದು ಈಗಾಗಲೇ ಈ ಪರಿಹಾರ ಮಾರ್ಗವನ್ನು ಕಂದಾಯ ಇಲಾಖೆಯು ಅನುಸರಿಸಿ ಕಾರ್ಯ ಪ್ರವೃತ್ತವಾಗಿದೆ. ಈ ಕಾರ್ಯಕ್ರಮದ ಪ್ರಾಯೋಗಿಕ ಪರೀಕ್ಷೆಗೆ ನವೆಂಬರ್ 15ರಂದು ಮಾನ್ಯ ಕಂದಾಯ ಸಚಿವರಾದ ಪ್ರಶ್ನೆ ಕೃಷ್ಣಬೈರೇಗೌಡ ಅವರು ಚಾಲನೆ ನೀಡಿ ಇದರ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಪ್ರಾಯೋಗಿಕ ಪರೀಕ್ಷೆಯನ್ನು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ವಿದ್ಯಾಂಬಳ್ಳಿ ಹೋಬಳಿಯಲ್ಲಿ ಆರಂಭಿಸಿ ಸುದ್ದಿಗೋಷ್ಠಿ ಜೊತೆ ಮಾತನಾಡಿದಂತಹ ಸಚಿವರು ಈ ನಿರ್ಧಾರವನ್ನು ಹಿಂದಿರುವ ಉದ್ದೇಶಗಳ ಕುರಿತು ರಾಜ್ಯದ ಜನತೆಗೆ ತಿಳಿಸಿದ್ದಾರೆ.
ಸರ್ವೇ ನಂಬರ್ ವ್ಯಾಜ್ಯ :
ರೈತರ ಪಾಲಿನ ಸಾಮಾನ್ಯ ಸಮಸ್ಯೆ ಎಂದರೆ ಅದು ಸರ್ವೇ ನಂಬರ್ ವ್ಯಾಜ್ಯ ಆಗಿದೆ. ಸರ್ಕಾರಿ ಕಚೇರಿ ಯನ್ನು ತಮ್ಮದಲ್ಲದ ತಪ್ಪಿಗೆ ಪ್ರತಿದಿನ ರೈತರು ಅಳಿಯುವಂತಾಗಿದೆ ಇಂತಹ ಈ ರೈತರ ಪರಿಸ್ಥಿತಿಗೆ ಸರ್ವೆ ಇಲಾಖೆಯಲ್ಲಿನ ಸಮಸ್ಯೆ ಕಾರಣ ಎಂದು ಮರುಗಿದ ಸಚಿವರು ಬ್ರಿಟಿಷರ ಕಾಲದಲ್ಲಿ 1925 ರಲ್ಲಿ ನಡೆದ ನೂರು ವರ್ಷಗಳ ಹಿಂದಿನ ಆಧಾರವಾಗಿಟ್ಟುಕೊಂಡು ವ್ಯವಹಾರವನ್ನು ನಾವು ಈಗಲೂ ನಡೆಸುತ್ತಿದ್ದೇವೆ ಹಾಗಾಗಿ ರೈತರು ಇಂತಹ ಸಮಸ್ಯೆಯನ್ನು ಎದುರಿಸಬೇಕಾಗಿದೆ ಎಂದು ಹೇಳಿದರು. ಇದರಿಂದಾಗಿ ರೈತರಲ್ಲಿ ಸಾಕಷ್ಟು ಗೊಂದ ಸೃಷ್ಟಿಯಾಗಿದ್ದು ಇದೆಲ್ಲದರ ಪರಿಹಾರ ಎಂದು ಚಿಂತನೆ ಮಾಡಿ ಪ್ರಾಯೋಗಿಕವಾಗಿ ಮರು ಸರ್ವೆಗೆ ಸರ್ಕಾರವು ಚಾಲನೆ ನೀಡಲಾಗಿದೆ ಎಂದು ತಿಳಿಸಿದ್ದು ಈ ಕಾರ್ಯವೇ ಯಶಸ್ವಿಯಾದರೆ ಇದೇ ಮಾದರಿಯಲ್ಲಿ ಸರ್ವೆಯನ್ನು ರಾಜ್ಯಾದ್ಯಂತ ಎಲ್ಲ ಕೃಷಿ ಮತ್ತು ಅರಣ್ಯ ಭೂಮಿಯನ್ನು ಮಾಡಲಾಗುವುದು ಎಂದು ತಿಳಿಸಿದರು.
ಜನವಸತಿ ಪ್ರದೇಶಗಳಾಗಿ ಪರಿವರ್ತನೆ :
ಪ್ರತಿ ಹಳ್ಳಿಯ ಇಡುವಳಿ ಭೂಮಿ ಗೋಮಾಳ ಗುಲ್ಬನ್ನಿ ಸರ್ಕಾರಿ ಇನಾಮು ಮತ್ತು ಕೆರೆ ಭೂಮಿಗಳಿಗೆ ಸಂಬಂಧಿಸಿದಂತೆ ಸರ್ಕಾರದ ಬಳಿ ನೂರು ವರ್ಷಗಳ ಹಳೆಯ ದಾಖಲೆಗಳು ಇವೆ. ಆದರೆ ಅದೆಷ್ಟೋ ಕೃಷಿ ಹಾಗೂ ಜನವಸತಿರಹಿತ ಪ್ರದೇಶಗಳು ಈ ನೂರು ವರ್ಷದಲ್ಲಿ ಇಂತಹ ಪ್ರದೇಶಗಳು ಕೃಷಿ ಮತ್ತು ಜನವಸತಿ ಪ್ರದೇಶಗಳಾಗಿ ಪರಿವರ್ತನೆಗೊಂಡಿವೆ.
ಸರ್ಕಾರಿ ದಾಖಲೆಗಳಲ್ಲಿ ಪ್ರತಿಯೊಂದು ಗ್ರಾಮ ಠಾಣಾ ಹಾಗೂ ಸರ್ವೇ ನಂಬರ್ ಗಡಿಯಲ್ಲೂ ಬಹಳಷ್ಟು ವ್ಯತ್ಯಾಸಗಳಿರುವುದರಿಂದ ನಿಖರವಾದ ವಿವರಣೆಯು ಇರುವುದಿಲ್ಲ ಹಾಗಾಗಿ ಸರ್ಕಾರವು ಇದನ್ನು ಭೂ ಮರು ಸರ್ವೇ ಕಾರ್ಯ ನಡೆಸಿದರೆ ಇಂತಹ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ತಿಳಿಸಿದರು. ಇದು ಮಾತ್ರವಲ್ಲದೆ ಸರ್ಕಾರಿ ಭೋವತ್ತುವರಿ ಜಮೀನು ಯಾವುದು? ಹಾಗೂ ಅರಣ್ಯ ಪ್ರದೇಶದ ಗಡಿಯ ಬಗ್ಗೆಯೂ ಸಹ ಸಾಕಷ್ಟು ಗೊಂದಲಗಳು ಇರುವುದರಿಂದ ಹೊಸ ರೀತಿಯ ತಾಂತ್ರಿಕ ಭೂಮರು ಸರ್ವೆಗೆ ಚಾಲನೆಯನ್ನು ನೀಡಿದೆ. ಭೂ ರಿ ಸರ್ವೆಯನ್ನು ಡ್ರೋನ್ ತಂತ್ರಜ್ಞಾನದ ಮೂಲಕ ನಡೆಸಲಾಗುತ್ತದೆ.
ಇದನ್ನು ಓದಿ : ಸಾಲ ಕಟ್ಟಲು ಕಷ್ಟ ಪಡುತ್ತಿರುಗೆ ಸಿಹಿಸುದ್ದಿ; RBI ಹೊಸ ನಿಯಮ ತಿಳಿದುಕೊಳ್ಳಿ
ಡ್ರೋನ್ ತಂತ್ರಜ್ಞಾನ ಅಳವಡಿಕೆ :
ಪ್ರತಿ ಚದರ ಕಿಲೋ ಮೀಟರ್ ಗೆ 4000ಕ್ಕೂ ಅಧಿಕೋ ಫೋಟೋವನ್ನು ಡ್ರೋನ್ ತೆಗೆಯುವುದರ ಮೂಲಕ ಆ ಫೋಟೋಗಳ ಆಧಾರದಲ್ಲಿ ಇಡುವಳಿಭೂಮಿ, ಗೋಮಾಳ ಸರ್ಕಾರಿ ಖರಾಬು ಇನಾಮು ಮತ್ತು ಕೆರೆ ಭೂಮಿಗಳನ್ನು ಹೀಗೆ ವೈಜ್ಞಾನಿಕವಾಗಿ ಗುರುತಿಸುತ್ತದೆ. ಈ ಮೂಲಕ ರೈತರ ಸರ್ವೆ ವ್ಯಾಜ್ಯಗಳ ಶಾಶ್ವತ ಪರಿಹಾರ ಸಿಕ್ಕಿದಂತಾಗುತ್ತದೆ.
ಹೀಗೆ ರಾಜ್ಯ ಸರ್ಕಾರವು ರೈತರ ಈ ಸಮಸ್ಯೆಗೆ ಸಾಕಷ್ಟು ಒತ್ತು ನೀಡಿದ್ದು ಮರು ಸರ್ವೆಯನ್ನು ಮಾಡುವುದರ ಮೂಲಕ ರೈತರು ಅನಗತ್ಯವಾಗಿ ಕಚೇರಿಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ತಪ್ಪಿಸುತ್ತಿದೆ. ಮಾಹಿತಿಯನ್ನು ನಿಮ್ಮ ಸ್ನೇಹಿತರು ಯಾರಾದರೂ ರೈತರಾಗಿದ್ದರೆ ಅವರಿಗೆ ಶೇರ್ ಮಾಡಿ ಸರ್ಕಾರದಿಂದ ಭೂಮರು ಸರ್ವೇ ನಡೆಸಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಕೇವಲ 25 ರೂಪಾಯಿನಿಂದ 17 ಲಕ್ಷ ರೂಪಾಯಿ ಪಡೆಯಿರಿ : ಈ ಯೋಜನೆ ಬಗ್ಗೆ ತಿಳಿಹಿರಿ
ರಾಜ್ಯ ಸರ್ಕಾರದಿಂದ 7 ಹೊಸ ಯೋಜನೆ ಜಾರಿ : ಅನುಕೂಲಗಳನ್ನು ತಿಳಿದುಕೊಳ್ಳಿ