ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಕರ್ನಾಟಕ ಸರ್ಕಾರವು ಕಾರ್ಮಿಕ ಮಂಡಳಿಯಿಂದ ಪ್ರತಿ ವರ್ಷವೂ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡುತ್ತದೆ. ನರ್ಸರಿಯಿಂದ ಸ್ನಾತಕೋತ್ತರ ಪದವರಿಯವರಿಗೆ ಮಂಡಳಿಯಲ್ಲಿ ನೋಂದಣಿ ಯಾಗಿರುವ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಮುಂದುವರಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಈ ಪ್ರಯೋಜನವನ್ನು ನೀಡುತ್ತಿದೆ. ಅದರಂತೆ ಸ್ಕಾಲರ್ಶಿಪ್ ಹಣವನ್ನು ಬಿಡುಗಡೆ ಮಾಡಿದ್ದು ಆ ಹಣ ಬಂದಿದೆಯೇ ಇಲ್ಲವೇ ಎಂಬುದನ್ನು ಹೇಗೆ ತಿಳಿದುಕೊಳ್ಳಬೇಕು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.

ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ಶಿಪ್ ಬಿಡುಗಡೆ :
ಕಾರ್ಮಿಕರ ಮಕ್ಕಳಿಗಾಗಿ 2022 23ನೇ ಶೈಕ್ಷಣಿಕ ವರ್ಷದಲ್ಲಿ ಅರ್ಹರಿದ ಅರ್ಜಿಯನ್ನು ಆಹ್ವಾನ ಮಾಡಲಾಗಿತ್ತು. ಅಂತ ಇದೀಗ 2023 ನವೆಂಬರ್ 9ನೇ ತಾರೀಕಿನಂದು ಕಾರ್ಮಿಕರ ಮಕ್ಕಳಿಗೆ ಮಾನ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರ ನೇತೃತ್ವದಲ್ಲಿ ಶೈಕ್ಷಣಿಕ ಸಹಾಯ ಧನ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಸ್ಕಾಲರ್ಶಿಪ್ ನ ಹಣವನ್ನು ಬಿಡುಗಡೆ ಮಾಡಲಾಗಿದೆ.
ಡಿಬಿಟಿ ಮೂಲಕ ಹಣ ವರ್ಗಾವಣೆ :
9.61 ಲಕ್ಷ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 225. 98 ಕೋಟಿ ಶೈಕ್ಷಣಿಕ ಸಹಾಯಧನವನ್ನು ಕಾರ್ಮಿಕ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಹಣವನ್ನು ವರ್ಗಾವಣೆ ಮಾಡಿದೆ. ನೀವೇನಾದರೂ ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸಿದ್ದರೆ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದೆಯೇ ಇಲ್ಲವೇ ಎಂಬುದನ್ನು ಸ್ಟೇಟಸ್ ನೋಡುವುದರ ಮೂಲಕ ಚೆಕ್ ಮಾಡಿಕೊಳ್ಳಬಹುದಾಗಿದೆ.
ಇದನ್ನು ಓದಿ : UPI ಐಡಿ ಹೊಂದಿರುವವರ ಗಮನಕ್ಕೆ! ಯುಪಿಐ ಹೊಸ ಮಾರ್ಗಸೂಚಿ ಬಿಡುಗಡೆ!
ಸ್ಕಾಲರ್ಶಿಪ್ ಹಣ ಚೆಕ್ ಮಾಡುವ ವಿಧಾನ :
ಲೇಬರ್ ಕಾರ್ಡ್ ಅಡಿಯಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಖಾತೆಗೆ ಹಣ ಬಂದಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದಾಗಿತ್ತು ಒಂದರಿಂದ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ್‌ಎಸ್‌ಪಿ ಸ್ಕಾಲರ್ಶಿಪ್ ಪೋರ್ಟಲ್ ಗೆ ಭೇಟಿ ನೀಡುವುದರ ಮೂಲಕ ಸ್ಥಿತಿಯನ್ನು ಚೆಕ್ ಮಾಡಬಹುದಾಗಿದೆ. https://ssp.karnataka.gov.in ಈ ವೆಬ್ ಸೈಟ್ ನಲ್ಲಿ ಒಂದರಿಂದ 10ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಸ್ಕಾಲರ್ಷಿಪ್ನ ಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಸೇವಾ ಸಿಂಧು ಪೋರ್ಟಲ್ ನ ಮೂಲಕ ಹತ್ತನೇ ತರಗತಿ ಮೇಲ್ಪಟ್ಟು ಪಿಯುಸಿ ಐಟಿಐ ಪದವಿ ಡಿಪ್ಲೋಮಾ ಅಥವಾ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದರೆ ಅದರಲ್ಲಿ ನಿಮಗೆ ಒಂದು ರೆಫರೆನ್ಸ್ ನಂಬರ್ ಕೊಟ್ಟಿರುತ್ತಾರೆ ಅದನ್ನು ನೀವು ತೆಗೆದುಕೊಂಡು ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ ಸ್ಟೇಟಸ್ ಅನ್ನು ಚೆಕ್ ಮಾಡುವ ವಿಭಾಗದಲ್ಲಿ ತಮ್ಮ ರೆಫರೆನ್ಸ್ ನಂಬರನ್ನು ಹಾಕುವುದರ ಮೂಲಕ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಈ ವೆಬ್ಸೈಟ್ ಮಾತ್ರವಲ್ಲದೆ ಸರ್ಕಾರದ ಅಧಿಕೃತ ಮತ್ತೊಂದು ವೆಬ್ಸೈಟ್ ಆದ ಸಕಾಲ ವೆಬ್ಸೈಟ್ನಲ್ಲಿಯೂ ಸಹ ಚೆಕ್ ಮಾಡಬಹುದಾಗಿದೆ. https://sakala.kar.nic.in/ಈ ವೆಬ್ಸೈಟ್ ಗೂ ಭೇಟಿ ನೀಡಿ ಅರ್ಜಿಯನ್ನು ತಿಳಿದುಕೊಳ್ಳಬಹುದಾಗಿದೆ.
ಹೀಗೆ ಲೇಬರ್ ಕಾರ್ಡ್ ಮೂಲಕ ಸ್ಕಾಲರ್ಶಿಪ್ ಗಾಗಿ ಅರ್ಜಿಯನ್ನು ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಅಜ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳುವುದರ ಮೂಲಕ ಹಣ ಬಂದಿದೆಯೇ ಇಲ್ಲವೇ ಎಂಬುದನ್ನು ನೋಡಿಕೊಳ್ಳಬಹುದಾಗಿದೆ ಇದರಿಂದ ಯಾರಿಗೆಲ್ಲ ಹಣ ಬಂದಿದೆ ಎಂಬುದರ ಮಾಹಿತಿಯನ್ನು ಸಹ ಸರ್ಕಾರವು ನೀಡಿದ್ದು ಹಣ ಬರದೆ ಇದ್ದರೆ ಸರಿಯಾದ ಕ್ರಮವನ್ನು ಸರ್ಕಾರ ಕೈಗೊಳ್ಳುತ್ತದೆ. ಸರ್ಕಾರದ ವತಿಯಿಂದ ನೀಡುತ್ತಿರುವ ಈ ಸ್ಕಾಲರ್ಶಿಪ್ನ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೂ ಸಹ ಶೇರ್ ಮಾಡುವ ಮೂಲಕ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಕೃಷಿಭಾಗ್ಯ ಯೋಜನೆ ಮತ್ತೆ ಪ್ರಾರಂಭ : ಅನೇಕ ಅನುಕೂಲಗಳು ರೈತರಿಗೆ
ರೈತರ ಸಾಲ ಮನ್ನಾ: ಕೊನೆಯ ಹೆಸರು ಪಟ್ಟಿ ಬಿಡುಗಡೆ, ಅದೃಷ್ಟ ಇದ್ದರೆ ನಿಮ್ಮ ಸಾಲ ಮನ್ನಾ