rtgh

Money

ಎಲ್ಲಾ ವಿದ್ಯಾರ್ಥಿಗಳಿಗೆ ಹೊಸ ಸ್ಕಾಲರ್ಶಿಪ್ : ಯಾವ ಸ್ಕಾಲರ್ಶಿಪ್ ತಿಳಿದುಕೊಂಡು ಅರ್ಜಿ ಸಲ್ಲಿಸಿ

Join WhatsApp Group Join Telegram Group
New Scholarship for All Students

ನಮಸ್ಕಾರ ಸ್ನೇಹಿತರೇ,ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ವಿದ್ಯಾರ್ಥಿಗಳಿಗೆ ಹೊಸ ವಿದ್ಯಾರ್ಥಿ ವೇತನದ ಬಗ್ಗೆ. ವಿದ್ಯಾರ್ಥಿಗಳಿಗಾಗಿ ಈಗ ಎಸ್ಬಿಐ ಫೌಂಡೇಶನ್ ಅಡಿಯಲ್ಲಿ ಆಯೋಜಿಸಿರುವ ಎಸ್‌ಬಿಐಎಫ್ ಆಶಾ ವಿದ್ಯಾರ್ಥಿವೇತನ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನವನ್ನು ಪಡೆಯಬೇಕಾದರೆ ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ವಿದ್ಯಾಭ್ಯಾಸ ಎಷ್ಟಿರಬೇಕು ಜೊತೆಗೆ ಈ ವಿದ್ಯಾರ್ಥಿ ವೇತನದ ಮೊತ್ತವೆಷ್ಟು ಅರ್ಜಿ ಸಲ್ಲಿಸುವ ವಿಧಾನ ಹೇಗೆ ಪ್ರತಿಯೊಂದರ ಬಗ್ಗೆಯೂ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.

New Scholarship for All Students
New Scholarship for All Students

ಎಸ್ ಬಿಐಎಫ್ ಆಶಾ ವಿದ್ಯಾರ್ಥಿವೇತನ ಕಾರ್ಯಕ್ರಮ :

ಈ ವಿದ್ಯಾರ್ಥಿ ವೇತನವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಸ್ಆರ್ ಅಂಗವಾಗಿದ್ದು ಇದರ ಮೂಲಕ ಸಮಾಜದ ಹಿಂದುಳಿದ ವರ್ಷಗಳ ಅಭಿವೃದ್ಧಿ ಮತ್ತು ಸುಧಾರಣೆಗಾಗಿ ವಿದ್ಯಾರ್ಥಿವೇತನದ ಕಾರ್ಯಕ್ರಮವನ್ನು ಸ್‌ಬಿಐ ಹಮ್ಮಿಕೊಂಡಿದ್ದಾರೆ. ಎಸ್ ಬಿ ಐ ಗುಂಪಿನ ನೈತಿಕತೆಯನ್ನು ಪ್ರತಿಬಿಂಬಿಸುವಲ್ಲಿ ನೈತಿಕವಾದ ಬೆಳವಣಿಗೆ ಮತ್ತು ಸಮಾನತೆ ಎನ್ನುತ್ತೇಜಿಸುವ ಉದ್ದೇಶದಿಂದ ಎಸ್ ಬಿ ಐ ಫೌಂಡೇಶನ್ ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡುವ ಮಧ್ಯಸ್ಥಿಕೆಗಳನ್ನು ನಡೆಸುವುದರಲ್ಲಿ ನಂಬಿಕೆಯನ್ನು ಹೊಂದಿದ್ದು ಈ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲು ಮುಂದಾಗಿದೆ. ಭಾರತದ ಅತ್ಯಂತ ಕಡಿಮೆ ಆದಾಯವನ್ನು ಹೊಂದಿರುವಂತಹ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳು ಅವರ ಶಿಕ್ಷಣದಿಂದ ವಂಚಿತರಾಗುತ್ತಿದ್ದು ಅವರ ಶಿಕ್ಷಣದ ನಿರಂತರತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ಅವರಿಗೆ ಹಣಕಾಸು ನೆರವನ್ನು ನೀಡಲು sbi ನಿರ್ಧರಿಸಿದೆ.

ವಿದ್ಯಾರ್ಥಿ ವೇತನ ಪಡೆಯಲು ಇರಬೇಕಾದ ವಿದ್ಯಾರ್ಹತೆಗಳು :

ಎಸ್ ಬಿ ಐ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬೇಕಾದರೆ ವಿದ್ಯಾರ್ಥಿಗಳು ಆರರಿಂದ 12ನೇ ತರಗತಿಯನ್ನು ಓದುತ್ತಿರಬೇಕು. ಕನಿಷ್ಠ 75% ಗಿಂತ ಅಂಕಗಳನ್ನು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಗಳಿಸಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ಐಎನ್ಆರ್ ಮೂರು ಲಕ್ಷಕ್ಕಿಂತ ಕಡಿಮೆ ಇರಬೇಕು. ಭಾರತದಲ್ಲಿರುವ ಎಲ್ಲ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವಿದ್ಯಾರ್ಥಿ ವೇತನದ ಮೊತ್ತ :

ಎಸ್ ಬಿ ಐ ಎಫ್ ಆಶಾ ವಿದ್ಯಾರ್ಥಿವೇತನದ ಮೊತ್ತವು ಒಂದು ವರ್ಷಕ್ಕೆ 10 ಸಾವಿರ ರೂಪಾಯಿಗಳವರೆಗೆ ದೊರೆಯುತ್ತದೆ.

ಇದನ್ನು ಓದಿ : ಮನೆಯಲ್ಲಿ ಗ್ಯಾಸ್ ಬಳಸುವವರಿಗೆ ಹೊಸ ನಿಯಮ: ಎಲ್ಲರು ಗಮನಿಸಿ ಕೂಡಲೇ

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು :

ವಿದ್ಯಾರ್ಥಿಗಳು ಎಸ್‌ಬಿಐ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕನಿಷ್ಠ 75% ರಷ್ಟು ಅಂಕಗಳನ್ನು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಗಳಿಸಿರಬೇಕು. ಎಲ್ಲಾ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯವು 3 ಲಕ್ಷಕ್ಕಿಂತ ಕಡಿಮೆ ಇರಬೇಕು. ಸರ್ಕಾರ ನೀಡಿದ ಗುರುತಿನ ಪುರಾವೆ ಅಂದರೆ ಆಧಾರ್ ಕಾರ್ಡನ್ನು ಹೊಂದಿರಬೇಕು. ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿಯನ್ನು ಹೊಂದಿರಬೇಕು. ಪ್ರಸತವರ್ಷದ ಪ್ರವೇಶ ಪತ್ರ ಅಥವಾ ಸಂಸ್ಥೆಯ ಗುರುತಿನ ಚೀಟಿ ಹೊಂದಿರಬೇಕು. ಬ್ಯಾಂಕ್ ಪಾಸ್ ಬುಕ್ ಆದಾಯ ಪ್ರಮಾಣ ಪತ್ರ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ. ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ವಿದ್ಯಾರ್ಥಿಗಳು ಹೊಂದಿರಬೇಕು.

ಒಟ್ಟಾರೆಯಾಗಿ ಎಲ್ಲ ವಿದ್ಯಾರ್ಥಿಗಳಿಗೆ 10,000 ವರೆಗೆ ಈ ಹೊಸ ಸ್ಕಾಲರ್ಶಿಪ್ನ ಪ್ರಕಾರ ಬ್ಯಾಂಕ್ ಖಾತೆಗೆ ನೇರವಾಗಿ ನೀಡಲಾಗುತ್ತಿದೆ. ಹಾಗಾಗಿ ನಿಮ್ಮ ಸ್ನೇಹಿತರ ಮಕ್ಕಳು ಯಾರಾದರೂ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರೆ ಅವರಿಗೆ ಸ್‌ಬಿಐ ಆಶಾ ವಿದ್ಯಾರ್ಥಿವೇತನ ಕಾರ್ಯಕ್ರಮದ ಬಗ್ಗೆ ಈ ಲೇಖನದ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಈ ಮಹಿಳೆಯರಿಗೆ 25 ಸಾವಿರ ಸಾಲ ಹಾಗು ಸಬ್ಸಿಡಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಕರ್ನಾಟಕದ ಮಹಿಳೆಯರಿಗೆ 50,000 ಸಹಾಯಧನ : ಈ ಯೋಜನೆಗೆ ಈ ಕೂಡಲೇ ಅರ್ಜಿ ಸಲ್ಲಿಸಿ

Treading

Load More...