rtgh

news

ಬರಪೀಡಿತ ತಾಲೂಕುಗಳ ಪಟ್ಟಿಗೆ ಹೊಸ ತಾಲೂಕುಗಳು ಸೇರ್ಪಡೆ; ನಿಮ್ಮ ಊರಿನ ಹೆಸರಿದೆಯಾ ಚೆಕ್‌ ಮಾಡಿ

Join WhatsApp Group Join Telegram Group
New taluks have been added to the list of drought affected taluks

ನಮಸ್ಕಾರ ಸ್ನೇಹಿತರೇ, ಈಗಾಗಲೇ ರಾಜ್ಯದಲ್ಲಿ ಬರಪೀಡಿತ ತಾಲೂಕುಗಳೆಂದು ಕೆಲವೊಂದು ತಾಲೂಕುಗಳನ್ನು ಘೋಷಣೆ ಮಾಡಲಾಗಿದ್ದು ಅದರಂತೆ ಮತ್ತೆ ಈಗ ಈ ಬರಪೀಡಿತ ತಾಲೂಕುಗಳ ಪಟ್ಟಿಗೆ ಹೊಸ ತಾಲೂಕುಗಳನ್ನು ಸೇರ್ಪಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಆದರೆ ಇವತ್ತಿನ ಲೇಖನದಲ್ಲಿ ಯಾವ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂಬುದರ ಬಗ್ಗೆ ನೋಡಬಹುದು.

New taluks have been added to the list of drought affected taluks

ಮಾಗಡಿ ಚನ್ನಪಟ್ಟಣ ಸೇರ್ಪಡೆ :

195 ತಾಲೂಕುಗಳನ್ನು ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರವು ಬರಪೀಡಿತ ತಾಲೂಕು ಗಳಿಂದ ಘೋಷಣೆ ಮಾಡಿತ್ತು. ಈ ಬರಪೀಡಿತ ತಾಲೂಕುಗಳಲ್ಲಿ ರಾಮನಗರ ಜಿಲ್ಲೆಯ ಮಾಗಡಿ ಹಾಗೂ ಚೆನ್ನಪಟ್ಟಣ ತಾಲೂಕುಗಳನ್ನು ಸಾಧಾರಣ ಬರ ತಾಲ್ಲೂಕುಗಳ ಪಟ್ಟಿಗೆ ಸೇರಿಸಲಾಗಿದೆ. ಶೇಕಡಾ 65ಕ್ಕಿಂತ ಮಳೆ ಕಡಿಮೆಯಾದ ಪ್ರದೇಶಗಳು ಹಾಗೂ ಸತತವಾಗಿ ಮೂರು ವಾರಗಳ ಕಾಲ ಶುಷ್ಕತೆ ಮುಂದುವರೆಯುವುದನ್ನು ಪರಿಗಣಿಸಿದ ರಾಜ್ಯ ಸರ್ಕಾರವು ಮತ್ತೆ ಇದೀಗ 22 ತಾಲೂಕುಗಳಲ್ಲಿ ಅಧ್ಯಯನ ನಡೆಸಿ ಅವುಗಳಲ್ಲಿ ಮಾಗಡಿ ಮತ್ತು ಚೆನ್ನಪಟ್ಟಣವನ್ನು ಬರಪೀಡಿತ ತಾಲೂಕುಗಳೆಂದು ಇರಿಸಲಾಗಿದೆ. ಈ ಎರಡು ತಾಲೂಕುಗಳನ್ನು ಅಧ್ಯಯನ ವರದಿ ಆಧಾರದ ಮೇರೆಗೆ ಬರಬೇಡಿತ ತಾಲೂಕುಗಳ ವ್ಯಾಪ್ತಿಗೆ ರಾಜ್ಯ ಸರ್ಕಾರವು ಸೇರಿಸಿದೆ.

195 ತಾಲೂಕುಗಳು ಬರಪೀಡಿತ ತಾಲೂಕುಗಳು :

ಇತ್ತೀಚಿಗೆ ರಾಜ್ಯ ಸರ್ಕಾರವು ಬರಪೀಡಿತ ತಾಲೂಕುಗಳೆಂದು ಘೋಷಿಸಿತ್ತು. ಆನಂತರ ಮತ್ತೆ ನಿರ್ದಿಷ್ಟ ಮಾನದಂಡಗಳನ್ನು ಇಟ್ಟುಕೊಂಡು ಪುನಹ 22 ತಾಲ್ಲೂಕುಗಳಲ್ಲಿ ಅಧ್ಯಯನ ನಡೆಸಿತು. ರುಚಿಗೆ ನಡೆಸಲಾದ ಸಮೀಕ್ಷೆಯಲ್ಲಿ ಸರ್ಕಾರವು ಮಾಗಡಿ ಚನ್ನಪಟ್ಟಣ ತಾಲೂಕುಗಳು ಸಾಧಾರಣ ಬರದ ವ್ಯಾಪ್ತಿಗೆ ಸೇರಿಸಲಾಗಿದೆ. ಬರ ಪರಿಸ್ಥಿತಿ ಅವಲೋಕನದ ರಾಜ್ಯ ಸರ್ಕಾರ ಕೈಗೊಂಡ ಮೂರನೇ ಹಂತದ ಸಮೀಕ್ಷೆಯಲ್ಲಿ ಚನ್ನಪಟ್ಟಣ ಮತ್ತು ಮಾಗಡಿ ಜಿಲ್ಲೆಯನ್ನು ಸಾಧಾರಣ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಧ್ಯಯನದ ಆಧಾರದ ಮೇಲೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಪ್ರಸ್ತಾವನೆಯ ಜೊತೆಗೆ ಬರ ಪರಿಸ್ಥಿತಿ ಘೋಷಿಸಲು ಅನುಸರಿಸಬೇಕಾದ ಮಾನದಂಡಗಳ ಅನ್ವಯದ ಆಧಾರದ ಮೇಲೆ ಮಾಗಡಿ ಮತ್ತು ಚೆನ್ನಪಟ್ಟಣ ತಾಲೂಕುಗಳನ್ನು ಸಾಧಾರಣ ಬರ ಪಟ್ಟಿಯಲ್ಲಿ ಮೂರನೇ ಹಂತದ ಸಮೀಕ್ಷೆಯಲ್ಲಿ ಸೇರಿಸಲಾಗಿದೆ.

ಮೂರು ಹಂತಗಳಲ್ಲಿ ಸಮೀಕ್ಷೆ

ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡುವ ಮೊದಲು ಮೂರು ಹಂತಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು ಸರ್ಕಾರ ಬಿಡುಗಡೆಗೊಳಿಸಿದಂತಹ ಮೊದಲ ಹಂತದ ಬರ ಪರಿಸ್ಥಿತಿಯ ಸಮೀಕ್ಷೆಯಲ್ಲಿ 31 ಜಿಲ್ಲೆಗಳ 236 ತಾಲೂಕುಗಳಲ್ಲಿ 195 ತಾಲೂಕುಗಳನ್ನು ಬರ ಪರಿಸ್ಥಿತಿಯ ಪಟ್ಟಿಗೆ ಘೋಷಣೆ ಮಾಡಲಾಗಿದೆ. ಇದಾದ ನಂತರ ಶೇಕಡ 60 ಕ್ಕಿಂತ ಕಡಿಮೆ ಮಳೆ ಯಾಗದ ಹಾಗೂ ಸತತವಾಗಿ 3 ವಾರಗಳಿಗಿಂತ ಹೆಚ್ಚಿನ ಶುಲ್ಕ ವಾತಾವರಣ ಅಂದರೆ ನದಿ ಕೆರೆಕಟ್ಟೆ ಜಲಾಶಯಗಳ ಹರಿವು ಕೃಷಿ ತೇವಾಂಶ ಕೊರತೆ ನೀರಿನ ಸಂಗ್ರಹಣೆ ಹಾಗೂ ಅಂತರ್ಜಲ ಮಟ್ಟ ಸೂಚ್ಯಂಕಗಳ ತೀವ್ರತೆಯನ್ನು ಆಧರಿಸಿ ಎರಡನೇ ಮತ್ತು ಮೂರನೇ ಹಂತದಲ್ಲಿ ಹೆಚ್ಚುವರಿಯಾಗಿ 22 ತಾಲೂಕುಗಳನ್ನು ಮರು ಅಧ್ಯಯನಕ್ಕೆ ಒಳಪಡಿಸಲಾಗಿತ್ತು.

ಸಾರ್ವಜನವನ್ನು ಒಳಪಡಿಸಿದ ನಂತರ 17 ತಾಲ್ಲೂಕುಗಳನ್ನು ತೀವ್ರ ಬರಪಟ್ಟಿಗೆ ಸೇರಿಸಲಾಗಿದೆ ಹಾಗೂ ಇನ್ನು ನಾಲ್ಕು ತಾಲೂಕುಗಳನ್ನು ಸಾಧಾರಣ ಬರ ಪರಿಸ್ಥಿತಿಪಟ್ಟಿಗೆ ಸರ್ಕಾರವು ಸೇರ್ಪಡೆ ಮಾಡಿದೆ. ಅವುಗಳಲ್ಲಿ ರೇಷ್ಮೆ ಜಿಲ್ಲೆಯ ಮಾಗಡಿ ಹಾಗೂ ಚೆನ್ನಪಟ್ಟಣಕ್ಕೂ ಸ್ಥಾನವನ್ನು ನೀಡಲಾಗಿದ್ದು ಈಗ ರಾಜ್ಯದಲ್ಲಿ ಒಟ್ಟಾರೆ 216 ತಾಲೂಕುಗಳು ಬರೆದ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿವೆ.

ಇದನ್ನು ಓದಿ : Breaking News: ಸರ್ಕಾರದ 30 ಇಲಾಖೆಯಿಂದ 3000 ಉದ್ಯೋಗಗಳಿಗೆ ನೇಮಕಾತಿ

ಕೇಂದ್ರ ಸರ್ಕಾರದ ಕೈಪಿಡಿ ಮೇಲೆ ಬರ ಸಮೀಕ್ಷೆ :

ರಾಜ್ಯ ಸರ್ಕಾರವು ಬರ ಪರಿಸ್ಥಿತಿ ಘೋಷಣೆ ಮಾಡಲು ಕೇಂದ್ರ ಸರ್ಕಾರದ 2020ರ ಬರ ಘೋಷಣೆ ಮಾರ್ಗಸೂಚಿಯ ಅನ್ವಯ ಮಾನದಂಡಗಳನ್ನು ಅಳವಡಿಸಿಕೊಂಡು ಕರ್ನಾಟಕದಲ್ಲಿ ಸಮೀಕ್ಷೆ ನಡೆಸಿದೆ. ಸಮೀಕ್ಷೆಯಲ್ಲಿ ಜಿಲ್ಲಾಧಿಕಾರಿಗಳ ತಂಡವು ಭೇಟಿ ನೀಡಿ ಅವುಗಳು ನೀಡುವ ವರದಿ ಹಾಗೂ ಸ್ಥಳೀಯ ಶಾಸಕರ ಶಿಫಾರಸ್ಸುಗಳು ಸಹ ತಾಲೂಕುಗಳನ್ನು ಬರಪಟ್ಟಿಗೆ ಸೇರ್ಪಡೆ ಮಾಡಲು ಪ್ರಮುಖ ಪಾತ್ರ ವಹಿಸಿವೆ ಎಂದು ಹೇಳಬಹುದು. ಮುಂಗಾರಿನಲ್ಲಿ ಶೇಕಡ 69ರಷ್ಟು ಮಳೆ ಕೊರತೆಯಿಂದಾಗಿ ರಾಮನಗರ ಜಿಲ್ಲೆಯ ಮೂರು ತಾಲೂಕುಗಳು ಬರಪೀಡಿತ ಪ್ರದೇಶಗಳಾಗಿವೆ. ಕಂದಾಯ ಕೃಷಿ ತೋಟಗಾರಿಕೆ ಅಧಿಕಾರಿಗಳು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಂಟಿ ಸಮೀಕ್ಷೆ ಕೈಗೊಂಡು ಬರಕೈಪಿಡಿಯಲ್ಲಿ ಸಮಗ್ರ ಅಂಕಿ ಅಂಶಗಳುಳ್ಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ ಬರಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಈಗ ನಡೆಸಿರುವ ಭರ ಅಧ್ಯಯನ ಸರ್ಕಾರವು ಮುಂದಿನ ಆರು ತಿಂಗಳವರೆಗೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೂ ಈ ಸಮೀಕ್ಷೆಯು ಚಾಲ್ತಿಯಲ್ಲಿ ಇರುತ್ತದೆ ಎಂದು ಸರ್ಕಾರ ಬಿಡುಗಡೆ ಮಾಡಿರುವಂತಹ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಸಚಿವ ಸಂಪುಟ ಒಪ್ಪಿಕೆಯ ಆಧಾರದ ಮೇಲೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸುವುದರಿಂದ ಕೇಂದ್ರದ ಹಾಗೂ ರಾಜ್ಯದ ಪರಿಹಾರ ಎರಡನ್ನು ಲೆಕ್ಕ ಹಾಕುವುದರ ಮೂಲಕ ಬೆಳೆ ಹಾನಿಯಾಗಿರುವ ರೈತರಿಗೆ ತೀವ್ರ ಬರೆದ ಪಟ್ಟಿಯಲ್ಲಿ ಸೇರಿರುವ ತಾಲೂಕುಗಳಿಗೆ ಎಕರೆಗೆ ಇಂತಿಷ್ಟು ಹಣವನ್ನು ಹಾಗೂ ಸಾಧಾರಣ ಬರೆದ ಪಟ್ಟಿಯಲ್ಲಿರುವ ತಾಲೂಕುಗಳ ಬೆಳೆ ಹಾನಿಗೆ ಗ್ರಾಮ ಲೆಕ್ಕಾಧಿಕಾರಿಗಳಿಂದ ವರದಿ ಪಡೆದುಕೊಳ್ಳುವುದರ ಮೂಲಕ ಎಕರೆಗೆ ಇಂತಿಷ್ಟು ಪ್ರತ್ಯೇಕವಾದ ಪರಿಹಾರವನ್ನು ಸರ್ಕಾರವು ನಿಗದಿಗೊಳಿಸುತ್ತಿದೆ. ಸರ್ಕಾರವು ರಾಜ್ಯದಲ್ಲಿ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಿ ಅಲ್ಲಿರುವ ರೈತರಿಗೆ ಹಣವನ್ನು ಅಂದರೆ ಬೆಳೆ ಹಾನಿಗೆ ಹಣವನ್ನು ನೀಡುವುದರಿಂದ ರೈತರು ಸ್ವಲ್ಪ ಮಟ್ಟಿಗೆ ತಮ್ಮ ಜೀವನವನ್ನು ಮುಂದುವರಿಸಲು ಇದು ಸಹಾಯಕವಾಗುತ್ತದೆ ಎಂದು ಹೇಳಬಹುದು. ಸರ್ಕಾರವು ಮತ್ತೆ ಎರಡು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿರುವುದರ ಬಗ್ಗೆ ನಿಮ್ಮೆಲ್ಲ ಬಂದು ಮಿತ್ರರು ಹಾಗೂ ಸ್ನೇಹಿತರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ವಿವಿಧ ಯೋಜನೆಗಳಿಗೆ ಅರ್ಜಿ ಆಹ್ಹಾನ-2023

ರೈತರಿಗೆ ಬರ ಪರಿಹಾರದ ಬಗ್ಗೆ ಮಾಹಿತಿ ಪ್ರಕಟಣೆ; ಕೂಡಲೇ ನೋಂದಣಿ ಮಾಡಿ

Treading

Load More...