rtgh

news

ಫೋನ್ ಪೇ ಬಳಕೆದಾರರ ಗಮನಕ್ಕೆ : ಎಲ್ಲರು ಇದನ್ನು ಬಳಸಬೇಕು

Join WhatsApp Group Join Telegram Group
Note to Phone Pay users Everyone should use it

ನಮಸ್ಕಾರ ಸ್ನೇಹಿತರೆ ಯುಪಿಐ ವಹಿವಾಟುಗಳು ಸಾಕಷ್ಟು ಜನಪ್ರಿಯತೆಯನ್ನು ಇತ್ತೀಚಿನ ದಿನಗಳಲ್ಲಿ ಪಡೆದುಕೊಂಡಿವೆ. ಯುಪಿಐ ವೈವಾಟು ಭಾರತದಲ್ಲಿ ಯಶಸ್ವಿಯಾಗಲಿದೆಯೇ ಇಲ್ಲವೇ ಎಂಬುದರ ಬಗ್ಗೆ ಚರ್ಚೆಯಾಗುತ್ತಿದ್ದು ಯುಪಿಐ ಇದೀಗ ರಸ್ತೆ ಬದಿ ವ್ಯಾಪಾರಿಯಿಂದ ಹಿಡಿದು ಭಾರತದಲ್ಲಿ ಎಲ್ಲೆಡೆ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಭಾರತದಲ್ಲಿ ಆಟೋರಿಕ್ಷಾದಿಂದ ಹಿಡಿದು ತಮ್ಮ ಸ್ಥಳೀಯ ಜನರಲ್ ಸ್ಟೋರ್ ಗಳಲ್ಲಿ ಸಹ ನಾವು ಯುಪಿಐ ವಹಿವಾಟುಗಳನ್ನು ಕಾಣಬಹುದಾಗಿದೆ.

ಅದರಂತೆ ಹಣಕಾಸು ವಹಿವಾಟಿನ ಧಿಕ್ಕನ್ನೇ ಈ ಯುಪಿಐ ವ್ಯವಸ್ಥೆ ಬದಲಾಯಿಸಿದ್ದು ಪರಿಕಲ್ಪನೆಯನ್ನು ಈ ವ್ಯವಸ್ಥೆ ಬಹು ಪಾಲು ಯಶಸ್ವಿಗೊಳಿಸಿದೆ. ಆದರೆ ಇಷ್ಟೆಲ್ಲ ಪರಿಣಾಮಕಾರಿಯಾಗಿ ಯುಪಿಐ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದರ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ತಿಳಿದಿರುವುದಿಲ್ಲ ಹಾಗಾಗಿ ಯುಪಿಐ ವಹಿವಾಟು ಹೇಗೆ ನಡೆಯಲಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ.

Note to Phone Pay users Everyone should use it
Note to Phone Pay users Everyone should use it

ಯುಪಿಐ ಎಂದರೇನು ?

ನಮ್ಮ ಹಣಕಾಸು ವಾಹಿವಾಟಿನ ಧಿಕ್ಕನೆ ಯುಪಿಐ ವ್ಯವಸ್ಥೆ ಬದಲಾಯಿಸಿದ್ದು ಭಾರತದಲ್ಲಿ ಕ್ಯಾಶ್ ಲೆಸ್ ಇಂಡಿಯಾದ ಪರಿಕಲ್ಪನೆಯನ್ನು ಈ ವ್ಯವಸ್ಥೆ ಬಹುಪಾಲು ಯಶಸ್ವಿಗೊಳಿಸಿದೆ. ಹಾಗಾದರೆ ಯುಪಿಐ ಎಂದರೇನು ಎಂದು ನೋಡುವುದಾದರೆ ಯುಪಿಐ ಎಂದರೆ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಅಂದರೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿ ದಂತಹ ವ್ಯವಸ್ಥೆ ಇದಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ವ್ಯವಸ್ಥೆಯನ್ನು ನಿಯಂತ್ರಿಸಲ್ಪಡುತ್ತದೆ. ತಮ್ಮ ಫೋನ್ ಸಂಖ್ಯೆಗಳು ಅಥವಾ ಯುಪಿಐ ಐಡಿಗಳ ಮೂಲಕ ಇದು ಬಳಕೆದಾರರಿಗೆ ತ್ವರಿತವಾಗಿ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಅವಕಾಶ ಮಾಡಿಕೊಡುತ್ತದೆ. ಎನ್ಇ ಎಫ್ ಟಿ ಮತ್ತು ಐ ಎಂ ಪಿ ಎಸ್ ನಂತಹ ಪಾವತಿ ವಿಧಾನಗಳಿಂದ ಯುಪಿಐ ವಿಧಾನವು ಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ.

ಭಾರತದಲ್ಲಿ ಯುಪಿಐ ವ್ಯವಸ್ಥೆ

ಯುಪಿಐ ವ್ಯವಸ್ಥೆ ಸಂಪೂರ್ಣವಾಗಿ ಭಾರತದಲ್ಲಿ ಉಚಿತವಾಗಿರುವುದರಿಂದ ಸಾಕಷ್ಟು ಯಶಸ್ಸನ್ನು ಕಂಡಿದೆ. ಯಾವುದೇ ಹೆಚ್ಚುವರಿ ಶುಲ್ಕವನ್ನು ಹಣಪಾಗಿಸುವುದಕ್ಕೆ ಎನ್ಪಿಸಿಐಗೆ ಪಾವತಿಸಬೇಕಾದಂತಹ ಅನಿವಾರ್ಯತೆ ಇಲ್ಲದಿರುವುದರಿಂದ ಇದು ಸಾಕಷ್ಟು ಯಶಸ್ವಿಗೆ ಕಾರಣವಾಗಿದೆ. ಅಲ್ಲದೆ ಯುಪಿಐ ಪಾವತಿ ವ್ಯವಸ್ಥೆಗಳಾದ ಫೋನ್ ಪೇ ಗೂಗಲ್ ಪೇ ಮೂಲಕವೂ ಸಹ ಹಣವನ್ನು ಯಾವುದೇ ಸಮಯದಲ್ಲಿ ವರ್ಗಾಯಿಸಲು ಅವಕಾಶ ಕಲ್ಪಿಸಲಾಗಿದೆ. ಭಾರತದಲ್ಲಿ ಸ್ಥಳೀಯ ಅಂಗಡಿಗಳಲ್ಲಿ ಸಣ್ಣ ಪಾವತಿಗಳನ್ನು ಮಾಡಲು ಸಹ ಇತ್ತೀಚಿನ ದಿನಗಳಲ್ಲಿ ಯುಪಿಐ ಬಳಸುವುದನ್ನು ನೋಡಬಹುದು.

ಇದನ್ನು ಓದಿ : ಕೇಂದ್ರ ಸರ್ಕಾರದಿಂದ ಮನೆ ಕಟ್ಟಲು 2.67 ಲಕ್ಷ ಸಹಾಯಧನ; ಕೂಡಲೇ ಇಲ್ಲಿಂದ ಅಪ್ಲೈ ಮಾಡಿ

ಹೇಗೆ ಯುಪಿಐ ಕೆಲಸ ಮಾಡುತ್ತದೆ :

ಯುಪಿಐ ಕೆಲಸ ಮಾಡುವಂತಹ ವಿಧಾನವು ತುಂಬಾ ಸರಳವಾಗಿದ್ದು ಇದಕ್ಕಾಗಿ ನೀವು ನಿಮ್ಮ ಮೊಬೈಲ್ಗಳಲ್ಲಿ ಯುಪಿಐ ಸಕ್ರೆಗೊಳಿಸಿದ ಫೋನ್ ಪೇ ಗೂಗಲ್ ಪೇ ಪೇಟಿಎಂ ನಂತಹ ಅಪ್ಲಿಕೇಶನ್ ಗಳನ್ನು ನೀವು ಹೊಂದಿರಬೇಕಾಗುತ್ತದೆ. ನಿಮ್ಮ ಬ್ಯಾಂಕ್ ಖಾತೆಗಳು ಈ ಅಪ್ಲಿಕೇಶನ್ ಗಳಿಗೆ ಲಿಂಕ್ ಮಾಡಬಹುದು ಆನಂತರ ಮಾತ್ರ ನಿಮ್ಮ ಖಾತೆಯ ವಿವರಗಳು ಅಥವಾ ಐ ಎಫ್ ಎಸ್ ಸಿ ಕೋಡ್ ಗಳನ್ನು ಶೇರ್ ಮಾಡದೆಗೆ ನೀವು ಹಣವನ್ನು ಕಳುಹಿಸುವ ಅಥವಾ ಸ್ವೀಕರಿಸುವಂತಹ ಕೆಲಸವನ್ನು ಈ ಯುಪಿಐ ಮೂಲಕ ಮಾಡಬಹುದಾಗಿದೆ. ಯುಪಿಐ ಇದಕ್ಕಾಗಿ ಪುಶ್ ಮತ್ತು ಪುಲ್ ಕಾರ್ಯವಿಧಾನವನ್ನು ಬಳಸುತ್ತದೆ. ವಿಭಿನ್ನ ಯುಪಿಐ ಐಡಿಗಳನ್ನು ಯುಪಿಐ ಪಾವತಿ ಅಪ್ಲಿಕೇಶನ್ ಗಳು ನೀಡುತ್ತವೆ.

ಹೀಗೆ ವಿಭಿನ್ನವಾದ ಐಡಿಗಳನ್ನು ನೀಡುವ ಉದ್ದೇಶ ಏಕೆಂದರೆ ವಿವಿಧ ಅಪ್ಲಿಕೇಶನ್ಗಳು ಗ್ರಾಹಕರ ವಹಿವಾಟುಗಳನ್ನು ನಿರ್ವಹಿಸಲು ವಿಭಿನ್ನ ಬ್ಯಾಂಕುಗಳನ್ನು ಬಳಸುತ್ತವೆ ಆದ್ದರಿಂದ ನೀವು ಖಾತೆಯನ್ನು ಲಿಂಕ್ ಮಾಡಿರುವ ಬ್ಯಾಂಕ್ ಅನ್ನ ಅವಲಂಬಿಸುವ ಆಧಾರದ ಮೇಲೆ ನಿಮ್ಮ ಯುಪಿಐ ಐಡಿ ಬದಲಾಗುತ್ತದೆ. ಆರ್ ಬಿ ಐ ಸ್ಥಾಪಿಸಿದ ಕಟ್ಟುನಿಟ್ಟಾದ ನಿಯಂತ್ರಕ ಕ್ರಮಗಳಿಂದ ಯುಪಿಐ ವಹಿವಾಟುಗಳು ಬೆಂಬಲಿತವಾಗಿದ್ದು ಇದರಿಂದ ನೀವು ನಿಮ್ಮ ಹಣ ಅಥವಾ ನಿಮ್ಮ ಡೇಟಾದ ಬಗ್ಗೆ ಯೋಚಿಸುವಂತಹ ಅನಿವಾರ್ಯತೆ ಇರುವುದಿಲ್ಲ. ಅಲ್ಲದೆ ಟಿಎಲ್ಎಸ್ ಎ ಇ ಎಸ್ ಮತ್ತು ಪಿ ಕೆ ಐ ನಂತಹ ಸುಧಾರಿತ ಪ್ರೋಟೋಕಾಲ್ಗಳಿಂದ ಯುಪಿಐ ವಹಿವಾಟುಗಳನ್ನು ರಕ್ಷಿಸಲಾಗಿದೆ. ಇದಲ್ಲದೆ ಹೊಸ ಮಾದರಿಯ ಅಪ್ಡೇಟ್ಗಳನ್ನು ಸಹ ಯುಪಿಐ ಕೂಡ ಪಡೆದುಕೊಳ್ಳುತ್ತಿರುವುದರಿಂದ ಇನ್ನು ಹೆಚ್ಚು ಹೆಚ್ಚು ಇದು ಬಳಕೆದಾರರ ಸ್ನೇಹಿತ ಆಗಿರಲಿದೆ ಎಂದು ಹೇಳಲಾಗುತ್ತದೆ.

ಹೀಗೆ ನಮ್ಮ ದೇಶದಲ್ಲಿ ಸಾಕಷ್ಟು ಜನರು ಬಳಸುವಂತಹ ಯುಪಿಐ ಪೇಮೆಂಟ್ ನ ಬಗ್ಗೆ ಇವತ್ತಿನ ಲೇಖನದಲ್ಲಿ ನೀವು ನೋಡಬಹುದಾಗಿದ್ದು ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಹಾಗೂ ಇದನ್ನು ಬಳಸುವುದರಿಂದ ಸುರಕ್ಷಿತವಾಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಂಡಿದ್ದೀರಿ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಅಂದರೆ ಯುಪಿಐ ಬಳಸುವಂತಹ ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧುಮಿತ್ರರಿಗೆ ಶೇರ್ ಮಾಡುವ ಮೂಲಕ ಯುಪಿಐ ವಹಿವಾಟಿನ ಬಗ್ಗೆ ಅವರಿಗೂ ಸ್ವಲ್ಪ ಜ್ಞಾನವನ್ನು ಹೊಂದಲು ಅನುವು ಮಾಡಿಕೊಡಿ ಧನ್ಯವಾದಗಳು.

ಇತರೆ ವಿಷಯಗಳು :

ಸರ್ಕಾರದಿಂದ ಮಹತ್ವದ ಸೂಚನೆ; ರೇಷನ್ ಕಾರ್ಡ್ ಗೆ ಹೊಸ ನಿಯಮ, ಈ 4 ಸಂದರ್ಭಗಳಲ್ಲಿ ಮಾತ್ರ

ಬರಪೀಡಿತ ತಾಲೂಕುಗಳ ಪಟ್ಟಿಗೆ ಹೊಸ ತಾಲೂಕುಗಳು ಸೇರ್ಪಡೆ; ನಿಮ್ಮ ಊರಿನ ಹೆಸರಿದೆಯಾ ಚೆಕ್‌ ಮಾಡಿ

Treading

Load More...