ನಮಸ್ಕಾರ ಸ್ನೇಹಿತರೆ ಬ್ಯಾಂಕ್ ನಲ್ಲಿ ಯಾವುದೇ ಕೆಲಸ ಸಿಕ್ಕರೆ ಅದನ್ನು ಸುರಕ್ಷಿತ ಕೆಲಸ ಎಂದು ಹೇಳಬಹುದು ಏಕೆಂದರೆ ಇದೊಂದು ರೀತಿಯಲ್ಲಿ ಸರ್ಕಾರಿ ನೌಕರಿ ಅಂತೆಯೇ ಸುರಕ್ಷಿತ ಕೆಲಸವಾಗಿದ್ದು ಇದೀಗ ತನ್ನಲ್ಲಿ ಖಾಲಿ ಇರುವ 5280 ಹುದ್ದೆಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಇದರ ಮೂಲಕ ಈ ಬ್ಯಾಂಕುಗಳಲ್ಲಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ ಬ್ಯಾಂಕುಗಳಲ್ಲಿ ಕೆಲಸವನ್ನು ಪಡೆಯಬಹುದಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಖಾಲಿ ಇರುವ ಹುದ್ದೆಗಳು :
5280 ಹುದ್ದೆಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಇದೊಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಂದು ಹೇಳಿದರು ತಪ್ಪಾಗಲಾರದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ವರ್ಷದ ನೇಮಕಾತಿಯನ್ನು ಮುಂದುವರೆಸಿದ್ದು ಇದಕ್ಕೆ ಸಂಬಂಧಿಸಿದಂತೆ ತಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಹುದ್ದೆಗಳಿಗೆ ಪ್ರಕಟಣೆಯನ್ನು ಹೊರಡಿಸಿದೆ. ನಿಮ್ಮ ಕನಸು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ನಿರ್ವಹಿಸಬೇಕೆಂದು ಹೊಂದಿದ್ದರೆ ಅದು ನನಸಾಗುವ ದಿನ ಹತ್ತಿರದಲ್ಲೇ ಇದೆ ಎಂದು ಹೇಳಬಹುದಾಗಿದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹುದ್ದೆಗಳು ವಲಯ ಅಧಿಕಾರಿ ಮಠದ ಹುದ್ದೆಗಳಾಗಿದ್ದು ಪದವಿ ಪಡೆದ ಆಸಕ್ತರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈಗಾಗಲೇ ಎಸ್ ಬಿ ಐ ತಮ್ಮ ಅಧಿಕೃತ ವೆಬ್ಸೈಟ್ನ ಮೂಲಕ ಅಧಿಸೂಚನೆಯನ್ನು ಹೊರಡಿಸಿದ್ದು ,ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದೆ. ಕೆಲವೊಂದು ಅರ್ಹತೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕು ಅವುಗಳೆಂದರೆ ಯಾವುದೇ ಮಾನ್ಯತೆ ಪಡೆದಂತಹ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಹೊಂದಿರಬೇಕು. ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ತತ್ಸಮಾನ ವಿದ್ಯಾರ್ಹತೆ ಸೇರಿದಂತೆ ಇಂಟಿಗ್ರೇಟೆಡ್ ಯುವರ್ ಡಿಗ್ರಿಯನ್ನು ಪಡೆದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಇಲ್ಲದಿದ್ದರೆ ಇಂಜಿನಿಯರಿಂಗ್ ವೈದ್ಯಕೀಯ ಚಾರ್ಟರ್ಡ್ ಅಕೌಂಟೆಂಟ್ ಮತ್ತು ಕಾಸ್ಟ್ ಅಕೌಂಟೆಂಟ್ ನಂತಹ ಪದವಿ ಹೊಂದಿರುವ ಅಭ್ಯರ್ಥಿಗಳು ಸಹ ಎಸ್ ಬಿ ಐ ನಲ್ಲಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಕನಿಷ್ಠ ವಯೋಮಿತಿ 21 ವರ್ಷ ಮತ್ತು ಗರಿಷ್ಠ ವಯಸ್ಸು 30 ವರ್ಷ ಅಭ್ಯರ್ಥಿಯ ವಯಸ್ಸು ಮೀರಿರಬಾರದು. 50 ರೂಪಾಯಿಗಳ ಅರ್ಜಿ ಶುಲ್ಕವನ್ನು ಸಾಮಾನ್ಯ ವಿಭಾಗದ ಅಭ್ಯರ್ಥಿಗಳು ಪಾವತಿಸಬೇಕಾಗುತ್ತದೆ ಅಲ್ಲದೆ ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳಿಗೆ ಇರುವುದಿಲ್ಲ ಅವರಿಗೆ ಶುಲ್ಕ ವಿನಾಯಿತಿಯನ್ನು ಸಹ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ :
ಎಸ್ ಬಿ ಐ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಆಸತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಎಸ್ ಬಿ ಐ ಸಿ ಬಿ ಓ ರೆಕ್ರೂಟ್ಮೆಂಟ್ 2023 ಕ್ಕೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. https://www.sbi.co.in ಈ ವೆಬ್ ಸೈಟಿಗೆ ಭೇಟಿ ನೀಡಿ ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಿ, ಅರ್ಜಿಯನ್ನು ಸಲ್ಲಿಸಿ, ಹುದ್ದೆಯನ್ನು ಎಸ್ ಬಿ ಐ ನಲ್ಲಿ ಅಂದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪಡೆಯಬಹುದಾಗಿದೆ.
ಆಯ್ಕೆಯ ವಿಧಾನ :
ಕೆ ನಲ್ಲಿ ಅರ್ಜಿ ಸಲ್ಲಿಸಿದ ನಂತರ ಆಯ್ಕೆ ವಿಧಾನ ಹೇಗಿರುತ್ತದೆ ಎಂದು ಹೇಳುವುದಾದರೆ ಆನ್ಲೈನ್ ಮೂಲಕ ಪರೀಕ್ಷೆ ಮಾಡಲಾಗಿದ್ದು ಸ್ಕ್ರೀನಿಂಗ್ ಟೆಸ್ಟ್ ಸಂದರ್ಶನ ಮತ್ತು ಡಾಕ್ಯುಮೆಂಟ್ ಪರಿಶೀಲನೆ ಮಾಡಿ ಜೊತೆಗೆ ವೈದ್ಯಕೀಯ ಪರೀಕ್ಷೆಯ ಮೂಲಕವೂ ಸಹ ಬ್ಯಾಂಕಿಂಗ್ ಕ್ಷೇತ್ರಕ್ಕೆ ಎಸ್‌ಬಿಐ ನಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. 120 ಅಂಕಗಳ ಆಬ್ಜೆಕ್ಟಿವ್ ಪರೀಕ್ಷೆ ಆನ್ಲೈನ್ ಪರೀಕ್ಷೆಯಲ್ಲಿ ಮತ್ತು ವಿವರಣಾತ್ಮಕ ಪರೀಕ್ಷೆಗೆ 50 ಅಂಕಗಳನ್ನು ಒಳಗೊಂಡಿರುತ್ತದೆ. ಆಬ್ಜೆಕ್ಟಿವ್ ಪರೀಕ್ಷೆ ಮುಗಿದ ತಕ್ಷಣ ತಮ್ಮ ವಿವರಣಾತ್ಮಕ ಪರೀಕ್ಷಾ ಉತ್ತರಗಳನ್ನು ಕಂಪ್ಯೂಟರ್ನಲ್ಲಿ ಅಭ್ಯರ್ಥಿಗಳು ಟೈಪ್ ಮಾಡಬೇಕಾಗುತ್ತದೆ ಒಟ್ಟು 120 ಅಂಕಗಳ ನಾಲ್ಕು ವಿಭಾಗಗಳನ್ನು ಇದು ಹೊಂದಿರುತ್ತದೆ.
ಹೀಗೆ ಎಸ್‌ಬಿಐ ನಲ್ಲಿ ುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರುವಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹುದ್ದೆಗಳನ್ನು ಪಡೆಯಬಹುದಾಗಿದ್ದು ಈ ಹುದ್ದೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಎಸ್‌ಬಿಐನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಯಾರಾದರೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದರೆ ಅವರಿಗೆ ಶೇರ್ ಮಾಡಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಇನ್ಮುಂದೆ ಜಿಯೋ ರೀಚಾರ್ಜ್ ಯೋಜನೆಯಲ್ಲಿ 23 ದಿನಗಳ ಹೆಚ್ಚುವರಿ ಮಾನ್ಯತೆ ಸಿಗಲಿದೆ!
ರೇಷನ್ ಕಾರ್ಡ್ ನಲ್ಲಿ ಈ ಸಮಸ್ಯೆ ಇದ್ದರೆ, ಗೃಹಲಕ್ಷ್ಮಿ ಹಣ ಬರುವುದಿಲ್ಲ! ಆಹಾರ ಇಲಾಖೆ ಸ್ಪಷ್ಟನೆ