ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಈಗಾಗಲೇ ರಾಜ್ಯ ಸರ್ಕಾರವು ಕೆಲವೊಂದಿಷ್ಟು ಪ್ರದೇಶಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿದ್ದು ಆ ಪ್ರದೇಶಗಳಲ್ಲಿ ಬರ ಪರಿಹಾರದ ಹಣವನ್ನು ಪಡೆಯಲು ಈ ನಂಬರ್ ಕಡ್ಡಾಯ ಎಂದು ಹೇಳಲಾಗುತ್ತಿದೆ. ರೈತ ದೇಶದ ಬೆನ್ನೆಲುಬು ಎಂದು ಹೇಳಲಾಗುತ್ತಿದ್ದು ಆತ ಉತ್ತಿ ಬೆಳೆದರೆ ಮಾತ್ರವೇ ನಮಗೆ ಸರಿಯಾದ ಕಾಲಕ್ಕೆ ಆಹಾರ ತಿಂದು ಉಂಡು ನಾವು ಸುಖ ಸಂತೋಷದಿಂದ ಇರಬಹುದು.

ಆದರೆ ಇದೀಗ ಕೃಷಿ ಕ್ಷೇತ್ರದ ಕಡೆ ಹೊಲವನ್ನು ಹೊಂದಿದವರು ಇವತ್ತಿನ ದಿನಮಾನಗಳಲ್ಲಿ ತೀರಾ ಕಡಿಮೆ ಜನರಿದ್ದಾರೆ. ಹಾಗಾಗಿ ಸರ್ಕಾರವು ಸಹ ಹೊಸ ಹೊಸ ಯೋಜನೆಗಳನ್ನು ನೀತಿ ಸೇವಾ ಸೌಲಭ್ಯಗಳನ್ನು ಕೃಷಿಕರಿಗೆ ನೀಡುತ್ತಿದ್ದು ಇದೀಗ ಮತ್ತೊಂದು ಕಾರ್ಡನ್ನು ಕೃಷಿಕರಿಗೆ ನೀಡಲು ಸರ್ಕಾರ ಮುಂದಾಗಿದೆ. ಹಾಗಾದರೆ ಕೃಷಿಕರಿಗೆ ಯಾವ ರೀತಿಯ ಕಾರನ್ನು ಸರ್ಕಾರ ನೀಡುತ್ತಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಕೃಷಿಕರ ಗುರುತಿನ ಚೀಟಿ :
ರಾಜ್ಯದ್ಯಂತ ಈ ಬಾರಿ ಮಳೆಯ ಪ್ರಮಾಣ ತೀರಾ ಕಡಿಮೆ ಇದ್ದು ಅನೇಕ ವಿಧವಾಗಿ ಮಳೆ ಬರದ ಕಾರಣ ಸಾಕಷ್ಟು ನಷ್ಟವನ್ನು ರೈತರು ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯು ಕೇವಲ ವಿದ್ಯುತ್ ಸಮಸ್ಯೆ ಮಾತ್ರವಾಗಿರದೆ ಕೃಷಿ ಭೂಮಿಗೂ ಸಹ ಅಕಾಲಿಕ ಮಳೆ, ದೊಡ್ಡ ಹಾನಿ ಉಂಟುಮಾಡಿದೆ ಎಂದು ಹೇಳಬಹುದು. ಮಳೆಯನ್ನೇ ನಂಬಿದಂತಹ ರೈತರು ಹುಟ್ಟಿರುವಂತಹ ಬೆಳೆಗೆ ಕಂಗಾಲಾಗಿ ಕಷ್ಟಪಟ್ಟು ನೀರನ್ನು ಒದಗಿಸಿ ಇನ್ನೇನು ಕಟಾವು ಮಾಡಬೇಕು ಎನ್ನುವ ಸಂದರ್ಭದಲ್ಲಿ ಮಳೆ ಬಂದು ಬೆಳೆಯಲ್ಲ ಹಾನಿಯಾಗಿದೆ. ಹಾಗಾಗಿ ಸರ್ಕಾರವು ಇದೀಗ ಇಂತಹ ಕಾಳಿಕಾ ಸಂದರ್ಭದಲ್ಲಿ ರೈತರಿಗೆ ನೆರವಾಗುವ ಉದ್ದೇಶದಿಂದ ಕೃಷಿಕರ ಗುರುತಿನ ಚೀಟಿ ನೀಡುತ್ತಿದ್ದು ಈ ಚೀಟಿಯು ರೈತರಿಗೆ ಸಾಕಷ್ಟು ಸಹಕಾರಿಯಾಗಲಿದೆ.
ಕೃಷಿಕರ ಗುರುತಿನ ಚೀಟಿಯ ಉಪಯೋಗ :
ರೈತರ ಗುರುತಿನ ಸಂಖ್ಯೆ ಎಫ್ಐಡಿ ನೀಡಲು ಸರ್ಕಾರವು ಕಡ್ಡಾಯ ಮಾಡಲಾಗುತ್ತಿದ್ದು ಕನಿಷ್ಠ ಬೆಂಬಲ ಬೆಲೆ ಮುಖಾಂತರ ಕೃಷಿ ಉತ್ಪನ್ನ ಮಾರಾಟ ಮಾಡಲು ಹಾಗೂ ಬೆಳೆ ಹಾನಿ ಪರಿಹಾರ ಪಡೆಯಲು, ಬೆಳೆ ವಿಮೆ ನೋಂದಣಿಗೆ ಹೀಗೆ ಅನೇಕ ಪ್ರಕ್ರಿಯೆಗಳಿಗೆ ಈ ಕಾರ್ಡ್ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಲಿದೆ ಎಂದು ಸರ್ಕಾರ ತಿಳಿಸಿದೆ. ಈ ಕಾರ್ಡ್ ಹೊಂದಿದ್ದವರು ಮಾತ್ರವೇ ರವು ರೈತರಿಗೆ ನೀಡುವಂತಹ ಎಲ್ಲಾ ವಿಧವಾದ ಸೇವಾ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಬಂದಿರುವವರಿಗೆ ಮಾತ್ರವೇ ಸರ್ಕಾರವು ಇದೀಗ ಅನೇಕ ಸೌಲಭ್ಯಗಳನ್ನು ನೀಡಬೇಕೆಂದು ತೀರ್ಮಾನ ಮಾಡಿದೆ.
ಈ ಕೂಡಲೇ ರೈತರ ಕಾರ್ಡ್ ಮಾಡಿಸಿ :
ಕೃಷಿಕರ ಗುರುತಿನ ಕಾರ್ಡ್ ಮಾಡಿಸದೇ ಇದ್ದರೆ ಅಂತಹ ರೈತರಿಗೆ ಸರ್ಕಾರದಿಂದ ಸಿಗುವ ಪರಿಹಾರ ಮುತ್ತ ಸಿಗುವುದಿಲ್ಲ. ಹಾಗಾಗಿ ತಾವು ಹೊಂದಿರುವ ಎಲ್ಲ ಜಮೀನು ಗದ್ದೆ ಹಾಗೂ ತೋಟದ ಮಾಹಿತಿಯ ದಾಖಲೆಗಳನ್ನು ರೈತರು ತಂತ್ರಜ್ಞಾನ ಆಧಾರಿತ ದಾಖಲೆ ಮಾಡಬೇಕು. ಈ ಬಗ್ಗೆ ನಿಮಗೇನಾದರೂ ಗೊಂದಲ ಉಂಟಾದರೆ ಆ ಗೊಂದಲವನ್ನು ಸರಿಪಡಿಸಿಕೊಳ್ಳಲು ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕೇಂದ್ರ ಕಚೇರಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಲು ಸರ್ಕಾರವು ಕೃಷಿಕರಿಗೆ ಅವಕಾಶ ಕಲ್ಪಿಸಿದೆ.
ನೊಂದಣಿ ಮಾಡಿಸುವ ವಿಧಾನ :
ರೈತರು ಎಫ್ ಡಿ ಐ ಮಾಡಿಸದೇ ಇದ್ದರೆ ಇದನ್ನು ಹೇಗೆ ಮಾಡಿಸಬೇಕು ಎಂಬ ಯೋಚನೆಯಲ್ಲಿ ರೈತರಿದ್ದರೆ ಅವರಿಗೆ ಈ ಮಾಹಿತಿ ಹೆಚ್ಚು ಸಹಕಾರಿಯಾಗಲಿದೆ ಎಂದು ಹೇಳಬಹುದು. ಆಧಾರ್ ಕಾರ್ಡ್ ಪಹಣಿ ಬ್ಯಾಂಕ್ ಪಾಸ್ ಬುಕ್ ಹೀಗೆ ಎಲ್ಲಾ ದಾಖಲೆ ಪ್ರತಿಜತೆಗೆ ಕೃಷಿ ಅಥವಾ ತೋಟಗಾರಿಕೆ ಕಛೇರಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಎಫ್ ಐಡಿ ಕಾರ್ಡ್ ಅನ್ನು ಮೊಬೈಲ್ ಸಂಖ್ಯೆಯ ಮೂಲಕ ನಂದಣಿ ಮಾಡಿಸಿ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದೆ.
ಒಟ್ಟಾರೆಯಾಗಿ ಸರ್ಕಾರವು ಕೃಷಿಕರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಇದೀಗ ಕೃಷಿಕರ ಗುರುತಿನ ಚೀಟಿಯನ್ನು ಜಾರಿಗೆ ತಂದಿದ್ದು ಈ ಚೀಟಿಯ ಮೂಲಕ ಸಾಕಷ್ಟು ಪ್ರಯೋಜನಗಳನ್ನು ಪಡೆಯಲು ಸರ್ಕಾರವು ರೈತರಿಗೆ ಅವಕಾಶ ಕಲ್ಪಿಸಿದೆ. ಹಾಗಾಗಿ ಈ ಕೂಡಲೇ ಈ ಮಾಹಿತಿಯನ್ನು ನಿಮ್ಮೆಲ್ಲ ರೈತರಿಗೆ ಶೇರ್ ಮಾಡುವ ಮೂಲಕ ಅವರು ಸಹ ಈ ಕೃಷಿಕರ ಗುರುತಿನ ಚೀಟಿಯನ್ನು ಮಾಡಿಸುವಂತೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ವೈಯಕ್ತಿಕ ಸಾಲಕ್ಕಿಂತ ಅಗ್ಗದ ಸಾಲ ಬೇಕಾ? ಕಡಿಮೆ ಬಡ್ಡಿದರದಲ್ಲಿ PPF ಸಾಲ ಸಿಗಲಿದೆ
ಪಶುಸಂಗೋಪನೆ ಮಾಡಲು ಲೋನ್ ಗಾಗಿ ಹಂಬಲಿಸುತ್ತಿದ್ದೀರಾ? ಸರಿಯಾದ ಸಮಯಕ್ಕೆ ಸಿಗಲಿದೆ ಈ ಬ್ಯಾಂಕ್ ನಿಂದ ಅಧಿಕ ಸಾಲ!