rtgh

news

ಆಸಕ್ತರಿಗೆ ನಮ್ಮ ಮೆಟ್ರೋದಲ್ಲಿ ಉದ್ಯೋಗವಕಾಶ : ಕನ್ನಡಿಗರೇ ಕೂಡಲೇ ಅರ್ಜಿ ಹಾಕಿ, ಕೆಲವೇ ದಿನ ಬಾಕಿ ಇದೆ

Join WhatsApp Group Join Telegram Group
Job opportunity in our metro for interested

ನಮಸ್ಕಾರ ಸ್ನೇಹಿತರೆ, ನಮ್ಮ ಮೆಟ್ರೋದಲ್ಲಿ ಆಸಕ್ತ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸಲಾಗಿದೆ. ಬೆಂಗಳೂರಿನ ಬಿ ಎಂ ಆರ್ ಸಿ ಎಲ್ ನಲ್ಲಿ ಕೆಲಸ ಮಾಡಲು ಇಚ್ಚಿಸುವಂತಹ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ ಎಂದು ಹೇಳಬಹುದು. ಬೃಹತ್ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ವಾಹನಗಳ ದೃಟ್ಟನೆಯನ್ನು ನಿಯಂತ್ರಿಸುವ ಸಲುವಾಗಿ ಮೆಟ್ರೋ ಯೋಜನೆಯನ್ನು ಸರ್ಕಾರವು ಜಾರಿಗೆ ತಂದಿತು. ಈ ಯೋಜನೆಯಿಂದಾಗಿ ವಾಹನಗಳ ದಟ್ಟಣೆ ಕಡಿಮೆಯಾಗುವುದಲ್ಲದೆ ಉದ್ಯೋಗವಕಾಶಗಳು ಸಹ ಸೃಷ್ಟಿಯಾಗುತ್ತಲೇ ಇವೆ. ಇದೀಗ ನಮ್ಮ ಮೆಟ್ರೋದಲ್ಲಿ ಉದ್ಯೋಗವಕಾಶ ಸೃಷ್ಟಿಯಾಗಿದ್ದು ಸುಮಾರು 62 ಸಾವಿರದವರೆಗೆ ಸಂಬಳವನ್ನು ಸಹ ನೀಡಲಾಗುತ್ತಿದೆ ಹಾಗಾದರೆ ಯಾವ ಯಾವ ಉದ್ಯೋಗಗಳು ನಮ್ಮ ಮೆಟ್ರೋದಲ್ಲಿ ಇದೆ ಎಂಬುದನ್ನು ಈ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ.

Job opportunity in our metro for interested

ನಮ್ಮ ಮೆಟ್ರೋದಲ್ಲಿ ಉದ್ಯೋಗವಕಾಶ :

ಸರ್ಕಾರವು ಜಾರಿಗೆ ತಂದಂತಹ ಮೆಟ್ರೋ ಯೋಜನೆಯು ಇದೀಗ ಹಲವು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಹತ್ತು ಜನರಲ್ ಮ್ಯಾನೇಜರ್ ಡಿ ವೈ ಗೆ ಅರ್ಜಿ ಸಲ್ಲಿಸಲು ಬಿ ಎಂ ಆರ್ ಸಿ ಎಲ್ ನಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಹೌದು ಇದೀಗ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಬಿವೈ ಭರ್ತಿ ಮಾಡಲು ಹಾಗೂ ಜನರಲ್ ಮ್ಯಾನೇಜರ್ ಅನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬಿ ಎಂ ಆರ್ ಸಿ ಎಲ್ ಅಧಿಕೃತ ಅಧಿಸೂಚನೆಯ ಮೂಲಕ ನವೆಂಬರ್ 2023ರಲ್ಲಿ ಜನರಲ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು ಈ ಅವಕಾಶವನ್ನು ಬೆಂಗಳೂರು ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವಂತಹ ಉದ್ಯೋಗ ಆಕಾಂಕ್ಷಿಗಳು ಬಳಸಿಕೊಳ್ಳಬಹುದಾಗಿದೆ.

ಖಾಲಿ ಇರುವ ಹುದ್ದೆಗಳು :

ನಮ್ಮ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ದಲ್ಲಿ ಇದೀಗ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಹವಾನಿಸಲಾಗಿದೆ ಆ ಹುದ್ದೆಗಳನ್ನು ಈ ಕೆಳಕಂಡಂತೆ ನೋಡಬಹುದು,

10 ಒಟ್ಟು ಹುದ್ದೆಗಳ ಸಂಖ್ಯೆ:

ಬೆಂಗಳೂರು ಕರ್ನಾಟಕ ಉದ್ಯೋಗ ಸ್ಥಳವಾಗಿದೆ. ಜನರಲ್ ಮ್ಯಾನೇಜರ್ ಮತ್ತು ಡಿ ವೈ ಪ್ರಧಾನ ವ್ಯವಸ್ಥಾಪಕರು ಹುದ್ದೆಯ ಹೆಸರು.

ವೇತನ ಶ್ರೇಣಿ :

ನಮ್ಮ ಬೆಂಗಳೂರು ಮೆಟ್ರೋದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಇದರ ವೇತನ ಶ್ರೇಣಿಯನ್ನು ನೋಡುವುದಾದರೆ ಪ್ರತಿ ತಿಂಗಳು 63880-160620 ರೂಪಾಯಿಗಳವರೆಗೂ ನಿಗದಿಪಡಿಸಲಾಗಿದೆ.

ಬಿ ಎಂ ಆರ್ ಸಿ ಎಲ್ ನ ಶೈಕ್ಷಣಿಕ ಅರ್ಹತೆಗಳು :

ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಅಭ್ಯರ್ಥಿಗಳು ಸಿಎಸ್‌ಇ, ಇಸಿಇ, ಇಇಇ, ಮೆಕಾನಿಕಲ್, ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಿ ಇ ಅಥವಾ ಬಿ ಟೇಕನ್ನು ಪೂರ್ಣಗೊಳಿಸಿರಬೇಕು. ಜನರಲ್ ಮ್ಯಾನೇಜರ್ ಗೆ 50 ವರ್ಷ ವಯಸ್ಸಿನೊಳಗೆ ಇರಬೇಕು, 45 ವರ್ಷ ವಯಸ್ಸಿನೊಳಗೆ ಉಪ ಪ್ರಧಾನ ವ್ಯವಸ್ಥಾಪಕರಿಗೆ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ. ಈ ಶೈಕ್ಷಣಿಕ ಅರ್ಹತೆಯು ಬಿಎಂಆರ್‌ಸಿಎಲ್ ನ ಅಧಿಕೃತ ಅಧಿಸೂಚನೆಯ ಪ್ರಕಾರವಿದ್ದು ಈ ಅರ್ಹತೆಗಳ ಜೊತೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನಿಯಮಗಳ ಪ್ರಕಾರವೂ ಸಹ ಕೆಲವೊಂದು ಅರ್ಹತೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕು.

ಆಯ್ಕೆ ಮಾಡುವ ಪ್ರಕ್ರಿಯೆ

ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಹಾಗಾಗಿ ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು16-11-2023 ದಿನಾಂಕದಿಂದ 15 ಡಿಸೆಂಬರ್ 2023ರ ವರೆಗೆ ಕಾಲಾವಕಾಶವನ್ನು ನೀಡಿದ್ದು ಈ ಅವಧಿಯ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಆನ್ಲೈನ್ ಮೂಲಕ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬೇಕು. ಅಧಿಕೃತ ವೆಬ್ಸೈಟ್ ಎಂದರೆ https://english.bmrc.co.in ಈ ವೆಬ್ ಸೈಟಿಗೆ ಭೇಟಿ ನೀಡಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನು ಓದಿ : ರೈತರಿಗೆ ಗುಡ್ ನ್ಯೂಸ್ : ಕರ್ನಾಟಕದ ಎಲ್ಲಾ ಸಾಲ ಯೋಜನೆಗಳು ಪಟ್ಟಿ ಇಲ್ಲಿವೆ

ಅಗತ್ಯ ಇರುವ ದಾಖಲೆಗಳು :

ನಮ್ಮ ಮೆಟ್ರೋ ದಲ್ಲಿ ಉದ್ಯೋಗಾವಕಾಶವನ್ನು ಕಲ್ಪಿಸಿದ್ದು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ ಮೊಬೈಲ್ ನಂಬರ್ ಇಮೇಲ್ ಐಡಿ ಶೈಕ್ಷಣಿಕ ಅರ್ಹತೆ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.

ಹೀಗೆ ಬಿ ಎಂ ಸಿ ಆರ್ ಎಲ್ ಅಧಿಸೂಚನೆಯನ್ನು ಹುದ್ದೆಗಳಿಗೆ ಹೊರಡಿಸಿದ್ದು ಈ ಹುದ್ದೆಗಳನ್ನು ಪಡೆಯುವ ಮೂಲಕ ಸುಮಾರು 63,ಸಾವಿರದ ವರೆಗೆ ಸಂಬಳವನ್ನು ಪಡೆದು ಉದ್ಯೋಗವನ್ನು ಪಡೆಯಬಹುದಾಗಿದೆ. ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ನಮ್ಮ ಮೆಟ್ರೋದಲ್ಲಿ ಆಸಕ್ತರಿಗಾಗಿ ಉದ್ಯೋಗಾವಕಾಶವನ್ನು ಕಲ್ಪಿಸಲಾಗಿದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯದ ಹಣ ಈ ವರ್ಗದ ಜನರಿಗೆ ರದ್ದು : ಈ ಕೂಡಲೇ ನಿಮ್ಮ ಹೆಸರಿದೆಯೇ ಚೆಕ್ ಮಾಡಿಕೊಳ್ಳಿ

ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ TRP ಕೇಳಿದರೆ ಶಾಕ್ ಆಗ್ತೀರಾ.?

Treading

Load More...