ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ, ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಸದ್ಯ ಆಧಾರ್ ನಷ್ಟೆ ಪಾನ್ ಕಾರ್ಡ್ ಕೂಡ ಪ್ರಮುಖ ದಾಖಲೆಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ಯಾನ್ ಕಾರ್ಡ್ ಮಾಹಿತಿಯನ್ನು ನೀಡದಿದ್ದರೆ ಯಾವುದೇ ಕೆಲಸ ಕೂಡ ಪೂರ್ಣಗೊಳ್ಳುವುದಿಲ್ಲ ಎಂದರೆ ತಪ್ಪಾಗುವುದಿಲ್ಲ. ಇದೀಗ ಪಾನ್‌ಕಾರ್ಡ್ ಸಂಬಂಧಪಟ್ಟಂತೆ ಹೊಸ ನಿಯಮಗಳು ಜಾರಿಗೆ ಬಂದಿವೆ. ಇದರ ಬಗ್ಗೆ ನಾವು ಈಗ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಹಣಕಾಸಿನ ವಚಾರದಲ್ಲಿ ಪ್ರಮುಖ ದಾಖಲೆಯಾಗಿ ಪಾನ್‌ಕಾರ್ಡ್ ಪಾತ್ರವಹಿಸುತ್ತದೆ. ವೈಯಕ್ತಿಕ ಮಾಹಿತಿಯಲ್ಲಿ ಒಂದಾದಂತಹ ಪಾನ್ ಕಾರ್ಡ್ ಎಲ್ಲರೂ ಕೂಡ ಅವಶ್ಯವಾಗಿ ಹೊಂದಿರಬೇಕಾಗುತ್ತದೆ. ದೇಶದಲ್ಲಿ ಆದಾರ್ ಕಾರ್ಡ್ ಹಾಗೂ pan cardಗಳು ಎಷ್ಟು ಮುಖ್ಯ ಹಾಗೂ ಪ್ರಮುಖವಾದ ದಾಖಲೆಗಳಾಗಿವೆ ಎಂಬುದು ಎಲ್ಲರಿಗೂ ಗೊತ್ತಿರುವಂತಹ ವಿಷಯವಾಗಿದೆ.
ಒಬ್ಬರು ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಬಳಕೆ ಮಾಡಬಹುದೇ ಎಂಬ ಪ್ರಶ್ನೆಗೆ ಭಾರತದಲ್ಲಿ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ಪಾನ್ ಕಾರ್ಡ ನೀಡಲಾಗುವುದಿಲ್ಲ. ಆಧಾರ್ ನಂತೆಯೇ ಒಂದೇ ಪಾನ್ ಕಾರ್ಡ್ ನೀಡಲಾಗುತ್ತದೆ. ಪಾನ್ ಕಾರ್ಡ್ ಇನ್ನೊಬ್ಬರ ಖಾತೆಗೆ ವರ್ಗಾಯಿಸಲು ಸಾಧ್ಯವಿಲ್ಲ.
ಆದಾಯ ತೆರಿಗೆ ಇಲಾಖೆಯ ಪ್ರಕಾರ ಒಬ್ಬರಿಗೆ ಒಂದೇ ಪಾನ್ ಸಂಖ್ಯೆಯನ್ನು ನೀಡಬೇಕು ಅಥವಾ ಹೊಂದಿರಬೇಕು. ಒಬ್ಬ ವ್ಯಕ್ತಿ ಅಥವಾ ಕಂಪನಿಯು ಹೆಚ್ಚು ಪಾನ್ ಕಾರ್ಡ್ ಹೊಂದಿದ್ದರೆ ಅದು ಕಾನೂನು ಬಾಹಿರವಾಗಿದೆ. ಎಂದು ಹೇಳಬಹುದು. ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿರುವುದು ಇಲಾಖೆಯ ಗಮನಕ್ಕೆ ಬಂದರೆ TAX ಇಲಾಖೆಯು ಕಾನೂನು ಕ್ರಮವನ್ನು ತೆಗೆದುಕೊಳ್ಳಬಹುದು ಅಥವಾ ದಂಡವನ್ನು ಸಹ ವಿಧಿಸಬಹುದು.
ಇದನ್ನು ಸಹ ಓದಿ: ಆರ್‌ಬಿಐನಿಂದ ಬಿಗ್ ಅಲರ್ಟ್: ನಾಳೆಯಿಂದ 100,200,500 ರೂ ನೋಟುಗಳಿಗೆ ನಿಷೇಧಾಜ್ಞೆ ಜಾರಿ!
ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿದ್ದರೆ ಆದಾಯ ತೆರಿಗೆ ಕಾಯ್ದೆಯ ಪ್ರಕಾರ 1961ರ ಸೆಕ್ಷನ್ 272ಬಿ ಅಡಿಯಲ್ಲಿ ಕ್ರಮ ತೆಗೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ 2 ಪಾನ್ ಕಾರ್ಡ್ ಹೊಂದಿದವರಿಗೆ ದಂಡವನ್ನು ವಿಧಿಸುತ್ತದೆ. ಒಂದು ವೇಳೆ 2 ಪಾನ್ ಕಾರ್ಡ್ ಹೊಂದಿದ್ದರೆ ಸರೆಂಡರ್ ಕೂಡ ಮಾಡಬಹುದು. ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಕಾರ್ಡ್ ಸರೆಂಡರ್ ಮಾಡಬಹುದು.
ಆಫ್ ಲೈನ್ ಅಲ್ಲಿ ಪಾನ್ ಕಾರ್ಡ್ ಸರೆಂಡರ್ ಮಾಡುವ ವಿಧಾನ
- ಪಾನ್ ಕಾರ್ಡ್ ಅನ್ನು ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪಾರ್ಮ್ 49A ಅನ್ನು ಭರ್ತಿ ಮಾಡಬೇಕಾಗುತ್ತದೆ. ಸರೆಂಡರ್ ಮಾಡಬೇಕಾದ ಪಾನ್ ಸಂಖ್ಯೆಯನ್ನು ನಮೂದಿಸಿ ಹಾಗೂ ಫಾರ್ಮ್ ಅನ್ನು UTI ಅಥವಾ NSDL ಸೆಂಟರ್ ಗೆ ಸಲ್ಲಿಸಬೇಕು.
- ಅಧಿಕಾರ ವ್ಯಾಪ್ತಿಯ ಮೌಲ್ಯಮಾಪನ ಅಧಿಕಾರಿಗೆ ಪತ್ರ ಬರೆಯಬೇಕು ಹಾಗೂ ಪಾನ್ ಕಾರ್ಡ್ ವಿವರವನ್ನು ನಮೂದಿಸಬೇಕಾಗುತ್ತದೆ.
- NSDL ಸೆಂಟರ್‌ನಿಂದ ಸ್ವೀಕರಿಸಿದ ಸ್ವೀಕೃತಿ ಪ್ರತಿಯೊಂದಿಗೆ ನಕಲಿ ಪಾನ್ ಕಾರ್ಡ್ ಲಗತ್ತಿಸಿ ಹಾಗೂ ಅದನ್ನು ಸಲ್ಲಿಸಬೇಕಾಗುತ್ತದೆ.
ಆನ್ಲೈನ್ ಅಲ್ಲಿ ಪಾನ್ ಕಾರ್ಡ್ ಸರೆಂಡರ್ ಮಾಡುವ ವಿಧಾನ
- ಆನ್ಲೈನ್ ಪಾನ್ ಕಾರ್ಡ್ ಸರೆಂಡರ್ ಮಾಡಲು ಆದಾಯ ತೆರಿಗೆ ಇಲಾಖೆಯ ಪೋರ್ಟಲ್ ಗೆ ಭೇಟಿ ನೀಡಿ ಅಥವಾ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ಫಾರ್ಮ್ ನ ಮೇಲ್ಭಾಗದಲ್ಲಿ ನೀವು ಪ್ರಸ್ತುತ ಬಳಸುತ್ತಿರುವ ಪಾನ್ ಅನ್ನು ನಮೂದಿಸುವ ಮೂಲಕ ಪಾನ್ ಕಾರ್ಡ್ ನ ಬದಲಾವಣೆ ವಿನಂತಿಯ ಅರ್ಜಿ ನಮೂನೆಯನ್ನು ಸಲ್ಲಿಸಬೇಕು.
- ಫಾರ್ಮ್ 11 ಹಾಗೂ ಸಂಬಂಧಿತ ಪಾನ್ ಕಾರ್ಡ್ ನ ಪ್ರತಿಯನ್ನು ಅರ್ಜಿ ಫಾರಂನೊಂದಿಗೆ ಪ್ರಸ್ತುತಪಡಿಸಬೇಕಾಗುತ್ತದೆ.
ಇತರೆ ವಿಷಯಗಳು:
ಪಿಎಂ ಕಿಸಾನ್ ಹಣ ದುರುಪಯೋಗ: 81,000 ರೈತರ ಕಂತನ್ನು ಹಿಂಪಡೆದ ಸರ್ಕಾರ! ಕಾರಣ ಏನು ಗೊತ್ತಾ?
ಪಿಎಂ ಕಿಸಾನ್ 16ನೇ ಕಂತು ಬಿಡುಗಡೆಗೆ ಡೇಟ್ ಫಿಕ್ಸ್! 2000 ರೂಪಾಯಿ ರೈತರ ಖಾತೆಗೆ