ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ರೈತರಿಗಾಗಿ ಬರಪರಿಹಾರದ ಬಗ್ಗೆ ಮಹತ್ವದ ಮಾಹಿತಿಯನ್ನು ಪ್ರಕಟ ಮಾಡಿರುವುದರ ಬಗ್ಗೆ. ಈಗಾಗಲೇ ಸರ್ಕಾರವು 324 ಕೋಟಿ ಬರ ಪರಿಹಾರ ಹಣವನ್ನು ಘೋಷಣೆ ಮಾಡಲಾಗಿದೆ ಹಾಗಾಗಿ ನೀವು ಬರ ಪರಿಹಾರ ಪಡೆದುಕೊಳ್ಳಬೇಕಾದರೆ ನಿಮ್ಮ ಹೊಲದ ಸರ್ವೇ ನಂಬರ್ ಅನ್ನು ಫ್ರೂಟ್ಸ್ ಐಡಿಯಲ್ಲಿ ನಮೂದಿಸುವುದರ ಮೂಲಕ ಸರ್ಕಾರದಿಂದ ಬರ ಪರಿಹಾರದ ಹಣವನ್ನು ಪಡೆಯಬಹುದಾಗಿದೆ. ಹಾಗಾದರೆ ಸರ್ವೇ ನಂಬರ್ ಗಳು ಈ ಫ್ರೂಟ್ ಐಡಿಯಲ್ಲಿ ನಮೂದಿಸಬೇಕಾದರೆ ಏನೆಲ್ಲಾ ಮಾಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

ಎಫ್ ಐ ಡಿ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು :
ಗ್ರಾಮ ಆಡಳಿತ ಅಧಿಕಾರಿಗಳಿಂದ ರೈತರಿಗೆ ಒಂದು ಮಹತ್ವದ ಪ್ರಕಟಣೆಯನ್ನು ಹೊರಡಿಸಲಾಗಿದ್ದು ಆ ಪ್ರಕಟಣೆಯ ಮುಖಾಂತರ ಪ್ರತಿಯೊಬ್ಬ ರೈತರು ಸಹ ಎಫ್ ಐ ಡಿ ಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಜೀರೋ 5 ಸರ್ವೆ ನಂಬರ್ ಒಬ್ಬ ರೈತನಿಗೆ ಇದ್ದು ಒಂದು ಸರ್ವೇ ನಂಬರ್ ಮಾತ್ರ ಎಫ್ಐ ಡಿ ನಂಬೋದು ಮಾಡಿಸಿದ್ದರೆ ಆ ಎಫ್ ಐ ಡಿ ಯನ್ನೂ ಎಲ್ಲಾ ಸರ್ವೇ ನಂಬರ್ ಗಳಿಗೆ ಸೇರಿಸಿ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.
ವೈಯಕ್ತಿಕವಾಗಿ ಎಫ್ ಐ ಡಿ ಯನ್ನು ಜಂಟಿ ಇರುವ ಖಾತೆದಾರರು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಇದರಿಂದ ನಿಮಗೆ ಬರ ಪರಿಹಾರದ ಹಣವು ಜಮಾ ಆಗುತ್ತದೆ. ನೀವೇನಾದರೂ ಎಫ್ಐಡಿಯನ್ನು ನೋಂದಣಿ ಮಾಡಿಸಿಕೊಳ್ಳದೆ ಇದ್ದರೆ ನಿಮಗೆ ಸರ್ಕಾರದಿಂದ ಬರುವ ಬರ ಪರಿಹಾರದ ಹಣ ಜಮಾ ಆಗುವುದಿಲ್ಲ.
ಎಫ್ ಐ ಡಿ ಯನ್ನು ಮಾಡಿಸಲು ಬೇಕಾದ ದಾಖಲೆಗಳು :
ರೈತರು ತಮ್ಮ ಸರ್ವೆ ನಂಬರ್ ಗಳಿಗೆ ಎಫ್ ಐ ಡಿ ಯನ್ನು ಮಾಡಿಸಿಕೊಳ್ಳಬೇಕಾದರೆ ಕೆಲವೊಂದು ಅಗತ್ಯ ಕಲ್ಲುಗಳನ್ನು ಹೊಂದಿರಬೇಕು ಅವುಗಳೆಂದರೆ ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡ್ ಪಹಣಿಗಳು ಅಗತ್ಯವಾಗಿದ್ದು ಇವುಗಳನ್ನು ತೆಗೆದುಕೊಂಡು ನಿಮ್ಮ ರೈತ ಸಂಪರ್ಕ ಕೇಂದ್ರವನ್ನು ಹಾಗೂ ನಿಮ್ಮ ಗ್ರಾಮ ಲೆಕ್ಕಿಗರನ್ನು ಸಂಪರ್ಕಿಸುವ ಮೂಲಕ ಎಫ್ ಐ ಡಿ ಯನ್ನು ಮಾಡಿಸಬಹುದಾಗಿದೆ.
ಹಾಗಾಗಿ ಈ ಕೂಡಲೇ ರೈತರು, ಕೃಷಿ ಅಥವಾ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಎಫ್ ಐ ಡಿ ಯನ್ನು ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ದಾಖಲಿಸಿದ ಜಮೀನಿನ ವಿಸ್ತೀರ್ಣಗಳಿಗೆ ಮಾತ್ರ ರೈತ ಬಾಂಧವರು ಸರ್ಕಾರದ ಪರಿಹಾರ ಸೌಲಭ್ಯ ದೊರೆಯುವುದರಿಂದ ತಾವು ಹೊಂದಿರುವ ಎಲ್ಲ ಜಮೀನಿನ ಸರ್ವೆ ನಂಬರ್ ಗಳ ವಿಸ್ತೀರ್ಣಗಳನ್ನು ಕೂಡಲೇ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿಕೊಳ್ಳುವುದು ಅಗತ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ರೈತರಿಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಯೋಚಿಸುತ್ತಿದ್ದರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡುವುದರ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಫ್ರೂಟ್ಸ್ ನಂಬರ್ ಎಂದರೇನು ?
ತಮ್ಮ ಕೃಷಿ ಜಮೀನಿನ ಮಾಹಿತಿಯನ್ನು ರೈತರು ಈ ಪೋರ್ಟಲ್ಲಿ ನೋಂದಾಯಿಸಿದಾಗ ರೈತರಿಗೆ fid ನಂಬರ್ ದೊರೆಯುತ್ತದೆ. ಒಬ್ಬ ವ್ಯಕ್ತಿಗೆ ಹೇಗೆ ಆಧಾರ್ ಗುರುತಿನ ಚೀಟಿಯಾಗಿದೆಯೋ ಅದರಂತೆಯೇ ಒಬ್ಬ ರೈತನಿಗೆ fid ಗುರುತಿನ ಚೀಟಿ ಇದ್ದಂತೆ. ರೈತನು ಜಾಗದ ವಿವರ ಹಾಗೂ ತಾನು ಬೆಳೆದ ಬೆಳೆಗಳ ಎಲ್ಲಾ ವಿವರಗಳನ್ನು ಒಳಗೊಂಡಿರುವಂತಹ ಸಾಧನವಾಗಿದೆ ಎಂದು ಹೇಳಬಹುದಾಗಿದೆ ಅಲ್ಲದೆ ದರದಿಂದ ದೊರೆಯುವ ಎಲ್ಲಾ ಕೃಷಿ ಸೌಲಭ್ಯಗಳನ್ನು ಪಡೆದುಕೊಳ್ಳಲು ರೈತರು ಇಲ್ಲಿ ಮಾಹಿತಿ ನೋಂದಾಯಿಸಿಕೊಳ್ಳುವುದು ಅಗತ್ಯವಾಗಿದೆ.
ಫ್ರೂಟ್ ಐಡಿ ನೊಂದಣಿ ಹೇಗೆ :
ನೊಂದಾಯಿಸಿಕೊಳ್ಳಬೇಕಾದರೆ ರೈತರು ನಿಮ್ಮ ಹತ್ತಿರದ ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಹೀಗೆ ಯಾವುದಾದರು ಒಂದು ಇಲಾಖೆಗೆ ಭೇಟಿ ನೀಡುವುದರ ಮೂಲಕ ರೈತರು ಆರ್ ಟಿ ಸಿ ಉದ್ದಾರ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಪಾಸ್ಪೋರ್ಟ್ ಸೈಜ್ ಫೋಟೋ ಮೊಬೈಲ್ ನಂಬರ್ ಹೀಗೆ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ನಿಮ್ಮ ಹೆಸರನ್ನು ಪೋರ್ಟಲ್ ನಲ್ಲಿ 24 ಗಂಟೆ ಒಳಗೆ ಸೇರ್ಪಡೆಗೊಳಿಸಬಹುದಾಗಿದೆ. ಈ ಫೋಟೋನಲ್ಲಿ ಸರ್ಕಾರದ ಆದೇಶದಂತೆ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳದೆ ಇದ್ದರೆ ಆತನಿಗೆ ಅಂದರೆ ರೈತರಿಗೆ ಬೆಳೆ ಸಾಲ ಬೆಳೆ ವಿಮೆ ಕೃಷಿಕನ ಮಕ್ಕಳಿಗೆ ಸಿಗುವ ವಿದ್ಯಾನಿಧಿ ಹೀಗೆ ಸರ್ಕಾರದಿಂದ ಸಿಗುವ ಇತರೆ ಸೌಲಭ್ಯಗಳು ದೊರೆಯುವುದಿಲ್ಲ.
ಹೀಗೆ ಸರ್ಕಾರದಿಂದ ಸೌಲತ್ತುಗಳನ್ನು ಪಡೆದುಕೊಳ್ಳಬೇಕಾದರೆ ಎಫ್ ಐ ಡಿ ಅಗತ್ಯವಾಗಿ ಬೇಕು ಹಾಗಾಗಿ ಈ ಕೂಡಲೇ ರೈತರು ಇದನ್ನು ಮಾಡಿಸುವುದು ಅಗತ್ಯವಾಗಿದೆ.
ಇದನ್ನು ಓದಿ : ಉಜ್ವಲ ಯೋಜನೆಯಿಂದ ಗುಡ್ ನ್ಯೂಸ್ : ಸಬ್ಸಿಡಿ ಹಣ ಹೆಚ್ಚಳ ಮಾಡಿದ ಸರ್ಕಾರ! ಎಷ್ಟು ಗೊತ್ತಾ?
ಮೊಬೈಲ್ ನಲ್ಲಿ fid ನೊಂದಣಿ ಮಾಡುವ ವಿಧಾನ :
ರೈತರು ಇದೀಗ ಮೊಬೈಲ್ನಲ್ಲಿ ಎಫ್ ಐ ಡಿ ಯನ್ನು ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://fruits.karnataka.gov.in/OnlineUserLogin.aspx ಈ ವೆಬ್ ಸೈಟಿಗೆ ಭೇಟಿ ನೀಡುವುದರ ಮೂಲಕ fid ಯನ್ನು ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಹೀಗೆ ಸರ್ಕಾರವು ರೈತರಿಗಾಗಿ ಹೆಚ್ಚಿನ ಸವಲತ್ತು ನೀಡುವ ಉದ್ದೇಶದಿಂದ fid ನಂಬರನ್ನು ನೀಡಿದ್ದು ಈ ನಂಬರ್ ಅನ್ನು ಹೊಂದುವ ಮೂಲಕ ರೈತರು ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಈ ಸೌಲಭ್ಯಗಳನ್ನು ಪಡೆಯುವುದರಿಂದ ರೈತರು ಸ್ವಲ್ಪಮಟ್ಟಿಗೆ ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿ ಹೆಚ್ಚು ಹೆಚ್ಚು ಬೆಳೆಯನ್ನು ಬೆಳೆಯುವುದರ ಮೂಲಕ ಇಳುವರಿಯನ್ನು ಪಡೆಯಲು ಹಾಗೂ ಬೆಳೆ ಹಾನಿ ಉಂಟಾದರೆ ಅವುಗಳಿಗೆ ಪರಿಹಾರವನ್ನು ಸಹ ಕಂಡುಕೊಳ್ಳಲು ಇದು ಸಾಕಷ್ಟು ಸಹಾಯ ಮಾಡುತ್ತದೆ ಎಂದು ಹೇಳಬಹುದು. ಹಾಗಾಗಿ ಈ ಮಾಹಿತಿಯನ್ನು ನಿಮ್ಮೆಲ್ಲ ರೈತ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.