ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ತಿಳಿಸಲಾಗುತ್ತಿದೆ. ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ದಾರಿಗೆ ತಿದ್ದುಪಡಿ ನೀಡಿದ ನಂತರ ಮತ್ತೊಂದು ಸಿಹಿ ಸುದ್ದಿಯನ್ನು ನೀಡಲು ನಿರ್ಧರಿಸಿದೆ. ತಮ್ಮ ವ್ಯಾಪ್ತಿಯಲ್ಲಿ ವಯೋವೃದ್ಧರು ಪಡಿತರ ಪಡೆಯಲು ಹರಸಾಹಸ ಪಡುತ್ತಿರುವುದನ್ನು ರಾಜ್ಯ ಸರ್ಕಾರ ಗಮನಿಸಿದ್ದು ಈ ಸಮಸ್ಯೆಯನ್ನು ತಪ್ಪಿಸುವ ಸಲುವಾಗಿ 90 ವರ್ಷ ದಾಟಿದವರ ಮನೆ ಬಾಗಿಲಿಗೆ ಪಡಿತರವನ್ನು ಪೂರೈಸಲು ಹೊಸ ಯೋಜನೆಯನ್ನು ಹಾಕಿಕೊಂಡಿದೆ. ಆದರೆ ಆ ಹೊಸ ಯೋಜನೆ ಯಾವುದು ಎಂಬುದರ ಪೂರ್ಣ ಮಾಹಿತಿ ಇದೀಗ ನೀವು ನೋಡಬಹುದು.

ರಾಜ್ಯ ಸರ್ಕಾರದಿಂದ ಹೊಸ ಯೋಜನೆ :
90 ವರ್ಷ ದಾಟಿದ ಬಿಪಿಎಲ್ ಪಡಿತರದಾರರಿಗೆ ಹೊಸ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಈ ಯೋಜನೆಯಡಿಯಲ್ಲಿ ಮನೆ ಬಾಗಿಲಿಗೆ ಪಡಿತರವನ್ನು ಪೂರೈಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಯೋಜನೆಯನ್ನು ರಾಜ್ಯ ಸರ್ಕಾರವು ನವೆಂಬರ್ ನಲ್ಲಿ ಅಧಿಕೃತವಾಗಿ ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹಣ ವರ್ಗಾವಣೆಯನ್ನು ಆರಂಭಿಸಿದ್ದು 2023 ಜುಲೈ 10 ರಿಂದ 5 ಕೆಜಿ ಅಕ್ಕಿಗೆ ಬದಲಾಗಿ ಹಣವನ್ನು ವರ್ಗಾವಣೆ ಮಾಡುತ್ತಿದೆ. ಪ್ರತಿ ತಿಂಗಳು ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ಕರ್ನಾಟಕ ಸರ್ಕಾರವು 34 ರೂಪಾಯಿಗಳಂತೆ ಕೆಜಿಗೆ ನಗದು ಪಾವತಿಸಲು ಸರ್ಕಾರ ನಿರ್ಧರಿಸಿದೆ ಆದರೆ ಉಳಿದ 5 ಕೆಜಿ ಅಕ್ಕಿಯನ್ನು ಪಡೆಯಲು ಜನಸಾಮಾನ್ಯರು ನ್ಯಾಯಬೆಲೆ ಅಂಗಡಿಗೆ ಹೋಗಲೇಬೇಕಿತ್ತು, ಅದರಲ್ಲೂ ವಯಸ್ಸಾದವರಿಗೆ ಈ ಪರಿಸ್ಥಿತಿ ಕೆಲವೊಮ್ಮೆ ತೊಂದರೆಯನ್ನುಂಟು ಮಾಡುತ್ತಿದೆ. ಹಾಗಾಗಿ ಇಂಥವರಿಗಾಗಿಯೇ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಅನ್ನಸುವಿಧ ಆಪ್ :
ರಾಜ್ಯದಲ್ಲಿ ನ್ಯಾಯಬೆಲೆ ಅಂಗಡಿಗೆ ಹೋಗಲು ಸಾಧ್ಯವಾಗದೆ ಇರುವಂತಹ ಜನಸಾಮಾನ್ಯರಿಗಾಗಿ ರಾಜ್ಯ ಸರ್ಕಾರವು ಈ ಹೊಸ ಆಪ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ರಾಜ್ಯ ಸರ್ಕಾರ ಗಮನಿಸಿರುವ ಪ್ರಕಾರ 8000 ಫಲಾನುಭವಿಗಳನ್ನು ಗುರುತಿಸಿದ್ದು ಪ್ರಯೋಗಾತ್ಮಕವಾಗಿ ಈಗಾಗಲೇ 200 ಫಲಾನುಭವಿಗಳಿಗೆ ಪಡಿತರವನ್ನು ಮನೆ ಬಾಗಿಲಿಗೆ ಪೂರೈಕೆ ಮಾಡಲಾಗಿದೆ. ಇನ್ನು ಹಣಕಾಸು ಇಲಾಖೆಗೆ ಈ ಯೋಜನೆಗೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಅನುಮೋದನೆ ದೊರೆತ ನಂತರವೇ ಅಧಿಕೃತವಾಗಿ ನವೆಂಬರ್ ನಿಂದ ಈ ಯೋಜನೆ ಜಾರಿಯಾಗಲಿದ್ದು ಈ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ. ಅನ್ನ ಸುವಿಧ ಆಪ್ ನಲ್ಲಿ ಫಲಾನುಭವಿ ಕೊಟ್ಟಿರುವಂತಹ ಮನೆಯ ವಿಳಾಸಕ್ಕೆ ಜಿಪಿಎಸ್ ಮೂಲಕ ಹಣವನ್ನು ವರ್ಗಾಯಿಸಲು ನಿರ್ಧರಿಸಲಾಗಿದೆ ಇದರಿಂದ ಸುಲಭವಾಗಿ ಪಡಿತರ ವಿತರಣೆ ಅನುಕೂಲವಾಗಲಿದೆ ಎಂದು ಕೆಲವೊಂದು ಮೂಲಗಳು ತಿಳಿಸಿವೆ.
ಇದನ್ನು ಓದಿ : ಗೃಹಲಕ್ಷ್ಮಿ ಹಣ ಪಡೆಯಲು ಮುಂದಿನ ತಿಂಗಳು ಈ ಕೆಲಸ ಕಡ್ಡಾಯ
90 ವರ್ಷ ಮೇಲ್ಪಟ್ಟವರಿಗೆ ಈ ಯೋಜನೆ :
ಅನ್ನ ಸುವಿದ ಯೋಜನೆಯ ಹೆಸರಿನಲ್ಲಿ 90 ವರ್ಷ ಮೇಲ್ಪಟ್ಟಂತಹ ಬಿಪಿಎಲ್ ಪಡಿತರಾರರಿಗೆ ಈ ಯೋಜನೆ ಲಭ್ಯವಾಗಲಿದೆ. ಉಚಿತಕ್ಕೆ ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರವು ಹೆಚ್ಚುವರಿ 5 ಕೆಜಿ ಅಕ್ಕಿಗೆ ಬದಲಾಗಿ ಹಣವನ್ನು 34 ರೂಪಾಯಿನಂತೆ ನೀಡಲಾಗುತ್ತದೆ ಆದರೆ ಅಕ್ಕಿಯನ್ನು ಪಡೆಯಲು ನ್ಯಾಯಬೆಲೆ ಅಂಗಡಿಗೆ ಹೋಗಬೇಕಾಗುತ್ತದೆ. ಆದರೆ ಕೆಲವೊಂದಿಷ್ಟು ಪಡಿತರದಾರರು ಸಾಧ್ಯವಾಗದ ಕಾರಣ ಅವರಿಗೆ ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕೆಹೆಚ್ ಮುನಿಯಪ್ಪ ತಿಳಿಸಿದ್ದಾರೆ. ಇನ್ನು ರೇಷನ್ ವಿತರಣೆ ನಂತರ ಇದರಿಂದ ಫಲಾನುಭವಿಯ ರೇಷನ್ ಕಾರ್ಡ್ ಸಂಖ್ಯೆ ಹಾಗೂ ಎಷ್ಟು ಗಂಟೆಗೆ ಯಾವಾಗ ರೇಷನ್ ವಿತರಣೆಯಾಗಿದೆ ಹಾಗೂ ಯಾರು ಇದನ್ನು ಪರಿಶೀಲಿಸಿದ್ದಾರೆ ಎಂಬ ಮೊದಲಾದ ಮಾಹಿತಿಯನ್ನು ಇಲಾಖೆಗೆ ಲಭ್ಯವಾಗುತ್ತಿರುತ್ತದೆ. ಒಟ್ಟಾರೆಯಾಗಿ ಈ ಯೋಜನೆಯಿಂದ ಸಾಕಷ್ಟು ಪ್ರಯೋಜನವನ್ನು 90 ವರ್ಷ ಮೇಲ್ಪಟ್ಟ ಪಡಿತರದಾರರು ಪಡೆಯಲಿದ್ದಾರೆ ಎಂದು ಹೇಳಬಹುದಾಗಿದೆ.
ಹೀಗೆ ರಾಜ್ಯ ಸರ್ಕಾರವು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರವಲ್ಲದೆ ವಯೋವೃದ್ಧ ರಿಗೂ ಸಹ ನೆರವಾಗುವ ಉದ್ದೇಶದಿಂದ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು 90 ವರ್ಷ ಮೇಲ್ಪಟ್ಟವರು ಪಡೆದುಕೊಳ್ಳಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗು ಬಂಧುಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಕಾರ್ಮಿಕ ಮಕ್ಕಳಿಗೆ ಗುಡ್ ನ್ಯೂಸ್! 7 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸ್ಕಾಲರ್ಶಿಪ್; ಯಾವಾಗ ಬರಲಿದೆ ಗೊತ್ತಾ?