rtgh

Blog

ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಬಿಡುಗಡೆ : 26 ಜಿಲ್ಲೆಗಳಿಗೆ ಹಣ ಬಿಡುಗಡೆ

Join WhatsApp Group Join Telegram Group
Release of third tranche of Grilakshmi Yojana For 26 districts

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಬಿಡುಗಡೆಯಾಗಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ರಾಜ್ಯದ ನಾಗರಿಕರಿಗಾಗಿ 5 ಗ್ಯಾರಂಟಿ ಯೋಜನೆಗಳನ್ನು ಕರ್ನಾಟಕ ರಾಜ್ಯ ಸರ್ಕಾರವು ಘೋಷಿಸಿತ್ತು. ಆ ಯೋಜನೆಗಳಲ್ಲಿ ಶಕ್ತಿ ಯೋಜನೆ ಅನ್ನ ಭಾಗ್ಯ ಯೋಜನೆ ಗೃಹಲಕ್ಷ್ಮಿ ಯೋಜನೆ ಹಾಗೂ ಗೃಹ ಜ್ಯೋತಿ ಯೋಜನೆಗಳು ಜಾರಿಯಾಗಿದ್ದು ಅತಿ ಹೆಚ್ಚು ಚರ್ಚೆಯಲ್ಲಿ ಇರುವಂತಹ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆಯಾಗಿದೆ ಎಂದು ಹೇಳಬಹುದು. ಈ ಯೋಜನೆಗೆ ಸಂಬಂಧಿಸಿದಂತೆ ಕೆಲವೊಂದು ಮಹತ್ವದ ವಿಷಯಗಳನ್ನು ಈ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ.

Release of third tranche of Grilakshmi Yojana For 26 districts

ಅತಿ ಹೆಚ್ಚು ಚರ್ಚೆಯಲ್ಲಿದ್ದ ಯೋಜನೆ :

ಕರ್ನಾಟಕ ರಾಜ್ಯ ಸರ್ಕಾರವು ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿದ್ದ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆ ಯಾಗಿದೆ. ಏಕೆ ಅತಿ ಹೆಚ್ಚು ಚರ್ಚೆಯಲ್ಲಿತ್ತು ಎಂದು ನೋಡುವುದಾದರೆ ಪಡಿತರ ಚೀಟಿ ಹೊಂದಿರುವ ಕುಟುಂಬದ ಮುಖ್ಯಸ್ಥರು ಸರ್ಕಾರದಿಂದ ಸಹಾಯಧನವನ್ನು ಪ್ರತಿ ತಿಂಗಳು dbt ಮೂಲಕ ನೇರವಾಗಿ ಅವರ ಖಾತೆಗೆ ಪಡೆಯುತ್ತಾರೆ. ಹಣದುಬ್ಬರದಿಂದಾಗಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಈ ಹಣವನ್ನು ಮಹಿಳೆಯ ಹಾಗೂ ಮಕ್ಕಳ ಪೋಷ್ಟಿಕತೆಗೆ ಕೊರತೆ ಆಗದಂತೆ ಕುಟುಂಬದ ನಿರ್ವಹಣೆಗಾಗಿ ಬಳಸಿಕೊಳ್ಳಲಿ ಎಂಬುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆ ಮೂಲಕ ಲಿಂಗ ಸಮಾನತೆಯನ್ನು ಹಾಗೂ ಮಹಿಳೆಯರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿತ್ತು.

ಆದರೆ 1.10 ಕೋಟಿ ಮಹಿಳೆಯರಲ್ಲಿ ಕೇವಲ 80% ರಷ್ಟು ಫಲಾನುಭವಿಗಳು ಈ ಯೋಜನೆ ಬಿಡುಗಡೆಯಾದ ಆಗಸ್ಟ್ 30ರಿಂದ ಮೊದಲನೇ ಕಂತಿನ ಹಣ ಬಿಡುಗಡೆ ಸಮಯದಲ್ಲಿಯೂ ತಮ್ಮ ಖಾತೆಗಳಿಗೆ ಹಣವನ್ನು ಪಡೆದಿದ್ದಾರೆ. ಆದರೆ ಇನ್ನ ಉಳಿದ 20% ಯೋಜನೆ ಲಾಭವನ್ನು ಪಡೆಯುವಲ್ಲಿ ಕೆಲವೊಂದು ಸಮಸ್ಯೆಗಳು ಉಂಟಾದ ಕಾರಣ ಅವುಗಳನ್ನು ತಿದ್ದುಪಡಿ ಮಾಡಿಕೊಳ್ಳುವುದರ ಮೂಲಕ ಮತ್ತೊಮ್ಮೆ ಅವಕಾಶವನ್ನು ಮಾಡಿಕೊಟ್ಟಿದ್ದು ಇದೀಗ ಎರಡನೇ ಕಂತಿನ ಹಣವನ್ನು ಶೇಕಡ 90ರಷ್ಟು ಜನರು ಪಡೆದಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ :

ಈಗ ಅಂತಿಮವಾಗಿ ನೂರಕ್ಕೆ ನೂರರಷ್ಟು ಎಲ್ಲಾ ಫಲಾನುಭವಿಗಳ ಖಾತೆಗೂ ಮೂರನೇ ಕಂತಿನ ಹಣವನ್ನು ತಲುಪಿಸಬೇಕು ಎನ್ನುವ ಗುರಿಯನ್ನು ರಾಜ್ಯ ಸರ್ಕಾರವು ಹೊಂದಿದ್ದು ಇದಕ್ಕಾಗಿ ಪರಿಹಾರ ಮಾರ್ಗವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಕಂಡುಕೊಂಡಿದ್ದು ಪ್ರತಿ ಗ್ರಾಮ ಪಂಚಾಯಿತಿಗೂ ಆ ವ್ಯಕ್ತಿಗೆ ಬರುವ ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ಮನೆ ಮನೆಗೆ ಹೋಗಿ ಇಲಾಖೆಯ ಅಧಿಕಾರಿಗಳು ಗೃಹಲಕ್ಷ್ಮಿ ಯೋಜನೆ ತಲುಪಿಸಲು ಆಗಿರುವ ಸಮಸ್ಯೆಗಳನ್ನು ಪರಿಹರಿಸಬೇಕೆಂಬ ನಿರ್ಧಾರಕ್ಕೆ ಬಂದಿದೆ. ಮಹಾಲಕ್ಷ್ಮಿ ಪ್ರಗತಿ ಪರಿಶೀಲನ ಸಭೆಯಲ್ಲಿ ಈ ಬಗ್ಗೆ ನವೆಂಬರ್ ಮೊದಲನೇ ವಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೂಚನೆ ನೀಡಿದ್ದಾರೆ. ಮೂರನೇ ಕಂತಿನ ಹಣವು ಬಂದಿದೆಯೇ ಇಲ್ಲವೇ ಎನ್ನುವುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವುದು ಸೂಕ್ತವಾಗಿದೆ.
ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣವನ್ನು ಪಡೆದಂತಹ ಫಲಾನುಭವಿಗಳಿಗೆ ಎಸ್ಎಂಎಸ್ ಸಂದೇಶ ಬರುತ್ತದೆ. ಒಂದು ವೇಳೆ ಆ ಸಂದೇಶ ಪಡೆಯಲು ನೀವು ಸಾಧ್ಯವಾಗದಿದ್ದರೆ ನಿಮ್ಮ ಬ್ಯಾಂಕ್ ಶಾಖೆಗಳಿಗೆ ಭೇಟಿಯ ನೀಡುವುದರ ಮೂಲಕ ಹಣ ಬಂದಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ಇದನ್ನು ಓದಿ : ಮರುಭೂ ಸರ್ವೆ ಆದೇಶ ಹೊರಡಿಸಿಲಾಗಿದೆ : ಜಮೀನು ಆಸ್ತಿ ಹೊಂದಿರುವವರು ತಕ್ಷಣ ನೋಡಿ

26 ಜಿಲ್ಲೆಗಳಿಗೆ ಹಣ ಬಿಡುಗಡೆ :

ಹಂತ ಹಂತವಾಗಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡುತ್ತಿರುವುದರಿಂದ ನಿಮ್ಮ ಜಿಲ್ಲೆಗೆ ಹಣ ಬಿಡುಗಡೆ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಇಂದು ಸಹ ಗೃಹಲಕ್ಷ್ಮಿ ಯೋಜನೆಯ ಹಣವು ರಾಜ್ಯದ 26 ಜಿಲ್ಲೆಗಳಿಗೆ ಜಮೆಯಾಗಿದ್ದು ಯಾವೆಲ್ಲ ಜಿಲ್ಲೆಗಳ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ನೋಡುವುದಾದರೆ,
ಬಿಜಾಪುರ ಗದಗ ಬಾಗಲಕೋಟೆ ಧಾರವಾಡ ಹಾವೇರಿ, ಬೆಳಗಾವಿ ಬಳ್ಳಾರಿ ಬೀದರ್ ಕಲಬುರ್ಗಿ ಕೊಪ್ಪಳ ರಾಯಚೂರು, ವಿಜಯನಗರ ಯಾದಗಿರಿ ಮಂಡ್ಯ ಮೈಸೂರು ಕೊಡಗು, ಶಿವಮೊಗ್ಗ ಚಿಕ್ಕಮಗಳೂರು ತುಮಕೂರು ಹಾಸನ ರಾಮನಗರ ಚಿತ್ರದುರ್ಗ ಚಾಮರಾಜನಗರ ದಾವಣಗೆರೆ ಕೋಲಾರ ಪುರ ಹೀಗೆ ಈ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಚೆನ್ನಾಗಿದ್ದು ಈ ಜಿಲ್ಲೆಗಳಲ್ಲಿರುವ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಹಣವನ್ನು ಪಡೆದಿದ್ದಾರೆ.

ರಾಜ್ಯದ 20 ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದು ಈ ಜಿಲ್ಲೆಯ ಫಲಾನುಭವಿಗಳು ಹಣ ಅವರ ಖಾತೆಗೆ ಬಂದಿದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ಹೀಗೆ ಗೃಹಲಕ್ಷ್ಮಿ ಯೋಜನೆಯ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಅವರು ಈ ಜಿಲ್ಲೆಗಳಲ್ಲಿ ಸೇರಿದ್ದರೆ ಅವರು ಹಣ ಬಂದಿದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

ಮೋದಿ ಸರ್ಕಾರದ ಈ ಯೋಜನೆಯಡಿ ಖಾತೆಗೆ 3 ಸಾವಿರ..! ರೈತರಿಗಾಗಿ ಬಂತು ಅದ್ಭುತ ಯೋಜನೆ

ಪಿಂಚಣಿ ನಿಯಮ ಬದಲಾವಣೆ.! ಈಗ ಈ ಉದ್ಯೋಗಿಗಳಿಗೆ ಕೈ ತಪ್ಪಿದ ಗ್ರಾಚ್ಯುಟಿ, ಪಿಂಚಣಿ ಮತ್ತು ಪಿಎಫ್‌ನ ಲಾಭ

Treading

Load More...