ನಮಸ್ಕಾರ ಸ್ನೇಹಿತರೆ ತರಕಾರಿ ಮತ್ತು ಹಣ್ಣುಗಳನ್ನು ದೀರ್ಘಕಾಲದ ವರೆಗೆ ತಾಜಾ ವಾಗಿರಬೇಕು ಎಂಬ ಉದ್ದೇಶದಿಂದ ಫ್ರಿಜ್ಜಿನಲ್ಲಿ ಇಡಲಾಗುತ್ತದೆ. ಫ್ರಿಜ್ಜಿನಲ್ಲಿ ಎಲ್ಲಾ ಹಣ್ಣುಗಳು ಮತ್ತು ತರಕಾರಿಗಳನ್ನು ಇಡಲು ಸಾಧ್ಯವಿಲ್ಲ ಅದರಲ್ಲೂ ಕೆಲವೊಂದು ಹಣ್ಣುಗಳನ್ನು ಮಾತ್ರ ಫ್ರಿಜ್ನಲ್ಲಿ ಇಡಬೇಕು, ಏಕೆಂದರೆ ಕೆಲವು ಹಣ್ಣುಗಳು ಫ್ರಿಡ್ಜ್ ನಲ್ಲಿ ಇಟ್ಟರೆ ಕೆಟ್ಟುಹೋಗುತ್ತವೆ ಅಥವಾ ವಿಷಕಾರಿಯಾಗುತ್ತವೆ ತಿರುಳಿನ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಇರಿಸಿದರೆ ಅವು ಕಂದು ಬಣ್ಣಕ್ಕೆ ಹೋಗುತ್ತವೆ ಮತ್ತು ದೇಹಕ್ಕೆ ಹಾನಿ ಉಂಟು ಮಾಡುತ್ತದೆ. ಹಾಗಾದರೆ ಇವತ್ತಿನ ಲೇಖನದಲ್ಲಿ ನಿಮಗೆ ಯಾವ ರೀತಿಯ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಇಟ್ಟರೆ ಅವುಗಳಲ್ಲಿರುವ ಪೋಷಕಾಂಶಗಳನ್ನು ನಾಶವಾಗುತ್ತದೆ ಹಾಗೂ ಒಳ್ಳೆಯದಕ್ಕೆ ಬದಲಾಗಿ ಆರೋಗ್ಯಕ್ಕೆ ಹಾನಿಕರವಾಗುತ್ತವೆ ಎಂಬುದರ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.
ಈ ಹಣ್ಣುಗಳನ್ನು ಇಟ್ಟಿದ್ದರೆ ಈ ಕೂಡಲೇ ತೆಗೆದುಬಿಡಿ :
ತಿರುಳಿನ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಇರಿಸಿದರೆ ಅವು ಕಂದು ಬಣ್ಣಕ್ಕೆ ಹೋಗುತ್ತದೆ ಮತ್ತು ಆ ಹಣ್ಣುಗಳನ್ನು ತಿನ್ನುವುದರಿಂದ ದೇಹಕ್ಕೆ ಹಾನಿಯನ್ನುಂಟು ಮಾಡುತ್ತವೆ ಹಾಗಾದರೆ ಯಾವ ರೀತಿಯ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಇಡಬಾರದು ಎಂಬುದನ್ನು ಕೊಡಬಹುದಾಗಿತ್ತು ಈ ರೀತಿಯ ಹಣ್ಣುಗಳನ್ನು ನೀವೇನಾದರೂ ಫ್ರಿಡ್ಜ್ ನಲ್ಲಿ ಇಟ್ಟಿದ್ದರೆ ಈ ಕೂಡಲೇ ತೆಗೆದುಬಿಡಿ.
ಬಾಳೆಹಣ್ಣು :
ಹೆಚ್ಚಿನವರ ಮನೆಗಳಲ್ಲಿ ಯಾವಾಗಲೂ ಬಾಳೆಹಣ್ಣು ಇರುತ್ತದೆ ಮುಖ್ಯವಾಗಿ ಎಲ್ಲಾ ಕಾಲದಲ್ಲೂ ಬಾಳೆಹಣ್ಣು ಕಡಿಮೆ ಬೆಲೆಗೆ ಸಿಗುವಂತಹ ಹಣ್ಣಾಗಿದ್ದು ಅಂತಹ ಬಾಳೆಹಣ್ಣನ್ನು ಫ್ರಿಜ್ಜಿನಲ್ಲಿ ಎಂದಿಗೂ ಇಡಬಾರದು. ಫ್ರಿಜಿನಲ್ಲಿ ಬಾಳೆಹಣ್ಣನ್ನು ಇಟ್ಟರೆ ಬಾಳೆಹಣ್ಣು ಬೇಗ ಕಪ್ಪಾಗುತ್ತದೆ ಅಲ್ಲದೆ ಬಾಳೆಹಣ್ಣಿನಿಂದ ಬಿಡುಗಡೆಯಾಗುವ ಯತಿಲಿ ನಾನೆಲ್ಲವೂ ಇತರ ಹಣ್ಣುಗಳನ್ನು ತ್ವರಿತವಾಗಿ ಹಣ್ಣಾಗುವಂತೆ ಮಾಡುತ್ತದೆ ಹಾಗಾಗಿ ಫ್ರಿಜ್ನಲ್ಲಿ ಬಾಳೆಹಣ್ಣುಗಳನ್ನು ಇತರ ಹಣ್ಣುಗಳೊಂದಿಗೆ ಎಂದಿಗೂ ಇಡಬೇಡಿ.
ಕಲ್ಲಂಗಡಿ :
ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಹೆಚ್ಚು ಖರೀದಿಸಿ ತಿನ್ನುವಂತಹ ಹಣ್ಣಾಗಿದ್ದು ಈ ಹಣ್ಣು ತುಂಬಾ ದೊಡ್ಡದಾಗಿರುತ್ತದೆ ಇದನ್ನು ಒಮ್ಮೆ ಕತ್ತರಿಸಿದರೆ ತಿನ್ನಲು ಸಾಧ್ಯವಿಲ್ಲ ಇದರಿಂದಾಗಿ ಅನೇಕರು ಕತ್ತರಿಸಿದಂತಹ ಕಲ್ಲಂಗಡಿ ಚೂರುಗಳನ್ನು ಫ್ರಿಜ್ಜಿನಲ್ಲಿ ಇಡುತ್ತಾರೆ. ಮಾಡುವುದು ತಪ್ಪು ಎಂದಿಗೂ ಕಲ್ಲಂಗಡಿ ಹಣ್ಣನ್ನು ಫ್ರಿಜ್ಜಿನಲ್ಲಿ ಇಡಬಾರದು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ನಾಶವಾಗುತ್ತದೆ ಹಾಗಾಗಿ ಕಲ್ಲಂಗಡಿ ಹಣ್ಣನ್ನು ಮುಂದಿನ ಬಾರಿ ಫ್ರಿಜ್ನಲ್ಲಿ ಇಡದಂತೆ ನೋಡಿಕೊಳ್ಳಿ.
ಸೇಬು ಹಣ್ಣು :
ಬಾಳೆಹಣ್ಣಿನ ನಂತರ ಜನರು ಖರೀದಿಸಿ ತಿನ್ನಬಹುದಾದ ಹಣ್ಣಿನ್ದರೆ ಅದು ಸೇಬು ಹಣ್ಣು. ಈ ಸೇಬಿನ ಹಣ್ಣಿನ ಬೆಲೆ ಜಾಸ್ತಿ ಇದ್ದರೂ ಸಹ ಸೇಬು ಹಣ್ಣನ್ನು ದಿನವೂ ತಿಂದರೆ ವೈದ್ಯರ ಬಳಿ ಹೋಗಬೇಕಿಲ್ಲ ಎನ್ನುವ ಕಾರಣಕ್ಕಾಗಿ ಹೆಚ್ಚಿನ ಜನರು ಸೇಬುಹಣ್ಣನ್ನು ಖರೀದಿಸಿ ತಿನ್ನುತ್ತಾರೆ. ಸೇಬು ಹಣ್ಣನ್ನು ಖರೀದಿ ಮಾಡುವ ಸಂದರ್ಭದಲ್ಲಿ ಹೆಚ್ಚು ಸೇಬು ಖರೀದಿ ಮಾಡಿ ಫ್ರಿಡ್ಜ್ ನಲ್ಲಿ ಅವುಗಳನ್ನು ಇಡುತ್ತಾರೆ ಆದರೆ ಫ್ರಿಜ್ನಲ್ಲಿ ಸೇಬು ಹಣ್ಣುಗಳನ್ನು ಇಟ್ಟರೆ ಬೇಗ ಹಣ್ಣಾಗುತ್ತವೆ ಇದರಲ್ಲಿರುವ ಸಕ್ರಿಯ ಕಿನ್ನುವಗಳು ಇದಕ್ಕೆ ಕಾರಣವಾಗಿದ್ದು ಸೇಬು ಹಣ್ಣನ್ನು ಯಾವಾಗಲೂ ಫ್ರಿಜ್ಜಿನಲ್ಲಿ ಇಡಬೇಡಿ. ಸೇಬು ಹಣ್ಣಿನ ಹೊರತಾಗಿ ಚಿರ್ರಿ ಪ್ಲಮ್ ಮತ್ತು ಪೀಸ್ಗಳಂತಹ ಹಣ್ಣುಗಳನ್ನು ಫ್ರಿಜ್ಜಿನಲ್ಲಿ ಇಡುವುದನ್ನು ಸಹ ತಪ್ಪಿಸಬೇಕು.
ಮಾವಿನ ಹಣ್ಣು :
ಫ್ರಿಜ್ ನಲ್ಲಿ ಮಾವಿನ ಹಣ್ಣನ್ನು ಎಂದಿಗೂ ಇಡಬಾರದು ಹಾಗೆ ಇಟ್ಟಿದರೆ ಆಂಟಿಆಕ್ಸಿಡೆಂಟ್ ನಿಧಾನವಾಗಿ ಕಡಿಮೆಯಾಗುತ್ತದೆ ಮತ್ತು ಮಾವಿನಹಣ್ಣಿನಲ್ಲಿರುವ ಪೋಷಕಾಂಶಗಳು ಸಹ ಕೆಡಲು ಪ್ರಾರಂಭಿಸುತ್ತದೆ ಹಾಗಾಗಿ ಎಂದಿಗೂ ಈ ತಪ್ಪನ್ನು ಮಾಡಬೇಡಿ.
ಲಿಚ್ಚಿ ಹಣ್ಣು :
ಬೇಸಿಗೆಯಲ್ಲಿ ನಿಚೆ ಹೆಚ್ಚು ಲಭ್ಯವಿರುವ ಹಣ್ಣಾಗಿದ್ದು ಲಿಚಿಹಣ್ಣು ತುಂಬಾ ರುಚಿಯನ್ನು ಹೊಂದಿದ್ದು ಈ ಹಣ್ಣನ್ನು ಅನೇಕರು ಖರೀದಿಸಿ ಕೆಡದಂತೆ ಫ್ರಿಜ್ಜಿನಲ್ಲಿ ಇಡುತ್ತಾರೆ ಈ ಹಣ್ಣನ್ನು ನೀವು ತಣ್ಣಗಾಗಿಸಿದ್ದರೆ ಅದರ ಮೇಲ್ಭಾಗವು ಹಾಳಾಗುತ್ತದೆ ಅದರ ಒಳಭಾಗವು ಸಹ ಹಾಳಾಗಲು ಪ್ರಾರಂಭಿಸುತ್ತದೆ ಈ ಹಣ್ಣನ್ನು ಹಾಗಾಗಿ ಇಡಬೇಡಿ.
ಹೀಗೆ ಫ್ರಿಡ್ಜ್ ನಲ್ಲಿ ಯಾವ ರೀತಿಯ ಹಣ್ಣುಗಳನ್ನು ಇಡಬಾರದು ಎಂದು ನೋಡುತ್ತಿದ್ದು ಇದರ ಜೊತೆಗೆ ಸಿಟ್ರಸ್ ಹಣ್ಣುಗಳು ನಿಂಬೆ ಮತ್ತು ಕಿತ್ತಳೆ ಎಂತಹ ಹಣ್ಣುಗಳು ಸಹ ಫ್ರಿಜ್ನಲ್ಲಿ ಇಡಬಾರದು ಹಾಗಾಗಿ ಸ್ನೇಹಿತರು ಯಾರಾದರೂ ಹೆಚ್ಚಾಗಿ ಫ್ರಿಜ್ಜಿನಲ್ಲಿ ಹಣ್ಣುಗಳನ್ನು ಇಡುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಯಾವ ರೀತಿಯ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಇಡಬಾರದು ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ರೈತರ ಸಾಲ ಮನ್ನಾ: ಕೊನೆಯ ಹೆಸರು ಪಟ್ಟಿ ಬಿಡುಗಡೆ, ಅದೃಷ್ಟ ಇದ್ದರೆ ನಿಮ್ಮ ಸಾಲ ಮನ್ನಾ