ನಮಸ್ಕಾರ ಸ್ನೇಹಿತರೇ, ತಮ್ಮ ಮನಸ್ಸಿನಲ್ಲಿ ಅನೇಕ ಜನರು ಈ ಪ್ರಶ್ನೆಗಳನ್ನು ಹೊಂದಿರುತ್ತಾರೆ. ಅದು ಏನೆಂದರೆ ಬ್ಯಾಂಕಿನಲ್ಲಿ ಸಂಪೂರ್ಣ ಮತ್ತು ಸುರಕ್ಷಿತವಾಗಿರುತ್ತದೆಯೇ ಬ್ಯಾಂಕ್ ಮುಳುಗಿದರೆ ಅಥವಾ ದಿವಾಳಿಯಾದರೆ ಹಣದ ಪ್ರತಿಪಯಿಸಿ ಪೈಸೆಯು ಗ್ರಾಹಕರಿಗೆ ಹಿಂತಿರುಗುತ್ತದೆಯೇ ಎಂದು ಎಲ್ಲಾ ಗ್ರಾಹಕರು ತಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆಯನ್ನು ಹೊಂದಿರುತ್ತಾರೆ ಅದಕ್ಕೆ ಇವತ್ತಿನ ಲೇಖನದಲ್ಲಿ ನಿಮಗೆ ಉತ್ತರವನ್ನು ನೀಡುತ್ತಿದ್ದು ಈ ಲೇಖನವನ್ನು ಸಂಪೂರ್ಣವಾಗಿ ನೋಡಬಹುದಾಗಿದೆ.
ಬ್ಯಾಂಕಿನಲ್ಲಿ ಹೆಚ್ಚು ಹಣ ಇಡುವುದು ಸುರಕ್ಷಿತವೇ :
ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಜನರು ಸುರಕ್ಷಿತವಾಗಿಡಲು ಬ್ಯಾಂಕಿನಲ್ಲಿ ಹಣವನ್ನು ಜನರು ಠೇವಣಿ ಮಾಡುತ್ತಾರೆ ಆದರೆ ಸಂಪೂರ್ಣ ಹಣವನ್ನು ಬ್ಯಾಂಕಿನಲ್ಲಿ ಇಡುವುದರಿಂದ ಸುರಕ್ಷಿತವಾಗಿರುತ್ತದೆಯೇ ಎಂಬ ಸಾಕಷ್ಟು ಪ್ರಶ್ನೆಗಳು ಗ್ರಾಹಕರ ಮನಸ್ಸಿನಲ್ಲಿ ಇರುತ್ತದೆ. ಒಂದು ಬ್ಯಾಂಕ್ ದಿವಾಳಿಯಾದರೆ ಆ ಬ್ಯಾಂಕಿನಲ್ಲಿರುವ ಗ್ರಾಹಕರ ಠೇವಣಿ ಮಾತ್ರ 5 ಲಕ್ಷಗಳ ವರೆಗೆ ಸುರಕ್ಷಿತವಾಗಿರುತ್ತದೆ ಮೊದಲು ಇದರ ಮಿತಿಯು ಕೇವಲ ಒಂದು ಲಕ್ಷ ರೂಪಾಯಿಗಳ ವರೆಗೆ ಇತ್ತು ಆದರೆ ಇದೀಗ 2020 ರ ಬಜೆಟ್ ನಲ್ಲಿ 5 ಲಕ್ಷಕ್ಕೆ ಸರ್ಕಾರವು ಹೆಚ್ಚಿಸಿದೆ. ಒಂದೇ ಒಂದು ಬ್ಯಾಂಕ್ ನಲ್ಲಿ ಗ್ರಾಹಕರು ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಠೇವಣಿ ಇಟ್ಟಿದ್ದರೆ ಆ ಬ್ಯಾಂಕ್ ದಿವಾಳಿಯಾದರೆ 5 ಲಕ್ಷ ಹೊರತುಪಡಿಸಿ ಉಳಿದೆಲ್ಲಾ ಠೇವಣಿಗಳು ಕಳೆದು ಹೋಗುತ್ತದೆ.
5 ಲಕ್ಷದವರೆಗಿನ ಬ್ಯಾಂಕ್ ಠೇವಣಿಗಳ ಮೇಲೆ ಡಿಐಸಿಜಿಸಿ ವಿಮ ರಕ್ಷಣೆಯನ್ನು ಒದಗಿಸುತ್ತದೆ. ಠೇವಣಿಗಳನ್ನು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಠೇವಣಿ ವಿಮೆ 5 ಲಕ್ಷದವರೆಗೆ ಮಾತ್ರ ಒಳಗೊಂಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನ ಡಿಐಸಿಜಿಸಿ ಸಂಪೂರ್ಣ ಸ್ವಾಮಿ ದಂಗ ಸಂಸ್ಥೆಯಾಗಿದ್ದು ಎಲ್ಲಾ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳು ವಿಮೆಯನ್ನು ಡಿಐಸಿಜಿಸಿ ಯಿಂದ ಮಾಡಲ್ಪಟ್ಟಿವೆ. 5 ಲಕ್ಷದವರೆಗಿನ ಬ್ಯಾಂಕ್ ಠೇವಣಿಗಳ ಮೇಲೆ ಈ ವಿಮೆಯ ಅಡಿಯಲ್ಲಿ ಠೇವಣಿದಾರರು ಖಾತರಿಯ ರಕ್ಷಣೆಯನ್ನು ಪಡೆಯುತ್ತಾರೆ. ಎಲ್ಲಾ ಸಣ್ಣ ಮತ್ತು ದೊಡ್ಡ ವಾಣಿಜ್ಯ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳನ್ನು ಡಿಐಸಿಜಿಸಿ ವ್ಯಾಪ್ತಿಯು ಒಳಗೊಂಡಿದೆ ಅವುಗಳು ವಿದೇಶದಲ್ಲಿ ಅಥವಾ ಭಾರತದಲ್ಲಿ ಶಾಖೆಗಳನ್ನು ಹೊಂದಿದ್ದರು ಸಹ.
ಹಲವಾರು ಖಾತೆಗಳು ಒಂದೇ ಬ್ಯಾಂಕ್ ನಲ್ಲಿದ್ದರೆ :
ಉಳಿತಾಯ ಖಾತೆ ಎಫ್ ಡಿ ಆರ್ ಡಿ ಸೇರಿದಂತೆ ಒಂದು ಬ್ಯಾಂಕ್ ನಲ್ಲಿನ ಎಲ್ಲಾ ಠೇವಣಿಗಳಿಗೆ 5 ಲಕ್ಷದವರೆಗಿನ ಠೇವಣಿಯ ಮೇಲಿನ ವಿಮಾನ ರಕ್ಷಣೆಯ ಹೊಸ ಮಿತಿಯು ಒಳಗೊಂಡಿದೆ. ಇದರ ಅರ್ಥ ವಿವಿಧ ಖಾತೆಗಳಲ್ಲಿ ಗ್ರಾಹಕರು ಒಂದೇ ಖಾತೆಯಲ್ಲಿ ಹಣವನ್ನು ಠೇವಣಿ ಮಾಡಿದರೆ ಅಥವಾ ವಿವಿಧ ಶಾಖೆಗಳು ಇದ್ದರೆ ಎಲ್ಲವುಗಳಲ್ಲಿ 5 ಲಕ್ಷದವರೆಗಿನ ಮೊತ್ತವು ಸುರಕ್ಷಿತವಾಗಿರುವುದು ಖಾತರಿಯಾಗಿದೆ ಈ ಮೊತ್ತದಲ್ಲಿ ಅಸಲು ಮತ್ತು ಬಡ್ಡಿ 2 ಸಹ ಸೇರಿ ಎಂದು ಹೇಳಬಹುದು.
ಠೇವಣಿಯನ್ನು ಯಾವ ರೀತಿ ಒಳಗೊಂಡಿರುತ್ತದೆ :
ಸ್ಥಿರ ,ಉಳಿತಾಯ, ಮರುಕಳಿಸುವ, ಚಾಲ್ತಿ ಅಥವಾ ಎಲ್ಲ ರೀತಿಯ ಠೇವಣಿಗಳನ್ನು ನೋಡಬಹುದಾಗಿದೆ. ಠೇವಣಿಗಳನ್ನು ವಿದೇಶಿ ಸರ್ಕಾರದಿಂದಲೂ ಸಹ ಏರಿಸಲಾಗಿದೆ. ಅಂತರ ಬ್ಯಾಂಕ್ ಠೇವಣಿ, ಕೇಂದ್ರ ಅಥವಾ ರಾಜ್ಯ ಸರ್ಕಾರದ ಠೇವಣಿ, ರಿಸರ್ವ್ ಬ್ಯಾಂಕ್ ಇಂದ ಅನುಮತಿ ಪಡೆದಿರುವ ಯಾವುದೇ ರೀತಿಯ ಠೇವಣಿ, ರಾಜ್ಯ ಭೂ ಅಭಿವೃದ್ಧಿ ಬ್ಯಾಂಕಿನ ಠೇವಣಿ, ಭಾರತದ ಹೊರಗಿನ ಯಾವುದೇ ಠೇವಣಿ ಖಾತೆಯು ಜಂಟಿಯಾಗಿದ್ದರೆ 5 ಲಕ್ಷದ ಮಿತಿಯು ಕವರೇಜ್ ಗಾಗಿ ಒಂದೇ ಬ್ಯಾಂಕಿನಲ್ಲಿ ಎಲ್ಲಾ ಶಾಖೆಗಳಲ್ಲಿನ ಗ್ರಾಹಕರ ಉಳಿತಾಯ ಖಾತೆ ಆರ್ ಡಿ, ಎಫ್ ಡಿ ಮುಂತಾದ ಎಲ್ಲಾ ಏಕ ಖಾತೆಗಳ ಠೇವಣಿಗಳ ಮೊತ್ತವಾಗಿದೆ. ಆದರೆ ಒಂದೇ ಬ್ಯಾಂಕಿನಲ್ಲಿ ಯಾರಾದರೂ ಏಕ ಮತ್ತು ಜಂಟಿ ಖಾತೆಯನ್ನು ಹೊಂದಿದ್ದರೆ 5 ಲಕ್ಷದವರೆಗಿನ ಮೊತ್ತವನ್ನು ಎರಡರಲ್ಲೂ ಸುರಕ್ಷಿತಗೊಳಿಸಲಾಗುತ್ತದೆ ಇದಕ್ಕೆ ಕಾರಣವೆಂದರೆ ಏಕ ಮತ್ತು ಜಂಟಿ ಖಾತೆಗಳನ್ನು ಪ್ರತ್ಯೇಕ ಘಟಕಗಳಾಗಿ ವಿಸರ್ವ್ ಬ್ಯಾಂಕ್ ಪ್ರಕಾರ ಪರಿಗಣಿಸಲಾಗುತ್ತದೆ.
ಗ್ರಾಹಕರಿಗೆ ಹಣ 90 ದಿನಗಳಲ್ಲಿ ಪಾವತಿಸಲಾಗುತ್ತದೆ :
ಸರ್ 21ರ ಬಜೆಟ್ ನಲ್ಲಿ ಡಿಐಸಿಜಿಸಿ ಕಾಯ್ದೆಗೆ ತಿದ್ದುಪಡಿಗಳನ್ನು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಪ್ರಸ್ತಾಪಿಸಿದ್ದರು ಮತ್ತು ಕೇಂದ್ರ ಸಚಿವ ಸಂಪುಟವು ಜುಲೈ 2021 ರಲ್ಲಿ ಡಿಐಸಿಜಿಸಿ ಕಾಯ್ದೆಗೆ ತಿದ್ದುಪಡಿಗಳನ್ನು ಅನುಮೋದಿಸಿತು. ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಮಸೂದೆ ಅಕ್ಟೋಬರ್ 2021 ರಲ್ಲಿ ಅದನ್ನು ಅಂಗೀಕರಿಸಲಾಯಿತು. ಸೆಪ್ಟೆಂಬರ್ 1 2021 ರಿಂದ ಈ ಕಾನೂನು ಜಾರಿಗೆ ಬಂದಿದೆ ತಿದ್ದುಪಡಿಯ ನಂತರ ಠೇವಣಿದಾರರಿಗೆ 5 ಲಕ್ಷದವರೆಗಿನ ಮೊತ್ತವನ್ನು ಪಡೆಯುವ ಪ್ರಕ್ರಿಯೆಯು 90 ದಿನಗಳಲ್ಲಿ ಈಗ ಯಾವುದೇ ಬ್ಯಾಂಕ್ ಮಡಗಿದರೆ ಅಥವಾ ತೊಂದರೆಗೆ ಒಳಗಾಗಿದ್ದರೆ ಪೂರ್ಣಗೊಳ್ಳುತ್ತದೆ.
ಆರ್ ಬಿ ಐ ಯಾವುದೇ ನಿರ್ಬಂಧ ಅಥವಾ ಮೊರಟೋರಿಯಂ ವಿಧಿಸಿರುವ ಬ್ಯಾಂಕುಗಳ ಗ್ರಾಹಕರನ್ನು ಇದರ ವ್ಯಾಪ್ತಿಗೆ ಒಳಗೊಂಡಿದ್ದು ಈ ಮೊದಲು ಎರಡರಿಂದ ಮೂರು ವರ್ಷಗಳು ಈ ಪ್ರಕ್ರಿಯೆ ಪೂರ್ಣಗೊಳ್ಳಲು ಬೇಕಾಗುತ್ತಿತ್ತು ಇದರಿಂದ ಬ್ಯಾಂಕ್ನ ಗ್ರಾಹಕರು ಸಂಕಷ್ಟದಲ್ಲಿದ್ದರೆ ಅಂತಹ ಗ್ರಾಹಕರ ಠೇವಣಿಗಳು ದೀರ್ಘಾವಧಿಯವರೆಗೆ ಸ್ಥಗಿತಗೊಳ್ಳುತ್ತಿದ್ದವು. ಹಾಗಾಗಿ ಈ ಹೊಸ ನಿಯಮದ ಪ್ರಕಾರ ಕೇವಲ 90 ದಿನಗಳ ಒಳಗಾಗಿ ಹಣವನ್ನು ಬ್ಯಾಂಕ್ ಹಿಂದಿರುಗಿಸುತ್ತದೆ.
ಒಟ್ಟಾರಿಯಾಗಿ ನೀವೇನಾದರೂ ಹಣವನ್ನು ಠೇವಣಿ ಮಾಡಿದ್ದರೆ ನಿಮ್ಮ ಹಣವು 5 ಲಕ್ಷದವರೆಗೆ ಸುರಕ್ಷಿತವಾಗಿರುತ್ತದೆ ಹಾಗಾಗಿ ನೀವು ಒಂದೇ ಬ್ಯಾಂಕಿನಲ್ಲಿ ಹೆಚ್ಚು ಹಣವನ್ನು ಇಡದೆ ಇತರ ಬ್ಯಾಂಕುಗಳಲ್ಲಿ ಹಣವನ್ನು ಇಡುವಂತೆ ನಿಮ್ಮ ಸ್ನೇಹಿತರು ಹಾಗು ಬಂಧು ಮಿತ್ರರಿಗೆ ತಿಳಿಸಿ ಹಾಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಕೇವಲ 450 ರೂಪಾಯಿಗೆ ಎಲ್ಪಿಜಿ ಸಿಲಿಂಡರ್ ಮತ್ತು ರೈತರಿಗೆ 12 ಸಾವಿರ ರೂಪಾಯಿ ಮಹತ್ವದ ನಿರ್ಧಾರ
ಇನ್ಮುಂದೆ ಜಿಯೋ ರೀಚಾರ್ಜ್ ಯೋಜನೆಯಲ್ಲಿ 23 ದಿನಗಳ ಹೆಚ್ಚುವರಿ ಮಾನ್ಯತೆ ಸಿಗಲಿದೆ!