ನಮಸ್ಕಾರ ಸ್ನೇಹಿತರೇ, ಮಹಿಳೆಯರಿಗೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಶಕ್ತಿ ಯೋಜನೆಯಡಿಯಲ್ಲಿ ಉಚಿತ ಬಸ್ ಪ್ರಯಾಣಕ್ಕೇ ಚಾಲನೆ ದೊರೆತ ನಂತರ ಸುಮಾರು 5 ತಿಂಗಳುಗಳ ಯಶಸ್ವಿಯಾಗಿ ಪೂರ್ಣಗೊಳಿಸಿದೆ. 94 ಕೋಟಿ ಮಹಿಳಾ ಪ್ರಯಾಣಿಕರು ಈವರೆಗೆ ಉಚಿತವಾಗಿ ಪ್ರಯಾಣ ಮಾಡಿದ್ದು ಅವರಿಗೆ ನೀಡಿದ ಟಿಕೆಟ್ ಮೊತ್ತ ಎಷ್ಟು ಹಾಗೂ ಎಷ್ಟು ಮಹಿಳೆಯರು ಯಾವ ಸಾರಿಗೆ ಸಂಸ್ಥೆಯಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ನೋಡಬಹುದಾಗಿದೆ.
ಶಕ್ತಿ ಯೋಜನೆಯು 5 ತಿಂಗಳನ್ನು ಯಶಸ್ವಿ ಗೊಳಿಸಿದೆ :
ಇದೀಗ ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಜಾರಿಗೊಳಿಸಿದಂತಹ ಶಕ್ತಿ ಯೋಜನೆಗೆ 5 ತಿಂಗಳು ಪೂರ್ಣಗೊಂಡಿದೆ. ಇಂದಿಗೂ ಸಹ ರಾಜ್ಯ ಸರ್ಕಾರವು ಗಾಗಿ ಜಾರಿಗೊಳಿಸಿರುವ ಶಕ್ತಿ ಯೋಜನೆ ಯು ಯಾವುದೇ ಅಡೆತಡೆ ಇಲ್ಲದೆ ಯಶಸ್ವಿಯಾಗಿ ನಡೆಯುತ್ತಿದ್ದು ಮಾಸಿಕ ಸರಾಸರಿ ರಾಜ್ಯದಲ್ಲಿ 19 ಕೋಟಿಗೂ ಹೆಚ್ಚಿನ ಮಹಿಳೆಯರು ಉಚಿತವಾಗಿ ಟಿಕೆಟ್ ಪಡೆದು ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಅಂದರೆ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ತಿಂಗಳೊಳಗೆ ಅಂದರೆ ಈ ಯೋಜನೆಯನ್ನು ಜೂನ್ 11ಕ್ಕೆ ಜಾರಿಗೊಳಿಸಿತ್ತು. ಇದೀಗ ಈ ಯೋಜನೆ ನವೆಂಬರ್ 11ಕ್ಕೆ 5 ತಿಂಗಳು ಪೂರ್ಣಗೊಂಡಿದೆ. ಬರೋಬ್ಬರಿ 94 ಕೋಟಿ ಮಹಿಳಾ ಪ್ರಯಾಣಿಕರು ಕಳೆದ ಐದು ತಿಂಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಪಡೆದಿದ್ದಾರೆ.
ಮಹಿಳೆಯರಿಗೆ ಇದುವರೆಗೆ ನೀಡಿದ ಉಚಿತ ಟಿಕೆಟ್ ನ ವಿವರಣೆ :
ಹೆಚ್ಚಿನ ಮಹಿಳೆಯರು ಸರ್ಕಾರಿ ಬಸ್ಗಳತ್ತ ಉಚಿತ ಬಸ್ ಪ್ರಯಾಣ ಆರಂಭವಾದ ಬಳಿಕ ಮುಖ ಮಾಡಿದರು.ದಿನನಿತ್ಯ ಸರಾಸರಿ ಅರವತ್ತು ಲಕ್ಷ ಮಹಿಳೆಯರು ಶಕ್ತಿ ಯೋಜನೆಯ ಅಡಿಯಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಇನ್ನು ಈ ಶಕ್ತಿ ಯೋಜನೆ ಆರಂಭವಾದ ಮೊದಲ ದಿನದಿಂದ ಇದುವರೆಗೂ ಈ ಯೋಜನೆಗೆ 2246 ಕೋಟಿ ವೆಚ್ಚ ಮಾಡಲಾಗಿದೆ.
ಎಷ್ಟು ಮಹಿಳೆಯರು ಯಾವ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ :
ಶಕ್ತಿ ಯೋಜನೆ ಜಾರಿಯಾದ ನಂತರ ಯಾವ ಸಾರಿಗೆ ಬಸ್ಗಳಲ್ಲಿ ಎಷ್ಟು ಮಹಿಳೆಯರು ಪ್ರಯಾಣವನ್ನು ಉಚಿತವಾಗಿ ಮಾಡಿದ್ದಾರೆ ಎಂಬುದರ ವಿವರವನ್ನು ನೋಡುವುದಾದರೆ.
1.28,23,50,198-ಕೆಎಸ್ಆರ್ಟಿಸಿ ಬಸ್ಗಳಲ್ಲಿ.
2.30,88,35,367- ಬಿಎಂಟಿಸಿ ಬಸ್ಗಳಲ್ಲಿ.
3.22,02,27,919- ವಾಯುವಯ ಸಾರಿಗೆ ಬಸ್ಗಳಲ್ಲಿ.
4.13,36,72,308- ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಬೆಳೆಸಿದ್ದಾರೆ.
ಎಷ್ಟು ಉಚಿತ ಟಿಕೆಟ್ ಅನ್ನು ಯಾವ ಸಾರಿಗೆ ಬಸ್ಗಳಲ್ಲಿ ವಿತರಣೆ ಮಾಡಲಾಗಿದೆ :
840 ಕೋಟಿ ರೂಪಾಯಿಗಳು ಕೆಎಸ್ಆರ್ಟಿಸಿ ಬಸ್ಗಳಲ್ಲಿ ,396 ಕೋಟಿ ರೂಪಾಯಿಗಳು ಬಿಎಂಟಿಸಿ ಬಸ್ಗಳಲ್ಲಿ, 565 ಕೋಟಿ ರೂಪಾಯಿಗಳು ವಾಯುವ್ಯ ಸಾರಿಗೆ ಬಸ್ಗಳಲ್ಲಿ, 444 ಕೋಟಿ ರೂಪಾಯಿಗಳು ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಗಳಲ್ಲಿ ಉಚಿತವಾಗಿ ಟಿಕೆಟ್ ವಿತರಣೆ ಮಾಡಲಾಗಿದೆ.
ಎಷ್ಟು ಮೊತ್ತ ವನ್ನು ಯಾವ ತಿಂಗಳಲ್ಲಿ ಉಚಿತ ಟಿಕೆಟ್ ಹಂಚಿಕೆ ಮಾಡಲಾಗಿದೆ :
248 ಕೋಟಿ ಜೂನ್ ತಿಂಗಳಲ್ಲಿ, 453ಕೋಟಿ ರೂಪಾಯಿಗಳು ಜುಲೈ ತಿಂಗಳಲ್ಲಿ, 459 ಕೋಟಿ ರೂಪಾಯಿಗಳು ಆಗಸ್ಟ್ ತಿಂಗಳಲ್ಲಿ, 442 ಕೋಟಿ ರೂಪಾಯಿಗಳು ಸೆಪ್ಟೆಂಬರ್ ತಿಂಗಳಲ್ಲಿ, 465 ಕೋಟಿ ರೂಪಾಯಿಗಳು ಅಕ್ಟೋಬರ್ ತಿಂಗಳಲ್ಲಿ ವಿತರಣೆ ಮಾಡಲಾಗಿದ್ದು ಒಟ್ಟಾರೆ ರೂ.224
46 ಕೋಟಿ ಉಚಿತ ಬಸ್ ಪ್ರಯಾಣ ಕ್ಕಾಗೀ ಬಿಡುಗಡೆ ಮಾಡಲಾಗಿದೆ.
ಒಟ್ಟಾರಿಯಾಗಿ ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಯಶಸ್ವಿಯಾಗಿ ರಾಜ್ಯದಲ್ಲಿ ಮುಂದುವರೆಯುತ್ತಿದ್ದು ಶಕ್ತಿ ಯೋಜನೆಯನ್ನು ನಿಲ್ಲಿಸಲಾಗುತ್ತದೆ ಎಂಬ ಚರ್ಚೆಗಳು ರಾಜ್ಯದಲ್ಲಿ ಹೆಚ್ಚಾಗಿದ್ದು ಈ ಚರ್ಚೆಗಳಿಗೆ ಉತ್ತರ ನೀಡುವಂತೆ ರಾಜ್ಯ ಸರ್ಕಾರವು ಈ ವಿವರವನ್ನು ನೀಡಿದ್ದು ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ನಿಲ್ಲಿಸುವುದಿಲ್ಲ ಹಾಗಾಗಿ ಮಹಿಳೆಯರು ಇದರ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ಇನ್ನು ಮುಂದಿನ 10 ವರ್ಷಗಳವರೆಗೆ ಈ ಯೋಜನೆಯನ್ನು ಮುಂದುವರಿಸಲಾಗುತ್ತದೆ ಎಂದು ಸ್ವತಹ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಹೇಳಿದ್ದಾರೆ. ಹೇಗೆ ಬಸ್ ಟಿಕೆಟ್ ದರವನ್ನು ಸಹ ಹೆಚ್ಚಳ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದು ಸದ್ಯಕ್ಕೆ ರಾಜ್ಯದಲ್ಲಿ ಸಾರಿಗೆ ಬಸ್ಗಳ ಪ್ರಯಾಣದರ ಹೆಚ್ಚಳ ಕುರಿತಂತೆ ಆಯೋಗ ರಚಿಸುವಂತೆ ನೇತೃತ್ವವನ್ನು ಶ್ರೀನಿವಾಸ್ ಮೂರ್ತಿಯವರ ವರದಿಯನ್ನು ಮುಂದೂಡಲಾಗಿದೆ ಎಂಬುದರ ಬಗ್ಗೆ ತಿಳಿಸಿದರು. ಶಕ್ತಿ ಯೋಜನೆಗೆ ಸಂಬಂಧಿಸಿದಂತಹ ಈ ವರವನ್ನು ನಿಮ್ಮೆಲ್ಲ ಸ್ನೇಹಿತರಿಗೆ ಶೇರ್ ಮಾಡಿ.
ಇತರೆ ವಿಷಯಗಳು :
ವಿದ್ಯುತ್ ಇಲಾಖೆಯಿಂದ ಫ್ರೀ ಕರೆಂಟ್ ಖುಷಿಯಲ್ಲಿದ್ದ ಜನರಿಗೆ ಬೇಸರದ ಸುದ್ದಿ : ಸರ್ಕಾರದಿಂದ ಹೊಸ ನಿರ್ಧಾರ