ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ಸಿಮ್ ಕಾರ್ಡ್ ಖರೀದಿಸುವವರಿಗೆ ಕೆಲವೊಂದು ನಿಯಮಗಳು ಬದಲಾವಣೆ ಆಗಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಸರ್ಕಾರ ಎಲ್ಲಾ ಹಣಕಾಸು ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಪ್ರತಿ ತಿಂಗಳು ಒಂದಲ್ಲ ಒಂದು ಬದಲಾವಣೆಗಳನ್ನು ಮಾಡುತ್ತದೆ. ಅದರ ಜೊತೆಗೆ ಕೆಲವು ಪರಿಶೀಲನೆಗಳನ್ನು ನಡೆಸಿ ಅಗತ್ಯವಿದ್ದರೆ ಪರಿಷ್ಕರಣೆಯನ್ನು ಸಹ ಸರ್ಕಾರ ಮಾಡುತ್ತದೆ ಆದರೆ ಇದೀಗ ಸಿಮ್ ಕಾರ್ಡ್ ಖರೀದಿಯ ನಿಯಮಗಳು ಡಿಸೆಂಬರ್ 1ರಿಂದ ಬದಲಾಗಲಿದ್ದು ಯಾರಾದರೂ ಹೊಸ ಸಿಮ್ ಕಾರ್ಡ್ ಅನ್ನು ಖರೀದಿ ಮಾಡುತ್ತಿದ್ದರೆ ಅವರಿಗೆ ಈ ವಿಚಾರ ತಿಳಿಸುವುದು ಮುಖ್ಯವಾಗಿದೆ. ಏನಿಲ್ಲ ನಿಯಮಗಳು ಇದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ.

10 ಲಕ್ಷ ಸಿಮ್ ಕಾರ್ಡ್ ಮಾರಾಟಗಾರರು :
ದೂರಸಂಪರ್ಕ ಇಲಾಖೆಯು ಸಿಮ್ ಕಾರ್ಡ್ ಖರೀದಿ ಹಾಗೂ ಮಾರಾಟ ನಿಯಮದಲ್ಲಿ ಬದಲಾವಣೆಯನ್ನು ಮಾಡಲು ಆದೇಶವನ್ನು ಹೊರಡಿಸಿದೆ. ಹಾಗಾಗಿ ಸಿಮ್ ಕಾರ್ಡ್ ಖರೀದಿ ಮಾಡುವವರಿಗೆ ಮಾತ್ರವಲ್ಲದೆ ಸಿಮ್ ಕಾರ್ಡ್ ಮಾರಾಟ ಮಾಡುವವರಿಗೂ ಸಹ ಈ ಹೊಸ ನಿಯಮಗಳು ದೂರಸಂಪರ್ಕ ಇಲಾಖೆಯಿಂದ ಅನ್ವಯವಾಗುತ್ತವೆ. ಒಂದು ವೇಳೆ ಯಾರಾದರೂ ಈ ದೂರ ಸಂಪರ್ಕ ಇಲಾಖೆ ಹೊರಡಿಸಿರುವ ಹೊಸ ನಿಯಮಗಳನ್ನು ಉಲ್ಲಂಘಿಸಿದರೆ ಭಾರಿ ಪ್ರಮಾಣದಲ್ಲಿ ದಂಡ ಪಾವತಿ ಮಾಡಬೇಕು ಹಾಗೂ ಜೈಲು ಶಿಕ್ಷೆಯನ್ನು ಸಹ ಅನುಭವಿಸಬೇಕಾಗುತ್ತದೆ.
ಫೇಕ್ಸ್ ಇಮ್ ಕಾರ್ಡ್ ವಂಚನೆ ತಡೆಗಟ್ಟುವ ಸಲುವಾಗಿ ಕ್ರಮ :
ನಕಲಿ ಸಿಮ್ ಕಾರ್ಡ್ ಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು ಈ ನಕಲಿ ಸಿಮ್ ಕಾರ್ಡ್ ಗಳನ್ನು ಬಳಕೆ ಮಾಡುವುದರ ಮೂಲಕ ಜನರನ್ನು ಸುಮ್ಮನೆ ವಂಚನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹೊಸ ನಿಯಮವು ಅಕ್ಟೋಬರ್ ಒಂದು 2023ರಲ್ಲಿ ಜಾರಿಗೆ ಬರಬೇಕಿತ್ತು, ಆದರೆ ಈ ಹೊಸ ನಿಯಮ ಡಿಸೆಂಬರ್ ತಿಂಗಳವರೆಗೆ ವಿಸ್ತರಣೆಗೊಂಡಿರುವುದರಿಂದ ಡಿಸೆಂಬರ್ 1 2023ರಿಂದ ಈ ಹೊಸ ನಿಯಮ ಆರಂಭವಾಗಲಿದೆ.
ಇದನ್ನು ಓದಿ : ರೈತರ ಸಾಲ ಮನ್ನಾ: ಕೊನೆಯ ಹೆಸರು ಪಟ್ಟಿ ಬಿಡುಗಡೆ, ಅದೃಷ್ಟ ಇದ್ದರೆ ನಿಮ್ಮ ಸಾಲ ಮನ್ನಾ
ಸಿಮ್ ಕಾರ್ಡ್ ಖರೀದಿಸಲು ಅಗತ್ಯವಿರುವ ದಾಖಲೆಗಳು :
ಯಾರಾದರೂ ಒಂದು ಸಿಮ್ ಕಾರ್ಡ್ ಅನ್ನು ಖರೀದಿಸಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಸಿಮ್ ಕಾರ್ಡ್ ಖರೀದಿ ಮಾಡುವುದಕ್ಕೆ ಹೊಸ ನಿಯಮದ ಪ್ರಕಾರ ಗುರುತು ಮತ್ತು ವಿಳಾಸದ ಸರಿಯಾದ ಪುರಾವೆ ಎಂದು ಸಿಮ್ ಕಾರ್ಡ್ ಖರೀದಿ ಮಾಡುವವರು ಒದಗಿಸಬೇಕು. ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಮತದಾರರ ಗುರುತಿನ ಚೀಟಿ ಅಥವಾ ಪಾಸ್ಪೋರ್ಟ್ ನಂತರ ದಾಖಲೆಗಳನ್ನು ನೀಡುವುದರ ಮೂಲಕ ಸಿಮ್ ಖರೀದಿ ಮಾಡಬಹುದಾಗಿದೆ. ಸಿಮ್ ಕಾರ್ಡ್ ಅನ್ನು ಒಂದು ಐಡಿ ಸೀಮಿತ ಸಂಖ್ಯೆಯ ಮೂಲಕ ಖರೀದಿಸಬಹುದಾಗಿತ್ತು ಅದಕ್ಕಿಂತ ಹೆಚ್ಚಿಗೆ ಖರೀದಿ ಮಾಡಲು ಅವಕಾಶವಿಲ್ಲ ಅದೇ ರೀತಿ ಡೀಲರ್ಗಳು ಗ್ರಾಹಕರ ಗುರುತು ಮತ್ತು ವಿಳಾಸದ ಆಧಾರಗಳನ್ನು ಸಿಮ್ ಕಾರ್ಡ್ ಖರೀದಿಸುವಾಗ ಸರಿಯಾಗಿ ಪರಿಶೀಲಿಸಬೇಕಾಗುತ್ತದೆ.
ತಾಯಿಂಟ್ ಆಫ್ ಸೇಲ್ ಅಡಿಯಲ್ಲಿ ಇನ್ನು ಯಾವುದೇ ಮಾರಾಟಗಾರ ನವೆಂಬರ್ 30ರ ಒಳಗಾಗಿ ನೋಂದಾಯಿಸಿಕೊಂಡಿರಬೇಕು .
ಒಂದು ವೇಳೆ ನೋಂದಾಯಿಸಿಕೊಂಡಿರದೆ ಇದ್ದರೆ ಸಿಮ್ ಕಾರ್ಡ್ ಮಾರಾಟವನ್ನು ಡೀಲರ್ಗಳು ಮಾಡಿದರೆ ಅಂಥವರಿಗೂ ಸಹ ದಂಡ ಹಾಗೂ ಜೈಲು ಶಿಕ್ಷೆಯನ್ನು ಸರ್ಕಾರವು ವಿಧಿಸುವ ಸಾಧ್ಯತೆ ಇದೆ ಹಾಗಾಗಿ ಹೊಸ ಸಿಮ್ ಖರೀದಿ ಮಾಡುವವರಿಗು ಹಾಗೂ ಸಿಮ್ ಮಾರಾಟ ಮಾಡುವವರಿಗು ಸಹ ಸಿಮ್ ಕಾರ್ಡ್ ನ ವಿಚಾರದಲ್ಲಿ ಹೆಚ್ಚು ಜಾಗರಿಕತೆಯಿಂದ ಇರುವುದು ಇತ್ತೀಚಿನ ದಿನಗಳಲ್ಲಿ ಮುಖ್ಯವಾಗಿರುತ್ತದೆ.
ಹೀಗೆ ದೂರಸಂಪರ್ಕ ಇಲಾಖೆಯು ಸಿಮ್ ಕಾರ್ಡ್ ಮೂಲಕ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಂಚನೆಯನ್ನು ತಡೆಗಟ್ಟುವ ಸಲುವಾಗಿ ಕಟ್ಟುನಿಟ್ಟಿನ ಈ ಹೊಸ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಮ್ಮ ಸುತ್ತೋಲೆಯಲ್ಲಿ ಹೊರಡಿಸುವ ಮೂಲಕ ಹೊಸ ಸಿಮ್ ಕಾರ್ಡ್ ಖರೀದಿ ಮಾಡುವವರಿಗೂ ಹಾಗೂ ಮಾರಾಟ ಮಾಡುವವರೆಗೂ ಸಹ ಇದು ಅನ್ವಯವಾಗುತ್ತದೆ.
ಇನ್ನು ಮುಂದೆ ಹೊಸ ಸಿಮ್ ಗಳನ್ನು ಖರೀದಿ ಮಾಡುವುದರ ಮೂಲಕ ಎನ್ನು ಮಾಡುವುದು ಅಷ್ಟು ಸುಲಭವಾಗಿರುವುದಿಲ್ಲ ಎಂದು ಈ ಮೂಲಕ ತಿಳಿಸಲಾಗುತ್ತಿದೆ ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಅಥವಾ ಸಂಬಂಧಿಕರು ಹೊಸ ಸಿಮ್ ಕಾರ್ಡ್ ಅನ್ನು ಖರೀದಿಸಲು ಯೋಚಿಸುತ್ತಿದ್ದರೆ ಅವರಿಗೆ ದೂರ ಸಂಪರ್ಕ ಇಲಾಖೆಯು ಹೊರಡಿಸಿರುವ ಈ ಸುತ್ತೋಲೆಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಕೃಷಿಭಾಗ್ಯ ಯೋಜನೆ ಮತ್ತೆ ಪ್ರಾರಂಭ : ಅನೇಕ ಅನುಕೂಲಗಳು ರೈತರಿಗೆ
ಭಾರತದಲ್ಲಿ ಹೆಚ್ಚು ಬಳಕೆಯಾದ ಪಾಸ್ವರ್ಡ್ ಇಲ್ಲಿದೆ : ನಿಮ್ಮ ಪಾಸ್ವರ್ಡ್ ಈ ರೀತಿ ಇದ್ದರೆ ಬದಲಾವಣೆ ಮಾಡಿ