ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಪ್ಯಾನ್ ಕಾರ್ಡ್ ಗಳು ನಿಷ್ಕ್ರಿಯ ಗೊಂಡಿರುವುದರ ಬಗ್ಗೆ. ಆಧಾರ್ ಲಿಂಕ್, ನಿಗದಿತ ಸಮಯದೊಳಗೆ ಮಾಡಿದ ಕಾರಣ ಸುಮಾರು 11.5 ಕೋಟಿಗೂ ಹೆಚ್ಚು ಪಾನ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಸ್ಥಿತಿಯನ್ನು ಅಥವಾ ಪಾನ್ ಕಾರ್ಡ್ ಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದೆ ಇಲ್ಲವೇ ಎಂಬುದನ್ನು ತಿಳಿಯಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
11.5 ಕೋಟಿ ಪಾನ್ ಕಾರ್ಡ್ ಗಳು ರದ್ದು :
ಹಲವು ಜನರ ಪಾನ್ ಕಾರ್ಡ್ ಗಳು ದೇಶದಾದ್ಯಂತ ರದ್ದಾಗಿವೆ. ಭಾರತೀಯ ನಾಗರಿಕರಿಗೆ ಶಾಶ್ವತ ಖಾತೆ ಸಂಖ್ಯೆ ಕಾರ್ಡ್ ಮತ್ತು ಆಧಾರ್ ಕಾರ್ಡ್ ನಿರ್ಣಾಯಕ ಗುರುತಿನ ದಾಖಲೆಗಳಾಗಿದ್ದು ಆದಾಯ ತೆರಿಗೆ ನಿಯಮದ ಪ್ರಕಾರ ನಿಮ್ಮ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಸರ್ಕಾರವು ಕಡ್ಡಾಯಗೊಳಿಸಿದೆ. 2023 ಜೂನ್ 30 ಈ ಪ್ರಕ್ರಿಯೆಗೆ ಕೊನೆಯ ದಿನಾಂಕವಾಗಿತ್ತು ಆದರೆ ಕೆಲವು ವರದಿಯ ಪ್ರಕಾರ ನಿಗದಿತ ಸಮಯದೊಳಗೆ ಆಧಾರ್ ಲಿಂಕ್ ಮಾಡಲು 11.5 ಕೋಟಿ ಜನರು ವಿಫಲರಾಗಿದ್ದಾರೆ. ಈ ಕಾರಣದಿಂದಾಗಿ ಕೇಂದ್ರ ೇರ ತೆರಿಗೆಗಳ ಮಂಡಳಿಯಿಂದ ಆರ್‌ಟಿಐ ಪ್ರತಿಕ್ರಿಯೆಯು 11.5 ಕೋಟಿ ಜನರ ಪಾನ್ ಕಾರ್ಡ್ ನಿಷ್ಕ್ರಿಯಗೊಳಿಸಲಾಗಿದೆ ಎಂದು ವರದಿ ಮಾಡಿದೆ.
ಪ್ಯಾನ್ ಕಾರ್ಡ್ ಆಕ್ಟಿವ್ ಮಾಡಲು ದಂಡ :
ಆರ್‌ಟಿಐ ಪ್ರತಿಕ್ರಿಯೆಯ ಅನುಸಾರ ಮಧ್ಯಪ್ರದೇಶದ ಕಾರ್ಯಕರ್ತ ಚಂದ್ರಶೇಖರ್ ಗೌರವರಿಗೆ ಭಾರತದಲ್ಲಿ 70.2 ಕೋಟಿ ಜನರು ಪಾನ್ ಕಾರ್ಡ್ ಹೊಂದಿದ್ದಾರೆ ಇವರಲ್ಲಿ ಪಾನ್ ಕಾರ್ಡ್ ಜೊತೆ ಸುಮಾರು 57.25 ಕೋಟಿ ಜನರು ಲಿಂಕ್ ಮಾಡಿದ್ದಾರೆ. ಇನ್ನುಳಿದಂತಹ ಸುಮಾರು 12 ಕೋಟಿ ಜನರು ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್ ನೊಂದಿಗೆ ನಿಗದಿತ ಸಮಯದೊಳಗೆ ಲಿಂಕ್ ಮಾಡಿಸುವಲ್ಲಿ ವಿಫಲರಾಗಿದ್ದಾರೆ. ಅವರಲ್ಲಿ 11.5 ಕೋಟಿ ಜನರ ಪಾನ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಕೆಲವು ವರದಿಗಳು ಕಳೆದ ವಾರ ತಿಳಿಸಿವೆ. ಅಷ್ಟೇ ಅಲ್ಲದೆ ನಿಮ್ಮ ಪಾನ್ ಕಾರ್ಡ್ ಅನ್ನು ಪುನಃ ಸಕ್ರಿಯಗೊಳಿಸಲು ಸುಮಾರು ಒಂದು ಸಾವಿರ ರೂಪಾಯಿಗಳ ದಂಡವನ್ನು ವಿಧಿಸುವ ಮೂಲಕ ಸಕ್ರಿಯಗೊಳಿಸಬಹುದೆಂದು ಆರ್‌ಟಿಐ ಸ್ಪಷ್ಟಪಡಿಸಿದೆ.
ಆಧಾರ್ ಕಾರ್ಡ್ ನೊಂದಿಗೆ ಪಾನ್ ಕಾರ್ಡ್ ಲಿಂಕ್ ಮಾಡಲು ಆದೇಶ :
2017 ಜುಲೈ 1ರ ಮೊದಲು ಪಾನ್ ಕಾರ್ಡ್ ಪಡೆದವರಿಗೆ ಕಡ್ಡಾಯವಾಗಿ ತಮ್ಮ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139AA ಅಡಿಯಲ್ಲಿ ಆದೇಶವನ್ನು ನೀಡಲಾಗಿದೆ.
ಇದನ್ನು ಓದಿ : ಆಧಾರ್ ಕಾರ್ಡ್ ಫೋಟೋ ಅಪ್ಡೇಟ್ ಮಾಡುವುದು ತುಂಬಾ ಸರಳ; ಇಲ್ಲಿದೆ ಸಂಪೂರ್ಣ ಮಾಹಿತಿ
ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವುದನ್ನು ಪರಿಶೀಲಿಸುವ ವಿಧಾನ :
ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಅನ್ನು ಲಿಂಕ್ ಮಾಡುವುದಕ್ಕೆ ಹಾಗೂ ಅದರ ಸ್ಟೇಟಸ್ ಅನ್ನು ಚೆಕ್ ಮಾಡುವುದಕ್ಕಾಗಿ ಆದಾಯ ತೆರಿಗೆ ವಿಭಾಗದ ಅಧಿಕೃತ ವೆಬ್ಸೈಟ್ಗೆ ಮೊದಲು ಭೇಟಿ ನೀಡಬೇಕು. ಆದಾಯ ತೆರಿಗೆ ಅಧಿಕೃತ ವೆಬ್ಸೈಟ್ ಆದ https://www.incometax.gov.in/iec/foportal/ಈ ವೆಬ್ ಸೈಟ್ ಗೆ ಭೇಟಿ ಮಾಡುವುದರ ಮೂಲಕ ಮೇಲೆ ಕಾಣುತ್ತಿರುವಂತಹ ಲಿಂಕಾ ಆಧಾರ್ ಸ್ಟೇಟಸ್ ಎಂಬುವ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ವ್ಯೂ ಲಿಂಕ್ ಆಧಾರ್ ಸ್ಟೇಟಸ್ ಎಂಬುದರ ಮೇಲೆ ನಿಮ್ಮ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನಂಬರ್ ಅನ್ನು ನಿವೇದಿಸಿ ಕ್ಲಿಕ್ ಮಾಡಬೇಕು. ನಂತರ ನಿಮಗೆ ನಿಮ್ಮ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಆಗಿರುವುದರ ಬಗ್ಗೆ ಮಾಹಿತಿ ಸಿಗುತ್ತದೆ.
ಹೀಗೆ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ನೊಂದಿಗೆ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಆದೇಶವನ್ನು ಹೊರಡಿಸಿದ್ದು ಲಿಂಕ್ ಮಾಡದೆ ಇದ್ದವರ ಪಾನ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಿದೆ. ಹಾಗಾಗಿ ನಿಮ್ಮ ಪಾನ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಿದ್ದರೆ ಅಂತಹ ಪಾನ್ ಕಾರ್ಡ್ ಅನ್ನು ಪುನಹ ಸಕ್ರಿಯಗೊಳಿಸಲು ಸಾವಿರಾರು ರೂಪಾಯಿಗಳ ದಂಡವನ್ನು ವಿಧಿಸುವ ಮೂಲಕ ಸಕ್ರಿಯಗೊಳಿಸಲು ಅವಕಾಶ ಕಲ್ಪಿಸಲಾಗಿದ್ದು ಈ ಕೂಡಲೇ ನಿಮ್ಮ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಸಿ ಅದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಿ. ಹೀಗೆ ನಿಮ್ಮ ಸ್ನೇಹಿತರೆ ಯಾರಾದರೂ ಆಧಾರ್ ಕಾರ್ಡ್ ನೊಂದಿಗೆ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಿಸದೇ ಇದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ತಪ್ಪದೇ ಆಧಾರ್ ಕಾರ್ಡ್ ನೊಂದಿಗೆ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಿಲು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಮಧ್ಯಂತರ ಬೆಳೆ ವಿಮೆ ಹಣ ಬಿಡುಗಡೆ: ನಿಮ್ಮ ಹೆಸರು ಇಲ್ಲಿಂದ ಚೆಕ್ ಮಾಡಿ
ಸರ್ಕಾರದಿಂದ ಮಹತ್ವದ ಸೂಚನೆ; ರೇಷನ್ ಕಾರ್ಡ್ ಗೆ ಹೊಸ ನಿಯಮ, ಈ 4 ಸಂದರ್ಭಗಳಲ್ಲಿ ಮಾತ್ರ