rtgh

Money

ಮಹಿಳೆಯರಿಗಾಗಿ 10 ಲಕ್ಷ ಸಾಲ : ವಿಶೇಷ ಸಾಲ ಭಾಗ್ಯ

Join WhatsApp Group Join Telegram Group
Special loan for lucky women

ನಮಸ್ಕಾರ ಸ್ನೇಹಿತರೆ, ಕೇಂದ್ರ ಸರ್ಕಾರವು ನಮಗೆ ತಿಳಿದಿರುವಂತೆ ಈಗಾಗಲೇ ಮಹಿಳೆಯರ ಬಗ್ಗೆ ಹಲವಾರು ಯೋಜನೆಗಳನ್ನು ತರುತ್ತಿದ್ದು ಇದೀಗ ಮತ್ತೊಂದು ಮಹಿಳೆಯರಿಗಾಗಿಯೇ ಹೊಸ ಯೋಜನೆಯನ್ನು ಜಾರಿಗೆ ತರಲು ಯೋಚಿಸುತ್ತಿದೆ. ಮಹಿಳೆಯರು ಕೇಂದ್ರ ಸರ್ಕಾರದ ಈ ಯೋಜನೆಯ ಅಡಿಯಲ್ಲಿ ಸ್ವಂತ ಉದ್ಯೋಗಕ್ಕಾಗಿ ಹತ್ತು ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯಬಹುದಾಗಿದ್ದು ಈ ಯೋಜನೆಗೆ ಸಂಬಂಧಿಸಿ ದಂತೆ ಯಾರೆಲ್ಲ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು ಹಾಗೂ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಜೊತೆಗೆ ಅರ್ಜಿ ಸಲ್ಲಿಸಲು ಇರಬೇಕಾದ ದಾಖಲೆಗಳು ಯಾವುವು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

Special loan for lucky women

ಪ್ರಧಾನ ಮಂತ್ರಿ ಮುದ್ರಾ ಯೋಜನೆ :

ತಮ್ಮ ಸ್ವಂತ ಉದ್ಯಮವನ್ನು ಮಹಿಳೆಯರಿಗೆ ಪ್ರಾರಂಭಿಸಲು ಹಾಗೂ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರವು ಹಲವಾರು ಉಪಕ್ರಮಗಳನ್ನು ಪ್ರಾರಂಭಿಸುತ್ತಲೇ ಇದೆ ಅದರಲ್ಲಿ ಇದೀಗ ಮತ್ತೊಂದು ಹೊಸ ಉಪಕ್ರಮವನ್ನು ಜಾರಿಗೆ ತಂದಿದ್ದು ಆ ಉಪಕ್ರಮವೇನೆಂದರೆ ಮಹಿಳೆಯರಿಗಾಗಿ ಪ್ರಧಾನಮಂತ್ರಿ ಮುದ್ರಾ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಮಹಿಳೆಯರಿಗೂ ಕೂಡ ಈ ಯೋಜನೆಯು ವಿಸ್ತರಣೆಯಾಗಿದ್ದು ವಿಶೇಷವಾಗಿ ಮಹಿಳೆಯರಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಲಾಭ ಸಿಗುವಂತೆ, ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಬಹುದಾಗಿದೆ. ಈಗಾಗಲೇ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಪ್ರಾರಂಭವಾಗಿ ಸುಮಾರು ನಾಲ್ಕು ವರ್ಷಗಳೇ ಆಯಿತು. 70 ಪರ್ಸೆಂಟ್ ಸಾಲ ಖಾತೆಗಳು ಮಹಿಳಾ ಉದ್ಯಮಿಗಳಿಗೆ ಪ್ರಾರಂಭಗೊಂಡ ನಾಲ್ಕು ವರ್ಷಗಳಲ್ಲಿ ಮಂಜೂರು ಮಾಡಲಾಗಿದೆ. ಮೂರು ವಿಭಿನ್ನ ವರ್ಗಗಳಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ನೀಡಲಾಗುತ್ತದೆ. ಆ ಮೂರು ವರ್ಗಗಳೆಂದರೆ,

  1. ಶಿಶು ಸಾಲ
  2. ಕಿಶೋರ್ ಸಾಲ
  3. ತರುಣ್ ಸಾಲ
  4. ಶಿಶು ಸಾಲ

ಸುಮಾರು 5 ಲಕ್ಷದಿಂದ 10 ಲಕ್ಷ ರೂಪಾಯಿಗಳವರೆಗೆ ಮಹಿಳಾ ಉದ್ಯಮಿಗಳು ವ್ಯಾಪಾರ ಸಾಲಗಳನ್ನು ತರುಣ್ ಸಾಲ ಯೋಜನೆಯ ಅಡಿಯಲ್ಲಿ ಪಡೆಯಬಹುದಾಗಿದೆ.

ಹೀಗೆ ಮೂರು ವರ್ಗಗಳಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಡಿಯಲ್ಲಿ ಸಾಲವನ್ನು ಪಡೆಯಬಹುದಾಗಿತ್ತು ಇದರ ಸಂಪೂರ್ಣ ಪ್ರಯೋಜನವನ್ನು ಮಹಿಳೆಯರು ಪಡೆಯಬಹುದಾಗಿದೆ.

ಇದನ್ನು ಓದಿ : ಉಜ್ವಲ ಯೋಜನೆಯಿಂದ ಗುಡ್ ನ್ಯೂಸ್ : ಸಬ್ಸಿಡಿ ಹಣ ಹೆಚ್ಚಳ ಮಾಡಿದ ಸರ್ಕಾರ! ಎಷ್ಟು ಗೊತ್ತಾ?

ಮುದ್ರಾ ಸಾಲ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :

ಯೋಜನೆಯನ್ನು ಮಹಿಳೆಯರು ಪಡೆಯುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದಾಗಿದೆ ಮುದ್ರಾ ಸಾಲ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಮುದ್ರಾ ಸಾಲ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಮ್ಮೆ ಹಂತಗಳನ್ನು ಅನುಸರಿಸಬೇಕು ಅವುಗಳೆಂದರೆ,

ಯೋಜನೆಯ ಭಾಗವಾಗಿರುವ ಹತ್ತಿರದ ಬ್ಯಾಂಕಿಗೆ ಮೊದಲು ಹೋಗಬೇಕು. ಅದಾದ ನಂತರ ನೀವು ಯಾವ ರೀತಿಯ ವ್ಯಾಪಾರವನ್ನು ಮಾಡುತ್ತೀರಿ ಎಂಬುದರ ವ್ಯಾಪಾರ ಯೋಜನೆಯ ಅಥವಾ ಪರಿಕಲ್ಪನೆಯನ್ನು ಬ್ಯಾಂಕಿನಲ್ಲಿ ಪ್ರಸ್ತುತಪಡಿಸಬೇಕಾಗುತ್ತದೆ ಅದಾದ ನಂತರ ಮುದ್ರಾ ಸಾಲ ಯೋಜನೆಯ ಅರ್ಜಿ ನಮೂನೆಯನ್ನು ಸಲ್ಲಿಸಬೇಕು. ಮುದ್ರಾ ಸಾಲ ಯೋಜನೆಯ ಅರ್ಜುನ ಮೋನಿಯಲ್ಲಿ ನೀವು ಗುರುತಿನ ಮತ್ತು ವಿಳಾಸ ಪುರಾವೆ, ಬ್ಯಾಲೆನ್ಸ್ ಶೀಟ್ ಗಳು ಜಾತಿ ಪ್ರಮಾಣ ಪತ್ರ ಐಟಿ ರಿಟರ್ನ್ಸ್ ಮಾರಾಟ ತೆರೆಗೆ ಕಂಪನಿಯ ವಿಳಾಸ ಪುರಾವೆ ಹೀಗೆ ಅಗತ್ಯವಿರುವ ಹೆಚ್ಚುವರಿ ದಾಖಲೆಗಳನ್ನು ನೀವು ಬ್ಯಾಂಕಿಗೆ ಸಲ್ಲಿಸಬೇಕಾಗುತ್ತದೆ.

ಅದಾದ ನಂತರ ಎಲ್ಲ ಇತರ ಬ್ಯಾಂಕುಗಳ ಫಾರ್ಮಾಲಿಟಿಸ್ ಗಳನ್ನು ಸಹ ನೀವು ಪೂರ್ಣಗೊಳಿಸಿ ಸಲ್ಲಿಸಿದ ದಾಖಲೆಗಳು ಹಾಗೆ ಮುದ್ರಾ ಸಾಲ ಯೋಜನೆಯ ಅರ್ಜಿಯನ್ನು ಪರಿಶೀಲಿಸಬೇಕಾಗುತ್ತದೆ. ಇದಾದ ನಂತರ ಬ್ಯಾಂಕ್ ನೀವು ಸಲ್ಲಿಸಿದ ದಾಖಲೆಗಳನ್ನು ಹಾಗೂ ಅರ್ಜಿಯನ್ನು ಪರಿಶೀಲಿಸಿದ ನಂತರ ಸಾಲಗಾರರು ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದರೆ ಮಾತ್ರ ನಿಮಗೆ ಸಾಲವನ್ನು ಅನುಮೋದಿಸಲಾಗುತ್ತದೆ.

ಇದಷ್ಟೇ ಅಲ್ಲದೆ ಆಸಕ್ತಿ ಹೊಂದಿರುವ ಸಾಲಗಾರರು ಸರ್ಕಾರ ನೀಡುವ ಅಧಿಕೃತ ವೆಬ್ಸೈಟ್ ಗಳಿಗೆ ಭೇಟಿ ನೀಡುವ ಮೂಲಕ ಮಹಿಳೆಯರಿಗಾಗಿ ಪ್ರಧಾನಮಂತ್ರಿಗಳ ಸಾಲ ಯೋಜನೆಯ ಅಡಿಯಲ್ಲಿ ಅರ್ಜಿ ನಮೂನೆಗಳನ್ನು ಆನ್ಲೈನ್ ಮೂಲಕವೂ ಸಹ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಪ್ರಯೋಜನಗಳು :

ಪ್ರಧಾನಮಂತ್ರಿ ಮುದ್ರಾ ಯೋಜನೆಯು ಭಾರತದಲ್ಲಿನ ಮಹಿಳಾ ಉದ್ಯಮಿಗಳಿಗೆ ಭರವಸೆಯ ದೀಪವಾಗಿದೆ ಎಂದು ಹೇಳಬಹುದು ಈ ಯೋಜನೆಯು ಮಹಿಳೆಯರಲ್ಲಿ ಉದ್ಯಮಶೀಲತೆಯಲ್ಲಿ ಲಿಂಗ ಸಮಾನತೆಯನ್ನು ಬೆಳೆಸುವುದು ಮಾತ್ರವಲ್ಲದೆ ಮಹಿಳೆಯರ ಆರ್ಥಿಕ ಬೆಳವಣಿಗೆಯನ್ನು ಸಹ ಉತ್ತಮಗೊಳಿಸುತ್ತದೆ. ಇದರಿಂದ ಮಹಿಳೆಯರು ಸಹ ಒಂದು ಹೊಸ ಬ್ಯುಸಿನೆಸ್ ಸ್ಟಾರ್ಟ್ ಮಾಡಲು ಇದು ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಬಹುದಾಗಿದೆ.

ಹೀಗೆ ಪ್ರಧಾನಮಂತ್ರಿ ಮುದ್ರಾ ಯೋಜನೆಯು ಮಹಿಳೆಯರಿಗೆ ಸಾಲ ಸೌಲಭ್ಯವನ್ನು ನೀಡುವ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳಾಗಿ ಸ್ವಂತ ಉದ್ಯೋಗವನ್ನು ಮಾಡುವಂತೆ ಪ್ರೋತ್ಸಾಹಿಸುತ್ತದೆ ಎಂದು ಹೇಳಬಹುದಾಗಿದೆ. ಇದರಿಂದ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬಹುದು ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಮಹಿಳೆಯರು ಯಾವುದಾದರೂ ಉದ್ಯೋಗವನ್ನು ಮಾಡಲು ಬಯಸುತ್ತಿದ್ದರೆ ಅವರಿಗೆ ಕೇಂದ್ರ ಸರ್ಕಾರದಿಂದ ಈ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಲಭ್ಯವಿದೆ ಎಂಬುದರ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡಿ ಇದರಿಂದ ಅವರು ಸಹ ಒಂದು ಸ್ವಾವಲಂಬಿ ಆದಂತಹ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಸಹಾಯಕವಾದಂತಾಗುತ್ತದೆ ಧನ್ಯವಾದಗಳು.

ಇತರೆ ವಿಷಯಗಳು :

ಉಜ್ವಲ ಯೋಜನೆಯಿಂದ ಗುಡ್ ನ್ಯೂಸ್ : ಸಬ್ಸಿಡಿ ಹಣ ಹೆಚ್ಚಳ ಮಾಡಿದ ಸರ್ಕಾರ! ಎಷ್ಟು ಗೊತ್ತಾ?

ಪಿಎಂ ಕಿಸಾನ್ 15ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದಿಯಾ ಚೆಕ್‌ ಮಾಡಿ

Treading

Load More...