rtgh

Money

ಕರ್ನಾಟಕದ ಮಹಿಳೆಯರಿಗೆ 50,000 ಸಹಾಯಧನ : ಈ ಯೋಜನೆಗೆ ಈ ಕೂಡಲೇ ಅರ್ಜಿ ಸಲ್ಲಿಸಿ

Join WhatsApp Group Join Telegram Group
subsidy for Karnataka women

ನಮಸ್ಕಾರ ಸ್ನೇಹಿತರೇ, ಮಹಿಳೆಯರಿಗಾಗಿ ಮತ್ತೊಂದು ಗುಡ್ ನ್ಯೂಸ್ ತಿಳಿಸಲಾಗುತ್ತಿದೆ. ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ಈ ಒಂದು ಯೋಜನೆಯ ಮೂಲಕ 50,000 ಗಳು ಸಿಗಲಿದೆ. ಮಹಿಳೆಯರಿಗಾಗಿ ಇದೊಂದು ಉತ್ತಮ ಯೋಜನೆಯಾಗಿದ್ದು ಈ ಯೋಜನೆಯ ಮುಖ್ಯ ಉದ್ದೇಶ ಹಾಗೂ ಈ ಯೋಜನೆಗೆ ಸಂಬಂಧಿಸಿ ದಂತೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

subsidy for Karnataka women

ಹೊಸ ಯೋಜನೆಯ ಮುಖ್ಯ ಉದ್ದೇಶ :

ಅಲ್ಪ ಸಂಖ್ಯಾತ ಸಮುದಾಯದ ಮಹಿಳೆಯರಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮುಖ್ಯ ಉದ್ದೇಶ ಆರ್ಥಿಕ ನೆಲೆಯನ್ನು ಅಲ್ಪ ಸಂಖ್ಯಾತ ಸಮುದಾಯದ ಮಹಿಳೆಯರಿಗೆ ರೂಪಿಸುವುದಾಗಿದೆ. ಅವರು ಕೆಲಸ ಹಾಗೂ ಕಾರ್ಯಗಳನ್ನು ಸಮಾಜದಲ್ಲಿ ಮಾಡುವ ಮೂಲಕ ತಮ್ಮನ್ನು ತಾವು ಸಮಾಜದಲ್ಲಿ ತೊಡಗಿಸಿಕೊಳ್ಳಲು ಎಲ್ಲ ರೀತಿಯಲ್ಲಿ ಈ ಯೋಜನೆಯಿಂದ ಸಹಾಯ ಸಿಗಲಿದೆ. ಅಲ್ಲದೆ ಈ ಯೋಜನೆಯ ಇನ್ನೊಂದು ಮುಖ್ಯ ವಿಚಾರ ತಮ್ಮ ತಮ್ಮ ಕುಲಕಸುಬು ಏನಿದೆ ಅದರ ಬಗ್ಗೆ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ಸಂಪೂರ್ಣ ರೀತಿಯಲ್ಲಿ ತರಬೇತಿ ನೀಡುವುದು ಮತ್ತು ಅವರು ತಮ್ಮ ಕಲಾತ್ಮಕ ಮತ್ತು ತಾಂತ್ರಿಕ ಕೌಶಲ್ಯವನ್ನು ವೃದ್ಧಿಸಿಕೊಳ್ಳುವುದರ ಮೂಲಕ ಅದೇ ಕಸುಬನ್ನು ಮುಂದುವರೆಸುವುದು ಈ ಯೋಜನೆಯ ಒಂದು ಮುಖ್ಯ ಉದ್ದೇಶವಾಗಿದೆ.

ಈ ಯೋಜನೆಯ ಪ್ರಯೋಜನಗಳು :

ಸರ್ಕಾರವು ಮಹಿಳೆಯರಿಗಾಗಿ ಜಾರಿಗೆ ತಂದು ತಂದಿರುವ ಈ ಯೋಜನೆಯ ಅಡಿಯಲ್ಲಿ ಮಹಿಳೆಯರ ಆರ್ಥಿಕತೆಯು ಹೆಚ್ಚುತ್ತದೆ ಮತ್ತು ಅವರು ಕೆಲಸವನ್ನು ಪಡೆದಂತಾಗುತ್ತದೆ. ಅದರ ಜೊತೆಗೆ ಈ ಒಂದು ಯೋಜನೆಯನ್ನು ಗುಡಿ ಕೈಗಾರಿಕೆಗೆ ಅಥವಾ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿಗೊಳಿಸುವ ಸಲುವಾಗಿ ರೂಪಿಸಲಾಗಿದೆ. ಪ್ರತಿಯೊಬ್ಬ ಮಹಿಳೆಯರಿಗೂ ಈ ಯೋಜನೆಗೆ ಅರ್ಜಿ ಸಲ್ಲಿಸಿರುವಂಥವರಿಗೆ 50,000ಗಳನ್ನು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.

ನಿಯಮಗಳು

ಯೋಜನೆಯ ಕೆಲವೊಂದು ನಿಯಮಗಳನ್ನು ಒಳಗೊಂಡಿದ್ದು ಆ ನಿಯಮಗಳೆಂದರೆ ಶೇಕಡ 50ರಷ್ಟು ಸಾಲವನ್ನು 36 ತಿಂಗಳಿನಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಮರುಪಾವತಿ ಮಾಡಿದರೆ ಅದನ್ನು ಉಳಿದ ಶೇಕಡ 50ರಷ್ಟು ಬ್ಯಾಂಕ್ ಅಂಡ್ ಸಹಾಯಧನವನ್ನಾಗಿ ಆ ಹಣವನ್ನು ಪರಿಗಣಿಸಲಾಗುತ್ತದೆ. 36 ತಿಂಗಳ ಒಳಗಾಗಿ ಫಲಾನುಭವಿಯು ತಾನು ಪಡೆದ ಸಾಲವನ್ನು ಮರುಪಾವತಿ ಮಾಡಲು ವಿಫಲನಾದರೆ ಬ್ಯಾಂಕ್ ಅಂಡ್ ಸಹಾಯಧನವನ್ನು ಶೇಕಡ 50ರಷ್ಟು ಸಾಲವೆಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಯೋಜನೆಯ ಅರ್ಹತೆಗಳು :

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ ಅಭ್ಯರ್ಥಿಯು ರಾಜ್ಯದ ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು. ರಾಜ್ಯದ ಖಾಯಂ ನಿವಾಸಿಯಾಗಿರಬೇಕು ಅರ್ಜಿದಾರರು. 18 ರಿಂದ 55 ವರ್ಷಗಳವರೆಗೆ ಅರ್ಜಿದಾರರ ವಯೋಮಿತಿ ಇರಬೇಕು. ಕುಟುಂಬದ ವಾರ್ಷಿಕ ಆದಾಯವು 6 ಲಕ್ಷಕ್ಕಿಂತ ಹೆಚ್ಚಿರಬಾರದು. ಸರ್ಕಾರದ ಉದ್ಯೋಗವನ್ನು ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಹೊಂದಿರಬಾರದು.

ಇದನ್ನು ಓದಿ : ವೈಯಕ್ತಿಕ ಸಾಲ 3 ನಿಮಿಷದಲ್ಲಿ ಪಡೆಯಬಹುದು ಇಲ್ಲಿದೆ ಸಂಪೂರ್ಣ ಮಾಹಿತಿ

ಯೋಜನೆಗೆ ಅಗತ್ಯವಿರುವ ದಾಖಲೆಗಳು :

ಅಭ್ಯರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಅವುಗಳೆಂದರೆ, 2 ಪಾಸ್ಪೋರ್ಟ್ ಸೈಜ್ ಫೋಟೋ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್,ಯೋಜನೆಯ ವರದಿ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.

ಒಟ್ಟಾರೆಯಾಗಿ ಸರ್ಕಾರವು ಅಲ್ಪ ಸಂಖ್ಯಾತ ಸಮುದಾಯದ ಮಹಿಳೆಯರಿಗೆ ಈ ಹೊಸ ಯೋಜನೆ ಜಾರಿಗೆ ತಂದಿದ್ದು ಈ ಯೋಜನೆಯ ಎಲ್ಲಾ ಪ್ರಯೋಜನವನ್ನು ಮಹಿಳೆಯರು ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಮಹಿಳಾ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಮಳೆ ಎಚ್ಚರಿಕೆ: ಈ 7 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ! ಮುಂದಿನ 74 ಗಂಟೆಗಳ ಕಾಲ

ಶಕ್ತಿ ಯೋಜನೆ ಉಚಿತ ಟಿಕೆಟ್ ಎಷ್ಟು ಕೋಟಿ ಖರ್ಚಾಗಿದೆ ಗೊತ್ತಾ? ಎಲ್ಲಾ ಪುರುಷರು ಓದಿ

Treading

Load More...