ನಮಸ್ಕಾರ ಸ್ನೇಹಿತರೆ, ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್ ಬಗ್ಗೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ದೊರೆತು ಮೂರು ತಿಂಗಳಗಳ ಸಮಯವಾಗಿದೆ. 1.20 ಕೋಟಿ ಮಹಿಳೆಯರು ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದು ಇನ್ನೂ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಕ್ಕಿರುವುದಿಲ್ಲ. ಮಹಾಲಕ್ಷ್ಮಿ ಯೋಜನೆಯ ಹಣ ಬರದೇ ಇರುವುದಕ್ಕೆ ಮುಖ್ಯ ಕಾರಣ ಏನೆಂದರೆ, ಆಧಾರ್ ಕಾರ್ಡ್ ಸೀಡಿಂಗ್ ಆಗಿರುವುದಿಲ್ಲ ಹಾಗೂ ಕೆವೈಸಿ ಆಗಿರುವುದಿಲ್ಲ ಎಂದು ಸರ್ಕಾರ ಕಾರಣ ನೀಡುತ್ತಿದೆ. ಹಾಗಾದರೆ ಗೃಹಲಕ್ಷ್ಮಿ ಯೋಜನೆಯ ಹಣ ಬರದೆ ಇದ್ದರೆ ಏನು ಮಾಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆಯ ಹಣ ಬರದೆ ಇದ್ದರೆ ಏನು ಮಾಡಬೇಕು :
ಗೃಹಲಕ್ಷ್ಮಿ ಯೋಜನೆಯ ಹಣ ಒಂದು ವೇಳೆ ನಿಮಗೆ ಬರದೇ ಇದ್ದರೆ ನೀವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅದರಲ್ಲಿ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡುವ ಮೂಲಕ ಹಣವನ್ನು ಬರುವ ಹಾಗೆ ಮಾಡಿಕೊಳ್ಳಬಹುದೆಂದು ಮಹಿಳಾ ಮತ್ತು ಮಕ್ಕಳ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.
ಇಡಬು ಓದಿ : ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಬಿಡುಗಡೆ; ಸ್ಟೇಟಸ್ ಚೆಕ್ ಮಾಡುವ ವಿಧಾನ ಇಲ್ಲಿದೆ
ಅದರ ಜೊತೆಗೆ ನೀವು ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ನಿಮ್ಮ ಬ್ಯಾಂಕ್ ಪಾಸ್ ಬುಕ್ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡನ್ನು ಮೊದಲು ತೆಗೆದುಕೊಳ್ಳಿ. ಸೇವಾ ಸಿಂಧು ಪೊಟನ ಅಧಿಕೃತ ವೆಬ್ಸೈಟ್ ಗೆ ನೀವು ಮೊದಲು ಭೇಟಿ ಮಾಡಬೇಕು https://ahara.kar.nic.in/Home/EServices ಈ ವೆಬ್ ಸೈಟ್ ಗೆ ಭೇಟಿ ಮಾಡಿದ ನಂತರ ಅದರಲ್ಲಿ ಈ ರೇಷನ್ ಕಾರ್ಡ್ ಎಂಬ ಆಯ್ಕೆಯ ಮೇಲೆ ಸೆಲೆಕ್ಟ್ ಮಾಡಿ ಶೋ ವಿಲೇಜ್ ಲಿಸ್ಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ ಅದರಲ್ಲಿ ನೀವು ನಿಮ್ಮ ಜಿಲ್ಲೆ ತಾಲೂಕು ಮತ್ತು ಹಳ್ಳಿಯ ಹೆಸರನ್ನು ಸೆಲೆಕ್ಟ್ ಮಾಡಿದ ನಂತರ ಫಲಾನುಭವಿಗಳ ಲಿಸ್ಟ್ ನಿಮಗೆ ಕಾಣುತ್ತದೆ ಆ ಲಿಸ್ಟ್ ನಲ್ಲಿ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಫಲಾನುಭವಿಗಳ ಹೆಸರು ದೊರೆಯುತ್ತದೆ. ಅದರಲ್ಲಿ ಇರುವ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ. ಹೀಗೆ ಈ ಲಿಸ್ಟ್ ನಲ್ಲಿರುವ ಎಲ್ಲಾ ಮಹಿಳೆಯರಿಗೆ ಖಂಡಿತವಾಗಿ ಹಣ ದೊರೆತೆ ಇರುತ್ತದೆ.
ಹೀಗೆ ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಹಣವು ಇದುವರೆಗೂ ಬರದೇ ಇರುವಂತಹ ಮಹಿಳೆಯರಿಗೆ ಸರ್ಕಾರದ ಈ ವಿಚಾರವು ನೆಮ್ಮದಿಯನ್ನು ತಂದಿದೆ ಎಂದು ಹೇಳಬಹುದಾಗಿದೆ. ಹಾಗಾಗಿ ನೀವೇನಾದರೂ ಒಂದು ವೇಳೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ಇದುವರೆಗೂ ಸಹ ನಿಮಗೆ ಹಣ ಬಂದಿಲ್ಲದಿದ್ದರೆ ಈ ರೀತಿ ಮಾಡುವ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು ಸಹ ಇದುವರೆಗೂ ಹಣ ಬಂದಿಲ್ಲವೆಂದು ಚಿಂತಿಸುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಬಿಡುಗಡೆ; ಕೂಡಲೇ ಇಲ್ಲಿಂದ ಅರ್ಜಿ ಸಲ್ಲಿಸಿ