rtgh

news

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಈ ಹೆಸರು ಬರಲು ಕಾರಣವೇನು?

Join WhatsApp Group Join Telegram Group
What is the reason why Chinnaswamy Stadium got this name

ನಮಸ್ಕಾರ ಸ್ನೇಹಿತರೆ, ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ಇವತ್ತಿನ ಲೇಖನದಲ್ಲಿ ನಿಮಗೆ ಮಾಹಿತಿಯನ್ನು ನೀಡುತ್ತಿದ್ದು , ಈ ಕ್ರೀಡಾಂಗಣಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಎಂದು ಹೆಸರು ಬರಲು ಕಾರಣವೇನು ಎಂಬುದರ ಬಗ್ಗೆ ನೀವೇನಾದರೂ ತಿಳಿದುಕೊಳ್ಳಲು ಬಯಸುತ್ತಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

What is the reason why Chinnaswamy Stadium got this name

ಎಂ ಚಿನ್ನಸ್ವಾಮಿ ಕ್ರೀಡಾಂಗಣ :

ಎಂ ಚಿನ್ನಸ್ವಾಮಿ ಕ್ರೀಡಾಂಗಣ ಅಥವಾ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಕ್ರೀಡಾಂಗಣ ಬೆಂಗಳೂರು ಮತ್ತು ಕರ್ನಾಟಕ ರಾಜ್ಯದಲ್ಲಿರುವ ಅಂತರಾಷ್ಟ್ರೀಯ ಮಟ್ಟದ ಏಕೈಕ ಕ್ರಿಕೆಟ್ ಕ್ರೀಡಾಂಗಣ ಎಂದರೆ ಅದು ಚಿನ್ನಸ್ವಾಮಿ ಕ್ರೀಡಾಂಗಣವಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಕ್ರೀಡಾಂಗಣ ಮೂಲತಃ ಇದಾಗಿದ್ದು ಈ ಕ್ರೀಡಾಂಗಣಕ್ಕೆ ತದನಂತರ ನಾಲ್ಕು ದಶಕಗಳ ಕಾಲ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಸೇವೆ ಮಾಡಿದ ಹಾಗೂ 1977 ರಿಂದ 1980 ರವರೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿದ್ದಂತಹ ಎಮ್ ಚಿನ್ನಸ್ವಾಮಿಯವರ ಹೆಸರನ್ನು ಈ ಕ್ರೀಡಾಂಗಣಕ್ಕೆ ಇಡಲಾಯಿತು. ಈ ಕ್ರೀಡಾಂಗಣವು ಸುಮಾರು 40,000 ಆಸನ ಕ್ಷಮತೆಯನ್ನು ಹೊಂದಿದ್ದು ಬೆಂಗಳೂರು ನಗರದ ಮಧ್ಯದಲ್ಲಿ ಕಬ್ಬನ್ ಪಾರ್ಕ್ ಹಾಗೂ ಮಹಾತ್ಮ ಗಾಂಧಿ ರಸ್ತೆಗೆ ಈ ಕ್ರೀಡಾಂಗಣ ಹೊಂದಿಕೊಂಡಿದೆ. ಆದರೆ ಘಟಾನುಘಟಿ ಕ್ರಿಕೆಟ್ ಆಟಗಾರರು ರಾಜ್ಯದಲ್ಲಿ ಇದ್ದರೂ ಸಹ ಏಕೆ? ಈ ಕ್ರೀಡಾಂಗಣಕ್ಕೆ ಚಿನ್ನಸ್ವಾಮಿ ಅವರ ಹೆಸರನ್ನೇ ಇಡಲಾಯಿತು ಎಂಬುದು ಆಸಕ್ತಿಕರವಾದ ಸಂಗತಿಯಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣ ಎಂದು ಹೆಸರು ಬರಲು ಕಾರಣ :

8 ನವೆಂಬರಂದು ಎಂ ಚಿನ್ನಸ್ವಾಮಿಯವರ ಪುಣ್ಯ ದಿನವಾಗಿದ್ದು ಹೀಗಾಗಿ ಈ ಕ್ರೀಡಾಂಗಣದ ಕುರಿತಂತೆ ಸಾಕಷ್ಟು ಚರ್ಚೆಗಳು ಜೋರಾಗಿದೆ. ರಾಜಧಾನಿ ಬೆಂಗಳೂರಿನಲ್ಲಿರುವ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಕ್ರಿಕೆಟ್ ಅಭಿಮಾನಿಗಳಿಗಷ್ಟೇ ಅಲ್ಲ ಬಹುತೇಕ ಎಲ್ಲರಿಗೂ ಈ ವಿಚಾರ ಗೊತ್ತಿರುವಂತದ್ದೇ. ಇದೀಗ ಚಿನ್ನಸ್ವಾಮಿ ಎಂಬ ಹೆಸರು ಈ ಕ್ರೀಡಾಂಗಣಕ್ಕೆ ಹೇಗೆ ಬಂದಿತು ಎಂದು ಹೇಳುವುದಾದರೆ ಈ ಬಗ್ಗೆ ಹರೀಶರಸ್ ಎನ್ನುವವರು ಸುಧೀರ್ಘವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು ಈ ಕ್ರೀಡಾಂಗಣಕ್ಕಿರುವ ಹೆಸರಿನ ಹಿಂದಿನ ಅಸಲಿಯತ್ತೇನು ಎಂಬುದರ ಬಗ್ಗೆ ಬಿಚ್ಚಿಟ್ಟಿದ್ದಾರೆ. ಪ್ರಸ್ತುತ ಈ ಕ್ರೀಡಾಂಗಣದಲ್ಲಿ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ.

ಚಿನ್ನಸ್ವಾಮಿಯವರ ಜೀವನ :

ಚಿನ್ನಸ್ವಾಮಿಯವರ ಪೂರ್ಣ ಹೆಸರು ಮಂಗಳಂ ಚಿನ್ನಸ್ವಾಮಿ ಎಂದು ಇವರು ಮಾರ್ಚ್ 29 1900 ರಂದು ಮಂಡ್ಯದಲ್ಲಿ ಜನಿಸಿದರು. ಚಿನ್ನಸ್ವಾಮಿಯವರು ವೃತ್ತಿಯಲ್ಲಿ ವಕೀಲರಾಗಿದ್ದು 1925 ರಿಂದ 1975 ರವರೆಗೆ ಸಕ್ರಿಯವಾಗಿ ವಕೀಲ ವೃತ್ತಿಯನ್ನು ನಡೆಸಿದ್ದಾರೆ. ಅನೇಕ ಪ್ರಸಿದ್ಧ ಸಂಸ್ಥೆಗಳಿಗೆ ಕಾನೂನು ತಜ್ಞರಾಗಿದ್ದು ಎಂಇಎಸ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾಗಿದ್ದರು. ಅಲ್ಲದೇ ಇವರು ಕ್ರಿಕೆಟ್ ಸಂಸ್ಥೆಯ ಅಭಿವೃದ್ಧಿಗೂ ಸಹ ಅಪಾರ ಪರಿಶ್ರಮವನ್ನು ವಹಿಸಿದ್ದು ಇನ್ನೂ ಚಿನ್ನಸ್ವಾಮಿಯವರು ಬೆಂಗಳೂರಿನ ಕೆ ಎಸ್ ಸಿ ಎ ಕ್ರೀಡಾಂಗಣ ನಿರ್ಮಾಣದ ಹಿಂದಿನ ಪ್ರೇರಕ ಶಕ್ತಿ ಎಂದು ಹೇಳಿದರು ತಪ್ಪಾಗಲಾರದು. ಅನೇಕ ಗಣ್ಯ ವ್ಯಕ್ತಿಗಳಿಂದ ಈ ಕ್ರೀಡಾಂಗಣವನ್ನು ಸ್ಥಾಪನೆ ಮಾಡಲು ಸಹಕಾರ ಪಡೆದಿದ್ದು 1969ರಲ್ಲಿ ಮಹಾತ್ಮ ಗಾಂಧಿ ರಸ್ತೆ ಪ್ರದೇಶದಲ್ಲಿ ಕ್ರಿಕೆಟ್ ಗಾಗಿ ಈ ಮೈದಾನವನ್ನು ಮಂಜೂರು ಮಾಡಲು ಕರ್ನಾಟಕ ಸರ್ಕಾರವನ್ನು ಮನವೊಲಿಸುವಲ್ಲಿ ಯಶಸ್ವಿಯಾದರು.

ಇದರಿಂದ ಕರ್ನಾಟಕದಲ್ಲಿ ಒಂದು ವ್ಯವಸ್ಥಿತವಾದ ಮತ್ತು ಸುಸಜ್ಜಿತವಾದ ಕ್ರೀಡಾಂಗಣ ಸಿದ್ಧವಾಯಿತು ಆದರೆ ಈ ಕ್ರೀಡಾಂಗಣ ನಿರ್ಮಾಣದ ಹಿಂದಿನ ಶಕ್ತಿಯಾಗಿರಲು ಬಯಸಿದ ಚಿನ್ನಸ್ವಾಮಿಯವರಿಗೆ ಈ ಕ್ರೀಡಾಂಗಣಕ್ಕೆ ಎಂದಿಗೂ ತಮ್ಮ ಹೆಸರಿರಬೇಕೆಂಬ ಬಯಕೆ ಇರಲಿಲ್ಲ. ತಮ್ಮ ಹೆಸರನ್ನು ಚಿನ್ನಸ್ವಾಮಿಯವರು ಕ್ರಿಕೆಟ್ ಕ್ರೀಡಾಂಗಣಕ್ಕೆ ಇಡುವುದಕ್ಕೆ ಸಹಮತವನ್ನು ಹೊಂದಿಲ್ಲದ ನಿಸ್ವಾರ್ಥ ಮನೋಭಾವವನ್ನು ಹೊಂದಿದ್ದರು ಎಂದು ಹೇಳಬಹುದಾಗಿದೆ ಆದರೂ ಸಹ ಕರ್ನಾಟಕದ ಕ್ರಿಕೆಟ್ ಪ್ರಿಯರು ಅವರ ಕೊಡುಗೆಗಳಿಗೆ ಗೌರವ ನೀಡುವ ಉದ್ದೇಶದಿಂದ ಈ ಕ್ರೀಡಾಂಗಣಕ್ಕೆ ಅವರ ಹೆಸರನ್ನು ನೀಡಲು ಬಯಸಿದರು. ಹೀಗೆ ಕರ್ನಾಟಕದಲ್ಲಿರುವ ಈ ಕ್ರೀಡಾಂಗಣಕ್ಕೆ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಎಂದು ನಾಮಕರಣವಾಗಿದ್ದು ಇಂದು ಈ ಕ್ರೀಡಾಂಗಣ ವಿಶ್ವ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

ಇದನ್ನು ಓದಿ : ಸರ್ಕಾರದಿಂದ ದೀಪಾವಳಿ ಕೊಡುಗೆ: LPG ಸಿಲಿಂಡರ್ ಬಳಸುವವರು ಇಲ್ಲಿ ನೋಡಿ

ಚಿನ್ನಸ್ವಾಮಿಯವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಸಂಸ್ಥಾಪಕರಲ್ಲಿ ಪ್ರಮುಖ ರಾಗಿದ್ದು 1953 ರಿಂದ 1978 ರವರೆಗೆ ಇದರ ಕಾರ್ಯದರ್ಶಿಯಾಗಿ ಹಾಗೂ 1978 ರಿಂದ 1999 ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಆಸ್ಟ್ರೇಲಿಯಾದ ಭಾರತೀಯ ಪ್ರವಾಸಕ್ಕೆ ಸಾವಿರ 96768 ರಲ್ಲಿ ಖಜಾಂಚಿಯಾಗಿ ಮತ್ತು ಎರಡನೇ ಅಧಿಕಾರಿಯಾಗಿದ್ದರು. ಭಾರತಕ್ಕೆ ಎರಡು ವರ್ಷಗಳ ನಂತರ ಆಸ್ಟ್ರೇಲಿಯಾ ತಂಡ ಭೇಟಿ ನೀಡಿದಾಗ ಸರಣಿಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದರು. 1969ರಲ್ಲಿ ಎಂಸಿಸಿ ಅವರಿಗೆ ಆಜೀವಾಗ ಸದಸ್ಯತ್ವವನ್ನು ನೀಡಿ ಗೌರವಿಸಿತು. ಹೀಗೆ ಚಿನ್ನಸ್ವಾಮಿಯವರು ನಿಸ್ವಾರ್ಥ ಮನೋಭಾವದಿಂದ ಸಾಕಷ್ಟು ಕೊಡುಗೆಗಳನ್ನು ಈ ಕ್ರೀಡಾಂಗಣಕ್ಕೆ ನೀಡಿದ್ದಾರೆ ಎಂದು ಹೇಳಿದರು ತಪ್ಪಾಗಲಾರದು.

ಹೀಗೆ ಬೆಂಗಳೂರಿನಲ್ಲಿರುವ ಸುಪ್ರಸಿದ್ಧ ಕ್ರೀಡಾಂಗಣವಾದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಚಿನ್ನಸ್ವಾಮಿ ಎಂಬ ಹೆಸರು ಬರಲು ಮುಖ್ಯ ಕಾರಣ ಏನು ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಂಡಿದ್ದು ನಿಮ್ಮ ಸ್ನೇಹಿತರು ಯಾರಾದರೂ ಕ್ರಿಕೆಟ್ ಪ್ರೇಮಿಗಳಾಗಿದ್ದರೆ ಹಾಗೂ ಅವರಿಗೆ ಈ ಕ್ರೀಡಾಂಗಣದ ಬಗ್ಗೆ ತಿಳಿದುಕೊಳ್ಳಲು ಆಸಕ್ತಿಯನ್ನು ಹೊಂದಿದ್ದರೆ ಈ ಮಾಹಿತಿಯನ್ನು ಶೇರ್ ಮಾಡಿ ಇದರಿಂದ ಅವರು ಸಹ ಈ ಕ್ರೀಡಾಂಗಣಕ್ಕೆ ಚಿನ್ನಸ್ವಾಮಿ ಎಂಬ ಹೆಸರು ಏಕೆ ಬಂದಿತು ಎಂಬುದರ ಬಗ್ಗೆ ಅವರು ಸಹ ತಿಳಿದುಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

ಗೃಹಲಕ್ಷ್ಮಿ ಯೋಜನೆಯ ಹಣ ಈ ಅಧಿಕೃತ ದಿನಾಂಕಕ್ಕೆ ಎಲ್ಲರ ಖಾತೆಗೆ ಪಿಕ್ಸ್

ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ರೇಷನ್‌ ಅಕ್ಕಿ! ಯಾರಿಗೆಲ್ಲಾ ಸಿಗಲಿದೆ ಈ ಯೋಜನೆಯ ಲಾಭ?

Treading

Load More...