ನಮಸ್ಕಾರ ಸ್ನೇಹಿತರೆ, ರೈತರಿಗೆ ಪ್ರತಿ ಖುಷಿ ಭೂಮಿಯ ದಾಖಲೆಗಳು ಬಹಳ ಮುಖ್ಯವಾಗಿರುತ್ತದೆ. ಅದರಂತೆ ರೈತರು ಲೋನ್ ಪಡೆಯಲು ಸಾಲವನ್ನು ಪಡೆಯಲು ಭೂಮಿಯ ಕುರಿತು ಇನ್ಯಾವುದೇ ರೀತಿಯ ವಿಚಾರಗಳಿಗೆ ಸಂಬಂಧಿಸಿದಂತೆ ಜಮೀನಿನ ದಾಖಲೆಗಳು ರೈತರಿಗೆ ಸಾಕಷ್ಟು ಅಗತ್ಯವಿರುತ್ತದೆ. ಆದರೆ ಕೆಲವು ಸಂದರ್ಭದಲ್ಲಿ ರೈತರ ಬಳಿ ಈ ರೀತಿಯ ಕೆಲವು ದಾಖಲೆಗಳು ಲಭ್ಯವಿರುವುದಿಲ್ಲ. ಕರೆಗಳು ಕಳೆದು ಹೋಗಿರಬಹುದು ಅಥವಾ ಸಾಕಷ್ಟು ಹಳೆಯ ವರ್ಷಗಳಾಗ ದಾಖಲೆಗಳು ಬಳಕೆ ಮಾಡುವ ಸ್ಥಿತಿಯಲ್ಲಿ ಇಲ್ಲದೆ ಇರಬಹುದು ಹೀಗೆ ಈ ರೀತಿಯ ಕಾರಣಗಳಿಗೆ ಸಂಬಂಧಿಸಿದಂತೆ ಜಮೀನಿನ ಹಳೆಯ ದಾಖಲೆಗಳನ್ನು ಹೇಗೆ ತಿಳಿದುಕೊಳ್ಳಬಹುದು ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.
ದಾಖಲೆಗಳನ್ನು ನೋಡುವ ವಿಧಾನ :
ತಮ್ಮ ಜಮೀನಿನ ದಾಖಲೆಗಳು ಒಂದು ವೇಳೆ ರೈತನಿಗೆ ಬೇಕು ಎಂದರೆ ಅವನು ತಾಲೂಕು ಕಚೇರಿಗೆ ಭೇಟಿ ನೀಡುವುದರ ಮೂಲಕ ಅರ್ಜಿ ಕೊಡಬೇಕಾಗುತ್ತದೆ. ಆದರೆ ಇದು ಕೇವಲ ಒಂದು ದಿನದಲ್ಲಿ ಮುಗಿಯುವ ಕೆಲಸವಾಗಿರುವುದಿಲ್ಲ ಹಲವು ದಿನಗಳ ಅಲೆಯ ಬೇಕಾಗುತ್ತದೆ ಹಾಗಾಗಿ ಇಂತಹ ರೈತರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಸಮಸ್ಯೆಗೆ ಒಂದು ಪರಿಹಾರವನ್ನು ಸರ್ಕಾರ ತಂದಿದೆ. ಅದೇನೆಂದರೆ, ತಮ್ಮ ಮೊಬೈಲ್ ನಲ್ಲಿ ರೈತರು ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಜಮೀನಿಗೆ ಸಂಬಂಧಿಸಿದಂತಹ ಎಲ್ಲ ದಾಖಲೆಗಳನ್ನು ಪಡೆಯಬಹುದಾಗಿದೆ. ಆ ದಾಖಲೆಗಳ ಪ್ರಿಂಟ್ ಔಟ್ ಅನ್ನು ಸಹ ತೆಗೆದುಕೊಳ್ಳಬಹುದಾಗಿದೆ.
ಹಳೆಯ ದಾಖಲೆಗಳನ್ನು ಬೇಕಾದರೆ ..?
https://landrecords.karnataka.gov.in ಈ ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ನಿಮಗೆ ಹೋಂ ಪೇಜ್ ನಲ್ಲಿ ವ್ಯೂ ಆರ್ ಟಿ ಸಿ ಅಂಡ್ ಎಂ ಆರ್ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ. ಅದನ್ನು ಸೆಲೆಕ್ಟ್ ಮಾಡಿದ ನಂತರ ವ್ಯೂ ಕರೆಂಟ್ ಇಯರ್ ಆರ್ ಟಿ ಸಿ ಓಲ್ಡ್ ಇಯರ್ ಆರ್ ಟಿ ಸಿ ಅಂಡ್ ಎಂ ಆರ್ ಮ್ಯುಟೇಶನ್ ಸ್ಟೇಟಸ್ ಎಂದು ಆಯ್ಕೆಗಳು ನಿಮಗೆ ಕಾಣಿಸುತ್ತದೆ. ಅದನ್ನು ನೀವು ಸೆಲೆಕ್ಟ್ ಮಾಡಿದ ನಂತರ ನಿಮಗೆ ಹೊಸ ಪೇಜ್ ಓಪನ್ ಆಗುವುದನ್ನು ನೋಡಬಹುದಾಗಿದೆ ಅದರಲ್ಲಿ ನೀವು ಆರ್ ಟಿ ಸಿ ,ಮೆಟೇಶನ್ ಸ್ಟೇಟಸ್ , ಖಾಟ ಎಸ್ಟ್ರಾಕ್ಟ್ ಹಾಗೂ ಸರ್ವೆ ಡಾಕ್ಯೂಮೆಂಟ್ಸ್ ಎಂದು ಆಯ್ಕೆ ಕಾಣಬಹುದಾಗಿದೆ.
ನೀವು ಸರ್ವೆ ಡಾಕ್ಯುಮೆಂಟ್ಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದ ನಂತರ ನೀವು ಕೃಷಿ ಓಲ್ಡ್ ಡಾಕುಮೆಂಟ್ಸ್ ಇನ್ ಮೊಬೈಲ್ ಎಂದು ಕ್ಲಿಕ್ ಮಾಡಬೇಕು ಆಗ ನಿಮಗೆ ಕರ್ನಾಟಕ ಲ್ಯಾಂಡ್ ರೆಕಾರ್ಡ್ಸ್ ಇಮೇಜ್ ರೆಟ್ರೈವಲ್ ಸಿಸ್ಟಮ್ ಕಾಣಬಹುದಾಗಿದೆ. ನೀವು ನಿಮ್ಮ ಮೊಬೈಲ್ ನಂಬರ್ ಹಾಗೂ ಕ್ಯಾಪ್ಚಾ ಕೂಡ ಹಾಕಿದ ನಂತರ ನಿಮಗೆ ಓಟಿಪಿ ಜನರೇಟ್ ಬರುತ್ತದೆ ,
ಇದನ್ನು ಓದಿ : ಕೇವಲ 25 ರೂಪಾಯಿನಿಂದ 17 ಲಕ್ಷ ರೂಪಾಯಿ ಪಡೆಯಿರಿ : ಈ ಯೋಜನೆ ಬಗ್ಗೆ ತಿಳಿಹಿರಿ
ಅದನ್ನು ನೀವು ಜನರೇಟ್ ಮಾಡಿದ ನಂತರ ಲಾಗಿನ್ ಮಾಡಬೇಕಾಗುತ್ತದೆ. ಲಾಗಿನ್ ಮಾಡಿದ ನಂತರ ನಿಮಗೆ ಸೆಲೆಕ್ಟ್ ಸರ್ವೆ ನಂಬರ್ ಎನ್ನುವ ಆಯ್ಕೆಯನ್ನು ಕಾಣಬಹುದಾಗಿದೆ ಅದರಲ್ಲಿ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಇವುಗಳನ್ನು ಆಯ್ಕೆ ಮಾಡಿಕೊಂಡು ನಿಮ್ಮ ಸರ್ವೇ ನಂಬರ್ ಹಾಕಿ ಸರ್ಚ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
ನಂತರ ನಿಮಗೆ ಮತ್ತೊಂದು ಹೊಸ ಪೇಜ್ ಕಾಣಿಸಿತ್ತದೆ ಅದರಲ್ಲಿ ನೀವು ಹಿಸ್ಸ ಸರ್ವೇ ಟಿಪ್ಪಣಿ ಪುಸ್ತಕ, ಮೂಲ ಸರ್ವೇ ಪ್ರತಿ ಪುಸ್ತಕ ,ಮೂಲ ಸರ್ವೆ ಟಿಪ್ಪಣಿ ಪುಸ್ತಕ ,ಎರಡನೇ ರಿಕ್ಲಾಸಿಫಿಕೇಶನ್ ಪ್ರತಿ ಪುಸ್ತಕ ,ರೀ ಸರ್ವೇ ಟಿಪ್ಪಣಿ ಪುಸ್ತಕ, ಹಿಸ್ಸ ಸರ್ವೆ ಪಕ್ಕ ಪುಸ್ತಕ ,ಎರಡನೇ ರಿಕ್ಲಾಸಿಫಿಕೇಶನ್ ಟಿಪ್ಪಣಿ ಪುಸ್ತಕ ಎಂದು ಸಾಕಷ್ಟು ದಾಖಲೆಗಳ ಆಯ್ಕೆಯನ್ನು ನೀವು ಕಾಣಬಹುದಾಗಿತ್ತು ಅದರಲ್ಲಿ ನೀವು ಯಾವ ದಾಖಲೆ ಬೇಕು ಎಂಬುದನ್ನು ಆಯ್ಕೆ ಮಾಡುವುದರ ಮೂಲಕ ವ್ಯುವ್ ಡಾಕ್ಯುಮೆಂಟ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಅದಾದ ನಂತರ ನಿಮಗೆ ಜಮೀನಿನ ಸ್ಕ್ಯಾನ್ಡ್ ಕಚ್ ಕಾಣುತ್ತದೆ ಅದನ್ನು ನೀವು ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು ಆಗಿದೆ. ಹೀಗೆ ರೈತರು ಹಳೆಯ ದಾಖಲೆ ಪುಸ್ತಕಗಳನ್ನು ಸುಲಭವಾಗಿ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಬಹುದಾಗಿದೆ.
ರಾಜ್ಯ ಸರ್ಕಾರವು ರೈತರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡುವ ಉದ್ದೇಶದಿಂದ ಅವರ ಜಮೀನುಗಳು ಅವರಿಗೆ ದೊರೆಯುವ ಬಗ್ಗೆ ಈ ಮಾಹಿತಿಯನ್ನು ತಿಳಿಸಿ ಜಮೀನಿನ ಬಗ್ಗೆ ಅಂದರೆ ಹಳೆಯ ಜಮೀನುಗಳ ದಾಖಲೆಗಳನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹಳೆಯ ಜಮೀನಿನ ದಾಖಲೆಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂದು ನಿಮ್ಮ ಸ್ನೇಹಿತರು ಯಾರಾದರೂ ಯೋಚಿಸುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಬಹುದು ಎಂಬುದರ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಸಾಲ ಕಟ್ಟಲು ಕಷ್ಟ ಪಡುತ್ತಿರುಗೆ ಸಿಹಿಸುದ್ದಿ; RBI ಹೊಸ ನಿಯಮ ತಿಳಿದುಕೊಳ್ಳಿ
ಪಾನ್ ಕಾರ್ಡ್ ಅನ್ನು ಮೊಬೈಲ್ ನಿಂದಲೇ HD ಡೌನ್ಲೋಡ್ ಮಾಡಬಹುದು. ಕೆಲವೇ ನಿಮಿಷದಲ್ಲಿ